ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಟೀಂ ಇಂಡಿಯಾ ಕೈಬಿಟ್ಟ ಮೂವರು ಘಟಾನುಗಟಿಗಳ ಭಾರೀ ನೆಟ್ ಪ್ರಾಕ್ಟೀಸ್

IPL 2020: Yet To Announce Retirement From International Cricket, 3 Team India Players Net Practice

ಹದಿಮೂರನೇ ಆವೃತ್ತಿಯ ವಿವೋ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿ ಇದೇ ಮಾರ್ಚ್ 29ರಂದು ಆರಂಭವಾಗಲಿದೆ. ಮೊದಲ ಪಂದ್ಯ ಮುಂಬೈನ ವಾಂಖೇಡೆ ಸ್ಟೇಡಿಯಂನಲ್ಲಿ ಹಾಲೀ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರನ್ನರ್ಸ್ ಚೆನ್ನೈ ಸೂಪರ್ ಕಿಂಗ್ ನಡುವೆ ನಡೆಯಲಿದೆ.

ಇದುವರೆಗೆ ನಡೆದ ಹನ್ನೆರಡು ಐಪಿಎಲ್ ಪಂದ್ಯಾವಳಿಯಲ್ಲಿ ನಾಲ್ಕು ಬಾರಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿದ್ದರೆ, ಚೆನ್ನೈ ತಂಡ ಮೂರು ಬಾರಿ, ಕೋಲ್ಕತ್ತಾ ನೈಟ್ ರೈಡರ್ಸ್ ಎರಡು ಬಾರಿ, ರಾಜಸ್ಥಾನ ರಾಯಲ್ಸ್, ಡೆಕ್ಕನ್ ಚಾರ್ಜಸ್, ಸನ್ ರೈಸರ್ಸ್ ತಲಾ ಒಂದು ಬಾರಿ ಪ್ರಶಸ್ತಿ ಗೆದ್ದಿತ್ತು.

ಟೀಂ ಇಂಡಿಯಾದಲ್ಲಿ ಈ ಆಟಗಾರ ಇರುವುದೇ ಕೊಹ್ಲಿಯ ದೊಡ್ಡ ಅದೃಷ್ಟ: ಸ್ಟೀವ್ ವಾಟೀಂ ಇಂಡಿಯಾದಲ್ಲಿ ಈ ಆಟಗಾರ ಇರುವುದೇ ಕೊಹ್ಲಿಯ ದೊಡ್ಡ ಅದೃಷ್ಟ: ಸ್ಟೀವ್ ವಾ

ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ತಂಡ ಪ್ರತೀ ಬಾರಿ 'ಕಪ್ ನಮ್ಮದೇ' ಎಂದು ಹೇಳುತ್ತಿದ್ದರೂ, ಮೂರು ಬಾರಿ ಫೈನಲ್ ಹಂತ ತಲುಪಲು ಮಾತ್ರ ಇದುವರೆಗೆ ಶಕ್ತವಾಗಿದೆ. ಅದರಲ್ಲೂ, ಕಳೆದ ಮೂರು ಸೀಸನ್ ನಲ್ಲಿ ಆರ್ಸಿಬಿ ಸಾಧನೆ ಅಂತಹ ಹೇಳಿಕೊಳ್ಳುವಂತದ್ದೇನೂ ಇರಲಿಲ್ಲ.

ಇನ್ಜಮಾಮ್ ಪ್ರಕಾರ ಕ್ರಿಕೆಟ್ ಆಟದ ದಿಕ್ಕನ್ನೇ ಬದಲಿಸಿದ ಮೂರು ಆಟಗಾರರು ಇವರಂತೆ !ಇನ್ಜಮಾಮ್ ಪ್ರಕಾರ ಕ್ರಿಕೆಟ್ ಆಟದ ದಿಕ್ಕನ್ನೇ ಬದಲಿಸಿದ ಮೂರು ಆಟಗಾರರು ಇವರಂತೆ !

ಪ್ರತೀ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಪ್ರದರ್ಶನ ನೀಡುತ್ತಲೇ ಬರುತ್ತಿದೆ. ಪ್ರಸಕ್ತ ಸಾಲಿನ 2020ರ ಐಪಿಎಲ್ ನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದದ, ಟೀಂ ಇಂಡಿಯಾಗೂ ಆಯ್ಕೆಯಾಗದ ಮೂವರು ಭರ್ಜರಿ ನೆಟ್ ಪ್ರಾಕ್ಟೀಸ್ ನಲ್ಲಿ ತೊಡಗಿಸಿಕೊಂಡಿದ್ದಾರೆ.

