ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಕೊಹ್ಲಿ ಹಿನ್ನಡೆಗೆ 2 ಮುಖ್ಯ ಕಾರಣ ಹೇಳಿದ ಆರ್‌ಸಿಬಿ ಮಾಜಿ ಕೋಚ್

Ipl 2020: Virat Kohli Was A Bit Of A Loner, Backed Wrong Players At Times - Ray Jennings

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 60ರ ಸರಾಸರಿಯಲ್ಲಿ ಟೆಸ್ಟ್‌ ಮಾದರಿಯಲ್ಲಿ ಗೆಲುವು ಕಂಡು ಸದ್ಯ ಟೆಸ್ಟ್ ಮಾದರಿಯ ಯಶಸ್ವಿ ನಾಯಕ ಎನಿಸಿದ್ದಾರೆ. ಅಂತಾರಾಷ್ಟ್ರೀಯ ಸೀಮಿತ ಓವರ್‌ಗಳ ವಿಚಾರದಲ್ಲೂ ಕೊಹ್ಲಿ ಗೆಲುವಿನ ಸರಾಸರಿ ಅತ್ಯುತ್ತಮವಾಗಿದೆ. ಆದರೆ ನಾಯಕನಾಗಿ ವಿರಾಟ್ ಕೊಹ್ಲಿಗೆ ಈ ಪ್ರಚಂಡ ದಾಖಲೆಯನ್ನು ಐಪಿಎಲ್‌ನಲ್ಲಿ ಮುಂದುವರಿಸಲು ಸಾಧ್ಯವಾಗಲೇ ಇಲ್ಲ.

ತಂಡದಲ್ಲಿದ್ದ ಉತ್ತಮ ಆಟಗಾರರ ಹೊರತಾಗಿಯೂ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಆರ್‌ಸಿಬಿ ಸಾಕಷ್ಟು ಭಾರೀ ಹಿನ್ನಡೆಯನ್ನೇ ಕಂಡಿದೆ. ಇದಕ್ಕೆ ಕಾರಣಗಳು ಏನು ಎಂಬುದರ ಬಗ್ಗೆ ಬೇರೆ ಬೇರೆ ವಿಮರ್ಶಕರು ನಾನಾ ರೀತಿಯ ಕಾರಣಗಳನ್ನು ನೀಡಿದ್ದಾರೆ. ಆದರೆ ಆರ್‌ಸಿಬಿ ತಂಡದ ಮಾಜಿ ಕೋಚ್ ರೇ ಜೆನ್ನಿಂಗ್ಸ್ ಈ ಬಗ್ಗೆ ಹೇಳಿಕೆ ನೀಡಿದ್ದು ಗಮನಾರ್ಹವಾಗಿದೆ.

ಅಲೆಕ್ಸ್ ಕ್ಯಾರಿ-ಗ್ಲೆನ್ ಮ್ಯಾಕ್ಸ್‌ವೆಲ್ ಜೊತೆಯಾಟಕ್ಕೆ ಶರಣಾದ ಇಂಗ್ಲೆಂಡ್ಅಲೆಕ್ಸ್ ಕ್ಯಾರಿ-ಗ್ಲೆನ್ ಮ್ಯಾಕ್ಸ್‌ವೆಲ್ ಜೊತೆಯಾಟಕ್ಕೆ ಶರಣಾದ ಇಂಗ್ಲೆಂಡ್

ಹಾಗಾದರೆ ಆರ್‌ಸಿಬಿ ತಂಡದಲ್ಲಿ ನಾಯಕನಾಗಿ ವಿರಾಟ್ ಕೊಹ್ಲಿ ಎಡವಿದ್ದೆಲ್ಲಿ? ಮಾಜಿ ಕೋಚ್ ರೇ ಜೆನ್ನಿಂಗ್ಸ್ ಹೇಳಿದ ಕಾರಣಗಳು ಯಾವುದು? ಮುಂದೆ ಓದಿ..

6 ಆವೃತ್ತಿಗೆ ಕೋಚ್ ಆಗಿದ್ದ ಜೆನ್ನಿಂಗ್ಸ್

6 ಆವೃತ್ತಿಗೆ ಕೋಚ್ ಆಗಿದ್ದ ಜೆನ್ನಿಂಗ್ಸ್

ರೇ ಜೆನ್ನಿಂಗ್ಸ್ ಆರ್‌ಸಿಬಿ ತಂಡದಲ್ಲಿ ಸುದೀರ್ಘ ಕಾಲ ಕೋಚ್ ಆಗಿ ಕರ್ತವ್ಯ ಸಲ್ಲಿಸಿದ ಅನುಭವವನ್ನು ಹೊಂದಿದ್ದಾರೆ. 2009ರ ಆವೃತ್ತಿಯಿಂದ ಹಿಡಿದು 2014ರ ಆವೃತ್ತಿಯ ವರೆಗೆ ಜೆನ್ನಿಂಗ್ಸ್ ಆರ್‌ಸಿಬಿ ತಂಡದಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವಹೊಂದಿದ್ದಾರೆ. ಈ ಅವಧಿಯಲ್ಲಿ ಕೆಲ ಆಟಗಾರರನ್ನು ನಿರ್ಧಿಷ್ಟ ಪಾತ್ರದಲ್ಲಿ ಆಡಿಸಲು ಬಯಸಿದ್ದರಾದರೂ ನಾಯಕ ಕೊಹ್ಲಿ ಬೇರೆಯದ್ದೇ ಯೋಜನೆ ಮಾಡಿಕೊಂಡಿದ್ದರು ಎಂದು ಹೇಳಿಕೊಂಡಿದ್ದಾರೆ.

