ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಎಸ್‌ಕೆಯಲ್ಲಿ ರೈನಾರ 3ನೇ ಕ್ರಮಾಂಕಕ್ಕೆ ಸೂಕ್ತರಾಗಬಲ್ಲ ಬ್ಯಾಟ್ಸ್‌ಮನ್‌ಗಳಿವರು

IPL 2020: Who Will Replace Suresh Rainas Number 3 Spot in CSK

ದುಬೈ: ಬೇರೆ ಬೇರೆ ಕಾರಣಗಳಿಂದಾಗಿ ಸುರೇಶ್ ರೈನಾ ಚೆನ್ನೈ ಸೂಪರ್ ಕಿಂಗ್ಸ್‌ ಕ್ಯಾಂಪ್ ತೊರೆದಿದ್ದಾರೆ. ಮೂರು ಬಾರಿಯ ಚಾಂಪಿಯನ್ಸ್ ಸಿಎಸ್‌ಕೆ, 13ನೇ ಆವೃತ್ತಿಯ ಐಪಿಎಲ್‌ನಲ್ಲಿ ತಮ್ಮ ತಂಡದ ಅನುಭವಿ ಬ್ಯಾಟ್ಸ್‌ಮನ್ ಒಬ್ಬನ ಬೆಂಬಲವನ್ನು ಮಿಸ್ ಮಾಡಿಕೊಳ್ಳಲಿದೆ. ಸುರೇಶ್‌ ರೈನಾ ಸಿಎಸ್‌ಕೆಯಲ್ಲಿ ಮ್ಯಾಚ್ ವಿನ್ನರ್ ಬ್ಯಾಟ್ಸ್‌ಮನ್ ಆಗಿದ್ದವರು. ಮೈದಾನದ ಮೂಲೆ ಮೂಲೆಯಲ್ಲೂ ಅದ್ಭುತ ಫೀಲ್ಡಿಂಗ್ ಮಾಡಬಲ್ಲ ಬೆಸ್ಟ್ ಫೀಲ್ಡರ್ ಆಗಿದ್ದರು.

ಐಪಿಎಲ್: ಸಿಎಸ್‌ಕೆಯ ಎಲ್ಲಾ ಆಟಗಾರರು ಹಾಗೂ ಸಿಬ್ಬಂದಿಗಳ ಕೋವಿಡ್ ವರದಿ ನೆಗೆಟಿವ್ಐಪಿಎಲ್: ಸಿಎಸ್‌ಕೆಯ ಎಲ್ಲಾ ಆಟಗಾರರು ಹಾಗೂ ಸಿಬ್ಬಂದಿಗಳ ಕೋವಿಡ್ ವರದಿ ನೆಗೆಟಿವ್

ಇತ್ತೀಚೆಗೆ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿರುವ ಸುರೇಶ್ ರೈನಾ ಐಪಿಎಲ್ ಇತಿಹಾಸದಲ್ಲೇ ಎರಡನೇ ಅತೀ ಹೆಚ್ಚು ರನ್ ಬಾರಿಸಿ ದಾಖಲೆ ಪಟ್ಟಿಯಲ್ಲಿದ್ದಾರೆ. ಒಟ್ಟು 9 ಸೀಸನ್‌ಗಳಲ್ಲಿ ಆಡಿರುವ ರೈನಾ, ಪ್ರತೀ ಸೀಸನ್‌ಗೆ 400 ರನ್‌ನಂತೆ ಐಪಿಎಲ್‌ನಲ್ಲಿ 5368 ರನ್ ಗಳಿಸಿದ್ದಾರೆ.

ವಿರಾಟ್ ಕೊಹ್ಲಿ, ಆ್ಯರನ್ ಫಿಂಚ್ ದಾಖಲೆ ಸರಿದೂಗಿಸಿದ ಬಾಬರ್ ಅಝಾಮ್ವಿರಾಟ್ ಕೊಹ್ಲಿ, ಆ್ಯರನ್ ಫಿಂಚ್ ದಾಖಲೆ ಸರಿದೂಗಿಸಿದ ಬಾಬರ್ ಅಝಾಮ್

ಇಂಥ ಪ್ರತಿಭಾನ್ವಿತ ಆಟಗಾರ ರೈನಾ ಈ ಬಾರಿಯ ಐಪಿಎಲ್‌ನಲ್ಲಿ ಆಡದಿದ್ದರೆ, ಸಿಎಸ್‌ಕೆಯಲ್ಲಿ ಅವರ ಸ್ಥಾನಕ್ಕೆ ಬರುವ ಬ್ಯಾಟ್ಸ್‌ಮನ್ ಯಾರು ಎಂಬ ಚರ್ಚೆ ಕ್ರಿಕೆಟ್ ವಲಯದಲ್ಲಿ ನಡೆಯುತ್ತಿದೆ.

