ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಅತಿ ಕಡಿಮೆ ತಪ್ಪು ಹೊಡೆತ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿ

IPL 2020: Top Players With Lowest False Shot Percentage

ಪ್ರಸಕ್ತ ಸಾಲಿನ ಐಪಿಎಲ್ ಅಭಿಮಾನಿಗಳಿಗೆ ಸಾಕಷ್ಟು ಮನರಂಜನೆ ನೀಡುತ್ತಿದೆ. ಹಾಗೆಯೇ ಹೊಸ ದಾಖಲೆಗಳು, ಆಸಕ್ತಿಕರ ಅಂಕಿ ಅಂಶಗಳನ್ನು ದಾಖಲಿಸುತ್ತಿದೆ. ಇದಿನ್ನೂ ಮನರಂಜನೆಯ ಆರಂಭವಷ್ಟೇ. ಅಷ್ಟರಲ್ಲಿಯೇ ಅಧಿಕ ಸ್ಕೋರಿಂಗ್ ಪಂದ್ಯಗಳು, ಶತಕಗಳು, ರೋಮಾಂಚನಕಾರಿ ತಿರುವುಗಳು, ಸೂಪರ್ ಓವರ್‌ಗಳನ್ನು ಕಂಡಿದೆ.

ಐಪಿಎಲ್ ಮುಖ್ಯವಾಗಿ ಬ್ಯಾಟ್ಸ್‌ಮನ್‌ಗಳ ಆಟ. ಸ್ಫೋಟಕ ಬ್ಯಾಟ್ಸ್‌ಮನ್‌ಗಳಿಗೇ ಇಲ್ಲಿ ಹೆಚ್ಚು ಆದ್ಯತೆ. ಚೆಂಡನ್ನು ಅತಿ ಹೆಚ್ಚು ಬಾರಿ ಬೌಂಡರಿ ಗೆರೆ ದಾಟಿಸುವ ಬ್ಯಾಟ್ಸ್‌ಮನ್‌ಗೆ ಬೇಡಿಕೆ ಜಾಸ್ತಿ. ಟಿ20 ಕ್ರಿಕೆಟ್ ಮಾದರಿ ಶುರುವಾದ ಬಳಿಕ ಬ್ಯಾಟ್ಸ್‌ಮನ್‌ಗಳ ಬ್ಯಾಟಿಂಗ್ ತಂತ್ರಗಳಲ್ಲಿಯೂ ಸಾಕಷ್ಟು ಬದಲಾವಣೆಯಾಗಿದೆ. ರಭಸ ಹಾಗೂ ಬುದ್ಧಿವಂತಿಕೆಯಿಂದ ಹೊಡೆಯುವ ಆಟಕ್ಕೆ ಬೆಲೆ. ಕ್ಲಾಸ್ ಬ್ಯಾಟಿಂಗ್‌ಗಿಂತ 'ಮಾಸ್' ಬ್ಯಾಟಿಂಗ್ ಎಂದೇ ಹೇಳಲಾಗುತ್ತಿದೆ. ಈ ಕಾರಣಕ್ಕಾಗಿಯೇ ಟಿ20 ಮಾದರಿಯತ್ತ ಯುವಜನತೆಗೆ ಆಕರ್ಷಣೆ ಹೆಚ್ಚು.

ಯಾರ್ಕ'ರಾಜನ್'!: ಅಪರೂಪದ ಬೌಲರ್‌ನ ಸ್ಫೂರ್ತಿದಾಯಕ ಕಥೆಯಾರ್ಕ'ರಾಜನ್'!: ಅಪರೂಪದ ಬೌಲರ್‌ನ ಸ್ಫೂರ್ತಿದಾಯಕ ಕಥೆ

