ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಕ್ರಿಕೆಟ್ ಇತಿಹಾಸದಲ್ಲಿ ವಿಶೇಷ ದಾಖಲೆ ಬರೆಯಲಿದ್ದಾರೆ ವಿರಾಟ್ ಕೊಹ್ಲಿ

IPL 2020: Virat Kohli on verge of becoming 1st Indian to score 9,000 runs in T20 cricket

ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಾಯಕ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020ರ ಸೀಸನ್‌ನಲ್ಲಿ ಆರಂಭಿಕ ಮೂರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಆಡಿದ 3 ಪಂದ್ಯಗಳಲ್ಲಿ ಕ್ರಮವಾಗಿ 3, 1, 14 ರನ್ ಗಳಿಸಿದ್ದರು. 4ನೇ ಪಂದ್ಯದಲ್ಲಿ 72 ರನ್ ಗಳಿಸಿದ್ದರು. ಮುಂದಿನ ಪಂದ್ಯದಲ್ಲಿ ಕೊಹ್ಲಿಗೆ ಟಿ20 ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ನಿರ್ಮಿಸಲು ಅವಕಾಶವಿದೆ.

ನಾಯಕನ ಸ್ಥಾನಕ್ಕೆ ಕೆ.ಎಲ್ ರಾಹುಲ್ ಪರ್ಫೆಕ್ಟ್‌: ಮೊಹಮ್ಮದ್ ಶಮಿನಾಯಕನ ಸ್ಥಾನಕ್ಕೆ ಕೆ.ಎಲ್ ರಾಹುಲ್ ಪರ್ಫೆಕ್ಟ್‌: ಮೊಹಮ್ಮದ್ ಶಮಿ

ಕೊಹ್ಲಿಗೆ ಟಿ20ನಲ್ಲಿ 9,000 ರನ್ ಬಾರಿಸಲು ಅವಕಾಶವಿದೆ. ಮುಂದಿನ ಪಂದ್ಯದಲ್ಲಿ ಕೊಹ್ಲಿ ಕೇವಲ 10 ರನ್ ಬಾರಿಸಿದರೂ ಅವರ ಹೆಸರಿನಲ್ಲಿ ದಾಖಲೆ ನಿರ್ಮಾಣವಾಗಲಿದೆ. ಟಿ20 ಕ್ರಿಕೆಟ್‌ನಲ್ಲಿ 9000 ರನ್ ಪೂರೈಸಿದ ಭಾರತದ ಮೊದಲ ಬ್ಯಾಟ್ಸ್‌ಮನ್‌ ಆಗಿ ಕೊಹ್ಲಿ ಗುರುತಿಸಲಿದ್ದಾರೆ. ಅಷ್ಟೇ ಅಲ್ಲ, ವಿಶ್ವದಲ್ಲಿ ಈ ದಾಖಲೆ ನಿರ್ಮಿಸಿದ 7ನೇ ಆಟಗಾರನಾಗಿಯೂ ವಿರಾಟ್ ಗಮನ ಸೆಳೆಯಲಿದ್ದಾರೆ.

ಐಪಿಎಲ್ 2020: ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೆಕೆಆರ್ ಹೆಡ್ ಟು ಹೆಡ್ ಮಾಹಿತಿಐಪಿಎಲ್ 2020: ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೆಕೆಆರ್ ಹೆಡ್ ಟು ಹೆಡ್ ಮಾಹಿತಿ

ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಶನಿವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೊಹ್ಲಿ ಈ ದಾಖಲೆ ನಿರ್ಮಿಸಲು ಅವಕಾಶವಿತ್ತು. ಆದರೆ ಕೊಹ್ಲಿ ಆ ಪಂದ್ಯದಲ್ಲಿ 72 ರನ್ ಬಾರಿಸಿದ್ದರು. ಟಿ20ಯಲ್ಲಿ 270 ಇನ್ನಿಂಗ್ಸ್‌ಗಳನ್ನಾಡಿರುವ ಕೊಹ್ಲಿ 8990 ರನ್ ಬಾರಿಸಿದಂತಾಗಿದೆ. ಮುಂದಿನ ಪಂದ್ಯದಲ್ಲಿ ಕೊಹ್ಲಿ ದಾಖಲೆ ಪೂರೈಸುವ ನಿರೀಕ್ಷೆಯಿದೆ.

ಟೆನಿಸ್ ಆಡುವಾಗ 7.3 ಕೋಟಿ ರೂ. ವಾಚ್ ಕಟ್ಟಿದ್ದ ರಾಫೆಲ್ ನಡಾಲ್, ಇನ್ನೂ ಡಿನ್ನರ್‌ಗೆ ಹೋಗುವಾಗ ಎಷ್ಟು ರೂ. ವಾಚ್!ಟೆನಿಸ್ ಆಡುವಾಗ 7.3 ಕೋಟಿ ರೂ. ವಾಚ್ ಕಟ್ಟಿದ್ದ ರಾಫೆಲ್ ನಡಾಲ್, ಇನ್ನೂ ಡಿನ್ನರ್‌ಗೆ ಹೋಗುವಾಗ ಎಷ್ಟು ರೂ. ವಾಚ್!

ಟಿ20ಐನಲ್ಲಿ ಕೊಹ್ಲಿ 65 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಐಪಿಎಲ್‌ನಲ್ಲಿ ಕೊಹ್ಲಿ 180 ಪಂದ್ಯಗಳಲ್ಲಿ 5430+ ರನ್ ಬಾರಿಸಿದ್ದಾರೆ. ಈ ಬಾರಿಯ ಸೀಸನ್‌ನಲ್ಲಿ ಆರ್‌ಸಿಬಿಯ ದೇವದತ್ ಪಡಿಕ್ಕಲ್, ಆ್ಯರನ್ ಫಿಂಚ್ ಮತ್ತು ಎಬಿ ಡಿ ವಿಲಿಯರ್ಸ್ ಅರ್ಧ ಶತಕ ಬಾರಿಸಿದ್ದರು. ಕೊಹ್ಲಿ ಮಾತ್ರ ಅರ್ಧ ಶತಕ ಬಾರಿಸಬೇಕಿತ್ತು. ಶನಿವಾರದ ಪಂದ್ಯದಲ್ಲಿ ಕೊಹ್ಲಿ ಕೂಡ ಟೂರ್ನಿಯ ಮೊದಲ ಅರ್ಧ ಶತಕ ಸಿಡಿಸಿದ್ದಾರೆ.

Story first published: Saturday, October 3, 2020, 20:20 [IST]
Other articles published on Oct 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X