ಐಪಿಎಲ್‌ನಲ್ಲಿ ಬಲಿಷ್ಠ ಆಟಗಾರ

ಐಪಿಎಲ್‌ನಲ್ಲಿ ಬಲಿಷ್ಠ ಆಟಗಾರ

ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ರನ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಆರ್‌ಸಿಬಿಯ ವಿರಾಟ್ ಕೊಹ್ಲಿ (5412 ರನ್) ಇದ್ದರೆ, ಸುರೇಶ್ ರೈನಾ (5368) ದ್ವಿತೀಯ ಸ್ಥಾನದಲ್ಲಿ, ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ (4898) 3ನೇ ಸ್ಥಾನದಲ್ಲಿದ್ದಾರೆ. ಅಷ್ಟೇ ಅಲ್ಲ, ಸಿಎಸ್‌ಕೆ ಪರ 4527 ರನ್ ಗಳಿಸಿರುವ ರೈನಾ ಚೆನ್ನೈ ತಂಡದಲ್ಲೇ ಮುಂಚೂಣಿ ರನ್ ಸರದಾರನಾಗಿ ಗುರುತಿಸಿಕೊಂಡಿದ್ದಾರೆ.

ಋತುರಾಜ್ ಗಾಯಕ್ವಾಡ್

ಋತುರಾಜ್ ಗಾಯಕ್ವಾಡ್

ಸುರೇಶ್ ರೈನಾ ಒಂದು ವೇಳೆ ಈ ಬಾರಿಯ ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಆಡದಿದ್ದರೆ ರೈನಾ ಅವರ 3ನೇ ಕ್ರಮಾಂಕಕ್ಕೆ ಋತುರಾಜ್ ಗಾಯಕ್ವಾಡ್ ಸೂಕ್ತರಾಗಬಲ್ಲರು. ಕೊರೊನಾದಿಂದ ಚೇತರಿಸಿಕೊಂಡಿರುವ ಮಹಾರಾಷ್ಟ್ರದ ಬಲಗೈ ಬ್ಯಾಟ್ಸ್‌ಮನ್ ರುತುರಾಜ್, ರೈನಾ ಜಾಗಕ್ಕೆ ಹೊಂದಿಕೊಳ್ಳಬಲ್ಲರು. 2018-19ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 45ರ ಸರಾಸರಿಯಂತೆ 365 ರನ್ ಗಳಿಸಿದ್ದ ಋತುರಾಜ್ ಆ ಸೀಸನ್‌ನಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟ್ಸ್‌ಮನ್‌ ಆಗಿ ಗಮನ ಸೆಳೆದಿದ್ದರು.

ಸ್ಯಾಮ್ ಕರನ್

ಸ್ಯಾಮ್ ಕರನ್

ಸಿಎಸ್‌ಕೆಯ ಮೂರನೇ ಕ್ರಮಾಂಕಕ್ಕೆ ನಾಯಕ ಎಂಎಸ್ ಧೋನಿ ಅವರು ಇಂಗ್ಲೆಂಡ್ ಆಲ್ ರೌಂಡರ್ ಸ್ಯಾಮ್ ಕರನ್ ಅವರನ್ನು ಕಳುಹಿಸಿದರೂ ಅಚ್ಚರಿಯಿಲ್ಲ. ಎಡಗೈ ಬ್ಯಾಟ್ಸ್‌ಮನ್ ಕಮ್ ಬೌಲರ್ ಆಗಿರುವ ಕರನ್ ಕಳೆದ ವರ್ಷ ಕಿಂಗ್ಸ್‌ ಇಲೆವೆನ್ ಪಂಜಾಬ್ ಪರ, ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಆದರೆ ಆ ಬಳಿಕ ಸ್ಥಿರತೆ ಕಳೆದುಕೊಂಡ ಸ್ಯಾಮ್ ಬೌಲಿಂಗ್‌ನಲ್ಲಿ ಅಂಥ ಸಾಧನೆ ತೋರಿರಲಿಲ್ಲ. ಈ ಬಾರಿಯ ಐಪಿಎಲ್‌ನಲ್ಲಿ ಕರನ್ ಅವರನ್ನು 6.5 ಕೋ.ರೂ.ಗೆ ಖರೀದಿಸಿರುವ ಸಿಎಸ್‌ಕೆ ಕರನ್‌ಗೆ ಟಾಪ್ ಆರ್ಡರ್ ಬ್ಯಾಟಿಂಗ್ ಅವಕಾಶ ನೀಡಿದರೂ ನೀಡಬಹುದು.

ಫಾ ಡು ಪ್ಲೆಸಿಸ್

ಫಾ ಡು ಪ್ಲೆಸಿಸ್

ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಫಾ ಡು ಪ್ಲೆಸಿಸ್ ಸಿಎಸ್‌ಕೆಯಲ್ಲಿ ಅನುಭವಿ ಬ್ಯಾಟ್ಸ್‌ಮನ್. 31ರ ರೆಯದ ಡು ಪ್ಲೆಸಿಸ್ 2012ರಿಂದಲೂ ಸಿಎಸ್‌ಕೆ ಪರ ಆಡುತ್ತಿದ್ದಾರೆ. 71 ಪಂದ್ಯಗಳಲ್ಲಿ 1853 ರನ್ ಗಳಿಸಿರುವ ಡು ಪ್ಲೆಸಿಸ್ ಸ್ಟ್ರೈಕ್ ರೇಟ್ 126 ಇದೆ. ದಕ್ಷಿಣ ಆಫ್ರಿಕಾ ಪರ ಮೂರನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಆಡುವುದರಿಂದ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲೂ ಡು ಪ್ಲೆಸಿಸ್ ಈ ಕ್ರಮಾಂಕದಲ್ಲಿ ಕಾಣಿಸಿಕೊಳ್ಳಲೂಬಹುದು.

Story first published: Tuesday, September 1, 2020, 20:40 [IST]
Other articles published on Sep 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X