ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಮಾಂಚಕ ಪಂದ್ಯದಲ್ಲಿ ಕಂಡ ಸೂಪರ್ ಓವರ್ ಗರ್ಲ್ ಯಾರು?

IPL 2020: Who is the mystery girl during KXIP vs MI Super Over Match

ಭಾನುವಾರ ರಾತ್ರಿ ಎರೆಡೆರಡು ಒಂದೇ ಪಂದ್ಯದಲ್ಲಿ ಎರಡು ಬಾರಿ ಸೂಪರ್ ಓವರ್ ನೋಡಿದ ಮೇಲೆ ಪ್ರೇಕ್ಷಕರು ವಾಹ್ ಇದಪ್ಪ ಮ್ಯಾಚ್ ಅಂದ್ರೆ ಎಂದು ಮನೆಯಲ್ಲೇ ಕುಳಿತು ಉದ್ಗರಿಸಿದ್ದಾರೆ. ಪಂಜಾಬ್ ಹಾಗೂ ಮುಂಬೈ ನಡುವಿನ ಸೂಪರ್ ಓವರ್ ಹಣಾಹಣಿ ಏನಾದರೂ ಪ್ರೇಕ್ಷಕರ ನಡುವೆ ನಡೆದಿದ್ದರೆ ಸ್ಟೇಡಿಯಂಗೆ ಕಿಚ್ಚು ಹಚ್ಚಬಹುದಾಗಿತ್ತು ಎಂದು ಹಲವಾರು ಮಂದಿ ಅಭಿಪ್ರಾಯ ಪಟ್ಟಿದ್ದಾರೆ.

ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಎರಡು ಸೂಪರ್ ಓವರ್ ಗಳನ್ನು ಕುರ್ಚಿಯ ತುದಿಯಲ್ಲಿ ಕುಳಿತು ಉಗುರು ಕಚ್ಚುತ್ತಾ, ದೇವರಲ್ಲಿ ಪ್ರಾರ್ಥಿಸುತ್ತಾ ಪಂದ್ಯ ನೋಡಿದವರ ಸಂಖ್ಯೆ ಲೆಕ್ಕಕ್ಕೆ ಸಿಗುವುದಿಲ್ಲ. ಪ್ರೇಕ್ಷಕರಿಂದ ತುಂಬಿದ ಮೈದಾನದಲ್ಲಿ ಇಂಥ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತದೆ. ಆದರೆ, ಈಗ ಕೊರೊನಾವೈರಸ್ ನಿಂದಾಗಿ ಖಾಲಿ ಮೈದಾನದಲ್ಲಿ ಆಟ ನಡೆಯುತ್ತಿದೆ.

RCB ಡಗೌಟ್ ವಿಶೇಷ: ಅರೆ! ಯಾರಿವಳು ಯಾರಿವಳು ಚಂಗನೆದ್ದು ಕುಣಿವವಳುRCB ಡಗೌಟ್ ವಿಶೇಷ: ಅರೆ! ಯಾರಿವಳು ಯಾರಿವಳು ಚಂಗನೆದ್ದು ಕುಣಿವವಳು

ತಂಡಕ್ಕೆ ಸಂಬಂಧಪಟ್ಟವರನ್ನು ಬಿಟ್ಟರೆ ಬೇರೆಯವರಿಗೆ ಮೈದಾನದಲ್ಲಿ ಪ್ರವೇಶವಿಲ್ಲ. ಇಂಥ ಪರಿಸ್ಥಿತಿಯಲ್ಲಿ ಸೂಪರ್ ಓವರ್ ಟೈಮಲ್ಲಿ ಕೆಲ ಸೆಕೆಂಡುಗಳ ಕಾಲ ಕಂಡ ಉಗುರುಕಚ್ಚುವ ಹುಡುಗಿಯ ಚಿತ್ರ ಎಲ್ಲರ ಚಿತ್ತ ಕಲಕಿದೆ. ಅರೇ ಯಾರೀಕೆ ಎಂದು ಇಂಟರ್ನೆಟ್ ನಲ್ಲಿ ಹುಡುಕಿದ್ದಾರೆ.

25 ಸೆಕೆಂಡುಗಳ ಕಾಲ ಕಾಣಿಸಿಕೊಂಡ ಹುಡುಗಿಯನ್ನು ಸೂಪರ್ ಓವರ್ ಗರ್ಲ್ ಎಂದೇ ಕರೆಯಲಾಗುತ್ತಿದೆ. ನೆಟಿಜನ್ ಕಣ್ಣಿಗೆ ಆಕೆ ಹೆಸರು ಪತ್ತೆಯಾಗಿದೆ. ರಿಯಾನಾ ಲಾಲ್ವಾನಿ ಎಂಬ ಹೆಸರಿನ ಈಕೆಯ ಇನ್ಸ್ಟಾಗ್ರಾಂ ಖಾತೆ ಹುಡುಕಿದರೆ ಅಲ್ಲಿ ಸೂಪರ್ ಓವರ್ ಗರ್ಲ್ ಎಂದೇ ಬರೆಯಲ್ಪಟ್ಟಿದೆ.

