ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಹರಾಜಿನಲ್ಲಿ ಸ್ಟೀವ್ ಸ್ಮಿತ್ ಮೇಲೆ ಕಣ್ಣಿಟ್ಟಿದೆ ಈ ಮೂರು ತಂಡಗಳು

IPL 2021: 3 Teams Who Can Pick Steve Smith Ahead Of Auction

ಐಪಿಎಲ್ 14ನೇ ಆವೃತ್ತಿಯ ಮಿನಿ ಹರಾಜು ಫೆಬ್ರವರಿ ತಿಂಗಳಿನಲ್ಲಿ ನಡೆಯಲಿದೆ. ಹರಾಜು ದಿನಾಂಕ ಇನ್ನೂ ಖಚಿತವಾಗಿಲ್ಲದಿದ್ದರೂ ಮೊದಲ ಎರಡು ವಾರಗಳಲ್ಲಿ ನಡೆಯವುದು ಬಹುತೇಕ ಪಕ್ಕಾ ಆಗಿದೆ. ಈಗಾಗಲೇ ಹರಾಜು ವಿಚಾರವಾಗಿ ಪೂರಕ ಪ್ರಕ್ರಿಯೆಗಳು ನಡೆಯುತ್ತಿದ್ದು ಎಲ್ಲಾ ತಂಡಗಳು ಹರಾಜಿಗೆ ಬಿಡುಗಡೆಗೊಳಿಸುವ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ಈ ಪಟ್ಟಿಯಲ್ಲಿ ಅಚ್ಚರಿಯೆಂಬಂತೆ ರಾಜಸ್ಥಾನ್ ರಾಯಲ್ಸ್ ತನ್ನ ನಾಯಕನನ್ನೇ ತಂಡದಿಂದ ಕೈಬಿಟ್ಟಿದೆ. ರಾಜಸ್ಥಾನ್ ರಾಯಲ್ಸ್ ತಂಡದ ನಾಯಕತ್ವವನ್ನು ಮಹಿಸಿ ಕಳೆದ ಆವೃತ್ತಿಯಲ್ಲಿ ಮುನ್ನಡೆಸಿದ್ದ ಸ್ಟೀವ್ ಸ್ಮಿತ್ ಈ ಬಾರಿ ಹರಾಜಿಗೆ ಒಳಗಾಗಲಿದ್ದಾರೆ. ಹಾಗಾಗಿ ಸ್ಟೀವ್ ಸ್ಮಿತ್ ಅವರನ್ನು ಯಾವ ತಂಡ ಖರೀದಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

ಐಪಿಎಲ್ 2021: ತಂಡದಿಂದ ಸ್ಟೀವ್ ಸ್ಮಿತ್ ಕೈಬಿಟ್ಟ ರಾಜಸ್ಥಾನ್ ರಾಯಲ್ಸ್ಐಪಿಎಲ್ 2021: ತಂಡದಿಂದ ಸ್ಟೀವ್ ಸ್ಮಿತ್ ಕೈಬಿಟ್ಟ ರಾಜಸ್ಥಾನ್ ರಾಯಲ್ಸ್

ಹಾಗಾದರೆ ಸ್ಟೀವ್ ಸ್ಮಿತ್ ಅವರನ್ನು ಯಾವ ತಂಡ ಖರೀದಿಸುವ ಸಾಧ್ಯತೆಯಿದೆ? ಸ್ಟೀವ್ ಸ್ಮಿತ್ ಅವರನ್ನು ತೆಕ್ಕೆಗೆ ಹಾಕಿಕೊಳ್ಳಲು ಕಾದಿರುವ ತಂಡಗಳು ಯಾವುದು ಮುಂದೆ ಓದಿ..

ಚೆನ್ನೈ ಸೂಪರ್ ಕಿಂಗ್ಸ್

ಚೆನ್ನೈ ಸೂಪರ್ ಕಿಂಗ್ಸ್

ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನವನ್ನು ನೀಡಿರುವುದು ಎಲ್ಲರಿಗೂ ತಿಳಿದಿದೆ. ಹಾಗಾಗಿ ಈ ಬಾರಿಯ ತಂಡದಲಲ್ಇ ಅನೇಕ ಬದಲಾವಣೆ ಮಾಡಿಕೊಳ್ಳಲು ಮೂಮದಾಗಿದೆ ಚೆನ್ನೈ ಮ್ಯಾನೇಜ್‌ಮೆಂಟ್. ಅದರಲ್ಲೂ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಸ್ಟೀವ್ ಸ್ಮಿತ್ ನಿವೃತ್ತಿಯನ್ನು ಘೋಷಿಸಿರುವುದರಿಂದ ವಿದೇಶಿ ಆಟಗಾರನ ಕೋಟಾದಲ್ಲಿ ಸ್ಟೀವ್ ಸ್ಮಿತ್ ಅವರನ್ನು ಸೇರಿಸಿಕೊಳ್ಳಲು ಸಿಎಸ್‌ಕೆ ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ. ಸುರೇಶ್ ರೈನಾ ತಂಡದಲ್ಲಿ ಉಳಿದುಕೊಂಡಿರುವುದು ತಂಡದ ಬ್ಯಾಟಿಂಗ್ ಸಾಮರ್ಥ್ಯ ಹೆಚ್ಚಿಸಿದೆ. ಸ್ಮಿತ್ ಕೂಡ ಕೂಡಿಕೊಲ್ಳುವ ಮೂಲಕ ಮತ್ತಷ್ಟು ಬಲಾಢ್ಯಗೊಳಿಸುವ ಪ್ರಯತ್ನವನ್ನು ಸಿಎಸ್‌ಕೆ ಮಾಡುವ ಸಾಧ್ಯತೆಯಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು

