ಕೊಹ್ಲಿ-ಎಬಿ ಡಿವಿಲಿಯರ್ಸ್ ಗೆಳೆತನ ಎಷ್ಟು ಗಾಢ ಗೊತ್ತೇ?

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ಟ್ರೋಲ್‌ಗೆ ಒಳಗಾದ ಆಟಗಾರರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಒಬ್ಬರು. ಆಡಿದ ಮೂರೂ ಪಂದ್ಯಗಳಲ್ಲಿ ಕೊಹ್ಲಿ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಸೂಪರ್ ಓವರ್‌ನಲ್ಲಿ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿ ಗೆಲ್ಲಿಸಿದ್ದೇ ಕೊಹ್ಲಿಯ ಈ ಬಾರಿಯ ಸಾಧನೆ!

ಆದರೆ ಕೊಹ್ಲಿ ನೇತೃತ್ವದ ಆರ್‌ಸಿಬಿ ಮೂರರಲ್ಲಿ ಎರಡು ಪಂದ್ಯಗಳನ್ನು ಗೆದ್ದು ಉತ್ತಮ ಆರಂಭ ಕಂಡಿದೆ. ಇದುವರೆಗೆ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಹೆಗ್ಗಳಿಕೆ ಹೊಂದಿರುವ ಕೊಹ್ಲಿ, ಮರಳಿ ಫಾರ್ಮ್‌ಗೆ ಬರಲಿದ್ದಾರೆ ಎಂದು ಅಭಿಮಾನಿಗಳು ವಿಶ್ವಾಸದಲ್ಲಿದ್ದಾರೆ.

ಐಪಿಎಲ್‌ನಲ್ಲಿ ಅತಿ ಕಡಿಮೆ ತಪ್ಪು ಹೊಡೆತ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿ

2008ರಲ್ಲಿ ಐಪಿಎಲ್ ಆರಂಭವಾದ ಸಮಯದಿಂದಲೂ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದಲ್ಲಿದ್ದಾರೆ. ಮೂರು ವರ್ಷ ಡೆಲ್ಲಿ ಡೇರ್ ಡೆವಿಲ್ಸ್ ತಂಡದಲ್ಲಿ ಆಡಿದ್ದ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎಬಿ ಡಿವಿಲಿಯರ್ಸ್, 2011ರಿಂದ ಆರ್‌ಸಿಬಿಯ ಭಾಗವಾಗಿದ್ದಾರೆ. ಈ 9 ವರ್ಷಗಳಲ್ಲಿ ಎಬಿಡಿ ಆರ್‌ಸಿಬಿಗೆ ಆಪತ್ಬಾಂಧವರಾಗಿ ಹಲವು ಬಾರಿ ಅಮೋಘ ಪ್ರದರ್ಶನ ನೀಡಿದ್ದಾರೆ. ಈ ಇಬ್ಬರ ಜೋಡಿ ಅರ್‌ಸಿಬಿಯ ದೊಡ್ಡ ಶಕ್ತಿ ಕೂಡ. ಮುಂದೆ ಓದಿ...

ಎಬಿಡಿಗೆ ಅರ್ಪಣೆ

ಎಬಿಡಿಗೆ ಅರ್ಪಣೆ

ಆರ್‌ಸಿಬಿಯ ತಂಡ ಎಬಿ ಡಿವಿಲಿಯರ್ಸ್ ಅವರ ಮೇಲೆ ಭರವಸೆ ಇರಿಸಿದೆ. ಹಾಗೆಯೇ ಅವರನ್ನು ಬಹುತೇಕ ಅವಲಂಬಿಸಿದೆ ಕೂಡ. ದಕ್ಷಿಣ ಆಫ್ರಿಕಾದ ಈ ಕ್ರಿಕೆಟ್ ದಿಗ್ಗಜನಿಗೆ ವಿರಾಟ್ ಕೊಹ್ಲಿ ಸುಂದರ ಹಾಗೂ ಭಾವಪೂರ್ಣ ವಂದನೆ ಅರ್ಪಿಸಿದ್ದಾರೆ.