ಹೊಸ ಆವೃತ್ತಿಯಲ್ಲಿ ಆರು ಪಂದ್ಯಗಳು ಮಾತ್ರ ಮಧ್ಯಾಹ್ನ ನಡೆಯಲಿವೆ

ಹೊಸ ಆವೃತ್ತಿಯಲ್ಲಿ ಆರು ಪಂದ್ಯಗಳು ಮಾತ್ರ ಮಧ್ಯಾಹ್ನ ನಡೆಯಲಿವೆ

ಈ ಬಾರಿಯ ಐಪಿಲ್ ನಲ್ಲಿ ಶನಿವಾರ ಒಂದೇ ಒಂದು ಪಂದ್ಯವನ್ನು ಆಡಿಸಲಾಗುತ್ತಿದೆ. ಭಾನುವಾರ ಮಾತ್ರ ಎಂದಿನಂತೆ, ಎರಡು ಪಂದ್ಯಗಳು ಇರಲಿವೆ. ಇನ್ನು ಸಮಯದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಹೊಸ ಆವೃತ್ತಿಯಲ್ಲಿ ಆರು ಪಂದ್ಯಗಳು ಮಾತ್ರ ಮಧ್ಯಾಹ್ನ ನಡೆಯಲಿವೆ. ಈ ಕ್ರಿಕೆಟ್ ಹಬ್ಬ ಮಾರ್ಚ್ 29ರಿಂದ ಮೇ 24ರ ವರೆಗೆ ನಡೆಯಲಿದೆ.

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ

2008ರಿಂದ ಆರಂಭವಾದ ಐಪಿಎಲ್ ನಲ್ಲಿ ಅಲ್ಲಿಂದ ಇಲ್ಲಿಯವರೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿಕೊಂಡು ಬಂದವರು ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ. ಕಳೆದ ಸುಮಾರು ಒಂದು ವರ್ಷದಿಂದ ಯಾವುದೇ ಅಂತರಾಷ್ಟ್ರೀಯ ಪಂದ್ಯವನ್ನು ಧೋನಿ ಆಡಲಿಲ್ಲ. ಅವರು ಆಡಿದ ಕೊನೆಯ ಟಿ20 ಪಂದ್ಯ, ಫೆಬ್ರವರಿ 27,2019ರಂದು, ಆಸ್ಟ್ರೇಲಿಯಾದ ವಿರುದ್ದ. ಐಪಿಎಲ್ ಪ್ರಸಕ್ತ ಸರಣಿಗೆ ಧೋನಿ, ಭಾರೀ ಪ್ರಾಕ್ಟೀಸ್ ನಡೆಸುತ್ತಿದ್ದಾರೆ.

ಚೆನ್ನೈ ತಂಡದ ಉಪನಾಯಕ ಸುರೇಶ್ ರೈನಾ

ಚೆನ್ನೈ ತಂಡದ ಉಪನಾಯಕ ಸುರೇಶ್ ರೈನಾ

ಚೆನ್ನೈ ತಂಡದ ಉಪನಾಯಕ, ಎಡಗೈ ಬ್ಯಾಟ್ಸ್ ಮ್ಯಾನ್ ಮತ್ತು ಉತ್ತಮ ಫೀಲ್ಡರ್ ಕೂಡಾ ಆಗಿರುವ ಸುರೇಶ್ ರೈನಾ ಕೂಡಾ ಅಂತರಾಷ್ಟ್ರೀಯ ಪಂದ್ಯದಿಂದ ಇನ್ನೂ ನಿವೃತ್ತಿ ಘೋಷಿಸಿಲ್ಲ. ಜುಲೈ 17, 2018 ಇವರು ಆಡಿದ ಕೊನೆಯ ಏಕದಿನ ಪಂದ್ಯವಾಗಿದ್ದು, ಇಂಗ್ಲೆಂಡ್ ವಿರುದ್ದ ಆಡಿದ್ದರು. ಅಲ್ಲಿಂದ ಇಲ್ಲಿಯವರೆಗೆ, ಟೀಂ ಇಂಡಿಯಾದಲ್ಲಿ ರೈನಾಗೆ ಸ್ಥಾನ ಸಿಗಲಿಲ್ಲ. ಇವರು ಕೂಡಾ, ಐಪಿಎಲ್ ನಲ್ಲಿ ಫಿಟ್ ಇರಲು ನೆಟ್ ಪ್ರಾಕ್ಟೀಸ್ ನಲ್ಲಿ ತೊಡಗಿದ್ದಾರೆ.

ಬಲಗೈ ಸ್ಪಿನ್ನರ್ ಹರಭಜನ್ ಸಿಂಗ್

ಬಲಗೈ ಸ್ಪಿನ್ನರ್ ಹರಭಜನ್ ಸಿಂಗ್

ಟೀಂ ಇಂಡಿಯಾದ ಬಲಗೈ ಸ್ಪಿನ್ನರ್ ಆಗಿದ್ದ ಹರಭಜನ್ ಸಿಂಗ್, ಕೊನೆಯ ಟಿ20 ಪಂದ್ಯವನ್ನು ಆಡಿದ್ದು, ಯುಎಇ ವಿರುದ್ದ ಮಾರ್ಚ್ 4,2016ರಂದು. ಐಪಿಎಲ್ ನಲ್ಲಿ ಮೊದಲು ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದ ಹರಭಜನ್, ನಂತರ, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿಕೊಂಡರು. ಕಳೆದ ಐಪಿಎಲ್ ಸೀಸನ್ ನಲ್ಲಿ ಹರಭಜನ್ ಹದಿನಾರು ವಿಕೆಟ್ ಅನ್ನು ಪಡೆದಿದ್ದರು. ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ಇವರು ನಿವೃತ್ತಿಯನ್ನು ಘೋಷಿಸಬೇಕಷ್ಟೇ.

Story first published: Thursday, February 20, 2020, 16:12 [IST]
Other articles published on Feb 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X