ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹೇಂದ್ರ ಸಿಂಗ್ ಧೋನಿಯ ಈ 5 ನಿರ್ಧಾರಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ, ಕಷ್ಟ!

ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯಲ್ಲಿ ಮೂರು ಬಾರಿಯ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್‌ ಪ್ಲೇ ಆಫ್ ತಲುಪುವ ಕನಸು ಬಹುತೇಕ ಮುಗಿದಿದೆ. ಈ ಸೀಸನ್‌ನಲ್ಲಿ ಅನೇಕ ತೊಂದರೆಗಳನ್ನು ಎದುರಿಸಿದ ಸಿಎಸ್‌ಕೆ ಅತ್ಯಂತ ಕಳಪೆ ಪ್ರದರ್ಶನ ತೋರಿದೆ.

ಕೇವಲ ಬ್ಯಾಟಿಂಗ್ ಅಷ್ಟೇ ಅಲ್ಲದೆ ಬೌಲಿಂಗ್‌ನಲ್ಲೂ ತಂಡವನ್ನು ದುರ್ಬಲ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಹೀಗಾಗಿ ಆಡಿರುವ 10 ಪಂದ್ಯಗಳಲ್ಲಿ 7 ರಲ್ಲಿ ಸೋಲನ್ನು ಎದುರಿಸಬೇಕಾಯಿತು. ಸತತ ಸೋಲುಗಳಿಂದಾಗಿ ಚೆನ್ನೈ ಪಾಯಿಂಟ್ ಟೇಬಲ್‌ನ ಕೆಳಭಾಗದಲ್ಲಿದೆ.

ಮೂರು ಬಾರಿ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಂಡ ಚೆನ್ನೈ ಈ ಬಾರಿ ಸಂಪೂರ್ಣವಾಗಿ ಹಳಿ ತಪ್ಪಿ ಹೋಗಿದೆ. ತಂಡ ಎದುರಿಸುತ್ತಿರುವ ಸಮಸ್ಯೆ ಇನ್ನೂ ಕೂಡ ಬಗೆಹರಿದಿಲ್ಲ. ಅಂತದ್ರಲ್ಲಿ ಆಲ್‌ರೌಂಡರ್ ಡ್ವೇನ್ ಬ್ರಾವೋ ಕೂಡ ಟೂರ್ನಿಯಿಂದ ನಿರ್ಗಮಿಸಿದ್ದಾರೆ.

 ಸೋಲಿನ ಬಳಿಕ ಆತ್ಮಾವಲೋಕನ: ಸತತ 3ನೇ ವರ್ಷ ವಯಸ್ಸಾದ ತಂಡದೊಂದಿಗೆ ಸಾಗುವುದು ಕಷ್ಟಕರ ಎಂದ CSK ಕೋಚ್ ಸೋಲಿನ ಬಳಿಕ ಆತ್ಮಾವಲೋಕನ: ಸತತ 3ನೇ ವರ್ಷ ವಯಸ್ಸಾದ ತಂಡದೊಂದಿಗೆ ಸಾಗುವುದು ಕಷ್ಟಕರ ಎಂದ CSK ಕೋಚ್

ಈ ಎಲ್ಲಾ ಸಮಸ್ಯೆಗಳ ನಡುವೆ ವಿಶ್ವ ಕ್ರಿಕೆಟ್ ಕಂಡ ಯಶಸ್ವಿ ನಾಯಕರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ಅವರ ನಿರ್ಧಾರಗಳ ಬಗ್ಗೆ ಪ್ರಶ್ನೆಗಳು ಸೃಷ್ಟಿಯಾಗಿವೆ. ಧೋನಿಯ ಕೆಲ ನಿರ್ಧಾರಗಳನ್ನು ಕ್ರಿಕೆಟ್ ಪಂಡಿತರೇ ಜೀರ್ಣಿಸಿಕೊಳ್ಳಲು ಸಾಧ್ಯವಾಗದೆ ಗೊಂದಲದಲ್ಲಿದ್ದಾರೆ. ಹಾಗಿದ್ದಾರೆ ಮಾಹಿ ತೆಗೆದುಕೊಂಡ ಆ ಐದು ನಿರ್ಧಾರಗಳು ಏನು ಎಂಬುದನ್ನು ಈ ಕೆಳಗೆ ನೋಡಿ.

