ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಮನ್‌ದೀಪ್‌ಗಾಗಿಯೇ ಗೆಲ್ಲಲು ಬಯಸಿದ್ದೆವು: ಕ್ರೀಸ್ ಗೇಲ್

IPL 2020:We want to win games for Mandeep Singh: Chris Gayle

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕೊಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಜಯವನ್ನು ದಾಖಲಿಸಿದೆ. ಈ ಒಂದ್ಯದಲ್ಲಿ ಕ್ರಿಕೆಟ್ ಗೇಲ್ ಹಾಗೂ ಮನ್‌ದೀಪ್ ಸಿಂಗ್ ಅದ್ಭುತ ಅರ್ಧ ಶತಕವನ್ನು ದಾಖಲಿಸುವ ಮುಲಕ ಸುಲಭ ಜಯಕ್ಕೆ ಕಾರಣರಾಗಿದ್ದರು. ಆದರಲ್ಲೂ ಪಂಜಾಬ್ ತಂಡದ ಆಟಗಾರ ಮನ್‌ದೀಪ್ ಸಿಂಗ್ ತಂದೆಯ ಅಗಲಿಕೆಯ ನೋವಿನ ಮಧ್ಯೆಯೂ ಅಂಗಳಕ್ಕಿಳಿದು ಅದ್ಭುತ ಪ್ರರ್ದಶನ ನೀಡಿದ್ದರು.

ಈ ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ಪಂಜಾಬ್ ತಂಡದ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ತಂಡದ ನಿಲುವಿನ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು. ತಂದೆಯ ಅಗಲಿಕೆಯ ನೋವಿನಲ್ಲಿದ್ದ ಮನ್‌ದೀಪ್ ಸಿಂಗ್ ಅವರಿಗಾಗಿ ಕೆಕೆಆರ್ ವಿರುದ್ಧದ ಪಂದ್ಯವನ್ನು ಗೆಲ್ಲಲೇಬೇಕು ಎಂದು ತೀರ್ಮಾನಿಸಿದ್ದೆವು ಎಂದು ಗೇಲ್ ಮಾಹಿತಿ ಹಂಚಿಕೊಂಡಿದ್ದಾರೆ.

ಕೆಕೆಆರ್ ಪ್ಲೇ ಆಫ್‌ಗೆ ಅರ್ಹತೆ ಗಿಟ್ಟಿಸಲಿದೆ: ಶುಭ್‌ಮನ್ ಗಿಲ್ ವಿಶ್ವಾಸಕೆಕೆಆರ್ ಪ್ಲೇ ಆಫ್‌ಗೆ ಅರ್ಹತೆ ಗಿಟ್ಟಿಸಲಿದೆ: ಶುಭ್‌ಮನ್ ಗಿಲ್ ವಿಶ್ವಾಸ

"ಮನ್‌ದೀಪ್ ಸಿಂಗ್ ಉತ್ತಮವಾಗಿ ಹಾದಿಯಲ್ಲಿ ಸಾಗುತ್ತಿದ್ದಾರೆ. ಕೊನೆಯ ಪಂದ್ಯವನ್ನು ನಾವು ಅವರಿಗಾಗಿ ಗೆಲ್ಲಬೇಕು ಎಂದು ತೀರ್ಮಾನಿಸಿದ್ದೆವು. ಮೇಲಿನಿಂದ ಅವರ ತಂದೆ ಆತನ ಆಟವನ್ನು ಗಮನಿಸುತ್ತಿರಬೇಕಾದರೆ ಆತನೇ ಪಂದ್ಯದ ಕೇಂದ್ರವಾಗಿರುವುದು ನೀಡಲು ಸಂತಸವಾಯಿತು" ಎಂದು ಗೇಲ್ ವಿವರಿಸಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ "ಇಂದು ನಮ್ಮ ಕೋಚ್ ಅನುಭವಿ ಆಟಗಾರರ ಬಳಿ ನಿರ್ಣಾಯಕ ಪಂದ್ಯಗಳಲ್ಲಿ ಹೆಜ್ಜೆಯಿಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಾನು ನನ್ನ ಕೈ ಮೇಲಕ್ಕೆತ್ತಲು ಸಾಧ್ಯವಾಯಿತು ಎಂದು ಸಂಸತವಾಯಿತು. ಈ ಸಂದರ್ಭದಲ್ಲಿ ಯುವ ಆಟಗಾರರು ನೀವು ನಿವೃತ್ತಿ ಹೊಂದಬೇಡಿ" ಎಂದು ಮನವಿ ಮಾಡಿದರು ಎಂದು ಕ್ರಿಸ್ ಗೇಲ್ ತಮ್ಮ ತಮಾಷೆಯ ಶೈಲಿಯಲ್ಲಿ ವಿವರಿಸಿದರು.

ಸೂರ್ಯಕುಮಾರ್ ಯಾದವ್, ಅಕ್ಷರ್ ಪಟೇಲ್ ತಪ್ಪಾದ ಯುಗದಲ್ಲಿ ಆಡಿದ್ದಾರೆ: ಮನೋಜ್ ತಿವಾರಿ ಟ್ವೀಟ್ಸೂರ್ಯಕುಮಾರ್ ಯಾದವ್, ಅಕ್ಷರ್ ಪಟೇಲ್ ತಪ್ಪಾದ ಯುಗದಲ್ಲಿ ಆಡಿದ್ದಾರೆ: ಮನೋಜ್ ತಿವಾರಿ ಟ್ವೀಟ್

ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ತಂಡ ಸತತ ಗೆಲುವುಗಳ ಮೂಲಕ ಪ್ಲೇ ಆಫ್‌ನತ್ತ ಹೆಜ್ಜೆಯಿರಿಸಿದೆ. ಅಬುದಾಬಿಯ ಶೇಖ್ ಜಾಯೇದ್ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಣಕ್ಕಿಳಿಯಲಿದ್ದು ಈ ಪಂದ್ಯ ನಿರ್ಣಾಯಕವೆನಿಸಲಿದೆ.

Story first published: Wednesday, October 28, 2020, 9:50 [IST]
Other articles published on Oct 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X