ಐಪಿಎಲ್ 2020: ಕೆಕೆಆರ್ vs ಆರ್‌ಸಿಬಿ, ವೈಯಕ್ತಿಕ ಮೈಲಿಗಲ್ಲುಗಳತ್ತ ಕಣ್ಣಿಟ್ಟ ಆಟಗಾರರು!

ಐಪಿಎಲ್‌ನಲ್ಲಿ ಇಂದು ಕೊಲ್ಕತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ತಂಡಗಳು ಮುಖಾಮುಖಿಯಾಗುತ್ತಿದೆ. ಅಂಕಪಟ್ಟಿಯಲ್ಲಿ ಆರ್‌ಸಿಬಿ ಮುರನೇ ಸ್ಥಾನದಲ್ಲಿದ್ದರೆ ಕೊಲ್ಕತಾ ನೈಟ್ ರೈಡರ್ಸ್ ತಂಡ ನಾಲ್ಕನೇ ಸ್ಥಾನದಲ್ಲಿದೆ. ಇಮದಿನ ಪಂದ್ಯದಲ್ಲಿ ಗೆದ್ದು ಈ ಎರಡೂ ತಂಡಗಳು ತಮ್ಮ ಸ್ಥಾನವನ್ನು ಉತ್ತಮಪಡಿಸಿದಿಕೊಳ್ಳುವತ್ತ ಗಮನ ನೀಡುವುದು ನಿಶ್ಚಿತ. ಈ ಪಂದ್ಯದ ಗೆಲುವು ಎರಡೂ ತಂಡಗಳಿಗೆ ಸಾಕಷ್ಟು ಉತ್ಸಾಹವನ್ನು ತುಂಬುವುದರಲ್ಲಿ ಅನುಮಾನವಿಲ್ಲ.

ಈ ಬಾರಿಯ ಐಪಿಎಲ್‌ನಲ್ಲಿ ಸಾಕಷ್ಟು ದಾಖಲೆಗಳು ಈಗಾಗಲೇ ನಿರ್ಮಾಣವಾಗಿದೆ. ಇಂದಿನ ಪಂದ್ಯದಲ್ಲೂ ಗೆಲ ಆಟಗಾರರು ವೈಯಕ್ತಿಕ ಮೈಲಿಗಲ್ಲುಗಳನ್ನು ದಾಖಲೆಗಳನ್ನು ನಿರ್ಮಾಣ ಮಾಡುವ ನಿರೀಕ್ಷೆಗಳು ಇವೆ. ಅಂತಾ ಕೆಲ ದಾಖಲೆಗಳತ್ತ ಕಣ್ಣಾಡಿಸೋಣ.

ಕ್ರಿಕೆಟ್ ಮೈದಾನದಲ್ಲಿ ಕೆಲ ಆಟಗಾರರು 2 ಕ್ಯಾಪ್ ಧರಿಸುವುದು ಏಕೆ?

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಇಮದಿನ ಪಂದ್ಯದಲ್ಲೂ ಮಹತ್ವದ ಮೈಲಿಗಲ್ಲೊಂದನ್ನು ದಾಟಲಿದ್ದಾರೆ. ಇಂದಿನ ಪಂದ್ಯದಲ್ಲಿ ವಿರಾಟ್ ಒಂದು ಸಿಕ್ಸರ್ ಹಾಗೂ ಎರಡು ಬೌಂಡರಿಯನ್ನು ಬಾರಿಸಲು ಯಶಸ್ವಿಯಾದರೆ ಐಪಿಎಲ್ ಇತಿಹಾಸದಲ್ಲಿ 200 ಸಿಕ್ಸರ್ ಹಾಗೂ 500 ಐಪಿಎಲ್ ಬೌಂಡರಿಗಳನ್ನು ಸಿಡಿಸಿದಂತಾಗಲಿದೆ.

