ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಎಲ್ ರಾಹುಲ್‌ಗೆ ಎಚ್ಚರಿಕೆ ನೀಡಿದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ!

IPL 2020: Virat Kohli warns KL Rahul after being reminded of two dropped catches

ದುಬೈ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ 31ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ XI ಪಂಜಾಬ್ ತಂಡಗಳು ಮುಖಾಮುಖಿಯಾಗುತ್ತಿವೆ. ಇತ್ತಂಡಗಳು ಲೀಗ್ ಹಂತದಲ್ಲಿ ಎದುರು-ಬದುರಾಗುತ್ತಿರುವುದು ಇದು ಎರಡನೇ ಸಾರಿ. ಮೊದಲ ಮುಖಾಮುಖಿಯ ವೇಳೆ ವಿರಾಟ್ ಕೊಹ್ಲಿ ಪಡೆಯ ವಿರುದ್ಧ ಪಂಜಾಬ್‌ ಭರ್ಜರಿ 97 ರನ್‌ಗಳಿಂದ ಗೆದ್ದಿತ್ತು.

ನಿಮ್ಮನ್ನು ಬೆರಗುಗೊಳಿಸಬಲ್ಲ ಐಪಿಎಲ್‌ನ 10 ಸತ್ಯ ಸಂಗತಿಗಳಿವು!ನಿಮ್ಮನ್ನು ಬೆರಗುಗೊಳಿಸಬಲ್ಲ ಐಪಿಎಲ್‌ನ 10 ಸತ್ಯ ಸಂಗತಿಗಳಿವು!

ಆವತ್ತು ಕಿಂಗ್ಸ್ XI ಪಂಜಾಬ್‌ ವಿರುದ್ಧ ಹೀನಾಯ ಸೋಲನುಭವಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೆಟ್ ರನ್‌ರೇಟ್‌ಗೆ ಹೊಡೆತ ಬಿದ್ದಿತ್ತು. ಅಂದಿನ ಪಂದ್ಯದಲ್ಲಿ ಆರ್‌ಸಿಬಿ ಸೋಲಿಗೆ ಕಾರಣ ವಿರಾಟ್ ಕೊಹ್ಲಿ ಮಾಡಿದ್ದ ಎಡವಟ್ಟು.

ತೈಮೂರ್‌ಗೆ ಐಪಿಎಲ್‌ನಲ್ಲಿ ಅವಕಾಶ ಸಿಗಬಹುದೇ ಎಂದ ಕರೀನಾ ಕಪೂರ್: ಪ್ರತಿಕ್ರಿಯಿಸಿದೆ ಡೆಲ್ಲಿ ಕ್ಯಾಪಿಟಲ್ಸ್ತೈಮೂರ್‌ಗೆ ಐಪಿಎಲ್‌ನಲ್ಲಿ ಅವಕಾಶ ಸಿಗಬಹುದೇ ಎಂದ ಕರೀನಾ ಕಪೂರ್: ಪ್ರತಿಕ್ರಿಯಿಸಿದೆ ಡೆಲ್ಲಿ ಕ್ಯಾಪಿಟಲ್ಸ್

ಪಂಜಾಬ್ ವಿರುದ್ಧದ ಮೊದಲ ಸೋಲಿಗೆ ಸಂಬಂಧಿಸಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ. ಪಂಜಾಬ್‌ ನಾಯಕ ಕೆಎಲ್ ರಾಹುಲ್‌ಗೆ ಕೊಹ್ಲಿ ಎಚ್ಚರಿಕೆ ನೀಡಿದ್ದಾರೆ.

ಕೊಹ್ಲಿ ಮಾಡಿದ್ದ ಮಿಸ್ಟೇಕ್

ಕೊಹ್ಲಿ ಮಾಡಿದ್ದ ಮಿಸ್ಟೇಕ್

ಪಂಜಾಬ್ ವಿರುದ್ಧದ ಮೊದಲ ಮುಖಾಮುಖಿಯ ವೇಳೆ ಕೊಹ್ಲಿ ಮಾಡಿದ್ದ ತಪ್ಪೆಂದರೆ ಕೆಎಲ್ ರಾಹುಲ್ ಅವರ ಕ್ಯಾಚ್ ಅನ್ನು ಎರಡೆರಡು ಸಾರಿ ಕೈ ಚೆಲ್ಲಿದ್ದು. ವಿಶ್ವದ ಶ್ರೇಷ್ಠ ಫೀಲ್ಡರ್‌ಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಕೊಹ್ಲಿ ಆವತ್ತು ಕ್ಯಾಚ್ ಮಿಸ್ ಮಾಡಿದ್ದರಿಂದ ಆರ್‌ಸಿಬಿ ಹೀನಾಯವಾಗಿ ಸೋತಿತ್ತು.

