ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

RCB ಡಗೌಟ್: ಅರೆ! ಯಾರಿವಳು ಯಾರಿವಳು ಚಂಗನೆದ್ದು ಕುಣಿವವಳು

ಇಂಡಿಯನ್ ಪ್ರೀಮಿಯರ್ ಲೀಗ್ 2020 ಋತುವಿನ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಅತ್ಯಂತ ರೋಚಕವಾಗಿ ಎಲ್ಲರ ಕಣ್ಣು ಬಿಟ್ಟು ಪಂದ್ಯವನ್ನು ದಿಟ್ಟಿಸುವಂತೆ ಮಾಡಿತ್ತು. ಸೂಪರ್ ಓವರ್ ನಲ್ಲಿ ಮುಂಬೈ ತಂಡವನ್ನು ಸುಲಭವಾಗಿ ಮಣಿಸಿದ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದು ಬೀಗಿತು. ನಾಯಕ ವಿರಾಟ್ ಕೊಹ್ಲಿ ಗೆಲುವಿನ ರನ್ ಹೊಡೆದಾಗ ಆರ್ ಸಿಬಿ ಡಗ್ ಔಟ್ ನಲ್ಲಿ ಕುಣಿದು ಕುಪ್ಪಳಿಸಿದ ಯುವತಿಯ ಮೇಲೆ ಎಲ್ಲರ ಕಣ್ಣು ಇದೀಗ ನೆಟ್ಟಿದೆ. ಅರೇ ಯಾರಿದು? ಎಂದು ಅಭಿಮಾನಿಗಳು ಅಚ್ಚರಿಯಿಂದ ಕೇಳಿದ್ದಾರೆ.

ಎಲ್ಲರ ಕಣ್ಣುಗಳು ಅವಳನ್ನೇ ಆಚ್ಚರಿಯಿಂದ ನೋಡಿದ್ದಂತೂ ಸುಳ್ಳಲ್ಲ, RCBಯಲ್ಲಿ ಡಗೌಟ್ ನಲ್ಲಿ ಎಲ್ಲರಿಗಿಂತ ಹೆಚ್ಚು ಸಂತೋಷಭರಿತಳಾಗಿ ಆಕೆ ಎಲ್ಲಾ ಆಟಗಾರರನ್ನು ಅಭಿನಂದಿಸುತ್ತಿದ್ದಳು. ಕೊರೊನಾವೈರಸ್ ದೆಸೆಯಿಂದ ಪ್ರೇಕ್ಷಕರಿಲ್ಲದೆ ಬಣಗುಟ್ಟುವ ಸ್ಟೇಡಿಯಂನಲ್ಲಿ, ಪುರುಷ ಪ್ರಧಾನ ಹೊಡಿ ಬಡಿ ಆಟದ ನಡುವೆ ಕಂಡ ಈ ಯುವತಿ ಈಗ ಎಲ್ಲರ ಆಕರ್ಷಣೆ ಕೇಂದ್ರ ಬಿಂದುವಾಗಿದ್ದಾಳೆ.

IPL 2020: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ವೇಳಾಪಟ್ಟಿIPL 2020: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ವೇಳಾಪಟ್ಟಿ

ಯುಎಇಯಲ್ಲಿ ಪಂದ್ಯ ನೋಡಲು ವಿಶೇಷ ಅನುಮತಿ ಪಡೆದ ಫ್ಯಾನ್ ಇರಬೇಕು ಎಂದು ಕೆಲವರು ಊಹಿಸಿದ್ದಾರೆ. ಆದರೆ, ಆರ್ ಸಿಬಿ ಜರ್ಸಿ ತೊಟ್ಟು ಆರ್ ಸಿಬಿ ಡಗೌಟ್ ನಲ್ಲಿ ಕುಳಿತುಕೊಳ್ಳಬೇಕಾದರೆ ಆಕೆ ಆರ್ ಸಿಬಿ ಸಿಬ್ಬಂದಿಯೇ ಇರಬೇಕು ಎಂದು ಹಲವಾರು ಮಂದಿ ಊಹಿಸಿದ್ದಾರೆ. ಗೂಗಲ್ ಮಾಡಿ ಆಕೆ ಬಗ್ಗೆ ತಿಳಿಯಲು ಯತ್ನಿಸಿದ್ದಾರೆ. ನಿಮ್ಮ ಊಹೆ ನಿಜ. ಆಕೆ ಆರ್ ಸಿಬಿ ತಂಡದ ಮೊದಲ ಮಹಿಳಾ ಸಹಾಯಕ ಸಿಬ್ಬಂದಿ ನವನೀತ್ ಗೌತಮ್,ತರಬೇತಿ ಹೊಂದಿರುವ ಮಸಾಜ್ ಥೆರಪಿಸ್ಟ್.