ಟೂರ್ನಿ ಆರಂಭದಲ್ಲಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಧೋನಿ

ಟೂರ್ನಿ ಆರಂಭದಲ್ಲಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಧೋನಿ

ಭಾರತ ಕಂಡ ಗ್ರೇಟ್ ಫಿನಿಷರ್ ಎಂದೇ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಐಪಿಎಲ್ 13ನೇ ಆವೃತ್ತಿಯ ಆರಂಭಿಕ ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಲು ಏಳನೇ ಸ್ಥಾನಕ್ಕೆ ಬಂದರು.
ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯವನ್ನು ಚೆನ್ನೈ ತಂಡವು ಗೆದ್ದಿದ್ದರೂ, ಧೋನಿ ಫಿನಿಶರ್ ಆಗಿ ಆಡಬೇಕಾದ ಪಂದ್ಯದಲ್ಲಿ, ಅವರು ತುಂಬಾ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದರು.


ಧೋನಿ ಅವರನ್ನು ಉತ್ತಮ ಫಿನಿಶರ್ ಎಂದು ಕರೆಯಲಾಗುತ್ತದೆ, ಅವರ ಅಭಿಮಾನಿಗಳು ಸಹ ಅವರಿಂದ ಉತ್ತಮ ಪ್ರದರ್ಶನ ನೀಡಬೇಕೆಂದು ನಿರೀಕ್ಷಿಸುತ್ತಾರೆ. ಆದರೆ ಋತುವಿನ ಉದ್ದಕ್ಕೂ, ಧೋನಿ ಬ್ಯಾಟ್‌ ಕೂಡ ಸದ್ದು ಮಾಡಲಿಲ್ಲ, ಜೊತೆಗೆ ತಂಡವು ಉತ್ತಮ ಫಿನಿಶರ್ ಅನ್ನು ಕಳೆದುಕೊಳ್ಳುತ್ತದೆ.

ಕೇದಾರ್ ಜಾಧವ್ಗೆ ಮತ್ತೆ ಮತ್ತೆ ಅವಕಾಶ ನೀಡಿದ್ದು ಸರಿಯೇ?

ಕೇದಾರ್ ಜಾಧವ್ಗೆ ಮತ್ತೆ ಮತ್ತೆ ಅವಕಾಶ ನೀಡಿದ್ದು ಸರಿಯೇ?

ಈ ಸೀಸನ್‌ನಲ್ಲಿ ತೀರಾ ಕಳಪೆ ಪ್ರದರ್ಶನ ತೋರಿದ ಸಿಎಸ್‌ಕೆ ಆಟಗಾರರಲ್ಲಿ ಕೇದಾರ್ ಜಾಧವ್ ಪ್ರಮುಖ. ಇಷ್ಟಾದರೂ ಧೋನಿಯು ಈತನಿಗೆ ಮತ್ತೆ ಮತ್ತೆ ಕೊಟ್ಟ ಅವಕಾಶದ ಬಗ್ಗೆ ಅಭಿಮಾನಿಗಳು ಧೋನಿಯ ನಿರ್ಧಾರವನ್ನು ಪ್ರಶ್ನಿಸಿದರು.

