ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಆ ಎರಡು ದಾಖಲೆಗಳನ್ನು ಪೂರೈಸುತ್ತಾರಾ ಶರ್ಮಾ ಹಾಗೂ ಪೊಲಾರ್ಡ್?

IPL 2020 : Two big records await Rohit Sharma and Kieron Pollard against KKR

ರೋಹಿತ್ ಶರ್ಮಾ ಹಾಗೂ ಕಿರಾನ್ ಪೊಲಾರ್ಡ್ ಸರಿಸುಮಾರು ಒಂದು ದಶಕದಿಂದ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಲೈನ್‌ಅಪ್‌ನ ಬೆನ್ನೆಲುಬಾಗಿದ್ದಾರೆ. 2010ರಲ್ಲಿ ಪೊಲಾರ್ಡ್ ಮುಂಬೈ ತಂಡವನ್ನು ಸೇರಿಕೊಂಡರೆ ಒಂದು ವರ್ಷದ ಬಳಿಕ 2011ರ ಆವೃತ್ತಿಯಲ್ಲ ರೋಹಿತ್ ಶರ್ಮಾ ಸೇರಿಕೊಂಡರು. ಈ ಜೋಡಿ ಮುಂಬೈ ಪರವಾಗಿ ಸಾಕಷ್ಟು ದಾಖಲೆಯನ್ನು ಮಾಡಿದ್ದು ಮುಂಬೈ ದಾಖಲೆಯ ನಾಲ್ಕು ಬಾರಿ ಚಾಂಪಿಯನ್ ಪಟ್ಟಕ್ಕೇರಲು ಕಾರಣರಾಗಿದ್ದಾರೆ.

ಮುಂಬೈ ಇಂಡಿಯನ್ಸ್ ಈ ಬಾರಿಯ ಟೂರ್ನಿಯಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದು ರೋಹಿತ್ ಶರ್ಮಾ ಹಾಗೂ ಕಿರಾನ್ ಪೊಲಾರ್ಡ್ ಬ್ಯಾಟ್‌ನಿಂದಲೂ ಉತ್ತಮ ಪ್ರದರ್ಶನಗಳು ಬಂದಿದೆ. ರೋಹಿತ್ 2016 ರನ್ ಸಿಡಿಸಿದ್ದರೆ ಪೊಲಾರ್ಡ್ 174 ರನ್ ಈ ಟೂರ್ನಿಯಲ್ಲಿ ಬಾರಿಸಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಈ ಇಬ್ಬರು ಆಟಗಾರರು ಮುಂಬೈ ಇಂಡಿಯನ್ಸ್ ಪರವಾಗಿ ತಮ್ಮ ವೈಯಕ್ತಿಕ ದಾಖಲೆಗಳನ್ನು ಮಾಡುವ ಸನಿಹದಲ್ಲಿದ್ದಾರೆ.

ಐಪಿಎಲ್ 2020: ಅಂಕಪಟ್ಟಿಯಲ್ಲಿರುವುದಕ್ಕಿಂತ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ: ಕೆಎಲ್ ರಾಹುಲ್ಐಪಿಎಲ್ 2020: ಅಂಕಪಟ್ಟಿಯಲ್ಲಿರುವುದಕ್ಕಿಂತ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ: ಕೆಎಲ್ ರಾಹುಲ್

