ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂಬೈ ಇಂಡಿಯನ್ಸ್ ಪರ ಹೆಚ್ಚು ರನ್ ಬಾರಿಸಿರುವ ಟಾಪ್ 5 ಬ್ಯಾಟ್ಸ್‌ಮನ್‌ಗಳು

IPL 2020: Top 5 run-getters for Mumbai Indians

ಬೆಂಗಳೂರು: ಭಾರತದ ನಗದು ಶ್ರೀಮಂತ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ಕಾವು ಮೆಲ್ಲಗೆ ಏರತೊಡಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ 13ನೇ ಆವೃತ್ತಿಯ ಐಪಿಎಲ್‌ಗೆ ಸಿದ್ಧತೆಗಳು ನಡೆಯುತ್ತಿವೆ. ಸೆಪ್ಟೆಂಬರ್ 19ರಿಂದ ಟೂರ್ನಿ ಆರಂಭಗೊಳ್ಳಲಿರುವುದರಿಂದ ಎಂಟು ಫ್ರಾಂಚೈಸಿಗಳ ಆಟಗಾರರು ಅಭ್ಯಾಸ ಶುರು ಮಾಡಿದ್ದಾರೆ. ಐಪಿಎಲ್ ಕಪ್ ಗೆಲ್ಲುವತ್ತ ಎಲ್ಲಾ ತಂಡಗಳೂ ಕಣ್ಣಿಟ್ಟಿವೆ. ನವೆಂಬರ್ 10ರಂದು ನಡೆಯುವ ಫೈನಲ್ ಪಂದ್ಯ ಚಾಂಪಿಯನ್ ತಂಡವನ್ನು ನಿರ್ಧರಿಸಲಿದೆ.

ಐಪಿಎಲ್‌ಗೆ ಪತಂಜಲಿ ಪ್ರಾಯೋಜಕತ್ವ: ತಮಾಷೆಯ ಮೀಮ್ಸ್ ಇಲ್ಲಿವೆ ನೋಡಿಐಪಿಎಲ್‌ಗೆ ಪತಂಜಲಿ ಪ್ರಾಯೋಜಕತ್ವ: ತಮಾಷೆಯ ಮೀಮ್ಸ್ ಇಲ್ಲಿವೆ ನೋಡಿ

ನಿಮಗೆಲ್ಲರಿಗೂ ಗೊತ್ತಿರುವಂತೆ, ಐಪಿಎಲ್ ಇತಿಹಾಸದಲ್ಲಿ ಅತೀ ಯಶಸ್ವಿ ತಂಡವೆಂಬ ಹೆಗ್ಗಳಿಕೆ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್‌ನದ್ದು. ಎಂಐ ತಂಡ ಒಟ್ಟು 4 ಬಾರಿ ಚಾಂಪಿಯನ್ಸ್ ಆಗಿ ಮಿನುಗಿದೆ. ಹೆಚ್ಚು ಕಪ್ ಗೆದ್ದ ಎರಡನೇ ತಂಡವೆಂದರೆ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (4 ಸಾರಿ).

ಐಪಿಎಲ್ 2020: ಶ್ರೇಷ್ಠ ಐಪಿಎಲ್ XI ತಂಡವನ್ನು ಪ್ರಕಟಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ಐಪಿಎಲ್ 2020: ಶ್ರೇಷ್ಠ ಐಪಿಎಲ್ XI ತಂಡವನ್ನು ಪ್ರಕಟಿಸಿದ ಗ್ಲೆನ್ ಮ್ಯಾಕ್ಸ್‌ವೆಲ್

ಮುಂಬೈ ಯಶಸ್ಸಿಗೆ ಅದರಲ್ಲಿರುವ ಬ್ಯಾಟ್ಸ್‌ಮನ್‌ಗಳ ಕೊಡುಗೆ ಮಹತ್ವದ್ದು. ಎಂಐ ಪರ ಅತ್ಯಧಿಕ ರನ್ ಗಳಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳ ಪಟ್ಟಿ ಇಲ್ಲಿದೆ.

1 ರೋಹಿತ್ ಶರ್ಮಾ

1 ರೋಹಿತ್ ಶರ್ಮಾ

ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್‌ನಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಎಂಐ ಪರ 143 ಪಂದ್ಯಗಳನ್ನಾಡಿರುವ ಭಾರತದ ಲಿಮಿಟೆಡ್ ಓವರ್‌ ಕ್ರಿಕೆಟ್‌ನ ನಾಯಕ ರೋಹಿತ್ 31.86ರ ಸರಾಸರಿಯಲ್ಲಿ 3,728 ರನ್ ಗಳಿಸಿದ್ದಾರೆ. 28 ಅರ್ಧ ಶತಕಗಳನ್ನು ಬಾರಿಸಿರುವ ಶರ್ಮಾ ಸ್ಟ್ರೈಕ್‌ ರೇಟ್ 130 ಇದೆ.