ಜಾಧವ್ ಆಡಿದ ಐದು ಪಂದ್ಯಗಳಲ್ಲಿ ಅವರು ಸರಾಸರಿ 20.67 ರಷ್ಟಿದ್ದು ಮಾತ್ರವಲ್ಲ, ಈ ಪಂದ್ಯಗಳಲ್ಲಿ ಅವರ ಸ್ಟ್ರೈಕ್ ರೇಟ್ ಕೂಡ ತುಂಬಾ ಕಳಪೆಯಾಗಿತ್ತು, ಈ ಐದು ಪಂದ್ಯಗಳಲ್ಲಿ ಅವರು 93.94 ಸ್ಟ್ರೈಕ್ ದರದಲ್ಲಿ ಬ್ಯಾಟಿಂಗ್ ಮಾಡಿದರು. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅವರು 12 ಎಸೆತಗಳಲ್ಲಿ 7 ರನ್ ಗಳಿಸಿ ತಂಡವನ್ನು ತೊಂದರೆಗೆ ಸಿಲುಕಿಸಿದರು. ಇದರ ಜೊತೆಗೆ ಸ್ಟ್ರೈಕ್ ಜಡೇಜಾಗೆ ಬದಲಾಯಿಸಲು ಅವರಿಗೆ ಸಾಧ್ಯವಾಗಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಧೋನಿ ಅವರು ಕೇದಾರ ಜಾಧವ್ ಅವರೊಂದಿಗೆ ಏಕೆ ಮುಂದುವರೆದರು ಎಂಬ ನಿರ್ಧಾರದ ಬಗ್ಗೆ ಪ್ರಶ್ನೆಗಳು ಎದ್ದವು.

ಎನ್. ಜಗದೀಶನ್‌ಗೆ ಅವಕಾಶ ಸಿಗಲಿಲ್ಲ

ಎನ್. ಜಗದೀಶನ್‌ಗೆ ಅವಕಾಶ ಸಿಗಲಿಲ್ಲ

ಧೋನಿ ಅವರು ಪ್ರಚಂಡ ನಿರ್ಧಾರಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಯುವಕರಿಗೆ ತಂಡದಲ್ಲಿ ಅವಕಾಶ ನೀಡುವಲ್ಲಿ ಹೆಸರುವಾಸಿಯಾಗಿದ್ದಾರೆ. ಯುವ ಬ್ಯಾಟ್ಸ್‌ಮನ್ ಎನ್‌. ಜಗದೀಶನ್‌ಗೆ ಈ ಋತುವಿನಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಅವಕಾಶ ನೀಡಿದರು. ಆತ 28 ಎಸೆತಗಳಲ್ಲಿ 33 ರನ್ ಗಳಿಸಿದರು. ಮೊದಲ ಪಂದ್ಯದಲ್ಲಿ ಯಾವುದೇ ಆಟಗಾರನಿಗೆ ಇದು ಉತ್ತಮ ಪ್ರದರ್ಶನವಾಗಿತ್ತು, ಆದರೆ ದುರದೃಷ್ಟಕರ ಸಂಗತಿಯೆಂದರೆ ಧೋನಿ ಅವರಿಗೆ ಎರಡನೇ ಅವಕಾಶ ನೀಡಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಕೇದಾರ್ ಜಾಧವ್ ಅವರಿಗೆ ಹಲವು ಅವಕಾಶಗಳು ಸಿಕ್ಕಾಗ ಯುವ ಬ್ಯಾಟ್ಸ್‌ಮನ್‌ಗೆ ಏಕೆ ಅವಕಾಶ ನೀಡಲಿಲ್ಲ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಇಮ್ರಾನ್ ತಾಹಿರ್‌ಗೆ ಒಂದೇ ಒಂದು ಅವಕಾಶ ಸಿಗಲಿಲ್ಲ

