'ವಿರಾಟ್ ಕೊಹ್ಲಿ-ಎಬಿ ಡಿ ವಿಲಿಯರ್ಸ್ ಜೊತೆಯಾಟ ಕೋಮಾದಲ್ಲಿದೆ'

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ 44ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಂಎಸ್ ಧೋನಿ ಮುಂದಾಳತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 8 ವಿಕೆಟ್‌ಗಳ ಸೋಲನುಭವಿಸಿತ್ತು. ಈ ಪಂದ್ಯದಲ್ಲಿ ಕೊಹ್ಲಿ ಪಡೆ ಎಡವಿದ್ದೆಲ್ಲಿ ಎಂದು ಭಾರತದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ವಿಚಿತ್ರ ಕಾರಣ, ಪಂತ್ ಆಯ್ಕೆ ಅನುಮಾನ!

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ದೇವದತ್ ಪಡಿಕ್ಕಲ್ 22, ಆ್ಯರನ್ ಫಿಂಚ್ 15, ವಿರಾಟ್ ಕೊಹ್ಲಿ 50, ಎಬಿ ಡಿ ವಿಲಿಯರ್ಸ್ 39 ರನ್ ಸೇರ್ಪಡೆಯೊಂದಿಗೆ 20 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 145 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್‌, ಆರಂಭಿಕ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ 65, ಫಾಫ್ ಡು ಪ್ಲೆಸಿಸ್ 25, ಅಂಬಾಟಿ ರಾಯುಡು 39, ಎಂಎಸ್ ಧೋನಿ 19 ರನ್‌ನೊಂದಿಗೆ 18.4ನೇ ಓವರ್‌ಗೆ 2 ವಿಕೆಟ್‌ ಕಳೆದು 150 ರನ್‌ ಬಾರಿಸಿ ಗೆಲುವನ್ನಾಚರಿಸಿತು. ಈ ಪಂದ್ಯ ಗೆದ್ದರೂ ಸಿಎಸ್‌ಕೆ ಪ್ಲೇ ಆಫ್ ಅವಕಾಶ ಕಳೆದುಕೊಂಡಿತ್ತು.

ಬೆನ್ ಸ್ಟೋಕ್ಸ್ ಕೈ ಬೆರಳು ಮಡಚಿದ್ದರ ಹಿಂದಿದೆ ಕುತೂಹಲಕಾರಿ ಕಾರಣ!

ಪಂದ್ಯದಲ್ಲಿ ಆರ್‌ಸಿಬಿ ಸೋಲಿನ ಬಗ್ಗೆ ಮಾತನಾಡಿದ ಸೆಹ್ವಾಗ್, '7ನೇ ಓವರ್‌ ಬಳಿಕ ಕೊಹ್ಲಿ-ಎಬಿಡಿ ಜೊತೆಯಾಗಿದ್ದರು. ಆದರೆ 18ನೇ ಓವರ್‌ ವೇಳೆಗೆ ಇಬ್ಬರ ಜೊತೆಯಾಟ ಕೋಮಾಕ್ಕೆ ತಲುಪಿತ್ತು,' ಎಂದಿದ್ದಾರೆ. ಸೆಹ್ವಾಗ್ ಹೇಳಿದ್ದು ನಿಜವೆ. ಯಾಕೆಂದರೆ ಕೊಹ್ಲಿ-ಎಬಿಡಿ ಬ್ಯಾಟಿಂದ ಆವತ್ತು ಸ್ಫೋಟಕ ಬ್ಯಾಟಿಂಗ್ ಬಂದಿರಲಿಲ್ಲ. ಕಡಿಮೆ ಟೋಟಲ್‌ ಬರಲು ಇದೂ ಒಂದು ಕಾರಣವಾಗಿತ್ತು.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, October 26, 2020, 18:23 [IST]
Other articles published on Oct 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X