ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಹೊಡಿಬಡಿಯ ಆಟದಲ್ಲಿ ಅಭಿಮಾನಿಗಳ ಮನಗೆದ್ದ ವೇಗಿಗಳ ಟಾಪ್ 5 ಪ್ರದರ್ಶನ

IPL 2020: Top 5 bowling performances in 13th edition of IPL

ಚುಟುಕು ಕ್ರಿಕೆಟ್ ಅಂದರೆ ಅದು ಬ್ಯಾಟ್ಸ್‌ಮನ್‌ಗಳ ಆಟ ಎಂದೇ ವ್ಯಾಖ್ಯಾನಿಸಲಾಗುತ್ತದೆ. ಬೌಲರ್‌ಗಳು ಹೆಚ್ಚಾಗಿ ದಂಡನೆಗೆ ಒಳಗಾಗುವುದೇ ಇದಕ್ಕೆ ಕಾರಣ. ಆದರೆ ಇಂತಾ ಸಂದರ್ಭದಲ್ಲೂ ಕೆಲ ಬೌಲರ್‌ಗಳು ಅದ್ಭುತ ಪ್ರದರ್ಶನದ ಮೂಲಕ ಎದುರಾಳಿಗಳನ್ನು ಕಂಗೆಡಿಸುತ್ತಾರೆ.

ಇದು ಈ ಬಾರಿಯ ಐಪಿಎಲ್‌ನಲ್ಲೂ ನಡೆದಿದೆ. ಯುಎಇನ ಪಿಚ್‌ನಲ್ಲಿ ಸಾಕಷ್ಟು ಬೌಲರ್‌ಗಳು ತಮ್ಮ ಶ್ರೇಷ್ಠ ಪ್ರದರ್ಶನವನ್ನು ನೀಡಿ ಯಶಸ್ಸನ್ನು ಸಾಧಿಸಿದ್ದಾರೆ. ಈ ಮೂಲಕ ತಮ್ಮ ತಂಡಕ್ಕೆ ಮೇಲುಗೈ ಒದಗಿಸಿದ್ದಾರೆ. ಅದರಲ್ಲಿ ಈ ಐದು ಪ್ರದರ್ಶನಗಳು ಎದುರಾಳಿಗೆ ಕಂಗೆಡಿಸಿದ್ದು ಮಾತ್ರವಲ್ಲ ತಿರುಗೇಟು ನೀಡಲು ಅಸಾಧ್ಯವಾಗುವಂತೆ ಮಾಡಿದೆ.

ಇಂಡೋ-ಆಸಿಸ್ ಸರಣಿ: ಕಪಿಲ್‌ದೇವ್ ಕಾಲದ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದೆಯಾ ಟೀಮ್ ಇಂಡಿಯಾ?ಇಂಡೋ-ಆಸಿಸ್ ಸರಣಿ: ಕಪಿಲ್‌ದೇವ್ ಕಾಲದ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದೆಯಾ ಟೀಮ್ ಇಂಡಿಯಾ?

ಹಾಗಾದರೆ ಆ ಐದು ಪ್ರದರ್ಶನಗಳು ಯಾವುದು? ಅಭಿಮಾನಿಗಳ ಮನಗೆದ್ದ ಆ ಬೌಲರ್‌ಗಳು ಯಾರು ಮುಂದೆ ಓದಿ..

ಕೊಲ್ಕತಾ vs ಹೈದರಾಬಾದ್, ಲೂಕಿ ಫರ್ಗ್ಯುಸನ್

ಕೊಲ್ಕತಾ vs ಹೈದರಾಬಾದ್, ಲೂಕಿ ಫರ್ಗ್ಯುಸನ್

ಲೂಕಿ ಫರ್ಗ್ಯುಸನ್ ಈ ಬಾರಿಯ ಐಪಿಎಲ್‌ನಲ್ಲಿ ಆರಂಭಿಕ ಕೆಲ ಪಂದ್ಯಗಳಲ್ಲಿ ಅವಕಾಶ ದೊರೆಯದೆ ಬೆಂಚ್ ಕಾದಿದ್ದರು. ಆದರೆ ತಾನಾಡಿದ ಮೊದಲ ಪಂದ್ಯದಲ್ಲೇ ತನ್ನ ಶ್ರೇಷ್ಠ ಪ್ರದರ್ಶನವನ್ನು ನೀಡುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಅಕ್ಟೋಬರ್ 18 ರಂದು ನಡೆದಿದ್ದ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ವೇಳೆ ಫರ್ಗ್ಯುಸನ್ 15 ರನ್‌ಗಳಿಗೆ 3 ವಿಕೆಟ್ ಪಡೆದು ಮಿಂಚಿದ್ದರು. ಬಳಿಕ ಈ ಪಂದ್ಯ ಟೈ ಆದ ಕಾರಣ ಸೂಪರ್ ಓವರ್‌ ಓವರ್‌ನಲ್ಲೂ ಫರ್ಗ್ಯುಸನ್ ಬೌಲಿಂಗ್ ಮಾಡಿ 2 ರನ್‌ಗಳಿಗೆ 2 ವಿಕೆಟ್ ಕಿತ್ತು ತಂಡದ ಗೆಲುವಿಗೆ ಕಾರಣರಾದರು.

