ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕ್‌ನ ಮೊಹಮ್ಮದ್ ಅಮೀರ್ ಅವರನ್ನು ಖರೀದಿಸಬಹುದಾದ 3 ಐಪಿಎಲ್ ತಂಡಗಳಿವು

IPL 2021 : 3 teams that can sign Mohammad Amir in the IPL

ಕಳೆದ ಡಿಸೆಂಬರ್ ಸಮಯದಲ್ಲಿ ಪಾಕಿಸ್ತಾನದ ಪ್ರಮುಖ ವೇಗಿ ಮೊಹಮ್ಮದ್ ಅಮಿರ್ ಅಂತಾರಾಷ್ಟ್ರೀಯ ಕ್ರಿಕೆಟ್‌‌ಗೆ ದಿಢೀರ್ ನಿವೃತ್ತಿ ಘೋಷಿಸುವುದರ ಮೂಲಕ ಎಲ್ಲರಲ್ಲಿಯೂ ಅಚ್ಚರಿಯನ್ನು ಮೂಡಿಸಿದ್ದರು. ಉತ್ತಮ ಪ್ರದರ್ಶನ ನೀಡುತ್ತಿದ್ದ ಸಮಯದಲ್ಲಿಯೇ ಮೊಹಮ್ಮದ್ ಅಮೀರ್ ಈ ರೀತಿಯ ನಿರ್ಧಾರವನ್ನು ಯಾಕೆ ಕೈಗೊಂಡರು ಎಂದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿಯೇ ಚರ್ಚೆಗಳು ನಡೆದಿದ್ದವು.

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕೋಟಿ ಕೋಟಿ ಪಡೆದು ಕಳಪೆ ಪ್ರದರ್ಶನ ನೀಡಿದ ಆಟಗಾರರು!ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕೋಟಿ ಕೋಟಿ ಪಡೆದು ಕಳಪೆ ಪ್ರದರ್ಶನ ನೀಡಿದ ಆಟಗಾರರು!

ಆದರೆ ಇದೀಗ ನಿವೃತ್ತಿ ಘೋಷಿಸಿದ ನಂತರ ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಮೊಹಮ್ಮದ್ ಅಮೀರ್ ಸಂದರ್ಶನವೊಂದರಲ್ಲಿ ಮಾತನಾಡಿದ್ದು ಮತ್ತೆ ಕ್ರಿಕೆಟ್ ಆಡುವ ಕುರಿತು ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಹೌದು ಮೊಹಮ್ಮದ್ ಅಮಿರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದಾಗ ಅವರ ವಯಸ್ಸು ಕೇವಲ 28. ಹೀಗಾಗಿ ಇನ್ನೂ ಐದಾರು ವರ್ಷಗಳ ಕಾಲ ಕ್ರಿಕೆಟ್ ಆಡುವ ಆಸೆಯನ್ನು ಮೊಹಮ್ಮದ್ ಅಮೀರ್ ವ್ಯಕ್ತಪಡಿಸಿದ್ದಾರೆ.

ಮಾಜಿ ಕ್ರಿಕೆಟರ್ ತಾಯಿಯ ಚಿಕಿತ್ಸೆಗೆ ಹಣದ ಕೊರತೆ ಎಂದ ಕೂಡಲೇ ನೆರವಿಗೆ ಧಾವಿಸಿದ ಕೊಹ್ಲಿಮಾಜಿ ಕ್ರಿಕೆಟರ್ ತಾಯಿಯ ಚಿಕಿತ್ಸೆಗೆ ಹಣದ ಕೊರತೆ ಎಂದ ಕೂಡಲೇ ನೆರವಿಗೆ ಧಾವಿಸಿದ ಕೊಹ್ಲಿ

ಸದ್ಯ ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಮೊಹಮ್ಮದ್ ಅಮೀರ್ ಬ್ರಿಟನ್ ಪೌರತ್ವವನ್ನು ಪಡೆದುಕೊಂಡು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆಡುವ ಅವಕಾಶವನ್ನು ಪಡೆದುಕೊಳ್ಳಬಹುದಾಗಿದೆ. ಈ ಕುರಿತು ಸಂದರ್ಶನದಲ್ಲಿ ಮಾತನಾಡಿದ ಅಮೀರ್ ಇನ್ನೂ ಐದಾರು ವರ್ಷಗಳ ಕಾಲ ಕ್ರಿಕೆಟ್ ಆಡುವ ಆಸೆಯನ್ನು ವ್ಯಕ್ತಪಡಿಸಿದ್ದು ಮುಂದಿನ ದಿನಗಳಲ್ಲಿ ಐಪಿಎಲ್ ಆಡುವ ಅವಕಾಶ ಬಂದರೆ ಯೋಚಿಸುತ್ತೇನೆ ಎಂದಿದ್ದಾರೆ.

ಭಾರತದಲ್ಲಿ ಟಿ20 ವಿಶ್ವಕಪ್?, ಇಂಗ್ಲೆಂಡ್‌ನಲ್ಲಿ ಐಪಿಎಲ್ ನಡೆಯಲಿದೆಯಾ?ಭಾರತದಲ್ಲಿ ಟಿ20 ವಿಶ್ವಕಪ್?, ಇಂಗ್ಲೆಂಡ್‌ನಲ್ಲಿ ಐಪಿಎಲ್ ನಡೆಯಲಿದೆಯಾ?