ಇಮ್ರಾನ್ ತಾಹಿರ್‌ಗೆ ಒಂದೇ ಒಂದು ಅವಕಾಶ ಸಿಗಲಿಲ್ಲ

ಇಮ್ರಾನ್ ತಾಹಿರ್ ಅವರು ಅದ್ಭುತ ಬೌಲಿಂಗ್ ಮತ್ತು ಆಟದ ಮೇಲಿನ ಉತ್ಸಾಹಕ್ಕೆ ಹೆಸರುವಾಸಿಯಾಗಿದೆ. ಆದರೆ ಈ ಸೀಸನ್‌ನಲ್ಲಿ ಅವರಿಗೆ ಒಂದೇ ಒಂದು ಪಂದ್ಯದಲ್ಲಿ ಅವಕಾಶ ಸಿಗಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಈ ಪ್ರಶ್ನೆಗೆ ಉತ್ತರಿಸಲು ಯಾರಿಗಾದರೂ ಕಷ್ಟವಾಗುತ್ತದೆ. ಏಕೆಂದರೆ 2019 ರಲ್ಲಿ ತಾಹಿರ್ ಪರ್ಪಲ್ ಕ್ಯಾಪ್ ವಿನ್ನರ್ ಆಗಿದ್ದರು. ಗೆಲ್ಲಲೇಬೇಕಾದ ಹೈವೋಲ್ಟೇಜ್ ಪಂದ್ಯದಲ್ಲಿ ತಾಹೀರ್‌ಗೆ ಅವಕಾಶ ಏಕೆ ಸಿಗಲಿಲ್ಲ ಅನ್ನೋದು ಇನ್ನೂ ಅರ್ಥವಾಗದ ಪ್ರಶ್ನೆಯಾಗಿದೆ.

ರೈನಾ, ಭಜ್ಜಿ, ಬ್ರಾವೋ ಬದಲಿ ಏಕಿಲ್ಲ?

ರೈನಾ, ಭಜ್ಜಿ, ಬ್ರಾವೋ ಬದಲಿ ಏಕಿಲ್ಲ?

ಈ ಐಪಿಎಲ್ ಸೀಸನ್‌ನ ಆರಂಭದಲ್ಲೇ ಸ್ಪಿನ್ನರ್ ಹರ್ಭಜನ್ ಸಿಂಗ್ ಮತ್ತು ಸುರೇಶ್ ರೈನಾ ಇಬ್ಬರೂ ವೈಯಕ್ತಿಕ ಕಾರಣಗಳಿಗಾಗಿ ಹೊರಗುಳಿದಿದ್ದರು. ಎರಡೂ ಆಟಗಾರರ ಅನುಪಸ್ಥಿತಿಯಲ್ಲಿ, ಚೆನ್ನೈ ತಂಡವು ಆ ಇಬ್ಬರು ಆಟಗಾರರ ಸ್ಥಾನವನ್ನು ತುಂಬಲು ಯಾವುದೇ ಪ್ರಯತ್ನ ಮಾಡಲಿಲ್ಲ.

ರೈನಾ, ತಮ್ಮ ಭರ್ಜರಿ ಬ್ಯಾಟಿಂಗ್ ಮತ್ತು ಹರ್ಭಜನ್ ಸಿಂಗ್ ಅವರ ಸ್ಪಿನ್‌ನಿಂದಾಗಿ ಶ್ರೇಷ್ಠ ಬ್ಯಾಟ್ಸ್‌ಮನ್‌ಗೂ ಖೆಡ್ಡ ತೋಡುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಈ ಇಬ್ಬರು ಆಟಗಾರರ ಕೊರತೆಯನ್ನು ತಂಡವು ತುಂಬಲಿಲ್ಲ. ಅದೇ ಸಮಯದಲ್ಲಿ, ಬ್ರಾವೋ ಫಾರ್ಮ್ ಇಲ್ಲದ ಹೊರತಾಗಿಯೂ ಯಾವುದೇ ಆಟಗಾರನಿಗೆ ಸ್ಥಾನವನ್ನು ನೀಡಲು ಸಾಧ್ಯವಾಗಲಿಲ್ಲ. ತಂಡದ ಆಡಳಿತವೇ ಅವರು ರೈನಾ ಮತ್ತು ಭಜ್ಜಿಯನ್ನು ಈ ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಎಂದು ಒಪ್ಪಿಕೊಂಡಿತ್ತು. ಇಷ್ಟಾದರೂ ಏಕೆ ಬದಲಿ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲಿಲ್ಲ ಎನ್ನುವುದು ಕೂಡ ಅನುಮಾನ ಮೂಡಿಸಿದೆ.

Story first published: Thursday, October 22, 2020, 10:21 [IST]
Other articles published on Oct 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X