ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: 14 ಸ್ಟಾರ್‌ಸ್ಪೋರ್ಟ್ಸ್ ಸಿಬ್ಬಂದಿಗಳಿಗೆ ಕೊರೊನಾ ವೈರಸ್!

IPL 2021: 14 members in IPL Broadcast Bio-Bubble test positive

ಈ ಬಾರಿಯ ಐಪಿಎಲ್ ಆರಂಭಕ್ಕೆ ಮುನ್ನ ಕೊರೊನಾ ವೈರಸ್ ಸಾಕಷ್ಟು ಆತಂಕವನ್ನು ಉಂಟು ಮಾಡುತ್ತಿದೆ. ಮೂವರು ಐಪಿಎಲ್ ಆಟಗಾರರು 10 ಮೈದಾನದ ಸಿಬ್ಬಂದಿಗಳ ಬಳಿಕ ಈಗ ಐಪಿಎಲ್ ನೇರ ಪ್ರಸಾರಕರ ತಂಡದ ಸಿಬ್ಬಂದಿಗಳು ಕೂಡ ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಸಿಬ್ಬಂದಿಗಳ ತಂಡದ ಸದಸ್ಯರು ಈಗ ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಐಪಿಎಲ್ ನೇರಪ್ರಸಾರದ ಹಕ್ಕನ್ನು ಸ್ಟಾರ್‌ಸ್ಪೋರ್ಟ್ಸ್ ವಾಹಿನಿ ವಹಿಸಿಕೊಂಡಿದ್ದು ಎಲ್ಲಾ ಸಿಬ್ಬಂದಿಗಳು ಕೂಡ ಹೋಟೆಲ್ ಕ್ವಾರಂಟೈನ್‌ನಲ್ಲಿದ್ದಾರೆ. ಆದರೆ ಈ ತಂಡದ 14 ಸಿಬ್ಬಂದಿಗಳಿಗೆ ಕೊರೊನಾ ವೈರಸ್ ದೃಢಪಟ್ಟಿದೆ ಎಂದು ಔಟ್‌ಲುಕ್ ವರದಿ ಮಾಡಿದೆ.

ಐಪಿಎಲ್‌ನಿಂದ ಹೊರಗುಳಿದರೂ ಶ್ರೇಯಸ್ ಐಯ್ಯರ್‌ಗೆ ದೊರೆಯಲಿದೆ ಸಂಪೂರ್ಣ 7 ಕೋಟಿ ಸಂಬಳಐಪಿಎಲ್‌ನಿಂದ ಹೊರಗುಳಿದರೂ ಶ್ರೇಯಸ್ ಐಯ್ಯರ್‌ಗೆ ದೊರೆಯಲಿದೆ ಸಂಪೂರ್ಣ 7 ಕೋಟಿ ಸಂಬಳ

ಈ 14 ಸಿಬ್ಬಂದಿಗಳು ಕೂಡ ನಿರ್ಮಾಣ ತಂಡದ ಮುಖ್ಯ ಸದಸ್ಯರಾಗಿದ್ದು ಮುಂಬೈನ ಫೋರ್ ಸೀಸನ್ಸ್ ಹೋಟೆಲ್‌ನಲ್ಲಿ ಬಯೋಬಬಲ್‌ನಲ್ಲಿದ್ದು ಕ್ವಾರಂಟೈನ್ ಪೂರೈಸುತ್ತಿದ್ದರು. ಕ್ಯಾಮರಾಮನ್, ಕಾರ್ಯಕ್ರಮ ನಿರ್ಮಾಪಕರು, ನಿರ್ದೇಶಕರು, ಇವಿಎಸ್ ಆಪರೇಟರ್‌ಗಳು ಮತ್ತು ವಿಡಿಯೋ ಎಡಿಟರ್‌ಗಳನ್ನು ಈ ತಂಡ ಹೊಂದಿದೆ.

Maxwell ಗೆ 14 ಕೋಟಿ ಕೊಟ್ಟಿದ್ದು ಇದೆ ಕಾರಣಕ್ಕೆ | Oneindia Kannada

"ಈ ವಿಚಾರವಾಗಿ ಸ್ಟಾರ್ ಸ್ಪೋರ್ಟ್ಸ್ ಮುಖ್ಯಸ್ಥ ಸಂಜೋಗ್ ಗುಪ್ತಾ ಮಾಹಿತಿಯನ್ನು ನೀಡಲು ನಿರಾಕರಿಸಿದ್ದಾರೆ. "ದಯವಿಟ್ಟು ಬಿಸಿಸಿಐಯಿಂದ ಮಾಹಿತಿಯನ್ನು ಪಡೆದುಕೊಳ್ಳಿ. ಫೋರ್‌ಸೀಸನ್ ಬಯೋಬಬಲ್‌ಅನ್ನು ನಾವು ನಿರ್ವಹಿಸುತ್ತಿಲ್ಲ" ಎಂದಷ್ಟೇ ಔಟ್‌ಲುಕ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

Story first published: Tuesday, April 6, 2021, 10:20 [IST]
Other articles published on Apr 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X