ಸದ್ಯ ಮೊಹಮ್ಮದ್ ಅಮೀರ್ ಐಪಿಎಲ್ ಆಡುವ ಅವಕಾಶ ಪಡೆದುಕೊಳ್ಳುವ ಕುರಿತು ಚರ್ಚೆಗಳು ಹೆಚ್ಚಾಗಿದ್ದು ಒಂದುವೇಳೆ ಬ್ರಿಟನ್ ಪೌರತ್ವದೊಂದಿಗೆ ಅಮೀರ್ ಐಪಿಎಲ್ ಆಡಲು ಮುಂದಾದರೆ ಯಾವ ತಂಡಗಳು ಅವರನ್ನು ಖರೀದಿಸುವ ಸಂಭವವಿದೆ ಎಂಬುದು ಮುಂದೆ ಇದೆ ನೋಡಿ

1. ಪಂಜಾಬ್ ಕಿಂಗ್ಸ್

1. ಪಂಜಾಬ್ ಕಿಂಗ್ಸ್

ಪಂಜಾಬ್ ಕಿಂಗ್ಸ್ ಮೊಹಮ್ಮದ್ ಶಮಿಯಂತಹ ಅತ್ಯುತ್ತಮ ವೇಗಿಯನ್ನು ತಂಡದಲ್ಲಿ ಹೊಂದಿದ್ದರೂ ಸಹ ಮತ್ತೋರ್ವ ವೇಗಿಯ ಅವಶ್ಯಕತೆ ಇದೆ. ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಜೇ ರಿಚರ್ಡ್ಸನ್ ಹಾಗೂ ರಿಲೇ ಮೆರೆಡಿತ್ ಇದ್ದರೂ ಸಹ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಲಿಲ್ಲ. ಹೀಗಾಗಿ ಮೊಹಮ್ಮದ್ ಅಮೀರ್ ಅವರನ್ನು ಪಂಜಾಬ್ ಕಿಂಗ್ಸ್ ತಂಡ ಖರೀದಿಸಬಹುದಾಗಿದೆ.

2. ರಾಯಲ್ ಚಾಲೆಂಜರ್ಸ್ ಬೆಂಗಳೂರು

2. ರಾಯಲ್ ಚಾಲೆಂಜರ್ಸ್ ಬೆಂಗಳೂರು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಅಂತಿಮ ಓವರ್‌ಗಳಲ್ಲಿ ಮೊಹಮ್ಮದ್ ಸಿರಾಜ್ ಈಗಾಗಲೇ ಉತ್ತಮ ಪ್ರದರ್ಶನ ನೀಡಿದ್ದಾರೆ. ಸಿರಾಜ್ ಹೊರತುಪಡಿಸಿ ಬೆಂಗಳೂರು ತಂಡದ ಪರ ಡೆತ್ ಓವರ್‌ಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡುವ ಮತ್ತೋರ್ವ ವೇಗಿ ಇಲ್ಲ. ಪ್ರಸ್ತುತ ಟೂರ್ನಿಯಲ್ಲಿ ಕೈಲ್ ಜೇಮಿಸನ್ ತಂಡದಲ್ಲಿದ್ದರೂ ಸಹ ಪ್ರಭಾವ ಬೀರುವಂತಹ ಬೌಲಿಂಗ್ ಪ್ರದರ್ಶನವನ್ನೇನೂ ನೀಡಲಿಲ್ಲ. ಹೀಗಾಗಿ ಒಂದುವೇಳೆ ಮೊಹಮ್ಮದ್ ಅಮೀರ್ ಐಪಿಎಲ್ ಆಡಲು ಮುಂದಾದರೆ ಬೆಂಗಳೂರು ತಂಡ ಅವರನ್ನು ಖರೀದಿಸಬಹುದು.

3. ಕೊಲ್ಕತ್ತಾ ನೈಟ್ ರೈಡರ್ಸ್

3. ಕೊಲ್ಕತ್ತಾ ನೈಟ್ ರೈಡರ್ಸ್

ಪ್ರಸ್ತುತ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಕೊಲ್ಕತಾ ನೈಟ್ ರೈಡರ್ಸ್ ತಂಡ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗದಲ್ಲಿಯೂ ಸಹ ಉತ್ತಮ ತಂಡವಾಗಿದ್ದು ಆಟಗಾರರಿಂದ ಒಳ್ಳೆಯ ಪ್ರದರ್ಶನ ಬರಲಿದೆ ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಟೂರ್ನಿ ಆರಂಭವಾದ ನಂತರ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗದಲ್ಲಿಯೂ ತಂಡ ಮುಗ್ಗರಿಸಿದೆ. ಪ್ಯಾಟ್ ಕಮಿನ್ಸ್ ಕೊಲ್ಕತ್ತಾ ಪರ ಉತ್ತಮ ಬೌಲಿಂಗ್ ಪ್ರದರ್ಶನವನ್ನು ಮಾಡಿದ್ದು ಬಿಟ್ಟರೆ ಬೇರೆ ಯಾವುದೇ ಬೌಲರ್ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಲಿಲ್ಲ. ಹೀಗಾಗಿ ಮುಂಬರುವ ದಿನಗಳಲ್ಲಿ ಮೊಹಮ್ಮದ್ ಅಮೀರ್ ಐಪಿಎಲ್ ಆಡಲು ಮುಂದಾದರೆ ಕೊಲ್ಕತ್ತಾ ತಂಡ ಅವರನ್ನು ಖರೀದಿಸಬಹುದು.

Story first published: Wednesday, May 19, 2021, 19:21 [IST]
Other articles published on May 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X