ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ವಿಮೆನ್ಸ್ ಚಾಲೆಂಜರ್ಸ್ ನಡೆಯಲಿರುವುದು ಅದ್ಭುತವಾದ ಸುದ್ದಿ: ಶಫಾಲಿ ವರ್ಮ

Ipl 2020: Womens Challenger Happening Is Great News: Shafali Verma

ಈ ವರ್ಷಾರಂಭದಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪರವಾಗಿ ಹೆಚ್ಚು ಸದ್ದು ಮಾಡಿದ ಆಟಗಾರ್ತಿ ಶಫಾಲಿ ವರ್ಮ. ಇನ್ನೂ 16ರ ಹರೆಯದಲ್ಲಿರುವ ಈ ಯುವ ಪ್ರತಿಭೆ ಸ್ಪೋಟಕ ಆಟದಿಂದಾಗಿ ಘಟಾನುಘಟಿ ಆಟಗಾರರನ್ನೆ ಮೆಚ್ಚಿಸುವಲ್ಲಿ ಯಶಸ್ವಿಯಾಗಿದ್ದರು. ಈಗ ಐಪಿಎಲ್ ಟೂರ್ನಿಯಲ್ಲಿ ವಿಮೆನ್ಸ್ ಚಾಲೆಂಜರ್ ನಡೆಸಲು ನಿರ್ಧರಿಸಿರುವ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಮಹಿಳೆಯರ ಮಿನಿ ಐಪಿಎಲ್ ಎಂದು ಕರೆಯಲ್ಪಡುವ ವಿಮೆನ್ಸ್ ಚಾಲೆಂಜರ್ ಸೀರೀಸ್ ಯುಎಇನಲ್ಲಿ ನವೆಂಬರ್ 4ರಿಂದ ನವೆಂಬರ್ 9ರ ವರೆಗೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಈ ವಿಚಾರವಾಗಿ ಶಫಾಲಿ ವರ್ಮ ಪ್ರತಿಕ್ರಿಯಿಸಿದ್ದು ಇದು ನಿಜಕ್ಕೂ ಅದ್ಭುತವಾದ ಸುದ್ದಿ ಎಂದು ಹೇಳಿದ್ದಾರೆ.

ನವೆಂಬರ್ 4-9ಕ್ಕೆ ಯುಎಇಯಲ್ಲಿ ವಿಮೆನ್ಸ್ ಚಾಲೆಂಜರ್ ಸೀರೀಸ್ನವೆಂಬರ್ 4-9ಕ್ಕೆ ಯುಎಇಯಲ್ಲಿ ವಿಮೆನ್ಸ್ ಚಾಲೆಂಜರ್ ಸೀರೀಸ್

ಎಎನ್‌ಐ ಸುದ್ದಿಸಂಸ್ಥೆಗೆ ಶಫಾಲಿ ವರ್ಮ ಪ್ರತಿಕ್ರಿಯಿಸಿ " ಮಹಿಳಾ ಕ್ರಿಕೆಟ್‌ಗೆ ಈ ಸುದ್ದಿ ನಿಜಕ್ಕೂ ಸಂತಸ ನೀಡಲಿದೆ. ಮೂರು ತಂಡಗಳು ಕಣಕ್ಕಿಳಿಯುವ ಈ ವಿಮೆನ್ಸ್ ಚಾಲೆಂಜರ್ಸ್ ಸೀರೀಸ್ ನಡೆಯುತ್ತಿರುವುದು ಖುಷಿ ನೀಡಿದೆ ಎಂದಿದ್ದಾರೆ. ಜೊತೆಗೆ ಕರೊನಾ ವೈರಸ್‌ ಕಾರಣದಿಂದಾಗಿ ಸಾಕಷ್ಟು ನಿಯಮಗಳ ಮಧ್ಯೆ ಟೂರ್ನಿ ನಡೆಯುತ್ತಿರುವ ವಿಚಾರವನ್ನು ಅರ್ಥಮಾಡಿಕೊಂಡಿರುವುದಾಗಿ ಹೇಳಿದ್ದಾರೆ.

 ಸುರೇಶ್ ರೈನಾ - ಹರ್ಭಜನ್ ಸಿಂಗ್ ಈ ಟೂರ್ನಿ ಮಾತ್ರವಲ್ಲ ಮುಂದಿನ ಐಪಿಎಲ್‌ನಿಂದಲೂ ಔಟ್? ಸುರೇಶ್ ರೈನಾ - ಹರ್ಭಜನ್ ಸಿಂಗ್ ಈ ಟೂರ್ನಿ ಮಾತ್ರವಲ್ಲ ಮುಂದಿನ ಐಪಿಎಲ್‌ನಿಂದಲೂ ಔಟ್?

ಕೊರೊನಾ ವೈರಸ್ ಕಾರಣದಿಂದಾಗಿ ಬಿಸಿಸಿಐ ತೆಗೆದುಕೊಂಡಿರುವ ಮುನ್ನೆಚ್ಚರಿಕೆಗಳ ಬಗ್ಗೆ ತಿಳಿದಿದೆ. ಆದರೆ ಮಹಿಳಾ ಚಾಲೆಂಜರ್ಸ್ ಸರಣಿ ನಡೆಯುತ್ತಿರುವುದು ಖುಷಿಯ ವಿಚಾರ. ಮೈದಾನಕ್ಕೆ ಮತ್ತೆ ಇಳಿಯಲು, ಇತರೆ ಆಟಗಾರ್ತಿಯರನ್ನು ಭೇಟಿಯಾಗಲು ಇನ್ನಷ್ಟು ಕಾಯಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಹೌದು ಸಾಕಷ್ಟು ನಿರ್ಬಂಧಗಳಿವೆ. ಆದರೆ ಅದು ನಮ್ಮ ಒಳಿತಿಗಾಗಿ ಎಂದು ಶಫಾಲಿ ವರ್ಮ ಹೇಳಿದ್ದಾರೆ.

ವಿಮೆನ್ಸ್ ಚಾಲೆಂಜರ್ ಸೀರೀಸ್‌ನಲ್ಲಿ ಮೂತು ತಂಡಗಳು ಪಾಲ್ಗೊಳ್ಳಲಿವೆ. ಟ್ರೈಬ್ಲೇಝರ್ಸ್, ವೆಲಾಸಿಟಿ ಮತ್ತು ಸೂಪರ್‌ನೋವಾಸ್ ಈ ತಂಡಗಳು ಪ್ರಶಸ್ತಿಗಾಗಿ ಕಾದಾಟವನ್ನು ನಡೆಸಲಿದೆ . ಫೈನಲ್‌ ಪಂದ್ಯ ನವೆಂಬರ್ 9ಕ್ಕೆ ನಡೆಯಲಿದೆ.

Story first published: Friday, October 2, 2020, 15:32 [IST]
Other articles published on Oct 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X