2. ಕೀರನ್ ಪೊಲಾರ್ಡ್

2. ಕೀರನ್ ಪೊಲಾರ್ಡ್

ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕೀರನ್ ಪೊಲಾರ್ಡ್ ಮುಂಬೈ ಇಂಡಿಯನ್ಸ್‌ನಲ್ಲಿ ಎರಡನೇ ಅತ್ಯಧಿಕ ರನ್ ಗಳಿಸಿದ್ದಾರೆ. ಎಂಐ ಎಂದಿನ ನಾಯಕ ರೋಹಿತ್ ಅನುಪಸ್ಥಿತಿಯಲ್ಲಿ ಪೊಲಾರ್ಡ್ ನಾಯಕನಾಗಿ ಜವಾಬ್ದಾರಿ ನಿರ್ವಹಿಸಿದ್ದೂ ಇದೆ. 148 ಪಂದ್ಯಗಳನ್ನಾಡಿರುವ ಪೊಲಾರ್ಡ್ 2,755 ರನ್ ಗಳಿಸಿದ್ದಾರೆ. 14 ಅರ್ಧ ಶತಕಗಳನ್ನು ಬಾರಿಸಿರುವ ಪೊಲಾರ್ಡ್ ಸ್ಟ್ರೈಕ್ ರೇಟ್ 146.77 ಇದೆ.

3. ಅಂಬಾಟಿ ರಾಯುಡು

3. ಅಂಬಾಟಿ ರಾಯುಡು

2018ರಿಂದ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಭಾರತದ ಬ್ಯಾಟ್ಸ್‌ಮನ್ ಅಂಬಾಟಿ ರಾಯುಡು ಮುಂಬೈ ಇಂಡಿಯನ್ಸ್‌ನಲ್ಲಿ ಹೆಚ್ಚು ಮಿನುಗಿದವರು. ಒಟ್ಟು 8 ವರ್ಷಗಳ ಕಾಲ ರಾಯುಡು ಮುಂಬೈಗೆ ಆಡಿದ್ದಾರೆ. 114 ಪಂದ್ಯಗಳಲ್ಲಿ ರಾಯುಡು 2,416 ರನ್ ಗಳಿಸಿದ್ದಾರೆ. 27 ರನ್ ಸರಾಸರಿ ಹೊಂದಿರುವ ಅಂಬಾಟಿ ಸ್ಟ್ರೈಕ್ ರೇಟ್ 126 ಇದೆ. ರಾಯುಡು 14 ಹಾಫ್ ಸೆಂಚುರಿಗಳನ್ನು ಬಾರಿಸಿದ್ದಾರೆ.

4. ಸಚಿನ್ ತೆಂಡೂಲ್ಕರ್

4. ಸಚಿನ್ ತೆಂಡೂಲ್ಕರ್

ರನ್‌ಗೆ ಸಂಬಂಧಿಸಿದ ದಾಖಲೆಗಳ ಪಟ್ಟಿಯಲ್ಲಿ ಸಾಮಾನ್ಯವಾಗಿ ಬರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಇಲ್ಲೂ ಇದ್ದಾರೆ. ಎಂಐ ಪರ ಕೇವಲ 78 ಪಂದ್ಯಗಳಲ್ಲಿ ಸಚಿನ್ 34.83ರ ಸರಾಸರಿಯಂತೆ 2,334 ರನ್ ಬಾರಿಸಿದ್ದಾರೆ. 1 ಶತಕ ಮತ್ತು 13 ಅರ್ಧ ಶತಕಗಳನ್ನು ಬಾರಿಸಿರುವ ಕ್ರಿಕೆಟ್ ದೇವರ ಸ್ಟ್ರೈಕ್ ರೇಟ್ 119.82 ಇದೆ.

5. ಲೆಂಡ್ಲ್ ಸಿಮನ್ಸ್

5. ಲೆಂಡ್ಲ್ ಸಿಮನ್ಸ್

ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಲೆಂಡ್ಲ್ ಸಿಮನ್ಸ್ 2018ರಿಂದಲೂ ಮುಂಬೈ ಇಂಡಿಯನ್ಸ್ ಪರ ಆಡುತ್ತಿಲ್ಲ. ಆದರೆ ಸಿಮನ್ಸ್ ರನ್ ದಾಖಲೆಯಿರುವುದು ಹಾಲಿ ಚಾಂಪಿಯನ್ಸ್ ಎಂಐನಲ್ಲೇ. ಮುಂಬೈ ಪರ ಕೇವಲ 29 ಪಂದ್ಯಗಳನ್ನಾಡಿರುವ ಸಿಮನ್ಸ್ ಭರ್ಜರಿ 1,079 ರನ್‌ ಗಳಿಸಿದ್ದಾರೆ. 39.96 ರನ್ ಸರಾಸರಿ ಹೊಂದಿರುವ ಲೆಂಡ್ಲ್ ಸ್ಟ್ರೈಕ್‌ರೇಟ್ 126 ಇದೆ. 11 ಅರ್ಧ ಶತಕ ಬಾರಿಸಿರುವ ಸಿಮನ್ಸ್ 109 ಫೋರ್ಸ್, 44 ಸಿಕ್ಸರ್ ದಾಖಲೆ ಮಾಡಿದ್ದಾರೆ.

Story first published: Thursday, August 13, 2020, 10:02 [IST]
Other articles published on Aug 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X