ಮೊದಲ ಸುತ್ತಿನ ಪಂದ್ಯದಲ್ಲಿ ಆರ್‌ಸಿಬಿಗೆ ಗೆಲುವು

ಮೊದಲ ಸುತ್ತಿನ ಪಂದ್ಯದಲ್ಲಿ ಆರ್‌ಸಿಬಿಗೆ ಗೆಲುವು

ಈ ಬಾರಿಯ ಐಪಿಎಲ್‌ನ ಆರಂಭಿಕ ಹಂತದಲ್ಲಿ ಈ ಎರಡು ತಂಡಗಳು ಮೊದಲ ಬಾರಿಗೆ ಶಾರ್ಜಾ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಆರ್‌ಸಿಬಿ ತಂಡ ಕೆಕೆಆರ್ ತಂಡಕ್ಕೆ 82 ರನ್‌ಗಳ ಭರ್ಜರಿ ಅಂತರದ ಸೋಲಿನ ರುಚಿ ನೀಡಿತ್ತು. ಈ ಪಂದ್ಯದಲ್ಲಿ ಎಬಿಡಿವಿಲಿಯರ್ಸ್ 33 ಎಸೆತಗಳಲ್ಲಿ 73 ರನ್ ಬಾರಿಸಿ ಮಿಂಚಿದ್ದರು. ಮೊದಲಿಗೆ ಬ್ಯಾಟ್ ಮಾಡಿದ್ದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 194/2 ರನ್ ಗಳಿಸಿದ್ದರೆ ಕೆಕೆಆರ್ 112/9 ರನ್‌ಗಳಿಸಿ ಹೀನಾಯವಾಗಿ ಶರಣಾಗಿತ್ತು.

ಎಬಿ ಡಿವಿಲಿಯರ್ಸ್

ಎಬಿ ಡಿವಿಲಿಯರ್ಸ್

ಆರ್‌ಸಿಬಿ ತಂಡದ ಅನುಭವಿ ಆಟಗಾರ ಎಬಿ ಡಿವಿಲಿಯರ್ಸ್ ತಂಡದ ಪಾಲಿಗೆ ಯಾವತ್ತಿಗೂ ಆಪತ್ಬಾಂಧವ. ಆದರೆ ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ಮೂಲಕ ಮಾತ್ರವಲ್ಲ ಫೀಲ್ಡಿಂಗ್‌ನಲ್ಲೂ ಮಿಂಚಿದವರು. ಸದ್ಯ ವಿಕೆಟ್ ಕೀಪಿಂಗ್ ಜವಾಬ್ಧಾರಿಯನ್ನು ಹೊತ್ತಿರುವ ಎಬಿಡಿ ಇಂದಿನ ಪಂದ್ಯದಲ್ಲಿ 2 ಕ್ಯಾಚ್‌ಗಳಲ್ಲಿ ಪಡೆದುಕೊಂಡರೆ ಐಪಿಎಲ್‌ನಲ್ಲಿ 100 ಕ್ಯಾಚ್‌ಗಳನ್ನು ಪಡೆದುಕೊಂಡಂತಾಗುತ್ತದೆ.

ಇಯಾನ್ ಮಾರ್ಗನ್

ಇಯಾನ್ ಮಾರ್ಗನ್

ಕೊಲ್ಕತಾ ನೈಟ್ ರೈಡರ್ಸ್ ತಂಡದ ನೂತನ ನಾಯಕ ಇಯಾನ್ ಮಾರ್ಗನ್ ಇಂದಿನ ಪಂದ್ಯದಲ್ಲಿ 2 ಸಿಕ್ಸರ್‌ಗಳನ್ನು ಸಿಡಿಸಿದರೆ ಐಪಿಎಲ್‌ನಲ್ಲಿ 50 ಸಿಕ್ಸರ್ ಸಿಡಿಸ ಆಟಗಾರರ ಪಟ್ಟಿಗೆ ಸೇರಿಕೊಳ್ಳಲಿದ್ದಾರೆ. ಆರಂಭದಲ್ಲಿ ಹಿನ್ನೆಡೆಯನ್ನಿ ಕಂಡಿದ್ದ ಇಂಗ್ಲೀಷ್ ಕ್ರಿಕೆಟಿಗ ಈಗ ತಮ್ಮ ಲಯಕ್ಕೆ ಮರಳಿದ್ದು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಆಂಡ್ರೆ ರಸ್ಸೆಲ್

