ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಸಲ ಕಪ್‌ ಗೆಲ್ಲಲು ಆರ್‌ಸಿಬಿಗೆ ಪ್ರಮುಖ ಸಲಹೆ ಕೊಟ್ಟ ಗೌತಮ್ ಗಂಭೀರ್

IPL 2020: Virat Kohli needs to persist with players like MS Dhoni does, reckons Gautam Gambhir

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ಐಪಿಎಲ್ ಕಪ್‌ ಗೆಲ್ಲದ ಡೆಲ್ಲಿ ಕ್ಯಾಪಿಟಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್‌ ಜೊತೆ ಆರ್‌ಸಿಬಿ ಕೂಡ ಸೇರಿದೆ. ಮೂರು ಬಾರಿ ಆರ್‌ಸಿಬಿ ಫೈನಲ್‌ಗೆ ಪ್ರವೇಶಿಸಿತ್ತು. ಆದರೆ ಅವಕಾಶವನ್ನು ಪ್ರಶಸ್ತಿಯತ್ತ ತಿರುಗಿಸುವಲ್ಲಿ ಬೆಂಗಳೂರು ವಿಫಲವಾಗಿತ್ತು. ಮುಖ್ಯವಾಗಿ ಭಾರತದ ನಾಯಕ ವಿರಾಟ್ ಕೊಹ್ಲಿ ಮುಂದಾಳತ್ವದ ತಂಡವೇ ಐಪಿಎಲ್ ಚಾಂಪಿಯನ್ಸ್ ಆಗದಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಐಪಿಎಲ್ 2020: ಹಿಂದಿಗಿಂತ ಹೇಗೆ ಭಿನ್ನ ಈ ಬಾರಿಯ ಆರ್‌ಸಿಬಿ? ಕುತೂಹಲಕಾರಿ ಸಂಗತಿ ಬಿಚ್ಚಿಟ್ಟ ಎಬಿಡಿಐಪಿಎಲ್ 2020: ಹಿಂದಿಗಿಂತ ಹೇಗೆ ಭಿನ್ನ ಈ ಬಾರಿಯ ಆರ್‌ಸಿಬಿ? ಕುತೂಹಲಕಾರಿ ಸಂಗತಿ ಬಿಚ್ಚಿಟ್ಟ ಎಬಿಡಿ

ಆರ್‌ಸಿಬಿ ಯಾಕೆ ಐಪಿಎಲ್ ಕಪ್ ಗೆಲ್ಲುತ್ತಿಲ್ಲ ಅನ್ನೋದಕ್ಕೆ ಆರ್‌ಸಿಬಿ ಮಾಜಿ ಆಟಗಾರ, ಟೀಮ್ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಕೂಡ ಸೇರಿ ಅನೇಕ ಪರಿಣಿತರು ಪ್ರಮುಖ ಕಾರಣಗಳನ್ನು ಹೇಳಿದ್ದರು.

2020ರ ಐಪಿಎಲ್‌ನಲ್ಲಿ ಗೆಲ್ಲುವ ತಂಡ ಹೆಸರಿಸಿದ ಕೆವಿನ್ ಪೀಟರ್ಸನ್2020ರ ಐಪಿಎಲ್‌ನಲ್ಲಿ ಗೆಲ್ಲುವ ತಂಡ ಹೆಸರಿಸಿದ ಕೆವಿನ್ ಪೀಟರ್ಸನ್

ಈ ಬಾರಿ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕೂಡ ಆರ್‌ಸಿಬಿ ಹಿನ್ನಡೆಗೆ ಕಾರಣಗಳನ್ನು ಕೊಟ್ಟಿದ್ದಾರೆ. ಕಪ್‌ ಗೆಲ್ಲಲು ಪ್ರಮುಖ ಸಲಹೆಯನ್ನೂ ನೀಡಿದ್ದಾರೆ.

ಧೋನಿಯನ್ನು ಕೊಹ್ಲಿ ಅನುಸರಿಸಲಿ

ಧೋನಿಯನ್ನು ಕೊಹ್ಲಿ ಅನುಸರಿಸಲಿ

ಕ್ರಿಕೆಟ್ ವಿಶ್ಲೇಕರಾಗಿ ಬದಲಾಗಿರುವ ಗೌತಮ್ ಗಂಭೀರ್, ಐಪಿಎಲ್‌ ಕಪ್‌ ಗೆಲ್ಲಬೇಕಾದರೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿಯನ್ನು ಅನುಸರಿಸಬೇಕು. ಧೋನಿಯಂತೆ ಕೊಹ್ಲಿ ಕೂಡ ಒಂದಿಷ್ಟು ಪಂದ್ಯಗಳಲ್ಲಿ ಒಂದೇ ಬಲಿಷ್ಠ ತಂಡವನ್ನು ಮುಂದುವರೆಸಬೇಕು ಎಂದಿದ್ದಾರೆ.