ಹೈದರಾಬಾದ್ vs ಡೆಲ್ಲಿ, ಯಾರ್ಕರ್ ಕಿಂಗ್ ನಟರಾಜನ್

ಹೈದರಾಬಾದ್ vs ಡೆಲ್ಲಿ, ಯಾರ್ಕರ್ ಕಿಂಗ್ ನಟರಾಜನ್

ನಟರಾಜನ್ ಅವರ ಬೌಲಿಂಗ್‌ನ ಪ್ರಖರತೆ ಮೊದಲ ಬಾರಿಗೆ ಟೂರ್ನಿಯಲ್ಲಿ ಬಹಿರಂಗವಾಗಿದ್ದು ಸೆಪ್ಟೆಂಬರ್ 29ರಂದು. ಆ ಪಂದ್ಯಕ್ಕೂ ಮುನ್ನ ಹೈದರಾಬಾದ್ ಸತತ 2 ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಹೈದರಾಣಾದ್ ನೀಡಿದ್ದ 163 ರನ್‌ಗಳ ಗುರಿಯನ್ನು ಬೆನ್ನತ್ತಿತ್ತು ಡೆಲ್ಲಿ. 18ನೇ ಓವರ್‌ನಲ್ಲಿ ನಟರಾಜನ್ ಸತತ ಐದು ಯಾರ್ಕರ್ ಎಸೆದು ಎಲ್ಲರನ್ನೂ ದಂಗುಬಡಿಸಿದ್ದರು. ಅದರಲ್ಲಿ ಕೊನೆಯ ಎಸೆತದಲ್ಲಿ ಎಲ್‌ಬಿ ಬಲೆಗೆ ಬ್ಯಾಟ್ಸ್‌ಮನ್ ಮಾರ್ಕಸ್ ಸ್ಟೋಯ್ನಿಸ್ ಅವರನ್ನು ಬೀಳಿಸುವಲ್ಲಿ ಯಶಸ್ವಿಯಾಗಿದ್ದರು.

ಮುಂಬೈ vs ಡೆಲ್ಲಿ, ಐಪಿಎಲ್ ಫೈನಲ್, ಟ್ರೆಂಟ್ ಬೋಲ್ಟ್

ಮುಂಬೈ vs ಡೆಲ್ಲಿ, ಐಪಿಎಲ್ ಫೈನಲ್, ಟ್ರೆಂಟ್ ಬೋಲ್ಟ್

ಡೆಲ್ಲಿ ವಿರುದ್ಧದ ಫೈನಲ್ ಪಂದ್ಯದಲ್ಲಿ ಮುಂಬೈ ಆರಂಭಿಕ ಯಶಸ್ಸು ಕಂಡ ರೀತಿಯಲ್ಲೇ ಪಂದ್ಯವನ್ನು ಗೆದ್ದಾಗಿತ್ತು. ಫೈನಲ್ ಪಂದ್ಯದ ಮೊದಲ ಎಸೆತದಲ್ಲೇ ಆರಮಭಿಕ ಆಟಗಾರನ ವಿಕೆಟ್ ಪಡೆದಿದ್ದರು ಟ್ರೆಂಟ್ ಬೋಲ್ಟ್. ತನ್ನ ಎರಡನೇ ಓವರ್‌ನಲ್ಲೂ ಅನುಭವಿ ಅಜಿಂಕ್ಯ ರಹಾನೆ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು ಬೋಲ್ಟ್. ಈ ಮೂಲಕ ಪವರ್‌ಪ್ಲೇನಲ್ಲಿ 24 ರನ್ ನೀಡಿ 2 ವಿಕೆಟ್ ಪಡೆದಿದ್ದರು. ಇದು ಆರಂಭದಿಂದಲೇ ಮುಂಬೈ ಯಶಸ್ಸುಪಡೆಯಲು ಕಾರಣವಾಯಿತು.

