ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಡೆದ ಮೂರು ವಿಶೇಷ ಸಂಗತಿಗಳು

IPL 2021 : 3 first time events that took place at the time of suspension

ಕೊರೊನಾ ವೈರಸ್‌ನ ಕಾರಣದಿಂದಾಗಿ ಐಪಿಎಲ್ 14ನೇ ಆವೃತ್ತಿ ಅರ್ಧಕ್ಕೆ ಮುಂದೂಡಿಕೆಯಾಗಿದೆ. ಐಪಿಎಲ್ ಬಯೋಬಬಲ್‌ನ ಒಳಗೆ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾದ ಬಳಿಕ ಮಹತ್ವದ ಟೂರ್ನಿಯನ್ನು ಮುಂದೂಡುವ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಂಡಿದೆ. ಮತ್ತೆ ಯಾವಾಗ ಐಪಿಎಲ್ ಮುಂದುವರಿಯಲಿದೆ ಎಂಬ ಪ್ರಶ್ನೆಗೆ ಸದ್ಯಕ್ಕೆ ಸ್ಪಷ್ಟ ಉತ್ತರವಿಲ್ಲ.

ಇನ್ನು ಈ ಬಾರಿಯ ಐಪಿಎಲ್ ಮುಂದೂಡಿಕೆಯಾಗುವ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ಐಪಿಎಲ್ ಇತಿಹಾಸವನ್ನೊಮ್ಮೆ ಗಮನಿಸಿದರೆ ಮೂರು ವಿಶೇಷ ಸಂಗತಿಗಳು ಬೆಳಕಿಗೆ ಬರುತ್ತದೆ. ಈ ಮೂರು ಸಂಗತಿಗಳು ಕಳೆದ 13 ಐಪಿಎಲ್ ಆವೃತ್ತಿಯಲ್ಲಿ ನಡೆದಿಲ್ಲ ಎಂಬುದು ಗಮನಾರ್ಹ.

ಡಿ ವಿಲಿಯರ್ಸ್, ಕೊಹ್ಲಿ ಜೊತೆ ಆಡುವ ಮೊದಲು ಅಂಜಿಕೊಂಡಿದ್ದೆ: ರಜತ್ಡಿ ವಿಲಿಯರ್ಸ್, ಕೊಹ್ಲಿ ಜೊತೆ ಆಡುವ ಮೊದಲು ಅಂಜಿಕೊಂಡಿದ್ದೆ: ರಜತ್

ಹಾಗಾದರೆ ಕಳೆದ 13 ಆವೃತ್ತಿಗಳಲ್ಲಿ ಸಂಭವಿಸದ ಆ ಮೂರು ವಿಶೇಷ ಸಂಗತಿಗಳು ಯಾವುದು ಮುಂದೆ ಓದಿ..

ಸನ್‌ರೈಸರ್ಸ್ ಹೈದರಾಬಾದ್‌ಗೆ ಕೊನೆಯ ಸ್ಥಾನ

ಸನ್‌ರೈಸರ್ಸ್ ಹೈದರಾಬಾದ್‌ಗೆ ಕೊನೆಯ ಸ್ಥಾನ

ಸನ್‌ರೈಸರ್ಸ್ ಹೈದರಾಬಾದ್ ತಂಡ 2013ರ ಆವೃತ್ತಿಯ ಬಳಿಕ ಐಪಿಎಲ್‌ನಲ್ಲಿ ಪ್ರಮುಖ ತಂಡವಾಗಿ ಗುರುತಿಸಿಕೊಂಡಿದೆ. ಟೂರ್ನಿಯಲ್ಲಿ ಪ್ರತಿ ಬಾರಿಯೂ ಅದ್ಭುತ ಪ್ರದರ್ಶನವನ್ನು ನೀಡಿಕೊಂಡು ಬರುತ್ತಿರುವ ಈ ತಂಡ ಕಳೆದ ಬಾರಿಯ ಆವೃತ್ತಿಯಲ್ಲಿಯೂ ಪ್ಲೇಆಫ್ ಹಂತಕ್ಕೇರಿತ್ತು. ಆದರೆ 14ನೇ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡುತ್ತಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಆಡಿದ 7 ಪಂದ್ಯಗಳಲ್ಲಿ ಒಂದೇ ಗೆಲುವು ಸಾಧಿಸಿರುವ ಎಸ್‌ಆರ್‌ಹೆಚ್ ತಂಡ ಈ ಕಳಪೆ ಸಾಧನೆಯನ್ನು ಮಾಡಿರುವುದು ಇದೇ ಮೊದಲು.

ಆರೆಂಜ್ ಕ್ಯಾಪ್‌ ಪಟ್ಟಿಯಲ್ಲಿ ಡೆಲ್ಲಿ ದಾಂಡಿಗ

ಆರೆಂಜ್ ಕ್ಯಾಪ್‌ ಪಟ್ಟಿಯಲ್ಲಿ ಡೆಲ್ಲಿ ದಾಂಡಿಗ

ಕಳೆದ 13 ಆವೃತ್ತಿಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟ್ಸ್‌ಮನ್ ಅತಿ ಹೆಚ್ಚು ರನ್‌ಗಳಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿಲ್ಲ. ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅನುಭವಿ ಆಟಗಾರ ಶಿಖರ್ ಧವನ್ ಅಗ್ರಸ್ಥಾನದಲ್ಲಿದ್ದಾರೆ. ಕಳೆದ ಬಾರಿಯ ಟೂರ್ನಿಯ ಅಂತ್ಯದಲ್ಲಿ ಶಿಖರ್ ಧವನ್ ಅತ್ಯುತ್ತಮ ಪ್ರದರ್ಶನ ನೀಡಿದ್ದರಾದರೂ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಧವನ್ ಎರಡನೇ ಸ್ಥಾನದಲ್ಲಿದ್ದರು.

ಆರ್‌ಸಿಬಿ ತಂಡದ ಪ್ರಥಮ ಸಾಧನೆ

ಆರ್‌ಸಿಬಿ ತಂಡದ ಪ್ರಥಮ ಸಾಧನೆ

ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಬೌಲರ್ ಓರ್ವ ಅತ್ಯಂತ ವಿಶೇಷ ಸಾಧನೆಯನ್ನು ಮಾಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ಆಟಗಾರನೋರ್ವ ಈವರೆಗೂ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರಿಗೆ ನೀಡುವ ಪರ್ಪಲ್ ಕ್ಯಾಪ್‌ಅನ್ನು ತನ್ನದಾಗಿಸಿಕೊಂಡಿಲ್ಲ. ಆದರೆ ಈ ಬಾರಿಯ ಟೂರ್ನಿ ಮುಂದೂಡಿಕೆಯಾಗುವ ಹಂತದಲ್ಲಿ ಆರ್‌ಸಿಬಿ ವೇಗದ ಬೌಲರ್ ಹರ್ಷಲ್ ಪಟೇಲ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಆಡಿದ 7 ಪಂದ್ಯಗಳಲ್ಲಿ ಹರ್ಷಲ್ ಪಟೇಲ್ 17 ವಿಕೆಟ್ ಸಂಪಾದಿಸಿ ಈ ಸಾಧನೆಯನ್ನು ಮಾಡಿದ್ದಾರೆ.

Story first published: Wednesday, May 5, 2021, 17:20 [IST]
Other articles published on May 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X