ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಋತುರಾಜ್ ಗಾಯಕ್ವಾಡ್‌ಗೆ ಎಂಎಸ್ ಧೋನಿ ಶ್ಲಾಘನೆ

IPL 2020: ‘We didn’t have much time to have a look at him,’ MS Dhoni impressed with Ruturaj Gaikwad

ದುಬೈ: ಗುರುವಾರ (ಅಕ್ಟೋಬರ್ 29) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 49ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 6 ವಿಕೆಟ್‌ ಗೆಲುವನ್ನಾಚರಿಸಿದೆ. ತಂಡದ ಗೆಲುವಿಗೆ ಕಾರಣವಾದ ಯುವ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ಅವರನ್ನು ನಾಯಕ ಎಂಎಸ್ ಧೋನಿ ಶ್ಲಾಘಿಸಿದ್ದಾರೆ.

ಐಪಿಎಲ್‌ನಲ್ಲಿ ಕೊನೇ ಎಸೆತಕ್ಕೆ ಸಿಕ್ಸ್ ಚಚ್ಚಿ ಪಂದ್ಯ ಗೆಲ್ಲಿಸಿಕೊಟ್ಟವರ ಪಟ್ಟಿಐಪಿಎಲ್‌ನಲ್ಲಿ ಕೊನೇ ಎಸೆತಕ್ಕೆ ಸಿಕ್ಸ್ ಚಚ್ಚಿ ಪಂದ್ಯ ಗೆಲ್ಲಿಸಿಕೊಟ್ಟವರ ಪಟ್ಟಿ

ಅಬುಧಾಬಿ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೋಲ್ಕತ್ತಾ ನೈಟ್ ರೈಡರ್ಸ್‌ನಿಂದ ಶುಬ್‌ಮನ್ ಗಿಲ್ 26, ನಿತೀಶ್ ರಾಣಾ 87 (61 ಎಸೆತ), ಸುನಿಲ್ ನರೈನ್ 7, ರಿಂಕು ಸಿಂಗ್ 11, ಇಯಾನ್ ಮಾರ್ಗನ್ 15, ದಿನೇಶ್ ಕಾರ್ತಿಕ್ 21 ರನ್ ಸೇರ್ಪಡೆಯೊಂದಿಗೆ ಕೆಕೆಆರ್ 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 172 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್‌ನಿಂದ ಗಾಯಕ್ವಾಡ್ ಉತ್ತಮ ಬ್ಯಾಟಿಂಗ್ ನೀಡಿದ್ದರು. ಶೇನ್ ವಾಟ್ಸನ್ 14, ರುತುರಾಜ್ ಗಾಯಕ್ವಾಡ್ 72 (53 ಎಸೆತ), ಅಂಬಾಟಿ ರಾಯುಡು 38 (20 ಎಸೆತ), ಸ್ಯಾಮ್ ಕರನ್ 13, ರವೀಂದ್ರ ಜಡೇಜಾ 31 ರನ್ ಕೊಡುಗೆಯೊಂದಿಗೆ 20 ಓವರ್‌ಗೆ 4 ವಿಕೆಟ್ ಕಳೆದು 178 ರನ್ ಗಳಿಸಿತು.

ಮುತ್ತಯ್ಯ ಮುರಳೀಧರನ್ ಬಯೋಪಿಕ್ ನಿರ್ದೇಶಕನಿಗೆ ಜೀವ ಬೆದರಿಕೆಮುತ್ತಯ್ಯ ಮುರಳೀಧರನ್ ಬಯೋಪಿಕ್ ನಿರ್ದೇಶಕನಿಗೆ ಜೀವ ಬೆದರಿಕೆ

ಪಂದ್ಯದ ಬಳಿಕ ಮಾತನಾಡಿದ ಎಂಎಸ್‌ಡಿ, 'ಟೂರ್ನಿಯ ಆರಂಭದಲ್ಲೇ ಕೋವಿಡ್-19ಗೆ ತುತ್ತಾಗಿ ಋತುರಾಜ್ ತಂಡದಿಂದ ದೂರ ಉಳಿದರು. ಚೇತರಿಸಿಕೊಳ್ಳಲು 20 ದಿನ ತೆಗೆದುಕೊಂಡರು. ಹೀಗಾಗಿ ನಮಗೆ ಅವರತ್ತ ಹೆಚ್ಚು ಗಮನ ಹರಿಸಲು ಸಾಧ್ಯವಾಗಲಿಲ್ಲ. ಆತನೊಬ್ಬ ಅದ್ಭುತ ಪ್ರತಿಭೆ. ಕೆಲವೊಮ್ಮೆ ಆಟಗಾರನನ್ನು ಅಳೆಯಲು ತಂಡ ನಿರ್ವಹಣಾ ಸಮಿತಿಗೆ ಕಷ್ಟವಾಗುತ್ತದೆ,' ಎಂದಿದ್ದಾರೆ.

Story first published: Friday, October 30, 2020, 12:47 [IST]
Other articles published on Oct 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X