ಐಪಿಎಲ್‌ನಲ್ಲಿ ಫ್ಲಾಪ್ ; ಟಿ ಟ್ವೆಂಟಿ ವಿಶ್ವಕಪ್ ಅವಕಾಶ ಹಾಳು ಮಾಡಿಕೊಂಡ 3 ಬ್ಯಾಟ್ಸ್‌ಮನ್‌ಗಳು!

ಈ ಬಾರಿಯ ಐಪಿಎಲ್ ಟೂರ್ನಿ ಕೊರೊನಾವೈರಸ್ ಕಾರಣದಿಂದ ಅರ್ಧಕ್ಕೆ ನಿಂತಿದ್ದು ಈಗಾಗಲೇ 29 ಪಂದ್ಯಗಳನ್ನು ಯಶಸ್ವಿಯಾಗಿ ಮುಗಿಸಲಾಗಿದೆ. ಉಳಿದಿರುವ 31 ಪಂದ್ಯಗಳನ್ನು ಹೇಗಾದರೂ ಮಾಡಿ ಸೆಪ್ಟೆಂಬರ್ ತಿಂಗಳಿನಲ್ಲಿ ಮುಂದುವರೆಸುವ ಯೋಜನೆಯನ್ನು ಬಿಸಿಸಿಐ ಹಾಕುತ್ತಿದೆ. ಬಿಸಿಸಿಐ ಚಿಂತಿಸಿರುವ ಹಾಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಉಳಿದ ಐಪಿಎಲ್ ಪಂದ್ಯಗಳು ನಡೆದರೆ ಸರಿ, ಇಲ್ಲವಾದರೆ ಈ 3 ಭಾರತೀಯ ಬ್ಯಾಟ್ಸ್‌ಮನ್‌ಗಳ ಟಿ ಟ್ವೆಂಟಿ ವಿಶ್ವಕಪ್ ಕನಸು ಕನಸಾಗಿಯೇ ಉಳಿಯುವ ಸಾಧ್ಯತಯಿದೆ.

ಹೌದು ಟಿ ಟ್ವೆಂಟಿ ವಿಶ್ವಕಪ್ ಆರಂಭಕ್ಕೂ ಮುನ್ನ ಉಳಿದ ಐಪಿಎಲ್ ಪಂದ್ಯಗಳನ್ನು ಆಯೋಜಿಸದೇ ಹೋದರೆ ಇಲ್ಲಿಯವರೆಗೂ ನಡೆದಿರುವ 29 ಐಪಿಎಲ್ ಪಂದ್ಯಗಳಲ್ಲಿನ ಆಟಗಾರರ ಆಟದ ಆಧಾರದ ಮೇಲೆ ಆಯ್ಕೆ ಸಮಿತಿ ಗಮನಹರಿಸಲಿದೆ. ಹೀಗಾಗಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಕನಸನ್ನು ಹೊತ್ತಿದ್ದ ಆ 3 ಭಾರತೀಯ ಬ್ಯಾಟ್ಸ್‌ಮನ್‌ಗಳು ಇಲ್ಲಿಯವರೆಗೂ ನಡೆದಿರುವ ಪ್ರಸ್ತುತ ಟೂರ್ನಿಯ ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡದ ಕಾರಣ ಟಿ ಟ್ವೆಂಟಿ ವಿಶ್ವಕಪ್ ಅವಕಾಶವನ್ನು ಕಳೆದುಕೊಳ್ಳುವಂತಹ ಸಾಧ್ಯತೆಯಿದೆ.

ಪ್ರಸ್ತುತ ಐಪಿಎಲ್ ಟೂರ್ನಿಯ ಇದುವರೆಗೂ ನಡೆದಿರುವ ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡದೆ ಟಿ ಟ್ವೆಂಟಿ ವಿಶ್ವಕಪ್ ಆಡುವ ಭರವಸೆಯನ್ನು ಹಾಳು ಮಾಡಿಕೊಂಡಿರುವಂತಹ ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿ ಮುಂದೆ ಇದೆ ನೋಡಿ.

3. ಮನೀಷ್ ಪಾಂಡೆ

3. ಮನೀಷ್ ಪಾಂಡೆ

ಕನ್ನಡಿಗ ಮನೀಷ್ ಪಾಂಡೆ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ 5 ಇನ್ನಿಂಗ್ಸ್‌ ಆಡಿ ಗಳಿಸಿರುವುದು 193 ರನ್‌ಗಳನ್ನು ಮಾತ್ರ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮನೀಷ್ ಪಾಂಡೆ 2 ಅರ್ಧಶತಕಗಳನ್ನು ಬಾರಿಸಿದ್ದರೂ ಸಹ ಚೇಸಿಂಗ್ ವೇಳೆ ನಿಧಾನಗತಿಯ ಆಟವಾಡಿದ ಕಾರಣ ಭಾರೀ ಟೀಕೆಗೊಳಗಾಗಿದ್ದರು. ಮೂರನೇ ಕ್ರಮಾಂಕದಲ್ಲಿ ಆಡುತ್ತಿದ್ದ ಮನೀಷ್ ಪಾಂಡೆ ಟೂರ್ನಿ ಅಮಾನತುಗೊಳ್ಳುವ ಮುನ್ನ ನಡೆದ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಬಂದರೂ ಸಹ ಟಿ ಟ್ವೆಂಟಿ ರೀತಿಯ ಬಿರುಸಿನ ಬ್ಯಾಟಿಂಗ್ ಮಾಡಲಿಲ್ಲ. ಕಳೆದ ವರ್ಷ ಮೊಣಕೈ ಗಾಯದಿಂದ ಭಾರತೀಯ ಟಿಟ್ವೆಂಟಿ ತಂಡದಿಂದ ಹೊರಬಿದ್ದಿದ್ದ ಮನೀಷ್ ಪಾಂಡೆ ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಮತ್ತೆ ಟೀಮ್ ಇಂಡಿಯಾ ಸೇರಿಕೊಳ್ಳುವ ಯೋಜನೆಯಲ್ಲಿದ್ದರು, ಆದರೆ ಇದೀಗ ಇಲ್ಲಿಯವರೆಗೂ ನಡೆದಿರುವ ಪಂದ್ಯಗಳಲ್ಲಿನ ಮನೀಷ್ ಪಾಂಡೆ ನಿಧಾನಗತಿಯ ಬ್ಯಾಟಿಂಗ್ ಅವರ ಟಿಟ್ವೆಂಟಿ ವಿಶ್ವಕಪ್ ಕನಸಿಗೆ ಮಾರಕವಾಗುವ ಸಂಭವವಿದೆ.

