ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೂಪರ್ ಓವರ್‌ನಲ್ಲೂ ಟೈ ಆದರೆ ಮುಂದೇನು? ವಿಶ್ವಕಪ್ ಫೈನಲ್ ವಿವಾದದ ಬಳಿಕ ಹೊಸ ನಿಯಮ

 Ipl 2020: What Will Happen If There Is A Tie In A Super Over?

ಇಂಡಿಯನ್ ಪ್ರೀಮಿಯರ್‌ ಲೀಗ್‌ನ ಈ ಬಾರಿಯ ಆವೃತ್ತಿಯಲ್ಲಿ ಒಂದಕ್ಕಿಂತ ಒಂದು ರೋಚಕ ಪಂದ್ಯಗಳು ಅಭಿಮಾನಿಗಳನ್ನು ರಂಜಿಸುತ್ತಿದೆ. ಈಗಾಗಲೇ 10 ಪಂದ್ಯಗಳು ಮುಗಿದಿದ್ದು ಬಹುತೇಕ ಎಲ್ಲ ಪಂದ್ಯಗಳು ಕೂಡ ತೀವ್ರ ಪೈಪೋಟಿಯಿಂದ ಕೂಡಿದ್ದಾಗಿತ್ತು. ಮೊದಲ ಹತ್ತು ಪಂದ್ಯಗಳಲ್ಲಿ ಮುಂಬೈ ಹಾಗೂ ಆರ್‌ಸಿಬಿ ವಿರುದ್ಧದ ಪಂದ್ಯ ಸಹಿತ 2 ಪಂದ್ಯಗಳು ಟೈ ಫಲಿತಾಂಶವನ್ನು ಪಡೆದುಕೊಂಡು ಸೂಪರ್ ಓವರ್‌ನಲ್ಲಿ ವಿಜಯಿ ತಂಡವನ್ನು ಘೋಷಿಸಲಾಗಿದೆ.

ಆರ್‌ಸಿಬಿ ಹಾಗೂ ಮುಂಬೈ ತಂಡಗಳ ಮಧ್ಯೆ ನಡೆದ ಸೂಪರ್ ಓವರ್‌ ಪಂದ್ಯದಲ್ಲಿ ಒಂದು ಹಂತದಲ್ಲಿ ಸೂಪರ್ ಓವರ್‌ಕೂಡ ಟೈ ಆಗಬಹುದೇನೋ ಅನಿಸುವಂತೆ ಮಾಡಿತ್ತು. ಆದರೆ ಒಂದು ಬೌಂಡರಿ ಪಂದ್ಯವನ್ನು ಆರ್‌ಸಿಬಿಯತ್ತ ವಾಲುವಂತೆ ಮಾಡಿತು. ಈ ಮೂಲಕ ಆರ್‌ಸಿಬಿ ಟೂರ್ನಿಯಲ್ಲಿ ಎರಡನೇ ಗೆಲುವನ್ನು ಸಾಧಿಸಿತು.

ಐಪಿಎಲ್‌ನಲ್ಲಿ ಸೂಪರ್ ಓವರ್‌ನಲ್ಲಿ ಕಡಿಮೆ ರನ್ ನೀಡಿದ ಬೌಲರ್‌ಗಳುಐಪಿಎಲ್‌ನಲ್ಲಿ ಸೂಪರ್ ಓವರ್‌ನಲ್ಲಿ ಕಡಿಮೆ ರನ್ ನೀಡಿದ ಬೌಲರ್‌ಗಳು

ಆದರೆ ಸೂಪರ್ ಓವರ್‌ಕೂಡ ಟೈ ಫಲಿತಾಂಶವನ್ನು ಕಂಡಿದ್ದರೆ ಏನಾಗುತ್ತಿತ್ತು? ಪಂದ್ಯದ ಫಲಿತಾಂಶವನ್ನು ಹೇಗೆ ಪಡೆಯಲಾಗುತ್ತಿತ್ತು ಎಂಬುದು ಹಲವರಲ್ಲಿ ಕಾಡಿದ ಪ್ರಶ್ನೆ. ಅದಕ್ಕೆ ಉತ್ತರ ಇಲ್ಲಿದೆ ಮುಂದೆ ಓದಿ..