ಶತಕ ಚಚ್ಚಿದ್ದ ರಾಹುಲ್

ಶತಕ ಚಚ್ಚಿದ್ದ ರಾಹುಲ್

ಆವತ್ತಿನ ಪಂದ್ಯದಲ್ಲಿ 17ನೇ ಓವರ್‌ನಲ್ಲಿ ರಾಹುಲ್ ಬೀಸಿದ ಚೆಂಡನ್ನು ಡೀಪ್ ಸ್ಕ್ವೇರ್‌ ಲೆಗ್‌ನಲ್ಲಿದ್ದ ಕೊಹ್ಲಿ ಕೈ ಚೆಲ್ಲಿದ್ದರು. ಆಗ ರಾಹುಲ್ 83 ರನ್ ಬಾರಿಸಿದ್ದರು. ಅದಾಗಿ ಮತ್ತೆ 18ನೇ ಓವರ್‌ನಲ್ಲೂ ಕೊಹ್ಲಿ, ರಾಹುಲ್ ಕ್ಯಾಚ್ ಡ್ರಾಪ್ ಮಾಡಿದರು. ಹೀಗಾಗಿ ರಾಹುಲ್ 132 ರನ್ ಬಾರಿಸಿ ಪಂದ್ಯ ಗೆದ್ದಿದ್ದರು.

ಕೊಹ್ಲಿ ಕಾಲೆಳೆದ ರಾಹುಲ್

ಕೊಹ್ಲಿ ಕಾಲೆಳೆದ ರಾಹುಲ್

ಇನ್‌ಸ್ಟಾಗ್ರಾಮ್‌ ಲೈವ್‌ನಲ್ಲಿ ವಿರಾಟ್ ಮತ್ತು ರಾಹುಲ್ ಮಾತನಾಡುತ್ತಿದ್ದಾಗ ರಾಹುಲ್ ತಮಾಷೆ ಮಾಡಿದರು. 'ಆರ್‌ಸಿಬಿ ವಿರುದ್ಧ ಆಡುವುದೆಂದರೆ ಖುಷಿ. ಹೀಗಾಗಿ ನಾನು ಮತ್ತೊಂದು ಗೆಲುವಿನತ್ತ ಎದುರು ನೋಡುತ್ತಿದ್ದೇನೆ. ಯಾಕೆಂದರೆ ಕೆಲ ಫೀಲ್ಡರ್‌ಗಳು ಒಂದಿಷ್ಟು ಕ್ಯಾಚ್ ಡ್ರಾಪ್ ಮಾಡಲಿದ್ದಾರೆ,' ಎಂದು ರಾಹುಲ್ ಅವರು ಕೊಹ್ಲಿಯ ಕಾಲೆಳೆದರು.

ರಾಹುಲ್‌ಗೆ ಕೊಹ್ಲಿ ಎಚ್ಚರಿಕೆ

ರಾಹುಲ್‌ಗೆ ಕೊಹ್ಲಿ ಎಚ್ಚರಿಕೆ

ರಾಹುಲ್ ಮಾತಿಗೆ ಪ್ರತಿಕ್ರಿಯಿಸಿದ ವಿರಾಟ್, 'ಹಿಂದಿನ ಬಾರಿಯಂತೆ ಈ ಬಾರಿಯೂ ನಾನು ಅದೇ ಜಾಗದಲ್ಲಿ ನಿಲ್ಲುತ್ತೇನೆ. ಆದರೆ ಈ ಬಾರಿ ಬಾನೆತ್ತರಕ್ಕೆ ಚೆಂಡು ಹೊಡೆಯುವ ಮೊದಲು ಎರಡೆರಡು ಬಾರಿ ಯೋಚಿಸು,' ಎಂದು ಎಚ್ಚರಿಸಿದ್ದಾರೆ.

Story first published: Friday, October 16, 2020, 10:13 [IST]
Other articles published on Oct 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X