ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ನನ್ನ ಶತಕಕ್ಕೆ ನಿಮ್ಮ ಇನ್ನಿಂಗ್ಸೇ ಸ್ಪೂರ್ತಿ' : ಸ್ಪೋಟಕ ಶತಕದ ಗುಟ್ಟು ಹೇಳಿದ ಕೆಎಲ್ ರಾಹುಲ್

Ipl 2020: Took Inspiration From Your Last Innings, Kl Rahul Reacts to Rohit Sharma

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದದ ಪಂದ್ಯದಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಸ್ಪೋಟಕ ಶತಕವನ್ನು ಬಾರಿಸಿ ಬೃಹತ್ ಆಟಕ್ಕೆ ಕಾರಣವಾಗಿದ್ದರು. ಈ ಭರ್ಜರಿ ಆಟದ ಫಲವಾಗಿ ಕಿಂಗ್ಸ್ ತಂಡ ಬೃಹತ್ ಮೊತ್ತದ ಗುರಿಯನ್ನು ನೀಡಿ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿಯೂ ಯಶಸ್ವಿಯಾಯತು.

69 ಎಸೆತಗಳಲ್ಲಿ ಅಜೇಯ 132 ರನ್‌ ಸಿಡಿಸಿದ ಕೆಎಲ್ ರಾಹುಲ್ ಈ ಇನ್ನಿಂಗ್ಸ್‌ ಮೂಲಕ ಹಲವು ದಾಖಲೆಗಳನ್ನು ಕೂಡ ಬರೆದರು. ಐಪಿಎಲ್ ಇತಿಹಾಸದಲ್ಲಿ ನಾಯಕನೊಬ್ಬ ದಾಖಲಿಸಿದ ಗರಿಷ್ಠ ಸ್ಕೋರ್ ಎಂಬ ಹೆಗ್ಗಳಿಕೆಯನ್ನು ಈ ಮೂಲಕ ಕೆಎಲ್ ರಾಹುಲ್ ಪಡೆದುಕೊಂಡರು.

'ಕಾಮೆಂಟರಿಯಿಂದ ಕಿತ್ತಾಕಿ': ಸುನಿಲ್ ಗವಾಸ್ಕರ್ ವಿರುದ್ಧ ಅಭಿಮಾನಿಗಳು ಕಿಡಿ'ಕಾಮೆಂಟರಿಯಿಂದ ಕಿತ್ತಾಕಿ': ಸುನಿಲ್ ಗವಾಸ್ಕರ್ ವಿರುದ್ಧ ಅಭಿಮಾನಿಗಳು ಕಿಡಿ

ಈ ಭರ್ಜರಿ ಆಟವನ್ನು ಮೆಚ್ಚಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ರಾಹುಲ್‌ಗೆ ಅಭಿನಂದನೆಯನ್ನು ಹೇಳಿದ್ದಾರೆ. ಈ ಸಂದರ್ಭದಲ್ಲಿ ರಾಹುಲ್ ತಮ್ಮ ಆಟಕ್ಕೆ ಸ್ಪೂರ್ತಿ ಯಾರು ಎಂಬುದನ್ನು ಹೇಳಿಕೊಂಡಿದ್ದಾರೆ. ಮುಂದೆ ಓದಿ..

ಟ್ವೀಟ್ ಮೂಲಕ ರೋಹಿತ್ ಪ್ರಶಂಸೆ

ಟ್ವೀಟ್ ಮೂಲಕ ರೋಹಿತ್ ಪ್ರಶಂಸೆ

ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂತು ತಂಡದ ವಿರುದ್ಧ ಕೆಎಲ್ ರಾಹುಲ್ ಸಿಡಿಸಿದ ಸ್ಪೋಟಕ ಶತಕಕ್ಕೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಟ್ವಿಟ್ ಮಾಡಿ ಅಭಿನಂದಿಸಿದ್ದರು. ಈ ಟ್ವೀಟ್‌ನಲ್ಲಿ "ಕೆಎಲ್ ರಾಹುಲ್ ಈ ಇನ್ನಿಂಗ್ಸ್‌ ಕೆಲ ಭರ್ಜರಿ ಹೊಡೆತಗಳನ್ನು ಹೊಂದಿತ್ತು. ಅದ್ಭುತವಾದ ಶತಕ" ಎಂದು ರೋಹಿತ್ ಶರ್ಮಾ ಹೇಳಿದ್ದರು.