RCB ಜೊತೆ ನವನೀತಗೆ ಮೊದಲ ಅನುಭವ

RCB ಜೊತೆ ನವನೀತಗೆ ಮೊದಲ ಅನುಭವ

ರಾಯಲ್ ಚಾಲೆಂಜರ್ಸ್‌ನ ಈ ಅದ್ಭುತ ಯಶಸ್ಸನ್ನು ತಂಡದ ಸದಸ್ಯರಿಗಿಂತ ಹೆಚ್ಚಾಗಿ ಆನಂದಿಸಿದವರು ನವನೀತ್ ಇದಕ್ಕೆ ಕಾರಣವೂ ಇದೆ. ಆಕೆಗೆ ಐಪಿಎಲ್ ಕ್ರಿಕೆಟ್ ಹೊಸತು, ಆರ್ ಸಿಬಿ ತಂಡದ ಜೊತೆ ಕೆಲಸ ಮಾಡುವುದು ಹೊಸತು. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ತಂಡವನ್ನು ಸೇರಿಕೊಂಡ ನವನೀತ, ಎಲ್ಲರ ಅಚ್ಚುಮೆಚ್ಚಿನ ಸಿಬ್ಬಂದಿಯಾಗಿದ್ದಾರೆ. ಬೆರಳೆಣಿಕೆಯಷ್ಟಿರುವ ಮಹಿಳಾ ಸಿಬ್ಬಂದಿಗಳ ಪೈಕಿ ನವನೀತ ವೃತ್ತಿಪರ ಮಸಾಜ್ ಥೆರಪಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ.

ನವನೀತಾಗೆ ಕ್ರಿಕೆಟ್ ಆಟ ಹೊಸತಲ್ಲ

ನವನೀತಾಗೆ ಕ್ರಿಕೆಟ್ ಆಟ ಹೊಸತಲ್ಲ

ರಾಯಲ್ ಚಾಲೆಂಜರ್ಸ್ ತಂಡದ ಜೊತೆ ಕಳೆದ ಅಕ್ಟೋಬರ್ ತಿಂಗಳಿನಿಂದ ನಿರ್ವಹಣೆ ಮಾಡುತ್ತಿದ್ದರೂ, ಕ್ರಿಕೆಟ್ ಆಗಲಿ ಬೇರೆ ಕ್ರೀಡೆಯಾಗಲಿ ಆಕೆಗೆ ಹೊಸತಲ್ಲ ಕೆನಡಾ ಮೂಲದ ಥೆರಪಿಸ್ಟ್ ಈ ಹಿಂದೆ ಟೊರೊಂಟೋ ನ್ಯಾಷನಲ್ಸ್ ಪರ ಗ್ಲೋಬಲ್ ಟಿ20 ಲೀಗ್ ನಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಏಷ್ಯಾಕಪ್ ನಲ್ಲಿ ಭಾರತದ ಮಹಿಳಾ ಬಾಸ್ಕೆಟ್ ಬಾಲ್ ತಂಡದ ಜೊತೆಗಿದ್ದರು.

ಈ ಹಿಂದೆ- ಡೆಕ್ಕನ್ ಚಾರ್ಜರ್ಸ್ ತಂಡವು ಇಬ್ಬರು ಮಹಿಳಾ ಸಹಾಯಕ ಸಿಬ್ಬಂದಿಯನ್ನು ಹೊಂದಿತ್ತು. ಆಸ್ಲೆ ಜಾಯ್ಸ್ ಹಾಗೂ ಪ್ಯಾಟ್ರಿಸಿಯಾ ಜೆಂಕಿನ್ಸ್ ತಂಡದಲ್ಲಿದ್ದರು.

20 ಮಂದಿ ಸೋದರ ಜೊತೆಗಿದ್ದೇನೆ

20 ಮಂದಿ ಸೋದರ ಜೊತೆಗಿದ್ದೇನೆ

ಪುರುಷರ ಕ್ರಿಕೆಟ್ ತಂಡದ ಜೊತೆ ಕಾರ್ಯ ನಿರ್ವಹಿಸುವ ಬಗ್ಗೆ ನವನೀತಾರನ್ನು ಪ್ರಶ್ನಿಸಿದಾಗ, ಇದು ದೊಡ್ಡ ಚಾಲೆಂಜ್ ನಿಜ ಎಲ್ಲರೂ ವೃತ್ತಿಪರರು. ಇದೊಂಥರ 20 ಸೋದರರ ಜೊತೆ ಕಾಲ ಕಳೆಯುವ ಅನುಭವ ಎಂದು ಹಾಸ್ಯ ಮಾಡಿದ್ದಾರೆ.