ಟ್ವಿಟ್ಟರಲ್ಲಿ ಆಕೆ ಬಗ್ಗೆ ಹುಡುಕಾಟ ಹೆಚ್ಚಾದಂತೆ ಟ್ರೆಂಡ್ ಆಗಲು ಶುರುವಾಗಿದೆ. ಕೊನೆಗೆ ಆಕೆ ಇನ್ಸ್ಟಾಗ್ರಾಂ ಖಾತೆಯ ಹಿಂಬಾಲಕ ಸಂಖ್ಯೆಯೂ ಬೆಳೆಯ ತೊಡಗಿದೆ. ಆರ್ ಸಿಬಿ ಗರ್ಲ್ ದೀಪಿಕಾ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಲಕ್ಷಾಂತರ ಹಿಂಬಾಲಕರನ್ನು ಸಂಪಾದಿಸಿಬಿಟ್ಟಿದ್ದರು. ಆದ್ರೆ ಲಾಲ್ವಾನಿ ಸದ್ಯಕ್ಕೆ ಹಿಂಬಾಲಕರನ್ನು ನಿರ್ಬಂಧಿಸಿ ಅಗತ್ಯವಿದ್ದವರನ್ನು ಒಪ್ಪಿಕೊಳ್ಳುತ್ತಿರುವಂತೆ ತೋರುತ್ತಿದೆ. ಒಟ್ಟಾರೆ, ಭಾವನಾತ್ಮಕ, ರೋಮಾಂಚಕ ಪಂದ್ಯದಲ್ಲಿ ಪಂಜಾಬ್ ಸಹ ಒಡತಿ ನಟಿ ಪ್ರೀತಿ ಜಿಂಟಾ ಅಲ್ಲದೆ, ಅಕ್ಕ ಪಕ್ಕ ಇದ್ದ ಯುವತಿಯರನ್ನು ತೋರಿಸಿದ ಕ್ಯಾಮೆರಮ್ಯಾನ್ ಗೆ ಎಲ್ಲರೂ ಸಲಾಂ ಎನ್ನುತ್ತಿದ್ದಾರೆ.

ಐಪಿಎಲ್ 2020: ರಾಜಸ್ಥಾನ ಆಟಗಾರರ ಚುರುಕುತನ ಹಿಂದಿನ ಶಕ್ತಿಐಪಿಎಲ್ 2020: ರಾಜಸ್ಥಾನ ಆಟಗಾರರ ಚುರುಕುತನ ಹಿಂದಿನ ಶಕ್ತಿ

ಕೆಎಲ್ ರಾಹುಲ್ ರನೌಟ್ ಮಾಡಿದ್ದು, ಮಯಾಂಕ್ ಅಗರವಾಲ್ ಬೌಂಡರಿಯಲ್ಲಿ ಫೀಲ್ಡ್ ಮಾಡಿದ್ದು, ಈ ಹುಡುಗಿ ಉಗುರು ಕಚ್ಚಿದ್ದು ಈ ಮೂರು ಸ್ಕ್ರೀನ್ ಶಾಟ್ ಚಿತ್ರಗಳು ನಿನ್ನೆಯಿಂದ ಹೆಚ್ಚು ಟ್ರೆಂಡ್ ಆಗಿವೆ.

ಇನ್ನು ಪಂದ್ಯದ ವಿಷಯದಕ್ಕೆ ಬಂದರೆ, ಟಾಸ್ ಗೆದ್ದ ಮುಂಬೈ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿ, ನಿಗದಿಪಡಿಸಿದ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 176 ರನ್ ಗಳಿಸಿತು. ನಂತರ ಕಿಂಗ್ಸ್ ಪಂಜಾಬ್ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ಗೆ 176 ರನ್ ಗಳಿಸಿತು. ಕೆಎಲ್ ರಾಹುಲ್ (51 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 77) ಅರ್ಧಶತಕ ಬಾರಿಸಿದರು. ನಂತರ ಮೊದಲ ಸೂಪರ್ ಓವರ್‌ನಲ್ಲಿ ಪಂಜಾಬ್, ಮುಂಬೈ ತಲಾ 5 ರನ್ ಗಳಿಸಿದವು. ಎರಡನೇ ಸೂಪರ್ ಓವರ್‌ನಲ್ಲಿ 11 ರನ್ ಗುರಿ ಬೆನ್ನಟ್ಟಿದ ಗೇಲ್ ಮತ್ತು ಮಾಯಾಂಕ್ ನಾಲ್ಕು ಎಸೆತಗಳಲ್ಲಿ ಗುರಿ ಪೂರ್ಣಗೊಳಿಸಿದರು.

Story first published: Monday, October 19, 2020, 14:38 [IST]
Other articles published on Oct 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X