ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿ ವೇಗಿ ನವದೀಪ್ ಸೈನಿ ಶೂನಲ್ಲಿ ಏನು ಬರೆದಿದೆ ಗೊತ್ತಾ?!

IPL 2020: What’s written on RCB pacer Navdeep Saini’s shoe?

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮತ್ತೆ ಗೆಲುವಿನ ಲಯಕ್ಕೆ ಬಂದಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಆರ್‌ಸಿಬಿ ಮೂರನೇ ಗೆಲುವು ದಾಖಲಿಸಿದೆ. ಬೆಂಗಳೂರು ಸೋತಿದ್ದೆಂದರೆ ಕನ್ನಡಿಗರು ಹೆಚ್ಚಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ. ಅದೂ ಕೂಡ 97 ರನ್‌ಗಳ ಹೀನಾಯ ಸೋಲು ಕಂಡಿದ್ದರಿಂದ ಆರ್‌ಸಿಬಿ ನೆಟ್‌ ರನ್‌ರೇಟ್ ವಿಚಾರದಲ್ಲಿ ದೊಡ್ಡ ಕುಸಿತ ಕಂಡಿತ್ತು. ಈಗ ಬೆಂಗಳೂರು ಮತ್ತೆ ನೆಟ್‌ ರನ್‌ರೇಟ್‌ನಲ್ಲೂ ಸುಧಾರಿಸುತ್ತಿದೆ.

ಸಂಜು ಸ್ಯಾಮ್ಸನ್ ಔಟಾ, ನಾಟೌಟಾ?: ವಿವಾದ ಸೃಷ್ಠಿಸಿದೆ ಅಂಪೈರ್ ತೀರ್ಪು!ಸಂಜು ಸ್ಯಾಮ್ಸನ್ ಔಟಾ, ನಾಟೌಟಾ?: ವಿವಾದ ಸೃಷ್ಠಿಸಿದೆ ಅಂಪೈರ್ ತೀರ್ಪು!

ಶನಿವಾರ (ಅಕ್ಟೋಬರ್ 3) ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಆರ್‌ಸಿಬಿ ವೇಗಿ ನವದೀಪ್ ಸೈನಿ ವಿಚಿತ್ರ ಕಾರಣಕ್ಕಾಗಿ ಗಮನ ಸೆಳೆದಿದ್ದರು.

ಅಭಿಮಾನಿ ತೆವಾಟಿಯಾಗೆ ಪ್ರೀತಿಯ ಗಿಫ್ಟ್ ಕೊಟ್ಟ ವಿರಾಟ್ ಕೊಹ್ಲಿಅಭಿಮಾನಿ ತೆವಾಟಿಯಾಗೆ ಪ್ರೀತಿಯ ಗಿಫ್ಟ್ ಕೊಟ್ಟ ವಿರಾಟ್ ಕೊಹ್ಲಿ

ರಾಜಸ್ಥಾನ್ ರಾಯಲ್ಸ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದಲ್ಲಿ ನವದೀಪ್ ಸೈನಿ ಧರಿಸಿದ್ದ ಶೂನಲ್ಲಿ ಏನೋ ಬರೆದುಕೊಂಡಿತ್ತು. ಹೀಗಾಗಿಯೇ ಸೈನಿ ಈಗ ಸುದ್ದಿಯಲ್ಲಿದ್ದಾರೆ.

ಆರ್‌ಸಿಬಿ ಪರ ಉತ್ತಮ ಬೌಲಿಂಗ್

ಆರ್‌ಸಿಬಿ ಪರ ಉತ್ತಮ ಬೌಲಿಂಗ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ನವದೀಪ್ ಸೈನಿ ಸಾಧಾರಣ ಪ್ರದರ್ಶನ ನೀಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ 2, 4ನೇ ಪಂದ್ಯದಲ್ಲಿ 1 ವಿಕೆಟ್ ಪಡೆದಿದ್ದರು. ಇದರ ಮಧ್ಯೆ ಎರಡು ಪಂದ್ಯಗಳಲ್ಲಿ ಸೈನಿಗೆ ವಿಕೆಟ್ ಲಭಿಸಿರಲಿಲ್ಲ.

ಶೂನಲ್ಲಿ ಬರೆದಿದ್ದೇನು?

ಶೂನಲ್ಲಿ ಬರೆದಿದ್ದೇನು?

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಕ್ಕಾಗಿ ಮೈದಾನಕ್ಕಿಳಿದಿದ್ದ ನವದೀಪ್‌ ಸೈನಿ ತನ್ನ ಶೂನಲ್ಲಿ ಬರೆದಿದ್ದ ಪದಕ್ಕಾಗಿ ಅಭಿಮಾನಿಗಳ ಗಮನ ಸೆಳೆದಿದ್ದರು. ವೇಗಿ ಸೈನಿ ಧರಿಸಿದ್ದ ಶೂವಿನ ಬದಿಯಲ್ಲಿ 'ಫ** ಇಟ್! ಬೌಲ್ ಫಾಸ್ಟ್ (F**k it! Bowl fast)' ಎಂದು ಬರೆಯಲಾಗಿತ್ತು.

ಬೆಸ್ಟ್ ಬೌಲರ್‌ಗಳಲ್ಲಿ ಸೈನಿ ಹೆಸರು

ಬೆಸ್ಟ್ ಬೌಲರ್‌ಗಳಲ್ಲಿ ಸೈನಿ ಹೆಸರು

ಮೂಲತಃ ಹರ್ಯಾಣದವರಾದ 27ರ ಹರೆಯದ ನವದೀಪ್ ಸೈನಿ ಗಂಟೆಗೆ 145 ಕಿ.ಮೀ.ಗೂ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. ಐಪಿಎಲ್‌ನಲ್ಲಿ ಕಾಗಿಸೊ ರಬಾಡ, ಜಸ್‌ಪ್ರೀತ್ ಬೂಮ್ರಾ, ಡೇಲ್ ಸ್ಟೇನ್, ಲುಂಗಿ ಸಾನಿ ಎನ್‌ಗಿಡಿ ಅಂಥ ಬೌಲರ್‌ಗಳಿದ್ದಾರೆ. ಇದರಲ್ಲಿ ಸೈನಿ 4ನೇ ಬೇಗದ ಬೌಲರ್‌ ಆಗಿ ಗುರುತಿಸಿಕೊಂಡಿದ್ದಾರೆ.

ಬೆಂಗಳೂರಿಗೆ ಗೆಲುವು

ಬೆಂಗಳೂರಿಗೆ ಗೆಲುವು

ಶನಿವಾರದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ್ ರಾಯಲ್ಸ್ ತಂಡ 20 ಓವರ್‌ಗೆ 6 ವಿಕೆಟ್ ಕಳೆದು 154 ರನ್ ಗಳಿಸಿತು. ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 19.1ನೇ ಓವರ್‌ಗೆ 2 ವಿಕೆಟ್ ನಷ್ಟದಲ್ಲಿ 158 ರನ್ ಬಾರಿಸಿ ಗೆಲುವನ್ನಾಚರಿಸಿತು.

Story first published: Tuesday, October 6, 2020, 17:19 [IST]
Other articles published on Oct 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X