ಅನ್ರಿಕ್ ನೋರ್ಕಿಯಾ to ಬಟ್ಲರ್, ಐಪಿಎಲ್‌ನ ಅತಿ ವೇಗದ ಎಸೆತ

ಅನ್ರಿಕ್ ನೋರ್ಕಿಯಾ to ಬಟ್ಲರ್, ಐಪಿಎಲ್‌ನ ಅತಿ ವೇಗದ ಎಸೆತ

ಡೆಲ್ಲಿ ಹಾಗೂ ರಾಜಸ್ಥಾನ್ ವಿರುದ್ಧದ ಕಾದಾಟದಲ್ಲಿ ಅನ್ರಿಕ್ ನೋರ್ಕಿಯಾ ಎಸೆದ ವೇಗದ ಬೌಲಿಂಗ್ ಟೂರ್ನಿಯಲ್ಲಿ ಸುದ್ದಿಯಾದ ಮತ್ತೊಂದು ಸ್ಪೆಲ್. ಐಪಿಎಲ್ ಇತಿಹಾಸದಲ್ಲಿ ನಾರ್ಕಿಯಾ ಅತಿ ವೆಗದ ಬೌಲಿಂಗ್ ಮಾಡಿದ್ದರು. ಗಂಟೆಗೆ 156.2 ಕಿಮಿ ವೇಗದಲ್ಲಿ ಬೌಲಿಂಗ್ ನಡೆಸಿದ್ದರು. ಒಂದೇ ಓವರ್‌ನಲ್ಲಿ 150ಕಿಮಿಗೂ ಹೆಚ್ಚಿನ ವೇಗದಲ್ಲಿ ನಾರ್ಕಿಯಾ ಮೂರು ಎಸೆತಗಳನ್ನು ಎಸೆದಿದ್ದರು.

ಪಂಜಾಬ್ vs ರಾಜಸ್ಥಾನ್, ಜೋಫ್ರಾ ಆರ್ಚರ್

ಪಂಜಾಬ್ vs ರಾಜಸ್ಥಾನ್, ಜೋಫ್ರಾ ಆರ್ಚರ್

ಅದು ಅಕ್ಟೊಬರ್ 30. ಟೂರ್ನಿ ರೋಚಕ ಘಟ್ಟಕ್ಕೆ ತಲುಪಿತ್ತು. ಬಹುತೇಕ ಎಲ್ಲಾ ತಂಡಗಳಿಗೂ ಪ್ಲೇಆಫ್ ಹಂತಕ್ಕೇರುವ ಅವಕಾಶ ಉಳಿದಿತ್ತು. ಮುಂದಿನ ಪ್ರತಿ ಪಂದ್ಯವೂ ಗೆಲ್ಲಬೆಕಾದ ಒತ್ತಡ ಬಹುತೇಕ ಎಲ್ಲಾ ತಂಡಗಳಿಗಿತ್ತು. ಪಂಜಾಬ್ ಹಾಗೂ ರಾಜಸ್ಥಾನ್ ಅಂದು ಕಣಕ್ಕಿಳಿದಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್‌ಗೆ ಆರ್ಚರ್ ತಮ್ಮ ವೇಗದ ದಾಳಿಯ ಮೂಲಕ ಕಂಗೆಡಿಸುವಲ್ಲಿ ಯಶಸ್ವಿಯಾಗಿದ್ದರು. ಮೊದಲ ಓವರ್‌ನ ಆರಂಭಿಕ ಐದು ಎಸೆತಗಳಲ್ಲಿ ಒಂದು ರನ್ ಪಡೆದು ಕೆಎಲ್ ತಮ್ಮ ವಿಕೆಟ್ ಕಾಪಾಡಿಕೊಂಡಿದ್ದರು. ಆದರೆ ಅಂತಿಮ ಎಸೆತವನ್ನು ಎದುರಿಸಿದ ಮನ್‌ದೀಪ್ ಸಿಂಗ್ ಮೊದಲ ಎಸೆತದಲ್ಲೇ ಫೆವಿಲಿಯನ್ ಸೇರಿಕೊಂಡರು. ಇದೇ ಪಂದ್ಯದಲ್ಲಿ ಆರ್ಚರ್ ಕ್ರಿಕೆಟ್ ಗೇಲ್ ಅವರನ್ನು ಭಯಾನಕ ಯಾರ್ಕರ್ ಮೂಲಕ 99 ರನ್‌ಗೆ ಔಟ್ ಮಾಡಿದ್ದರು.

Story first published: Thursday, November 12, 2020, 16:36 [IST]
Other articles published on Nov 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X