ಆಂಡ್ರೆ ರಸ್ಸೆಲ್

ಕೆಕೆಆರ್ ತಂಡದ ಪ್ರಮುಖ ಆಟಗಾರ ಆಂಡ್ರೆ ರಸ್ಸೆಲ್ ಉತ್ತಮ ಪಾರ್ಮ್‌ನಲ್ಲಿ ಇಲ್ಲದಿರುವುದು ತಂಡಕ್ಕೆ ಅತಿ ದೊಡ್ಡ ಹಿನ್ನೆಡೆಯಾಗಿದೆ. ಇಂದಿನ ಪಂದ್ಯದಲ್ಲಿ ದೈತ್ಯ ಬ್ಯಾಟ್ಸ್‌ಮನ್ 8 ರನ್ ಹಾಗೂ 66 ರನ್‌ಗಳಿಸಿದರೆ ಐಪಿಎಲ್‌ನಲ್ಲಿ ಹಾಗೂ ಕೆಕೆಆರ್ ತಂಡದ ಪರವಾಗಿ ಕ್ರಮವಾಗಿ 1500 ರನ್‌ಗಳನ್ನು ದಾಖಲಿಸಿದಂತಾಗಲಿದೆ.

ರಾಹುಲ್ ತ್ರಿಪಾಠಿ

ರಾಹುಲ್ ತ್ರಿಪಾಠಿ

ಕೆಕೆಆರ್ ತಂಡದ ಯುವ ಆಟಗಾರ ರಾಹುಲ್ ತ್ರಿಪಾಠಿ ಈ ಬಾರಿಯ ಐಪಿಎಲ್‌ನಲ್ಲಿ ಕೆಲ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನದ ಮೂಲಕ ಮಿಂಚುವಲ್ಲಿ ಯಶಸ್ವಿಯಾಗಿದ್ದಾರೆ. ಇಂದಿನ ಪಂದ್ಯದಲ್ಲಿ ರಾಹುಲ್ ತ್ರಿಪಾಠಿ 74 ರನ್‌ಗಳಿಸುವಲ್ಲಿ ಯಶಸ್ವಿಯಾದರೆ ಐಪಿಎಲ್‌ನಲ್ಲಿ 1000 ರನ್‌ಗಳನ್ನು ಪೂರೈಸಿದಂತಾಗಲಿದೆ.

ಆರೋನ್ ಫಿಂಚ್

ಆರೋನ್ ಫಿಂಚ್

ಆರ್‌ಸಿಬಿ ತಂಡದ ಆರಂಭಿಕ ಆಟಗಾರ ಆರೋನ್ ಫಿಂಚ್ ಕೆಲ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೂ ತಮ್ಮ ಹೆಸರಿಗೆ ತಕ್ಕ ಪ್ರದರ್ಶನ ಆರ್‌ಸಿಬಿ ತಂಡಕ್ಕೆ ಬಂದಿಲ್ಲ ಎಂಬುದು ಅಭಿಮಾನಿಗಳ ನಿರಾಶೆಗೆ ಕಾರಣವಾಗಿದೆ. ಆದರೆ ಇಂದಿನ ಪಂದ್ಯದ ಆರೋನ್ ಫಿಂಚ್ 58 ರನ್‌ಗಳನ್ನು ಗಳಿಸಿದರೆ ಐಪಿಎಲ್‌ನಲ್ಲಿ 2000 ರನ್ ಪೂರೈಸಿದ ಆಟಗಾರರ ಪಟ್ಟಿಗೆ ಸೇರಿಕೊಳ್ಳಲಿದ್ದಾರೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, October 21, 2020, 16:27 [IST]
Other articles published on Oct 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X