ಬ್ಯಾಲನ್ಸ್ ಇಲ್ಲದ ತಂಡ

ಬ್ಯಾಲನ್ಸ್ ಇಲ್ಲದ ತಂಡ

ಆರ್‌ಸಿಬಿ ತಂಡದಲ್ಲಿ ಸಮತೋಲನ ಇಲ್ಲ ಅನ್ನೋದು ನಮಗೆ-ನಿಮಗೆ ಗೊತ್ತಿರುವ ಸತ್ಯ ಸಂಗತಿ. ಗೌತಮ್ ಗಂಭೀರ್ ಕೂಡ ಕೊಹ್ಲಿಯದ್ದು ಬ್ಯಾಟ್ಸ್‌ಮನ್ ಹೆಚ್ಚಿರುವ ತಂಡ ಎಂದಿದ್ದಾರೆ. ಪ್ಲೇಯಿಂಗ್ XI ಆರಿಸುವಾಗ ಬ್ಯಾಲನ್ಸ್ ಮಾಡುವಲ್ಲಿ ಆರ್‌ಸಿಬಿ ಎಡವುತ್ತದೆ ಎಂದು ಕೋಲ್ಕತ್ತಾ ನೈಟ್ ರೈಡರ್ಸ್ ಪರ ಎರಡು ಬಾರಿ ಐಪಿಎಲ್ ಟ್ರೋಫಿ ಗೆದ್ದಿದ್ದ ಗಂಭೀರ್ ತಿಳಿಸಿದ್ದಾರೆ.

ಆರ್‌ಸಿಬಿಗೂ ಸಿಎಸ್‌ಕೆಗೂ ಇರುವ ವ್ಯತ್ಯಾಸ

ಆರ್‌ಸಿಬಿಗೂ ಸಿಎಸ್‌ಕೆಗೂ ಇರುವ ವ್ಯತ್ಯಾಸ

'ಈ ಬಾರಿಯೂ ಆರ್‌ಸಿಬಿ ಬ್ಯಾಟಿಂಗ್‌ನಲ್ಲೇ ಹೆಚ್ಚು ಬಲಿಷ್ಠ ತಂಡ ಎಂದು ನನಗನ್ನಿಸುತ್ತದೆ. ಕೊಹ್ಲಿಗೂ ಧೋನಿಗೂ ಇರುವ ದೊಡ್ಡ ವ್ಯತ್ಯಾಸವೆಂದರೆ ಧೋನಿ 6-7 ಪಂದ್ಯಗಳಲ್ಲಿ ತನ್ನ ಆಟಗಾರರೊಂದಿಗೆ ಮುಂದುವರೆಯುತ್ತಾರೆ. ನೀವು ಆರ್‌ಸಿಬಿಯ ಟ್ರೆಂಡ್ ಗಮನಿಸಿದರೆ, ಅಲ್ಲಿ ಬೇಗನೆ ಪ್ಲೇಯಿಂಗ್ XI ಬದಲಾಯಿಸುತ್ತಿರುತ್ತಾರೆ. ಯಾಕೆಂದರೆ ಅವರಿಗೆ ತಮ್ಮ ಪ್ಲೇಯಿಂಗ್‌ XI ಬಗ್ಗೆ ಅನುಮಾನವಿರುತ್ತದೆ,' ಎಂದು ಗಂಭೀರ್ ವಿವರಿಸಿದರು.

ಪ್ಲೇಯಿಂಗ್‌ XI ಜೊತೆಗೆ ನಿಲ್ಲಬೇಕು

ಪ್ಲೇಯಿಂಗ್‌ XI ಜೊತೆಗೆ ನಿಲ್ಲಬೇಕು

ಮಾತು ಮುಂದುವರೆಸಿದ ಗಂಭೀರ್, 'ಆರಂಭಿಕ ಪಂದ್ಯಗಳಲ್ಲಿ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡದಿದ್ದರೂ ಅವರು ತಮ್ಮ ಮೊದಲ ಪ್ಲೇಯಿಂಗ್‌ XI ಜೊತೆಗೆ ನಿಲ್ಲಬೇಕು. 6-7 ಪಂದ್ಯಗಳನ್ನು ಆಡುವ ಅವಕಾಶ ಅದೇ ಪ್ಲೇಯಿಂಗ್ XIಗೆ ನೀಡಬೇಕು. ಆಗ ಮಾತ್ರ ಆಟಗಾರನೊಬ್ಬ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆಯೇ ಹೊರತು, ಬರೀ ಒಂದೆರಡು ಪಂದ್ಯಗಳಿಗೆ ಅವಕಾಶ ಕೊಟ್ಟರೆ ಅಲ್ಲ,' ಎಂದರು.

Story first published: Tuesday, September 15, 2020, 9:47 [IST]
Other articles published on Sep 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X