ಮಹಿಳಾ ಸಿಬ್ಬಂದಿಗಳನ್ನು ನೇಮಿಸುವ ಪ್ರಕ್ರಿಯೆ ಇನ್ನಷ್ಟು ಹೆಚ್ಚಾಗಲಿ ಎಂದು ಬಯಸಿದ್ದಾರೆ. ಲಿಂಗ ತಾರತಮ್ಯ ತೊಡಗು ಹಾಕಿ, ಸಮಾನ ಅವಕಾಶ ಕಲ್ಪಿಸಲು ಐಪಿಎಲ್ ಸೂಕ್ತ ವೇದಿಕೆಯಾಗಬಹುದು ಎಂದಿದ್ದಾರೆ.

ಮಸಾಜ್ ಥೆರಪಿಸ್ಟ್ ಕೆಲಸವೇನು?

ಮಸಾಜ್ ಥೆರಪಿಸ್ಟ್ ಕೆಲಸವೇನು?

ಆರ್ ಸಿಬಿ ತಂಡದ ಫಿಸಿಯೋಥೆರಪಿಸ್ಟ್ ಇವಾನ್ ಸ್ಪೀಚ್ಲಿ ಹಾಗೂ ಬಸು ಶಂಕರ್ ಅವರಿಗೆ ಸಹಾಯಕ ಸಿಬ್ಬಂದಿಯಾಗಿ ನವನೀತಾ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ಆಟಗಾರರಿಗೂ ವೈಯಕ್ತಿಕ ಕಸರತ್ತು ಹಾಗೂ ನೋವು ನಿವಾರಕ, ಸ್ನಾಯು ಸೆಳೆತ ಉಪಶಮನದ ಬಗ್ಗೆ ಗಮನ ಹರಿಸುತ್ತಿದ್ದಾರೆ. ಟಿ20ಯಲ್ಲಿ ಎಲ್ಲವೂ ತ್ವರಿತಗತಿಯಿಂದ ಆಗಬೇಕಾಗಿರುವುದರಿಂದ ನೋವು ನಿವಾರಣೆಗೂ ಮಸಾಜ್ ಅಗತ್ಯ. ಓವರ್ ನಲ್ಲಿ ಕೆಲ ಸೆಕೆಂಡು ಬ್ರೇಕ್ ಜೊತೆಗೆ ವೇಗವಾಗಿ ಬೌಲರ್ ಓಡಬೇಕಾಗುತ್ತದೆ. ಫೀಲ್ಡರ್ ಗಳು ಮೈದಾನದಲ್ಲಿ ಓಡುವುದು, ಹಾರುವುದು, ಬ್ಯಾಟ್ಸ್ ಮನ್ ಗಳು ಭಾರಿ ಹೊಡೆತಕ್ಕೆ ಯತ್ನಿಸುವಾಗ ಆಗುವ ಸ್ನಾಯು ಸೆಳೆತ ಎಲ್ಲವನ್ನು ಗಮನಿಸುತ್ತೇವೆ.

ನವನೀತಾ ಆಯ್ಕೆ ಏಕೆ?

ನವನೀತಾ ಆಯ್ಕೆ ಏಕೆ?

ಫುಟ್ಬಾಲ್, ಬಾಸ್ಕೆಟ್ ಬಾಲ್ ಹೀಗೆ ವಿವಿಧ ಕ್ಷೇತ್ರದ ಕ್ರೀಡಾಪಟುಗಳ ಜೊತೆ ಕಾರ್ಯ ನಿರ್ವಹಿಸಿರುವುದರಿಂದ ನವನೀತಾರ ಬೇಡಿಕೆ ಹೆಚ್ಚಿದೆ. ಕ್ರಿಕೆಟರ್ ಗಳಿಗೆ ಫುಟ್ಬಾಲ್ ಕ್ರೀಡೆಯಲ್ಲಿ ಸಿಗುವ ಕಠಿಣ ತರಬೇತಿ ಹಾಗೂ ಮಸಾಜ್ ತಂತ್ರಗಳನ್ನು ಅಳವಡಿಸಲಾಗುತ್ತಿದೆ. ಪ್ರತಿ ಆಟಗಾರರ ಶಕ್ತಿ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರ ಸ್ನಾಯುಗಳಲ್ಲಿ ಯಾವುದು ಹೆಚ್ಚು ಒತ್ತಡ ಯಾವುದು ಕಡಿಮೆ ಒತ್ತಡಕ್ಕೆ ಒಳಗಾಗಿದೆ ಎಂಬುದನ್ನು ಗಮನಿಸಿ, ಪ್ರತಿ ಪಂದ್ಯಕ್ಕೂ ಮುನ್ನ ಚಿಕಿತ್ಸೆ, ಮಸಾಜ್ ನೀಡಲಾಗುತ್ತದೆ ಎಂದು ನವನೀತ ಹೇಳಿದ್ದಾರೆ.

Story first published: Tuesday, October 6, 2020, 15:14 [IST]
Other articles published on Oct 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X