ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಕೆಕೆಆರ್ ವಿರುದ್ಧದ ಪಂದ್ಯದಿಂದ ಹೊರಗುಳಿಯಲಿದ್ದಾರಾ ಧೋನಿ?

IPL 2020: Will MS Dhoni play for Chennai Against KKR

ಆಡಿದ 12 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಸೋಲುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಟೂರ್ನಿಯಲ್ಲಿ ಮುಂದಿನ ಹಂತಕ್ಕೇರುವಲ್ಲಿ ವಿಫಲವಾಗಿ ಹೊರಬಿದ್ದಿದೆ. ಹೀಗಾಗಿ ಚೆನ್ನೈ ಪಾಲಿಗೆ ಇನ್ನು ಉಳಿದ ಎರಡು ಪಂದ್ಯಗಳು ಯಾವುದೇ ರೀತಿಯ ಬದಲಾವಣೆಯನ್ನೂ ಮಾಡಲಾರದು.

ಟೂರ್ನಿಯ ಕೊನೆಯ ಹಂತವನ್ನು ತಲುಪಿರುವ ಈ ಸಂದರ್ಭದಲ್ಲಿ ಚೆನ್ನೈ ತಂಡದಲ್ಲಿ ಒಂದಷ್ಟು ಬದಲಾವಣೆಗಳನ್ನು ನಿರೀಕ್ಷಿಸಲಾಗುತ್ತಿದೆ. ಅದರಲ್ಲೂ ಕೆಕೆಆರ್ ವಿರುದ್ಧದ ಪಂದ್ಯದಿಂದ ನಾಯಕ ಧೋನಿ ವಿಶ್ರಾಂತಿ ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಒಂದು ವೇಲೆ ಧೋನಿ ವಿಶ್ರಾಂತಿ ತೆಗದುಕೊಂಡರೆ ತಂಡವನ್ನು ಯಾರು ಮುನ್ನಡೆಸಲಿದ್ದಾರೆ. ಕೀಪಿಂಗ್ ಜವಾಬ್ದಾರಿ ಯಾರು ವಹಿಸಲಿದ್ದಾರೆ? ಈ ಬಗ್ಗೆ ವಿವರಗಳು ಇಲ್ಲಿದೆ. ಮುಂದೆ ಓದಿ..

ಟೀಮ್ ಇಂಡಿಯಾಗೆ ಆಯ್ಕೆಯಾಗದ್ದಕ್ಕೆ ಸೂರ್ಯಕುಮಾರ್ ಅಸಮಾಧಾನಗೊಂಡಿದ್ದಾರೆ: ಕಿರಾನ್ ಪೊಲಾರ್ಡ್ಟೀಮ್ ಇಂಡಿಯಾಗೆ ಆಯ್ಕೆಯಾಗದ್ದಕ್ಕೆ ಸೂರ್ಯಕುಮಾರ್ ಅಸಮಾಧಾನಗೊಂಡಿದ್ದಾರೆ: ಕಿರಾನ್ ಪೊಲಾರ್ಡ್

ಮುನ್ನಡೆಸುವುದು ಯಾರು?

ಮುನ್ನಡೆಸುವುದು ಯಾರು?

ಇಂದಿನ ಪಂದ್ಯದಲ್ಲಿ ಧೋನಿ ಹೊರಗುಳಿಯಲಿ ನಿರ್ಧರಿಸಿದ್ದೇ ಆದಲ್ಲಿ ತಂಡವನ್ನು ಇನ್ನೋರ್ವ ಆಟಗಾರ ಮುನ್ನಡೆಸಲಿದ್ದಾರೆ. ಸದ್ಯ ತಂಡದಲ್ಲಿರುವ ಆಟಗಾರರ ಪೈಕಿ ಫಾಪ್ ಡು ಪ್ಲೆಸಿಸ್ ಧೋನಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುವ ನಿರೀಕ್ಷೆಯಿದೆ. ಫಾಪ್ ಟು ಪ್ಲೆಸಿಸ್ ಈ ಬಾರಿಯ ಟೂರ್ನಿಯಲ್ಲಿ ಚೆನ್ನೈ ಪರವಾಗಿ ಹೆಚ್ಚು ರನ್ ಗಳಿಸಿದ ಆಟಗಾರನೂ ಆಗಿದ್ದಾರೆ. ನಾಲ್ಕು ಅರ್ಧ ಶತಕ, ಉತ್ತಮ ಸರಾಸರಿಯನ್ನು ಹೊಂದಿರುವ ಜೊತೆಗೆ ಅತ್ಯುತ್ತಮ ಫೀಲ್ಡರ್ ಕೂಡ ಆಗಿರುವ ಕಾರಣ ಫಾಫ್‌ಗೆ ಈ ಜವಾಬ್ಧಾರಿ ದೊರೆಯುವ ಸಾಧ್ಯತೆಯಿದೆ.

ವಿಕೆಟ್ ಕೀಪಿಂಗ್ ಯಾರು?

ವಿಕೆಟ್ ಕೀಪಿಂಗ್ ಯಾರು?

