ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಿಂಗ್ಸ್ XI ಪಂಜಾಬ್ ಮುನ್ನಡೆಸಲು ಎದುರು ನೋಡುತ್ತಿದ್ದೇನೆ: ಕೆಎಲ್ ರಾಹುಲ್

Ipl 2020 Was Going To Be A Big Season For Me: Kl Rahul

ಈ ಬಾರಿಯ ಐಪಿಎಲ್‌ನಲ್ಲಿ ಕಣಕ್ಕಿಳಿಯುವುದನ್ನು ಎದುರು ನೋಡುತ್ತಿರುವುದಾಗಿ ಟೀಮ್ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಹೇಳಿದ್ದಾರೆ. ಕೆಎಲ್ ರಾಹುಲ್ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ನಾಯಕನಾಗಿ ಮುನ್ನಡೆಸಬೇಕಾಗಿರುವುದರಿಂದ ಹೆಚ್ಚು ಉತ್ಸುಕನಾಗಿರುವುದಾಗಿ ಹೇಳಿದ್ದಾರೆ.

ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ನಾಯಕನಾಗಿ ಈ ಹಿಂದೆ ರವಿಚಂದ್ರನ್ ಅಶ್ವಿನ್ ಮುನ್ನಡೆಸುತ್ತಿದ್ದರು. 2018 ಮತ್ತು 2019 ಆವೃತ್ತಿಯಲ್ಲಿ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದ ಅಶ್ವಿನ್ ಈ ಬಾರಿ ಡೆಲ್ಲಿ ತಂಡಕ್ಕೆ ಮಾರಾಟವಾಗಿದ್ದಾರೆ. ಹೀಗಾಗಿ ಕೆಎಲ್ ರಾಹುಲ್‌ಗೆ ಪಂಜಾನ್ ತಂಡದ ನಾಯಕತ್ವ ಲಭಿಸಿದೆ.

ODI ಚೇಸಿಂಗ್‌ನಲ್ಲಿ ಅತಿ ಹೆಚ್ಚು ಶತಕ ದಾಖಲಿಸಿದ 4 ಬ್ಯಾಟ್ಸ್‌ಮನ್‌ಗಳು: ಭಾರತೀಯರದ್ದೇ ಪಾರಮ್ಯ!ODI ಚೇಸಿಂಗ್‌ನಲ್ಲಿ ಅತಿ ಹೆಚ್ಚು ಶತಕ ದಾಖಲಿಸಿದ 4 ಬ್ಯಾಟ್ಸ್‌ಮನ್‌ಗಳು: ಭಾರತೀಯರದ್ದೇ ಪಾರಮ್ಯ!

ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಸದಸ್ಯ ಮಯಾಂಕ್ ಅಗರ್ವಾಲ್ ಜೊತೆಗೆ ಓಪನ್ ನೆಟ್ಸ್ ವಿತ್ ಮಯಾಂಕ್ ವಿಶೇಷ ಎಪಿಸೋಡ್‌ನಲ್ಲಿ ರಾಹುಲ್ ಪಾಲ್ಗೊಂಡಿದ್ದ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ. ಈ ವಿಡಿಯೋದಲ್ಲಿ ರಾಹುಲ್ ಐಪಿಎಲ್‌ಗಾಗಿ ಕಾಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ನಾನು ಐಪಿಎಲ್‌ಅನ್ನು ಸಾಕಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ, ನಾಯಕನಾಗಿ ಇದೊಂದು ದೊಡ್ಡ ಆವೃತ್ತಿಯಾಗಿತ್ತು. ಅದರಲ್ಲೂ ನಮ್ಮ ತಂಡ ಬೃಹತ್ ಆಟಗಾರರನ್ನು ಒಳಗೊಂಡಂತೆ ಅತ್ಯುತ್ತಮ ಬ್ಯಾಟಿಂಗ್ ಲೈನ್‌ಅಪ್‌ ಹೊಂದಿದೆ. ಕ್ರಿಸ್ ಗೇಲ್, ನೀವು(ಮಯಾಂಕ್ ಅಗರ್ವಾಲ್) ಮತ್ತು ಮ್ಯಾಕ್ಸ್‌ವೆಲ್ ಜೊತೆಗೆ ಇನ್ನೂ ಹಲವು ಆಟಗಾರರ ಜೊತೆಗೆ ಆಡುವುದನ್ನು ಎದುರು ನೋಡುತ್ತಿದ್ದೇನೆ ಎಂದು ರಾಹುಲ್ ಹೇಳಿದ್ದಾರೆ.

ಓದುವಾಗ ನಿಮ್ಮನ್ನು ಅಚ್ಚರಿಗೊಳಿಸುವ ಕ್ರಿಕೆಟ್ ಜಗತ್ತಿನ 5 ಸತ್ಯ ಸಂಗತಿಗಳು!ಓದುವಾಗ ನಿಮ್ಮನ್ನು ಅಚ್ಚರಿಗೊಳಿಸುವ ಕ್ರಿಕೆಟ್ ಜಗತ್ತಿನ 5 ಸತ್ಯ ಸಂಗತಿಗಳು!

ಇನ್ನು ಈ ವಿಡಿಯೋ ಸಂದರ್ಶನದಲ್ಲಿ ಕ್ರಿಸ್ ಗೇಲ್ ಕೂಡ ಭಾಗಿಯಾಗಿ ಮಾತನಾಡಿದ್ದಾರೆ. ಗೇಲ್ ' ಕ್ರಿಕೆಟನ್ನು ನಾನು ತುಂಬಾ ಕಳೆದುಕೊಳ್ಳುತ್ತಿದ್ದೇನೆ, ನಾನು ಮನೆಯಲ್ಲೇ ಸುದೀರ್ಘ ಕಾಲ ಉಳಿದುಕೊಂಡಿದ್ದು ಇದು ಮೊದಲನೇ ಬಾರಿ. ಸಾಮಾನ್ಯವಾಗಿ ನಾನು ಯಾವಾಗಲೂ ಯಾವುದಾದರೂ ಫ್ರಾಂಚೈಸಿ ಪರವಾಗಿ ಕ್ರಿಕೆಟ್ ಆಡುತ್ತಲೇ ಇರುತ್ತೇನೆ ಎಂದು ಕ್ರಿಸ್ ಗೇಲ್ ಹೇಳಿದ್ದಾರೆ.

Story first published: Wednesday, June 24, 2020, 18:52 [IST]
Other articles published on Jun 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X