ರಾಯಲ್ ಚಾಲೆಂಜರ್ಸ್ ಬೆಂಗಳೂರು

ಕಳೆದ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಅದಕ್ಕೂ ಹಿಂದಿನ ಆವೃತ್ತಿಗೆ ಹೋಲಿಸಿದರೆ ಕೆಲ ಹೊಸ ಸೇರ್ಪಡೆಗಳೊಂದಿಗೆ ಉತ್ತಮ ಪ್ರದರ್ಶನವನ್ನು ನೀಡಿ ಪ್ಲೇಆಫ್‌ ಹಂತಕ್ಕೆ ಪ್ರವೇಶವನ್ನು ಪಡೆದುಕೊಂಡಿತ್ತು. ಸುದೀರ್ಘ ಕಾಲದಿಂದ ಆರ್‌ಸಿಬಿಯ ಬ್ಯಾಟಿಂಗ್ ಬಲವಾಗಿರುವ ವಿರಾಟ್ ಕೊಹ್ಲಿಗೆ ಸ್ಟೀವ್ ಸ್ಮಿತ್ ತಂಡವನ್ನು ಸೇರಿಕೊಲ್ಳುವ ಮೂಲಕ ಮಧ್ಯಮ ಕ್ರಾಂಕದಲ್ಲಿ ಮತ್ತಷ್ಟು ಸಾಮರ್ಥ್ಯ ದೊರೆಯುವ ಸಾಧ್ಯತೆಯಿದೆ. ಆಸ್ಟ್ರೇಲಿಯಾದವರೇ ಆದ ಆರೋನ್ ಫಿಂಚ್ ಅವರನ್ನು ಆರ್‌ಸಿಬಿ ಕೈಬಿಟ್ಟಿರುವುದು ಸ್ಟೀವ್ ಸ್ಮಿತ್ ಅವರನ್ನು ಸೇರಿಸಿಕೊಳ್ಳಲು ಉತ್ತಮ ವೇದಿಕೆ ಸಿಕ್ಕಂತಾಗಿದೆ ಎಂಬ ಮಾತುಗಳು ಕೇಳಿ ಬಂದಿದೆ.

ಡೆಲ್ಲಿ ಕ್ಯಾಪಿಟಲ್ಸ್

ಡೆಲ್ಲಿ ಕ್ಯಾಪಿಟಲ್ಸ್

ಡೆಲ್ಲಿ ಮೂಲದ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ ಕಳೆದ ಆವೃತ್ತಿಯಲ್ಲಿ ಅದ್ಭುತವಾದ ಪ್ರದರ್ಶನವನ್ನು ನೀಡಿ ಫೈನಲ್ ಪ್ರವೇಶ ಮಾಡಿತ್ತು. ಆದರೆ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸಲು ವಿಫಲವಾಗಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಡೆಲ್ಲಿ ತಂಡ ಆಸ್ಟ್ರೇಲಿಯಾದವರೇ ಆದ ಅಲೆಕ್ಸ್ ಕ್ಯಾರಿಅವರನ್ನು ತಂಡದಿಂದ ಬಿಡುಗಡೆಗೊಳಿಸಿದೆ. ಹೀಗಾಗಿ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುವ ವಿದೇಶಿ ಆಟಗಾರನ ಸ್ಥಾನ ಖಾಲಿಯಿದೆ. ಹೀಗಾಗಿ ಸ್ಟೀವ್ ಸ್ಮಿತ್ ಅವರನ್ನು ಡೆಲ್ಲಿ ತಂಡ ಸೇರಿಸಿಕೊಲ್ಳಲು ಬಯಸಿದರೆ ಸಮಯೋಚಿತವಾಗಿ ಆಡಬಲ್ಲ ಸಾಮರ್ಥ್ಯವನ್ನು ಹೊಂದಿರುವ ಕಾರಣ ಉತ್ತಮ ಆಯ್ಕೆಯಾಗಬಲ್ಲರು.

ಐಪಿಎಲ್‌ನಲ್ಲಿ ಸ್ಟೀವ್ ಸ್ಮಿತ್

ಐಪಿಎಲ್‌ನಲ್ಲಿ ಸ್ಟೀವ್ ಸ್ಮಿತ್

2012 ರಿಂದ ಸ್ಟೀವ್ ಸ್ಮಿತ್ ಐಪಿಎಲ್‌ನಲ್ಲಿ ಪಾಳ್ಗೊಳ್ಳುತ್ತಿದ್ದಾರೆ. ಈವರೆಗೆ ಐಪಿಎಲ್‌ನಲ್ಲಿ ಸ್ಮಿತ್ 95 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 2333 ರನ್‌ಗಳನ್ನು ಬಾರಿಸಿದ್ದಾರೆ. 35.34ರ ಸರಾಸರಿಯನ್ನು ಹೊಂದಿದ್ದು 129.25ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. ಕಳೆದ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರವಾಗಿ 14 ಪಂದ್ಯಗಳಲ್ಲಿ ಕಣಕ್ಕಿಳಿದ ಸ್ಮಿತ್ 311 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.

Story first published: Friday, January 22, 2021, 13:48 [IST]
Other articles published on Jan 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X