ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಬ್ರೇಕ್ ದಿ ಬಿಯರ್ಡ್ ಸವಾಲು ಸ್ವೀಕರಿಸಿದ ತೆವಾಟಿಯಾ, ವಿಜಯ್ ಶಂಕರ್

IPL 2020: Vijay Shankar and Rahul Tewatia take Break The Beard challenge

ಐಪಿಎಲ್ ಟೂರ್ನಿಯಲ್ಲಿ 40 ಪಂದ್ಯಗಳು ನಡೆದಿದ್ದು ಟೂರ್ನಿ ಕುತೂಹಲಕಾರಿ ಘಟ್ಟವನ್ನು ತಲುಪಿದೆ. ಈ ಹಂತದಲ್ಲಿ ತಂಡಗಳು ಜಿದ್ದಾಜಿದ್ದಿನ ಹೋರಾಟವನ್ನು ನಡೆಸುತ್ತಿದೆ. ಆದರೆ ಈ ಪೈಪೋಟಿಯ ಕಾದಾಟದ ಮಧ್ಯೆಯೇ ಅಭಿಮಾನಿಗಳಿಗೆ ಆಫ್‌ ದಿ ಪೀಲ್ಡ್‌ನಲ್ಲೂ ಮನರಂಜನೆಯನ್ನು ನೀಡುವಲ್ಲಿ ಕ್ರಿಕೆಟಿಗರು ಹಿಂದೆ ಬಿದ್ದಿಲ್ಲ.

ಈ ಬಾರಿಯ ಐಪಿಎಲ್‌ನಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿರುವ 'ಬ್ರೇಕ್ ದಿ ಬಿಯರ್ಡ್' ಚಾಲೆಂಜನ್ನು ಮತ್ತೆ ಇಬ್ಬರು ಆಟಗಾರರು ಸ್ವೀಕರಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದದ ಪಂದ್ಯದ ಆರಂಭಕ್ಕೂ ಮುನ್ನ ಈ ತಂಡದ ಇಬ್ಬರು ಆಲ್‌ರೌಂಡರ್ ಆಟಗಾರರು ಈ ಸವಾಲಿನಲ್ಲಿ ಪಾಲ್ಗೊಂಡಿದ್ದಾರೆ.

KKR ಬ್ಯಾಟ್ಸ್‌ಮನ್‌ಗಳನ್ನ ಪೆವಿಲಿಯನ್‌ಗೆ ಅಟ್ಟಿದ ನಂತರ ಸಿರಾಜ್ ಹೇಳಿದ್ದೇನು?KKR ಬ್ಯಾಟ್ಸ್‌ಮನ್‌ಗಳನ್ನ ಪೆವಿಲಿಯನ್‌ಗೆ ಅಟ್ಟಿದ ನಂತರ ಸಿರಾಜ್ ಹೇಳಿದ್ದೇನು?

ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿರುವ ಆಲ್‌ರೌಂಡರ್ ರಾಹುಲ್ ತೆವಾಟಿಯಾ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿಜಯ್ ಶಂಕರ್ ಈ ಸವಾಲಿನಲ್ಲಿ ಪಾಲ್ಗೊಂಡ ಆಟಗಾರರಾಗಿದ್ದಾರೆ. ಈ ಇಬ್ಬರು ಆಟಗಾರರಿಗೆ ಇತ್ತೀಚೆಗೆ ಆರ್‌ಸಿಬಿ ತಂಡದ ದೇವದತ್ ಪಡಿಕ್ಕಲ್ ಸವಾಲು ಸ್ವೀಕರಿಸುವಂತೆ ಇನ್ಸ್ಟಾಗ್ರಾಮ್‌ನಲ್ಲಿ ಉಲ್ಲೇಖಿಸಿದ್ದರು.

ಈ ಬಾರಿಯ ಐಪಿಎಲ್ ಟೂರ್ ನಿ ನಡೆಯುತ್ತಿರುವ ಸಂದರ್ಭದಲ್ಲಿ ಸಾಕಷ್ಟು ಆಟಗಾರರು ಈ ಬ್ರೇಕ್ ದಿ ಬಿಯರ್ಡ್ ಚಾಲೆಂಜ್‌ನಲ್ಲಿ ಪಾಲ್ಗೊಂಡಿದ್ದಾರೆ. ಆರ್‌ಸಿಬಿಯ ಎಬಿಡಿವಿಲಿಯರ್ಸ್, ದೇವದತ್ ಪಡಿಕ್ಕಲ್, ಕೆಕೆಆರ್ ತಂಡದ ದಿನೇಶ್ ಕಾರ್ತಿಕ್, ಕಿರಾನ್ ಪೊಲಾರ್ಡ್, ರಶೀದ್ ಖಾನ್ ಸೇರಿದಂತೆ ಹಲವಾರು ಕ್ರಿಕೆಟಿಗರು ಈ ಸವಾಲನ್ನು ಸ್ವೀಕರಿಸಿ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.

KKR ವಿರುದ್ಧ ಧೂಳೆಬ್ಬಿಸಿದ ಸಿರಾಜ್ ಬದಲು, ವಾ. ಸುಂದರ್‌ಗೆ ಬೌಲಿಂಗ್‌ ಕೊಡಲು ಯೋಚಿಸಿದ್ದ ಕೊಹ್ಲಿKKR ವಿರುದ್ಧ ಧೂಳೆಬ್ಬಿಸಿದ ಸಿರಾಜ್ ಬದಲು, ವಾ. ಸುಂದರ್‌ಗೆ ಬೌಲಿಂಗ್‌ ಕೊಡಲು ಯೋಚಿಸಿದ್ದ ಕೊಹ್ಲಿ

ರಾಜಸ್ಥಾನ್ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಎರಡು ತಂಡಗಳಿಗೂ ಇಂದಿನ ಪಂದ್ಯ ಸಾಕಷ್ಟು ಮಹತ್ವದ್ದಾಗಿದೆ. ಆರ್‌ಆರ್ ಕಳೆದ ಪಂದ್ಯದಲ್ಲಿ ಗೆಲುವನ್ನು ಕಂಡಿರುವ ಕಾರಣ ಆ ಗೆಲುವಿನ ಕ್ಷಣವನ್ನು ಮುಂದುವರಿಸಿಕೊಂಡು ಹೋಗುವ ಉತ್ಸಾಹದಲ್ಲಿದೆ. ಆದರೆ ಅದಕ್ಕೆ ಹೈದರಾಬಾದ್ ಕಠಿಣ ಪೈಪೋಟಿಯನ್ನು ನೀಡುತ್ತಿದೆ.

Story first published: Friday, October 23, 2020, 10:22 [IST]
Other articles published on Oct 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X