ಈ ಅಲ್ಪಾವಧಿಯ ಕ್ರಿಕೆಟ್ ಮಾದರಿಯಲ್ಲಿ ಬ್ಯಾಟಿಂಗ್ ತಂತ್ರ ಮತ್ತು ಶಕ್ತಿ ಮುಖ್ಯವಾದರೂ ಪರಿಪೂರ್ಣ ಬ್ಯಾಟ್ಸ್‌ಮನ್ ಆದವನಿಗೆ ಮಾತ್ರ ನಿರಂತರ ಸ್ಥಿರ ಪ್ರದರ್ಶನ ನೀಡಲು ಸಾಧ್ಯ. ಚೆಂಡು ಮತ್ತು ಬ್ಯಾಟ್ ನಡುವೆ ಸರಿಯಾದ ಸಂಪರ್ಕ ಮುಖ್ಯ. ಆದರೆ ಟಿ20ರಲ್ಲಿ ತಪ್ಪು ಹೊಡೆತಗಳಿಲ್ಲದೆ ನಿಖರವಾಗಿ ಬ್ಯಾಟಿಂಗ್ ಮಾಡುವುದು ಸುಲಭದ ಮಾತಲ್ಲ. ಇದುವರೆಗಿನ ಐಪಿಎಲ್‌ನಲ್ಲಿ ಅತಿ ಕಡಿಮೆ ತಪ್ಪು ಹೊಡೆತಗಳನ್ನು ಬಾರಿಸಿದವರ ಲೆಕ್ಕಾಚಾರ ಇಲ್ಲಿದೆ. ಮುಂದೆ ಓದಿ...

ಮೊದಲ ಸ್ಥಾನದಲ್ಲಿ ಯುವ ಆಟಗಾರ

ಮೊದಲ ಸ್ಥಾನದಲ್ಲಿ ಯುವ ಆಟಗಾರ

ವಿಶೇಷವೆಂದರೆ ಐಪಿಎಲ್ ಇತಿಹಾಸದಲ್ಲಿ ಅತಿ ಕಡಿಮೆ ತಪ್ಪು ಹೊಡೆತಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರುವುದು ಭಾರತದ ಯುವ ಆಟಗಾರ. ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ರೋಹಿತ್ ಶರ್ಮಾ, ಕೀರನ್ ಪೊಲಾರ್ಡ್, ಸುರೇಶ್ ರೈನಾ ಅವರಂತಹ ಆಟಗಾರರನ್ನು ಹಿಂದಿಕ್ಕಿದ್ದಾರೆ ಕೆಕೆಆರ್ ತಂಡ ಯುವ ಆಟಗಾರ ಶುಬ್‌ಮನ್ ಗಿಲ್. ಐಪಿಎಲ್ ಟೂರ್ನಿಗಳಲ್ಲಿ ಇದುವರೆಗೂ 623 ರನ್ ಗಳಿಸಿರುವ ಗಿಲ್, ಅವರ ತಪ್ಪು ಹೊಡೆತಗಳ ಪ್ರಮಾಣ ಶೇ 7.7ರಷ್ಟಿದೆ.

ಕ್ಯಾಮರಾನ್ ವೈಟ್

ಕ್ಯಾಮರಾನ್ ವೈಟ್

ಈ ಪಟ್ಟಿಯಲ್ಲಿ ಎರಡನೆಯ ಸ್ಥಾನದಲ್ಲಿರುವುದು ಆಸ್ಟ್ರೇಲಿಯಾದ ಕ್ರಿಕೆಟರ್ ಕ್ಯಾಮರಾನ್ ವೈಟ್. ಆರ್‌ಸಿಬಿ, ಡೆಕ್ಕನ್ ಚಾರ್ಜರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳಲ್ಲಿ ಆಡಿರುವ ವೈಟ್, ಈಗ ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಐಪಿಎಲ್‌ನಲ್ಲಿ ಆಡಿದ 47 ಪಂದ್ಯಗಳಲ್ಲಿ ಅವರು 954 ರನ್ ಬಾರಿಸಿದ್ದಾರೆ. ಅವರ ತಪ್ಪು ಹೊಡೆತಗಳು ಶೇ 14.1ರಷ್ಟಿದೆ. ಅಂದರೆ ಶುಬ್‌ಮನ್ ಗಿಲ್ ಅವರಿಗಿಂತ ಸುಮಾರು ಎರಡು ಪಟ್ಟು ಹೆಚ್ಚು.