ಅಸಮರ್ಥ ಆಟಗಾರರಿಗೆ ಬೆನ್ನೆಲುಬಾಗಿದ್ದರು ಕೊಹ್ಲಿ

ಅಸಮರ್ಥ ಆಟಗಾರರಿಗೆ ಬೆನ್ನೆಲುಬಾಗಿದ್ದರು ಕೊಹ್ಲಿ

ಆರ್‌ಸಿಬಿ ತಂಡದ ಮಾಜಿ ಕೋಚ್ ವ್ಯಕ್ತಪಡಿಸಿದ ಮುಖ್ಯ ಸಂಗತಿಯಲ್ಲಿ ಇದು ಒಂದು. ನಾಯಕನಾಗಿ ವಿರಾಟ್ ಕೊಹ್ಲಿ ತಪ್ಪಾದ ಆಟಗಾರರಿಗೆ ಬೆಂಬಲವಾಗಿ ನಿಂತುಕೊಂಡಿದ್ದರು. ಇದು ಆಟದ ಮೇಲೆ ಪರಿಣಾಮ ಬೀರಿತು. ಇದರಿಂದಾಗಿ ಆರ್‌ಸಿಬಿ ತಂಡವೇ ಸಾಕಷ್ಟು ಹಿನ್ನಡೆಯನ್ನು ಅನುಭವಿಸಬೇಕಾಯಿತು. ಇದು ನಾಯಕಾಗಿ ಕೊಹ್ಲಿ ಮಾಡಿದ ಎಡವಟ್ಟು ಎಂದು ರೇ ಜೆನ್ನಿಂಗ್ಸ್ ಹೇಳಿದ್ದಾರೆ.

ವಿರಾಟ್ ಕೊಹ್ಲಿಯ ತಪ್ಪಲ್ಲ

ವಿರಾಟ್ ಕೊಹ್ಲಿಯ ತಪ್ಪಲ್ಲ

ಆರ್‌ಸಿಬಿ ತಂಡದ ನಾಯಕನಾಗಿ ವಿರಾಟ್ ಕೊಹ್ಲಿ ಕೆಲವೊಮ್ಮೆ ತಂಡದಲ್ಲಿ ಸ್ವಲ್ಪ ಒಂಟಿಯಾಗಿದ್ದರು. ಕೆಲವು ಸಂದರ್ಭಗಳಲ್ಲಿ ಅವರು ಅವರು ತಪ್ಪು ಆಟಗಾರರನ್ನು ಬೆಂಬಲಿಸಿದರು. ಆದರೆ, ಅದಕ್ಕಾಗಿ ಆತನನ್ನು ದೂಷಿಸಲು ಸಾಧ್ಯವಿಲ್ಲ. ಕೆಲ ಪರಿಸ್ಥಿತಿಗಳಲ್ಲಿ ನಿರ್ದಿಷ್ಟ ಆಟಗಾರರು ಬೌಲಿಂಗ್ ಅಥವಾ ಬ್ಯಾಟಿಂಗ್‌ಗಾಗಿ ಬಳಸಲು ನಾನು ಬಯಸುತ್ತಿದ್ದೆ, ಆದರೆ ನಾಯಕನಾಗಿ ಕೊಹ್ಲಿ ವಿಭಿನ್ನ ಆಲೋಚನೆಯನ್ನು ಹೊಂದಿದ್ದರು ಎಂದು ರೇ ಜೆನ್ನಿಂಗ್ಸ್ ಹೇಳಿದ್ದಾರೆ.

ಕೊಹ್ಲಿಯನ್ನು ಹೊಗಳಿದ ಜೆನ್ನಿಂಗ್ಸ್

ಕೊಹ್ಲಿಯನ್ನು ಹೊಗಳಿದ ಜೆನ್ನಿಂಗ್ಸ್

ಇದೇ ಸಂದರ್ಭದಲ್ಲಿ ರೇ ಜೆನ್ನಿಂಗ್ಸ್ ವಿರಾಟ್ ಕೊಹ್ಲಿಯ ಕ್ರಿಕೆಟ್ ಜ್ಞಾನದ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ. ವಿರಾಟ್ ಕೊಹ್ಲಿ ಯಾವಾಗಲೂ ಅಸಾಮಾನ್ಯ ಕ್ರಿಕೆಟ್ ಜ್ಞಾನವನ್ನು ಹೊಂದಿರುವ ಆಟಗಾರ. ಆಟದಲ್ಲಿ ಉನ್ನತವಾದ ಮಟ್ಟವನ್ನು ನಿಗದಿಪಡಿಸಿದ ಆಟಗಾರ ಆತ. ಒಂದೆರಡು ಸಮಸ್ಯೆಗಳ ಹೊರತಾಗಿಯೂ ಜೊತೆಯಾಗಿ ಮುನ್ನಡೆದಿದ್ದೇವೆ. ಕೆಲ ನಿರ್ದಿಷ್ಠ ಸಂದರ್ಭಗಳಲ್ಲಿ ವಿರಾಟ್ ಕೊಹ್ಲಿಗೆ ಮಾರ್ಗದರ್ಶನ ನೀಡಲು ಯಾರದ್ದಾದರೂ ಅಗತ್ಯವಿದೆ ಎಂದು ರೇ ಜೆನ್ನೀಂಗ್ಸ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Story first published: Thursday, September 17, 2020, 15:34 [IST]
Other articles published on Sep 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X