ಮುಂಬೈ ನಾಯಕ ರೋಹಿತ್ ಶರ್ಮಾ 3944ರನ್ ಗಳಿಸಿದ್ದು ಮುಂಬೈ ತಂಡದಲ್ಲಿ ಅತಿ ಹೆಚ್ಚಿನ ಸ್ಕೋರರ್ ಎನಿಸಿದ್ದಾರೆ. ಅವರು ಕೆಕೆಆಋ್ ವಿರುದ್ಧದ ಪಂದ್ಯದಲ್ಲಿ 56 ರನ್ ಗಳಿಸಿದರೆ ಮುಂಬೈ ಇಮಡಿಯನ್ಸ್ ತಂಡದ ಪರವಾಗಿ 4000 ರನ್ ಗಳಿಸಿದ ಆಟಗಾರ ಎಂಬ ದಾಖಲೆಗೆ ಪಾತ್ರರಾಗಲಿದ್ದಾರೆ. ಈ ಮೂಲಕ ಮುಂಬೈ ಇಂಡಿಯನ್ಸ್ ಪರವಾಗಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಖ್ಯಾತಿಗೂ ಅವರು ಒಳಗಾಗಲಿದ್ದಾರೆ.

ಇನ್ನು ಕಿರಾನ್ ಪೊಲಾರ್ಡ್ ಮುಂಬೈ ಇಂಡಿಯನ್ಸ್ ಪರವಾಗಿ ಮಹತ್ವದ ದಾಖಲೆಯನ್ನು ಸಾಧಿಸಲು 71 ರನ್‌ಗಳ ಅಗತ್ಯವಿದೆ. ಐಪಿಎಲ್‌ನಲ್ಲಿ ಸದ್ಯ ಪೊಲಾರ್ಡ್ 2929 ರನ್ ಗಳಿಸಿದ್ದಾರೆ. 3000 ರನ್ ಗಳಿಸಲು ಇಮದಿನ ಪಂದ್ಯದಲ್ಲಿ ಸಾಧ್ಯವಾದರೆ ಐಪಿಎಲ್‌ನಲ್ಲಿ ಈ ಸಾಧನೆಯನ್ನು ಮಾಡಿದ ಮುಂಬೈ ಇಂಡಿಯನ್ಸ್ ತಂಡದ ಎರಡನೇ ಆಟಗಾರ ಎಂಬ ಖ್ಯಾತಗೆ ಪಾತ್ರರಾಗಲಿದ್ದಾರೆ. ಮುಂಬೈ ತಂಡದಲ್ಲಿ ನಾಯಕ ರೋಹಿತ್ ಶರ್ಮಾ ಮಾತ್ರವೇ ಈ ಸಾಧನೆಯನ್ನು ಮಾಡಿದ್ದಾರೆ.

ಐಪಿಎಲ್ 2020: ಚೇಸಿಂಗ್‌ನಲ್ಲಿ ದಾಖಲೆ ನಿರ್ಮಿಸಿದ ಕಿಂಗ್ಸ್ XI ಪಂಜಾಬ್ಐಪಿಎಲ್ 2020: ಚೇಸಿಂಗ್‌ನಲ್ಲಿ ದಾಖಲೆ ನಿರ್ಮಿಸಿದ ಕಿಂಗ್ಸ್ XI ಪಂಜಾಬ್

ಮುಂಬೈ ಇಂಡಿಯನ್ಸ್ ಈ ಬಾರಿಯ ಟೂರ್ನಿಯಲ್ಲಿ ಎರಡನೇ ಬಾರಿಗೆ ಕೆಕೆಆರ್ ತಂಡವನ್ನು ಎದುರಿಸುತ್ತಿದೆ. ಮೊದಲ ಪಂದ್ಯದಲ್ಲಿ ಭರ್ಜರಿಯಾಗಿ ಗೆಲುವನ್ನು ಸಾಧಿಸಿತ್ತು. ಸದ್ಯ ಉತ್ತಮ ಫಾರ್ಮ್‌ನಲ್ಲಿರುವ ಮುಂಬೈ ಆಟಗಾರರು ಕೆಕೆಆರ್ ವಿರುದ್ಧದ ಈ ಪಂದ್ಯವನ್ನೂ ಗೆದ್ದುಕೊಳ್ಳುವ ವಿಶ್ವಾಸದಲ್ಲಿದ್ದಾರೆ.

Story first published: Friday, October 16, 2020, 13:11 [IST]
Other articles published on Oct 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X