ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಾಂಖೆಡೆಯಲ್ಲಿ 10 ಮೈದಾನ ಸಿಬ್ಬಂದಿ, 6 ಇವೆಂಟ್ ಮ್ಯಾನೇಜರ್‌ಗೆ ಕೊರೊನಾ

IPL 2021: 10 Wankhede ground staff, 6 event managers test Covid positive

ಮುಂಬೈ: ಮುಂಬೈಯಲ್ಲಿ ಕೊರೊನಾವೈರಸ್ ಪ್ರಕರಣಗಳು ಏರುತ್ತಲೇ ಇವೆ. ಪ್ರಸಿದ್ಧ ಕ್ರಿಕೆಟ್ ಸ್ಟೇಡಿಯಂ ವಾಂಖೆಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 8 ಮಂದಿ ಮೈದಾನ ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಸೋಂಕಿರುವುದು ಪತ್ತೆಯಾಗಿತ್ತು. ಇದೀಗ ಸೋಂಕಿತ ಸಿಬ್ಬಂದಿಗಳ ಸಂಖ್ಯೆ 10ಕ್ಕೆ ಏರಿದೆ.

ಮುಂಬೈ ವಾಂಖೆಡೆ ಸ್ಟೇಡಿಯಂನಲ್ಲಿ 10 ಮಂದಿ ಮೈದಾನ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ತಗುಲಿರುವುದಷ್ಟೇ ಅಲ್ಲ, ಇವೆಂಟ್ ಮ್ಯಾನೇಜ್ಮೆಂಟ್‌ನ 6 ಮಂದಿಗೂ ಕೋವಿಡ್-19 ತಗುಲಿರುವುದಾಗಿ ವರದಿಯಾಗಿದೆ. ಆತಂಕಕಾರಿಯಾಗಿ ಹಬ್ಬುತ್ತಿರುವ ಕೊರೊನಾ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾಗೆ ತಲೆನೋವು ತರುತ್ತಿದೆ.

ಮುಂಬೈಯಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದರೂ ಏಪ್ರಿಲ್ 10ರಿಂದ 25ರ ವರೆಗೆ ಐಪಿಎಲ್ ಪಂದ್ಯಗಳನ್ನು ಮುಂಬೈಯಲ್ಲೇ ನಡೆಸಲು ಬಿಸಿಸಿಐ ಎದುರು ನೋಡುತ್ತಿದೆ. ಆದರೆ ಸ್ಟ್ಯಾಂಡ್‌ಬೈ ತಾಣಗಳಾಗಿ ಹೈದರಾಬಾದ್ ಮತ್ತು ಇಂದೋರ್ ಸ್ಟೇಡಿಯಂಗಳನ್ನೂ ಗಮನದಲ್ಲಿಟ್ಟುಕೊಂಡಿದೆ.

'ಹೌದು, ನೆನ್ನೆ (ಶುಕ್ರವಾರ) 8 ಮಂದಿ ಮೈದಾನ ಸಿಬ್ಬಂದಿಗೆ ಪಾಸಿಟಿವ್ ಬಂದಿತ್ತು. ಇವತ್ತು 2 ಹೆಚ್ಚುವರಿ ಪ್ರಕರಣ ಕಾಣಿಸಿಕೊಂಡಿದೆ. 10 ಮಂದಿಯನ್ನೂ ಮನೆಗೆ ಕಳುಹಿಸಿದ್ದೇವೆ. ಅವರು ಮನೆಯಲ್ಲಿ ಐಸೊಲೇಶನ್‌ನಲ್ಲಿದ್ದಾರೆ,' ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಪಿಟಿಗೆ ಮಾಹಿತಿ ನೀಡಿದೆ.

Story first published: Saturday, April 3, 2021, 20:04 [IST]
Other articles published on Apr 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X