ಕಳೆದ ಏಕದಿನ ವಿಶ್ವಕಪ್‌ವರೆಗೆ ಒಂದು ನಿಯಮ

ಕಳೆದ ಏಕದಿನ ವಿಶ್ವಕಪ್‌ವರೆಗೆ ಒಂದು ನಿಯಮ

ಈ ಹಿಂದಿನ ಏಕದಿನ ವಿಶ್ವಕಪ್‌ವರೆಗೆ ಸೂಪರ್ ಓವರ್‌ಪಂದ್ಯವೂ ಟೈ ಫಲಿತಾಂಶವನ್ನು ಕಂಡಲ್ಲಿ ವಿಜಯಿ ತಂಡವನ್ನು ಘೋಷಿಸಲು ವಿಚಿತ್ರ ಮಾನದಂಡವನ್ನು ಅನುಸರಿಸಲಾಗಿತ್ತು. ಸೂಪರ್ ಓವರ್‌ಕೂಡ ಟೈ ಆದಲ್ಲಿ ಪಂದ್ಯದಲ್ಲಿ ಹೆಚ್ಚಾಗಿ ಬೌಂಡರು ಗಳಿಸಿದ ತಂಡವೇ ವಿಜಯಿ ಎಂದು ಘೋಷಿಸುವ ನಿಯಮವಿತ್ತು. ಆದರೆ 2019ರ ವಿಶ್ವಕಪ್ ಪಂದ್ಯದಲ್ಲಿ ಸೂಪರ್ ಓವರ್‌ಕೂಡ ಟೈ ಆದ ಬಳಿಕ ಬೌಂಡರಿ ಆಧಾರದಲ್ಲಿ ಇಂಗ್ಲೆಂಡ್ ತಂಡವನ್ನು ವಿಜಯಿ ಎಂದು ಘೋಷಿಸಲಾಗಿತ್ತು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

ಟೀಕೆಗೆ ಬದಲಾಯಿತು 'ಟೈ' ನಿಯಮ

ಟೀಕೆಗೆ ಬದಲಾಯಿತು 'ಟೈ' ನಿಯಮ

ವಿಶ್ವಕಪ್‌ನಂತಾ ಮಹತ್ವದ ಟೂರ್ನಿಯ ವಿಜಯಿ ತಂಡವನ್ನು ಬೌಂಡರಿಗಳ ಆಧಾರದಲ್ಲಿ ನಿರ್ಧರಿಸಿದ್ದು ಸಾಕಷ್ಟು ಖಂಡನೆಗೆ ಕಾರಣವಾದ ನಂತರ ಐಸಿಸಿ ಇದರಲ್ಲಿ ಹೊಸ ನಿಯಮವನ್ನು ಜಾರಿಗೆ ತಂದಿತ್ತು. ಸೂಪರ್ ಓವರ್‌ ಕೂಡ ಟೈ ಆದರೆ ಇನ್ನೊಂದು ಸೂಪರ್ ಓವರ್ ಪಂದ್ಯವನ್ನು ಆಡಿಸುವ ಬದಲಾವಣೆಯನ್ನು ಮಾಡಿಕೊಳ್ಳಲಾಯಿತು. ಇದೇ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಐಸಿಸಿ ಈ ನಿಯಮವನ್ನು ಸೇರಿಸಿಕೊಂಡಿತು.

ಐಪಿಎಲ್‌ನಲ್ಲೂ ಇದೇ ನಿಯಮ

ಐಪಿಎಲ್‌ನಲ್ಲೂ ಇದೇ ನಿಯಮ

ಐಪಿಎಲ್ ಕೂಡ ಐಸಿಸಿ ನಿಯಮವನ್ನೇ ಸೂಪರ್ ಓವರ್‌ನ ಫಲಿತಾಂಶ ನಿರ್ಧರಿಸಲು ಬಳಸಿಕೊಂಡಿದೆ. ಸೂಪರ್ ಓವರ್ ಕೂಡ ಟೈ ಆದಂತಾ ಸಂದರ್ಭ ಬಂದಲ್ಲಿ ಎರಡನೇ ಬಾರಿಗೆ ಸೂಪರ್ ಓವರ್ ಆಡುವ ಮೂಲಕ ತಂಡಗಳಿಗೆ ಮತ್ತೊಂದು ಅವಕಾಶವನ್ನು ನೀಡಿ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಆದರೆ ಐಪಿಎಲ್‌ನಲ್ಲಿ ಈವರೆಗೆ ಸೂಪರ್ ಓವರ್‌ಕೂಡ ಟೈ ಆದಂತಾ ಸಂದರ್ಭಗಳು ಬಂದಿಲ್ಲ.

Story first published: Tuesday, September 29, 2020, 16:09 [IST]
Other articles published on Sep 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X