ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಅಂಕಪಟ್ಟಿಯಲ್ಲಿರುವುದಕ್ಕಿಂತ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ: ಕೆಎಲ್ ರಾಹುಲ್

IPL 2020: We are far better than where we are on points table says KL Rahul

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದು ಟೂರ್ನಿಯಲ್ಲಿ ಎರಡನೇ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಅಂಕಪಟ್ಟಿಯಲ್ಲಿ ಕೆಎಲ್ ರಾಹುಲ್ ಪಡೆ ಕೊನೆಯ ಸ್ಥಾನದಲ್ಲೇ ಉಳಿದುಕೊಂಡಿದೆ. ಮುಂದಿನ ಹಂತಕ್ಕೇರಬೇಕಾದರೆ ಕೆಎಲ್ ರಾಹುಲ್ ಪಡೆಗೆ ಮುಂಬರುವ ಎಲ್ಲಾ ಪಂದ್ಯಗಳನ್ನೂ ಗೆಲ್ಲಬೇಕಾದ ಅನಿವಾರ್ಯತೆಯಿದೆ.

ಅಂಕಪಟ್ಟಿಯಲ್ಲಿ ತಂಡದ ಸ್ಥಾನದ ಬಗ್ಗೆ ಕೆಎಲ್ ರಾಹುಲ್ ಪಂದ್ಯದ ಬಳಿಕ ಮಾತನಾಡಿದರು. "ಅಂಕಪಟ್ಟಿಯಲ್ಲಿ ನಾವು ಇರುವ ಸ್ಥಾನಕ್ಕಿಂತ ನಮ್ಮ ತಂಡ ತುಂಬಾ ಉತ್ತಮ ಸ್ಥಿತಿಯಲ್ಲಿದೆ. ಅಂತಿಮ ಹಂತದ ವೇಳೆಗೆ ನಾವು ಇನ್ನಷ್ಟು ಹತ್ತಿರವಾಗಲಿದ್ದೇವೆ'. ಇಂದಿನ ಪಂದ್ಯದಲ್ಲಿ ಅನಿವಾರ್ಯ ಗೆರೆಯೊಂದನ್ನು ದಾಟಿದ ಖುಷಿಯಿದೆ" ಎಂದು ಕೆಎಲ್ ರಾಹುಲ್ ಹೇಳಿದರು.

ABDಯನ್ನು ಪ್ರಯೋಗ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ್ರಾ ಕೊಹ್ಲಿ?: ಟ್ವಿಟರ್‌ನಲ್ಲಿ ಭಾರೀ ಟೀಕೆABDಯನ್ನು ಪ್ರಯೋಗ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ್ರಾ ಕೊಹ್ಲಿ?: ಟ್ವಿಟರ್‌ನಲ್ಲಿ ಭಾರೀ ಟೀಕೆ

ನನ್ನ ಹೃದಯ ಬಡಿತ ಅದರ ಉತ್ಕೃಷ್ಠಮಟ್ಟದಲ್ಲಿತ್ತು. ನಾನು ಯೋಯೋ ಪರೀಕ್ಷೆಗೂ ಒಳಪಟ್ಟಿದ್ದೇನೆ. ಈವರೆಗಿನ ವೃತ್ತಿ ಜೀವನದಲ್ಲಿ ಹಲವಾರು ಜಿದ್ದಾಜಿದ್ದಿನಪಂದ್ಯಗಳನ್ನು ಕಂಡಿದ್ದೇನೆ. ಆದರೆ ಇದು ಮಾತ್ರ.. ನನಗೆ ಇದನ್ನು ವಿವರಿಸಲು ಪದಗಳು ಇಲ್ಲ. ಈ ಗೆಲುವು ನಮಗೆ ಸಾಕಷ್ಟು ವಿಶ್ವಾಸವನ್ನು ನೀಡುತ್ತದೆ ಎಂದು ಕೆಎಲ್ ರಾಹುಲ್ ವಿವರಿಸಿದರು.

ಇನ್ನು ಗೇಲ್ ಪ್ರದರ್ಶನದ ಬಗ್ಗೆ ಮಾತನಾಡಿದ ಕೆಎಲ್ ರಾಹುಲ್ "ಸಿಂಹದ ಹಸಿವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಆತ ಎಲ್ಲಿ ಬ್ಯಾಟಿಂಗ್ ಮಾಡಿದರೂ ತುಂಬಾ ಅಪಾಯಕಾರಿಯಾಗಿರುತ್ತದೆ. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿದ್ದನ್ನು ಗೇಲ್ ಸವಾಲಾಗಿ ಸ್ವೀಕರಿಸಿದರು. ಇನ್ನೂ ಕೂಡ ಆತ ಹಳೆಯ ಕ್ರಿಸ್ ಗೇಲ್ ಆಗಿಯೇ ಇದ್ದಾರೆ ಎಂದು ರಾಹುಲ್ ಹೇಳಿದರು.

ಕೆಎಲ್ ರಾಹುಲ್ ತಮ್ಮ ಅದ್ಭುತ ಫಾರ್ಮ್‌ಅನ್ನು ಆರ್‌ಸಿಬಿ ವಿರುದ್ದದ ಪಂದ್ಯದಲ್ಲೂ ಮುಂದುವರಿಸಿದರು. 49 ಎಸೆತಗಳನ್ನು ಎದುರಿಸಿದ ಅವರು 61 ರನ್ ಬಾರಿಸಿ ಅಜೇಯವಾಗುಳಿದರು. ಈ ಮೂಲಕ ಪಮದ್ಯರ್ಶರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿದರು.

Story first published: Friday, October 16, 2020, 10:04 [IST]
Other articles published on Oct 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X