ನಿಮ್ಮ ಕೊನೆಯ ಇನ್ನಿಂಗ್ಸೇ ಸ್ಪೂರ್ತಿ

ನಿಮ್ಮ ಕೊನೆಯ ಇನ್ನಿಂಗ್ಸೇ ಸ್ಪೂರ್ತಿ

ರೋಹಿತ್ ಶರ್ಮಾ ಅಭಿನಂದಿಸಿದ ಈ ಟ್ವೀಟ್‌ಗೆ ಕೆಎಲ್ ರಾಹುಲ್ ಕೂಡ ಪ್ರತಿಕ್ರಿಯಿಸಿದ್ದಾರೆ. ಮಾತ್ರವಲ್ಲ ರೋಹಿತ್ ಶರ್ಮಾ ಅವರ ಕೊನೆಯ ಇನ್ನಿಂಗ್ಸ್‌ನಿಂದಲೇ ಸ್ಪೂರ್ತಿ ಪಡೆದುಕೊಂಡಿದ್ದೆ ಎಂದು ಕೆಎಲ್ ರಾಹುಲ್ ಈ ಸಂದರ್ಭದಲ್ಲಿ ಟ್ವಿಟ್‌ನಲ್ಲಿ ಹೇಳಿದ್ದಾರೆ. "ಧನ್ಯವಾದಗಳು ಬ್ರೋ, ನಿಮ್ಮ ಕೊನೆಯ ಇನ್ನಿಂಗ್ಸ್‌ನಿಂದ ಸ್ಪೂರ್ತಿಯನ್ನು ಪಡೆದಿದ್ದೆ" ಎಂದು ಈ ಟ್ವೀಟ್‌ನಲ್ಲಿ ಕೆಎಲ್ ರಾಹುಲ್ ಪ್ರತಿಕ್ರಿಯಿಸಿದ್ದಾರೆ.

ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದ ಶರ್ಮಾ

ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದ ಶರ್ಮಾ

ಕೆಎಲ್ ರಾಹುಲ್ ಆರ್‌ಸಿಬಿ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ಹಿಂದಿನ ದಿನವಷ್ಟೇ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನು ನೀಡಿದ್ದರು. 54 ಎಸೆತಗಳನ್ನು ಎದುರಿಸಿದ್ದ ರೋಹಿತ್ ಶರ್ಮಾ 80 ರನ್‌ಗಳನ್ನು ಬಾರಿಸಿದ್ದರು. ಈ ಪಂದ್ಯದಲ್ಲಿ ರೋಹಿತ್ ಐಪಿಎಲ್‌ನಲ್ಲಿ 200 ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯನ್ನು ಸೇರಿಕೊಂಡಿದ್ದರು.

ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ ಕಿಂಗ್ಸ್

ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ ಕಿಂಗ್ಸ್

ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು ಅನುಭವಿಸಿದ ಬಳಿಕ ಕಿಂಗ್ಸ್ ಇಲವೆನ್ ಪಂಜಾಬ್ ತಂಡ ಆರ್‌ಸಿಬಿ ವಿರುದ್ಧ ಭರ್ಜರಿಯಾಗಿ ಜಯಗಳಿಸಿದೆ. ಈ ಮೂಲಕ ಈ ಟೂರ್ನಿಯಲ್ಲಿ ಮೊದಲ ಗೆಲುವನ್ನು ಸಾಧಿಸಿ ಖಾತೆ ತೆರೆದಿದ್ದು ಮಾತ್ರವಲ್ಲ +2.425 ನೆಟ್‌ ರನ್‌ರೇಟ್ ಗಳಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಗಳಿಸಿಕೊಂಡಿದೆ. ಎರಡು ಆವೃತ್ತಿಗಳ ಬಳಿಕ ಈ ಪಂದ್ಯದ ಮೂಲಕ ಆರ್‌ಸಿಬಿ ವಿರುದ್ಧ ಪಂಜಾಬ್ ಮೊದಲ ಗೆಲುವನ್ನು ದಾಖಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Story first published: Tuesday, October 6, 2020, 15:40 [IST]
Other articles published on Oct 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X