ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾವು ಬ್ಯಾಟಿಂಗ್‌ನಲ್ಲಿ ಸಾಕಷ್ಟು ಧೈರ್ಯಶಾಲಿಗಳಾಗಿರಲಿಲ್ಲ: ಕೊಹ್ಲಿ

IPL 2020: We werent brave enough with bat, says Virat Kohli

ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು ಬ್ಯಾಟಿಂಗ್ ವಿಚಾರದಲ್ಲಿ ಸಾಕಷ್ಟು ಧೈರ್ಯಶಾಲಿಗಳಾಗಿರಲಿಲ್ಲ ಎಂದು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಶನಿವಾರ (ಅಕ್ಟೋಬರ್ 31) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 52ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ 5 ವಿಕೆಟ್ ಸೋಲನುಭವಿಸಿದ ಬಳಿಕ ಕೊಹ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆರ್‌ಸಿಬಿ ಆಟಗಾರರಿಂದ ರಾಜ್ಯೋತ್ಸವದ ಶುಭಾಶಯ ಕೇಳೋದೇ ಖುಷಿ: ವಿಡಿಯೋಆರ್‌ಸಿಬಿ ಆಟಗಾರರಿಂದ ರಾಜ್ಯೋತ್ಸವದ ಶುಭಾಶಯ ಕೇಳೋದೇ ಖುಷಿ: ವಿಡಿಯೋ

ಶಾರ್ಜಾ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನೀರಸ ಬ್ಯಾಟಿಂಗ್ ಪ್ರದರ್ಶಿಸಿತ್ತು. 20 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 120 ರನ್ ಬಾರಿಸಿತ್ತು. ಜೋಶುವಾ ಫಿಲಿಪ್ 32, ಎಬಿ ಡಿ ವಿಲಿಯರ್ಸ್ 24, ವಾಷಿಂಗ್ಟನ್ ಸುಂದರ್ 21, ಗುರು ಕೀರತ್ ಸಿಂಗ್ 15 ರನ್ ಗಳಿಸಿದ್ದೇ ಹೆಚ್ಚು.

ಹೈದರಾಬಾದ್ ಎದುರಿನ ಪಂದ್ಯದ ಸೋಲಿನಿಂದಾಗಿ ಆರ್‌ಸಿಬಿಗೆ ಪ್ಲೇ ಆಫ್ ದಾರಿ ಕಠಿಣವೆನಿಸಿದೆ. ಆರ್‌ಸಿಬಿ ಇನ್ನಿಂಗ್ಸ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ದೊಡ್ಡ ಹೊಡೆತಕ್ಕೆ ಮುಂದಾಗಲಿಲ್ಲ. ಮುಖ್ಯವಾಗಿ ಗುರುಕೀರತ್ ಸಿಂಗ್ ಮತ್ತು ವಾಷಿಂಗ್ಟನ್ ಸುಂದರ್ ಎದುರಿಸಿದ ಎಸತಕ್ಕಿಂತ ಹೆಚ್ಚು ರನ್ ಗಳಿಸಲಿಲ್ಲ. ಇವೆಲ್ಲ ಆರ್‌ಸಿಬಿ ಹಿನ್ನಡೆಗೆ ಕಾರಣವಾಯ್ತು.

ಕೊಹ್ಲಿಯನ್ನು 7ನೇ ಬಾರಿಗೆ ಔಟ್ ಮಾಡಿ ವಿಶೇಷ ದಾಖಲೆ ಬರೆದ ಸಂದೀಪ್ ಶರ್ಮಾಕೊಹ್ಲಿಯನ್ನು 7ನೇ ಬಾರಿಗೆ ಔಟ್ ಮಾಡಿ ವಿಶೇಷ ದಾಖಲೆ ಬರೆದ ಸಂದೀಪ್ ಶರ್ಮಾ

'ಬಾರಿಸಿದ ರನ್ ತೀರಾ ಕಮ್ಮಿಯಾಯ್ತು. ನಾವು 140 ರನ್ ಆದರೂ ಗಳಿಸಿದ್ದರೆ, ಹೆಚ್ಚು ವಿಕೆಟ್ ಪಡೆಯಲು ಸಾಧ್ಯವಾಗುತ್ತಿತ್ತು. ಇನ್ನಿಂಗ್ಸ್ ಪೂರ್ತಿ ಬ್ಯಾಟಿಂಗ್ ಮಾಡಲು ನಾವು ಸಾಕಷ್ಟು ಧೈರ್ಯಶಾಲಿಗಳಾಗಿರಲಿಲ್ಲ. ಇದರ ಶ್ರೇಯಸ್ಸು ಎಸ್‌ಆರ್‌ಎಚ್‌ಗೆ ಸಲ್ಲುತ್ತದೆ. ಅವರು ಪಿಚ್ ಅನ್ನು ಚೆನ್ನಾಗಿ ಬಳಸಿಕೊಂಡರು,' ಎಂದು ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ ಹೇಳಿದ್ದಾರೆ.

Story first published: Sunday, November 1, 2020, 12:45 [IST]
Other articles published on Nov 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X