ಇನ್ನು ಧೋನಿ ಹೊರಗುಳಿದರೆ ವಿಕೆಟ್ ಕೀಪಿಂಗ್ ಯಾರು ಮಾಡುತ್ತಾರೆ ಎಂಬ ಪ್ರಶ್ನೆಯೂ ಮೂಡುತ್ತದೆ. ಅದಕ್ಕೆ ಸಿಗುವ ಉತ್ತರ ಅಂಬಾಟಿ ರಾಯುಡು. ಅಂಬಾಟಿ ರಾಯುಡು ವಿಕೆಟ್ ಕೀಪಿಂಗ್ ಜವಾಬ್ಧಾರಿಯನ್ನು ಬೇರೆ ಬೇರೆ ವಲಯದ ಆಟದಲ್ಲಿ ನಡೆಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಕೀಪಿಂಗ್ ಮಾಡಿದ ಅನುಭವ ಹೊಂದಿದ್ದಾರೆ. ಸುದೀರ್ಘ ಕಾಲದಿಂದ ವಿಕೆಟ್ ಕೀಪಿಂಗ್ ನಡೆಸದಿರಬಹುದು ಆದರೆ ಒಂದು ಎರಡು ಒಂದ್ಯಗಳಲ್ಲಿ ನಿರ್ವಹಿಸುವ ಚಾಕಚಕ್ಯತೆ ಅವರಲ್ಲಿ ಖಂಡಿತಾ ಇದೆ.

ಬ್ಯಾಟಿಂಗ್‌ನಲ್ಲಿ ಯಾರು ಕಣಕ್ಕೆ?

ಬ್ಯಾಟಿಂಗ್‌ನಲ್ಲಿ ಯಾರು ಕಣಕ್ಕೆ?

ಇನ್ನು ಬ್ಯಾಟಿಂಗ್‌ಲ್ಲಿ ಧೋನಿ ಸ್ಥಾನದಲ್ಲಿ ಯಾರು ಕಣಕ್ಕಿಳಿಯಬಹುದು ಎಂಬುದು ಕೂಡ ಚರ್ಚೆಯ ವಸ್ತುವಾಗಿದೆ. ಆದರೆ ಈ ಸ್ಥಾನದಲ್ಲಿ ಮುರಳಿ ವಿಜಯ್ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ಈ ಬಾರಿಯ ಟೂರ್ನಿಯಲ್ಲಿ ಕೇವಲ ಮೂರು ಪಂದ್ಯಗಳನ್ನು ಮಾತ್ರವೇ ಆಡಿರುವ ವಿಜಯ್ ರನ್ ಗಳಿಕೆಯಲ್ಲೂ ಕಳಪೆಯಾಗಿದ್ದಾರೆ. ಆದರೆ ಸಿಎಸ್‌ಕೆಯಲ್ಲಿ ಹೆಚ್ಚಿನ ಅವಕಾಶಗಳು ಇಲ್ಲದಿರುವುದು ಮುರಳಿ ವಿಜಯ್‌ಗೆ ಅವಕಾಶ ದೊರೆಯುವಂತೆ ಮಾಡಲಿದೆ. ಆದರೆ ಮುರಳಿ ವಿಜಯ್ ಐಪಿಎಲ್‌ನಲ್ಲಿ ಅದ್ಭುತ ಇತಿಹಾಸವನ್ನು ಹೊಂದಿದ್ದು ಎರಡು ಶತಕಗಳನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ.

ಧೋನಿ ವಿಶ್ರಾಂತಿ ತೆಗೆದುಕೊಳ್ಳುವ ಸಾಧ್ಯತೆ ಎಷ್ಟಿದೆ?

ಧೋನಿ ವಿಶ್ರಾಂತಿ ತೆಗೆದುಕೊಳ್ಳುವ ಸಾಧ್ಯತೆ ಎಷ್ಟಿದೆ?

ಧೋನಿಯ ವಿಶ್ರಾಂತಿ ತೆಗೆದುಕೊಳ್ಳುವ ಸಂಗತಿ ಇನ್ನೂ ಖಚಿತವಾಗಿಲ್ಲ. ಆಡಲಿಳಿದ ಬಳಿಕವೇ ಇದು ಸ್ಪಷ್ಟವಾಗಲಿದೆ. ಆದರೆ ಇದೇ ಕಾರಣಕ್ಕಾಗಿ ಧೋನಿ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲು ಸಾದ್ಯವಿಲ್ಲ. ಅದರಲ್ಲೂ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದಲೂ ದೂರ ಉಳಿದಿದ್ದು ಮುಂದಿನ ಎರಡು ಪಂದ್ಯಗಳು ಧೋನಿ ವೃತ್ತಿ ಜೀವನದ ಅಂತಿಮ ಪಮದ್ಯಗಳು ಆಗಿರುವ ಸಾಧ್ಯತೆಗಳೂ ಇದೆ. ಹಾಗಾಗಿ ವಿಶ್ರಾಂತಿಯನ್ನು ಬಯಸದೆ ಕಣಕ್ಕಿಳಿಯಲೂ ಬಹುದು.

Story first published: Thursday, October 29, 2020, 17:39 [IST]
Other articles published on Oct 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X