ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಬೆಂಗಳೂರು vs ಕೊಲ್ಕತ್ತಾ ಸೆಣೆಸಾಟದಲ್ಲಿ ದಾಖಲಾಗಬಹುದಾದ ಮೈಲಿಗಲ್ಲುಗಳು

IPL 2021: 3 milestones could be achieve in the match between RCB vs KK

ಐಪಿಎಲ್ ನಲ್ಲಿ ಇಂದು ಎರಡು ಹಣಾಹಣಿಗಳು ನಡೆಯುತ್ತಿದೆ. ಈ ಬಾರಿಯ ಆವೃತ್ತಿಯ ಮೊದಲ ಡಬಲ್ ಹೆಡ್ಡರ್‌ನ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಹಾಗೂ ಇಯಾನ್ ಮಾರ್ಗನ್ ನೇತೃತ್ವದ ಕೆಕೆಆರ್ ತಂಡಗಳು ಮುಖಾಮುಖಿಯಾಗುತ್ತಿದೆ.

ಆರ್‌ಸಿಬಿ ಸತತ ಎರಡು ಪಂದ್ಯಗಳನ್ನು ಗೆದ್ದು ಸಾಕಷ್ಟು ಹುಮ್ಮಸ್ಸಿನಿಂದ ಮೂರನೇ ಪಂದ್ಯಕ್ಕೆ ಸಜ್ಜಾಗುತ್ತಿದ್ದರೆ ಮಾರ್ಗನ್ ಬಳಗ ಆಡಿದ ಎರಡು ಪಂದ್ಯಗಳಲ್ಲಿ ಒಂದು ಸೋಲು ಹಾಗೂ ಒಂದು ಗೆಲುವಿನ ರುಚು ಉಂಡಿದೆ. ಹಿಗಾಗಿ ಈ ಪಂದ್ಯದಲ್ಲಿ ಗೆಲುವು ಕಾಣಲು ಹವಣಿಸುತ್ತಿದೆ. ಈ ಕುತೂಹಲಕಾರಿ ಪಂದ್ಯದಲ್ಲಿ ಕೆಲ ಮಹತ್ವದ ಮೈಲಿಗಲ್ಲುಗಳನ್ನು ಆಟಗಾರರು ಸಾಧಿಸುವ ಸಾಧ್ಯತೆಯಿದೆ. ಅವರುಗಳಲ್ಲಿ ಪ್ರಮುಖ ಮೂರು ಮೈಲಿಗಲ್ಲುಗಳ ಮಾಹಿತಿ ಇಲ್ಲಿದೆ:

ಐಪಿಎಲ್ 2021: ಬೆಂಗಳೂರು vs ಕೊಲ್ಕತ್ತಾ ಮುಖಾಮುಖಿಯಲ್ಲಿ ಯಾರದ್ದು ಮೇಲುಗೈ?ಐಪಿಎಲ್ 2021: ಬೆಂಗಳೂರು vs ಕೊಲ್ಕತ್ತಾ ಮುಖಾಮುಖಿಯಲ್ಲಿ ಯಾರದ್ದು ಮೇಲುಗೈ?

ವಿರಾಟ್ ಕೊಹ್ಲಿ: ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ 6000 ರನ್‌ಗಳಿಸಿದ ಆಟಗಾರ ಎನಿಸಿಕೊಳ್ಳುವ ಸಾಧ್ಯತೆಯಿದೆ. ಈ ಸಾಧನೆ ಮಾಡಲಉ ವಿರಾಟ್ ಕೊಹ್ಲಿಗೆ ಇನ್ನು 56 ರನ್‌ಗಳ ಅವಶ್ಯಕತೆಯಿದೆ.

ಗ್ಲೆನ್ ಮ್ಯಾಕ್ಸ್‌ವೆಲ್: ಆರ್‌ಸಿಬಿ ತಂಡದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಇಂದಿನ ಪಂದ್ಯದಲ್ಲಿ 4 ಸಿಕ್ಸರ್ ಗಳಿಸಿದರೆ ಐಪಿಎಲ್‌ನಲ್ಲಿ 100 ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಗೆ ಸೇರಿಕೊಳ್ಳಲಿದ್ದಾರೆ.

ಶುಬ್ಮನ್ ಗಿಲ್: ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಯುವ ಬ್ಯಾಟ್ಸ್‌ಮನ್ ಶುಬ್ಮನ್ ಗಿಲ್ ಆರ್‌ಸಿಬಿ ವಿರುದ್ಧ 13 ರನ್‌ಗಳನ್ನು ಗಳಿಸಿದರೆ ಐಪಿಎಲ್‌ನಲ್ಲಿ 1000 ರನ್‌ಗಳಿಸಿದ ಆಟಗಾರರ ಪಟ್ಟಿಗೆ ಸೇರಿಕೊಳ್ಳಲಿದ್ದಾರೆ.

Story first published: Sunday, April 18, 2021, 13:44 [IST]
Other articles published on Apr 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X