ಎಂಎಸ್ ಧೋನಿ ಜೊತೆ ವಿರಸವಲ್ಲ, ಸುಳಿವು ಕೊಟ್ಟ ಸುರೇಶ್ ರೈನಾ

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ಐಪಿಎಲ್ ಆರಂಭದ ದಿನದಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುತ್ತಿರುವ, ಹಾಲಿ ನಾಯಕ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಐಪಿಎಲ್‌ನಲ್ಲಿ ಅತ್ಯಧಿಕ ಸ್ಕೋರ್ ಗಳಿಸಿರುವ ಆಟಗಾರ ಎಂಬ ಹೆಗ್ಗಳಿಕೆ ಅವರಿಗಿದೆ. 180 ಪಂದ್ಯಗಳಲ್ಲಿ 5430 ರನ್ ಕಲೆಹಾಕಿರುವ ವಿರಾಟ್ ಕೊಹ್ಲಿ ಅವರ ತಪ್ಪು ಶಾಟ್‌ಗಳು ಶೇ 14.3ರಷ್ಟಿದೆ.

ರೋ'ಹಿಟ್' ಶರ್ಮಾ

ರೋ'ಹಿಟ್' ಶರ್ಮಾ

ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಇದುವರೆಗೂ 191 ಐಪಿಎಲ್ ಪಂದ್ಯಗಳನ್ನಾಡಿದ್ದಾರೆ. ಅದರಲ್ಲಿ 4,998 ರನ್ ಗಳಿಸಿದ್ದಾರೆ. ಟೈಮಿಂಗ್ ಮೂಲಕ ಹೆಚ್ಚು ರನ್ ಗಳಿಸುವುದರಲ್ಲಿ ಪರಿಣತರಾದ ರೋಹಿತ್ ಶರ್ಮಾ, ನಿಖರವಾಗಿ ಮಧ್ಯ ಬ್ಯಾಟ್‌ನಿಂದ ಚೆಂಡನ್ನು ಬಾರಿಸುವ ಕೌಶಲ ಹೊಂದಿದ್ದಾರೆ. ಐಪಿಎಲ್‌ನಲ್ಲಿ ಅವರ ತಪ್ಪು ಹೊಡೆತಗಳ ಪ್ರಮಾಣ ಶೇ 15ರಷ್ಟಿದೆ.

IPL 2020 ಮೊದಲ ವಾರದಲ್ಲೇ ಸೂಪರ್ ಹಿಟ್: 269 ಮಿಲಿಯನ್ ವೀಕ್ಷಕರಿಂದ ವೀಕ್ಷಣೆ

ಐದನೇ ಸ್ಥಾನದಲ್ಲಿ ವಿಲಿಯಮ್ಸನ್

ಐದನೇ ಸ್ಥಾನದಲ್ಲಿ ವಿಲಿಯಮ್ಸನ್

ಸನ್ ರೈಸರ್ಸ್ ಹೈದರಾಬಾದ್ ತಂಡದ ಕೇನ್ ವಿಲಿಯಮ್ಸನ್ ಶೇ 15.4ರಷ್ಟು ತಪ್ಪು ಹೊಡೆತಗಳೊಂದಿಗೆ ಐದನೇ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ಸೌರಬ್ ತಿವಾರಿ ಶೇ 15.6ರಷ್ಟು ದೋಷಪೂರಿತ ಹೊಡೆತಗಳೊಂದಿಗೆ ಆರನೇ ಸ್ಥಾನದಲ್ಲಿದ್ದಾರೆ.

ಎಬಿಡಿಗೆ ಏಳನೇ ಸ್ಥಾನ

ಎಬಿಡಿಗೆ ಏಳನೇ ಸ್ಥಾನ

ಜಗತ್ತಿನ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ, ಮೈದಾನದ ಪ್ರತಿ ಮೂಲೆಗೂ ಚೆಂಡನ್ನು ಅಟ್ಟುವ ಸಾಮರ್ಥ್ಯವಿರುವ ಮಿ. 360 ಎಬಿ ಡಿಬಿಲಿಯರ್ಸ್ ಏಳನೇ ಸ್ಥಾನದಲ್ಲಿದ್ದಾರೆ. ಪ್ರಸ್ತುತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿರುವ ಎಬಿಡಿ ಶೇ 16ರಷ್ಟು ತಪ್ಪು ಹೊಡೆತಗಳನ್ನು ಬಾರಿಸಿದ್ದಾರೆ.

Story first published: Thursday, October 1, 2020, 19:49 [IST]
Other articles published on Oct 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X