2. ಇಶಾನ್ ಕಿಶನ್

2. ಇಶಾನ್ ಕಿಶನ್

ಕಳೆದ ಬಾರಿ ಮುಂಬೈ ಇಂಡಿಯನ್ಸ್ ತಂಡದ ಪರ ಅತಿಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ ಇಶಾನ್ ಕಿಶನ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅಕ್ಷರಶಃ ಮಂಕಾಗಿದ್ದಾರೆ. ಟೂರ್ನಿಯಲ್ಲಿ ಒಟ್ಟು 5 ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದ ಇಶಾನ್ ಕಿಶನ್ ಗಳಿಸಿದ್ದು ಕೇವಲ 73 ರನ್. ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುತ್ತಿದ್ದ ಇಶಾನ್ ಕಿಶನ್ ರನ್ ಗಳಿಸಲು ಪರದಾಡುತ್ತಿದ್ದರು, ಅಷ್ಟೇ ಅಲ್ಲದೆ ಇಶಾನ್ ಕಿಶನ್ ನಿಧಾನಗತಿಯ ಬ್ಯಾಟಿಂಗ್ ಮುಂದಿನ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಮೇಲೆ ಹೆಚ್ಚಿನ ಒತ್ತಡವನ್ನು ಬೀರುತ್ತಿತ್ತು. ಮಾರ್ಚ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲಿಯೇ ಇಶಾನ್ ಕಿಶನ್ ಅರ್ಧಶತಕವನ್ನು ಸಿಡಿಸಿ ಮಿಂಚಿದ್ದರು. ಹೀಗಿದ್ದರೂ ಕೂಡ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ನೀಡಿದ ಕಳಪೆ ಪ್ರದರ್ಶನ ಇಶಾನ್ ಕಿಶಾನ್ ಟಿ ಟ್ವೆಂಟಿ ವಿಶ್ವಕಪ್ ಆಡುವ ಭರವಸೆಗೆ ಮುಳುವಾಗಬಹುದು.

1. ಸೂರ್ಯಕುಮಾರ್ ಯಾದವ್

1. ಸೂರ್ಯಕುಮಾರ್ ಯಾದವ್

ಕೆಲವು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಈಗಾಗಲೇ ತನ್ನ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತುಪಡಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ಮುಂಬರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗುವ ಆಟಗಾರರ ರೇಸ್‌ನಲ್ಲಿರುವ ಪ್ರಮುಖ ಆಟಗಾರರಲ್ಲೊಬ್ಬರು. ಆದರೂ ಕೂಡ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ದೊಡ್ಡಮಟ್ಟದ ಪ್ರದರ್ಶನ ನೀಡುವಲ್ಲಿ ಕೊಂಚ ಎಡವಿದ್ದಾರೆ. ಟೂರ್ನಿಯಲ್ಲಿ ಒಟ್ಟು 7 ಪಂದ್ಯಗಳನ್ನಾಡಿರುವ ಸೂರ್ಯಕುಮಾರ್ ಯಾದವ್ 1 ಅರ್ಧಶತಕ ಸೇರಿದಂತೆ 173 ರನ್ ಗಳಿಸಿದ್ದಾರೆ. ಪ್ರಸ್ತುತ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ಜಯದ ಬ್ಯಾಟಿಂಗ್ ಮಾಡಿದ್ದಕ್ಕಿಂತ ವಿಕೆಟ್ ಒಪ್ಪಿಸಿದ್ದೇ ಹೆಚ್ಚು. ಸೂರ್ಯಕುಮಾರ್ ಯಾದವ್ ತೋರಿರುವ ಹಳೆಯ ಅಂತಾರಾಷ್ಟ್ರೀಯ ಪಂದ್ಯಗಳ ಪ್ರದರ್ಶನದ ಆಧಾರದ ಮೇಲೆ ಮುಂಬರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗುತ್ತಾರಾ ಅಥವಾ ಪ್ರಸ್ತುತ ಐಪಿಎಲ್ ಟೂರ್ನಿಯ ಸಾಧಾರಣ ಫಾರ್ಮ್ ಈ ಆಯ್ಕೆಯ ಮೇಲೆ ಪ್ರಭಾವವನ್ನು ಬೀರುತ್ತಾ ಎಂಬುದನ್ನು ಕಾದು ನೋಡಬೇಕು.

For Quick Alerts
ALLOW NOTIFICATIONS
For Daily Alerts
Story first published: Sunday, May 9, 2021, 16:21 [IST]
Other articles published on May 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X