ಕ್ರೀಡೆ ಸುಂದರ

ಕ್ರೀಡೆ ಸುಂದರ

ಎಬಿಡಿ ಜತೆಗಿರುವ ಫೋಟೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿರಾಟ್ ಕೊಹ್ಲಿ, 'ಕ್ರೀಡೆಯಲ್ಲಿನ ಅತ್ಯಂತ ವಿಶೇಷವಾದ ಸಂಗತಿಯೆಂದರೆ ನೀವು ನಿಮ್ಮ ಪಯಣದ ಜತೆಗೆ ತಂಡದ ಸಹೋದ್ಯೋಗಿಯೊಂದಿಗೆ ಹಂಚಿಕೊಳ್ಳುವ ಗೆಳೆತನ ಮತ್ತು ಪರಸ್ಪರ ಗೌರವ. ಕ್ರೀಡೆ ಸುಂದರವಾದದ್ದು' ಎಂದು ಬರೆದಿದ್ದಾರೆ.

ಯಾರ್ಕ'ರಾಜನ್'!: ಅಪರೂಪದ ಬೌಲರ್‌ನ ಸ್ಫೂರ್ತಿದಾಯಕ ಕಥೆ

ಹತ್ತಿರದವರಿಗೆ ಬಿಸ್ಕಿಟ್ ಹೆಸರು

ಹತ್ತಿರದವರಿಗೆ ಬಿಸ್ಕಿಟ್ ಹೆಸರು

ಡಿವಿಲಿಯರ್ಸ್ ಅವರನ್ನು ಪ್ರೀತಿಯಿಂದ 'ಬಿಸ್ಕಿಟ್' ಎಂದು ಕರೆಯುವುದಾಗಿ ವಿರಾಟ್ ಕೊಹ್ಲಿ ಹೇಳಿದ್ದರು. ಅದಕ್ಕೆ ಕಾರಣವನ್ನು ಸಹ ಅವರು ತಿಳಿಸಿದ್ದರು. 'ದಕ್ಷಿಣ ಆಫ್ರಿಕಾದ ಭಾಷೆಯಿಂದ ಇದನ್ನು ತಿಳಿದುಕೊಂಡೆ. 'ನಿಮಗೆ ಹತ್ತಿರವಾದವರು, ನಿಮ್ಮನ್ನು ಇಷ್ಟಪಡುವವರನ್ನು ಬಿಸ್ಕಿಟ್, ಬಿಸ್ಕೊಟ್ಟಿ ಎಂದು ಕರೆಯುತ್ತಾರೆ. ಏಕೆಂದರೆ ಎಲ್ಲರಿಗೂ ಬಿಸ್ಕಿಟ್ ಎಂದರೆ ಇಷ್ಟ ಅಲ್ಲವೇ?' ಎಂದಿದ್ದರು.

ಆರ್‌ಸಿಬಿಗಾಗಿ ಆಡುವ ಬಯಕೆ

ಆರ್‌ಸಿಬಿಗಾಗಿ ಆಡುವ ಬಯಕೆ

'2011ರಲ್ಲಿ ಜೊಹಾನ್ಸ್‌ಬರ್ಗ್‌ನಲ್ಲಿ ನಾವು ಪರಸ್ಪರ ಸರಿಯಾಗಿ ಹಲೋ ಎಂದಿದ್ದೆವು. ಅದು ಆ ಮೈದಾನದ ಸುರಂಗದಲ್ಲಿ ನಡೆದಿದ್ದು. ಅವರು ಆಗಲೇ ಅಭ್ಯಾಸ ನಡೆಸಿದ್ದರು. ನಾವು ಅಭ್ಯಾಸಕ್ಕೆ ತೆರಳುತ್ತಿದ್ದೆವು. ಆಗ ನಾನು- ಹಲೋ, ಆರ್‌ಸಿಬಿಯಲ್ಲಿ ನಿಮ್ಮೊಂದಿಗೆ ಆಡುವ ಗಳಿಗೆಗಾಗಿ ಎದುರು ನೋಡುತ್ತಿದ್ದೇನೆ ಎಂದೆ. ಆಗ ಅವರು ಆರ್‌ಸಿಬಿ ಪರ ಆಡಲು ಕಾತರದಿಂದ ಕಾದಿರುವುದಾಗಿ ತಿಳಿಸಿದ್ದರು' ಎಂದು ಕೊಹ್ಲಿ ಹೇಳಿದ್ದರು.

ಐಪಿಎಲ್ ದಾಖಲೆ ಬರೆದು ರೈನಾ, ಕೊಹ್ಲಿ ಜೊತೆ ಸೇರಿದ ರೋಹಿತ್ ಶರ್ಮಾ

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, October 1, 2020, 21:44 [IST]
Other articles published on Oct 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X