ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕೋಟಿ ಕೋಟಿ ಪಡೆದು ಕಳಪೆ ಪ್ರದರ್ಶನ ನೀಡಿದ ಆಟಗಾರರು!

 IPL 2021 : 5 million dollar babies who failed to perform well in the season

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಧ್ಯದಲ್ಲಿಯೇ ಮೊಟಕುಗೊಂಡಿದೆ. ಟೂರ್ನಿಯಲ್ಲಿ ಇದುವರೆಗೂ 29 ಪಂದ್ಯಗಳು ಯಶಸ್ವಿಯಾಗಿ ನಡೆದಿದ್ದು ಕೆಲ ಆಟಗಾರರಲ್ಲಿ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡ ಕಾರಣ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಮುಂದೂಡಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ಉಳಿದ 31 ಪಂದ್ಯಗಳು ಇಂಗ್ಲೆಂಡ್ ಅಥವಾ ಯುಎಇಯಲ್ಲಿ ನಡೆಯಲಿವೆ ಎಂಬ ಸುದ್ದಿ ಹರಿದಾಡುತ್ತಿದೆ.

ಐಪಿಎಲ್ : ಅತಿಹೆಚ್ಚು ಪಂದ್ಯಗಳಲ್ಲಿ ಅಜೇಯನಾಗಿ ಉಳಿದಿರುವ ಆಟಗಾರ ಯಾರು ಗೊತ್ತಾ?ಐಪಿಎಲ್ : ಅತಿಹೆಚ್ಚು ಪಂದ್ಯಗಳಲ್ಲಿ ಅಜೇಯನಾಗಿ ಉಳಿದಿರುವ ಆಟಗಾರ ಯಾರು ಗೊತ್ತಾ?

ಐಪಿಎಲ್ ನಿಲುಗಡೆಗೊಂಡ ವೇಳೆಗೆ 29 ಪಂದ್ಯಗಳು ಯಶಸ್ವಿಯಾಗಿ ಮುಗಿದಿದ್ದು ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಅಂಕಪಟ್ಟಿಯಲ್ಲಿ ಟಾಪ್ 4 ಸ್ಥಾನಗಳನ್ನು ಪಡೆದುಕೊಂಡು ಉತ್ತಮ ಸ್ಥಿತಿಯಲ್ಲಿವೆ. ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಯಶಸ್ಸಿನ ಹಾದಿಗೆ ಮರಳಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಪ್ರಸ್ತುತ ಸರಣಿಯ ಮೊದಲ 4 ಪಂದ್ಯಗಳಲ್ಲಿ ಸತತವಾಗಿ ಜಯಗಳಿಸುವುದರ ಮೂಲಕ ಅತ್ಯದ್ಭುತ ಆರಂಭವನ್ನು ಪಡೆದುಕೊಂಡು ಮಿಂಚಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಉತ್ತಮ ಪ್ರದರ್ಶನವನ್ನು ನೀಡಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿಕೊಂಡಿದೆ. ಇನ್ನು ತಂಡಗಳನ್ನು ಹೊರತುಪಡಿಸಿ ವೈಯಕ್ತಿಕವಾಗಿ ಅನ್‌ಕ್ಯಾಪ್ಡ್ ಆಟಗಾರರೇ ಅಂತಾರಾಷ್ಟ್ರೀಯ ಆಟಗಾರರಿಗಿಂತ ಉತ್ತಮ ಪ್ರದರ್ಶನವನ್ನು ನೀಡಿದರು ಎಂದು ಹೇಳಬಹುದು.

ಐಪಿಎಲ್ : ಈ ವಿಶೇಷ ದಾಖಲೆಯಲ್ಲಿ ಎಬಿಡಿ - ಪೊಲಾರ್ಡ್ ನಡುವೆ ಭಾರೀ ಪೈಪೋಟಿಐಪಿಎಲ್ : ಈ ವಿಶೇಷ ದಾಖಲೆಯಲ್ಲಿ ಎಬಿಡಿ - ಪೊಲಾರ್ಡ್ ನಡುವೆ ಭಾರೀ ಪೈಪೋಟಿ

ಹೌದು ಕಡಿಮೆ ಮೊತ್ತಕ್ಕೆ ಖರೀದಿಸಲ್ಪಟ್ಟ ಆಟಗಾರರೇ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಹೆಚ್ಚಾಗಿ ಮಿಂಚಿದರು. ಕೋಟಿ ಕೋಟಿ ಪಡೆದ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಕ್ರಿಸ್ ಮೊರಿಸ್ ಹೊರತುಪಡಿಸಿ ಬೇರಾವ ಆಟಗಾರರೂ ಸಹ ಹೇಳಿಕೊಳ್ಳುವಂತಹ ದೊಡ್ಡ ಪ್ರದರ್ಶನವನ್ನೇನೂ ನೀಡಲಿಲ್ಲ ಎಂದೇ ಹೇಳಬಹುದು. ಹೀಗೆ ಕೋಟಿಕೋಟಿ ಪಡೆದು ನೆಲಕಚ್ಚಿದ ಆಟಗಾರರ ಪಟ್ಟಿ ಮುಂದೆ ಇದೆ ನೋಡಿ..

1. ಜೇ ರಿಚರ್ಡ್ಸನ್ : ಪಂಜಾಬ್ ಕಿಂಗ್ಸ್ (14 ಕೋಟಿ)

1. ಜೇ ರಿಚರ್ಡ್ಸನ್ : ಪಂಜಾಬ್ ಕಿಂಗ್ಸ್ (14 ಕೋಟಿ)

ಪಂಜಾಬ್ ಕಿಂಗ್ಸ್ ತಂಡದ ಬೌಲಿಂಗ್ ವಿಭಾಗವನ್ನು ಬಲಪಡಿಸಲು ಜೇ ರಿಚರ್ಡ್ಸನ್ ಅವರನ್ನು ಬರೋಬ್ಬರಿ 14 ಕೋಟಿ ರೂಪಾಯಿಗಳಿಗೆ ಖರೀದಿಸಲಾಯಿತು. ಆದರೆ ಪ್ರಸ್ತುತ ಟೂರ್ನಿಯಲ್ಲಿ 3 ಪಂದ್ಯಗಳನ್ನಾಡಿದ ರಿಚರ್ಡ್ಸನ್ ಕೇವಲ 3 ವಿಕೆಟ್‍ಗಳನ್ನು ಮಾತ್ರ ಪಡೆದು ಕಳಪೆ ಪ್ರದರ್ಶನ ನೀಡಿದ್ದಾರೆ.

2. ಟಾಮ್ ಕರನ್ : ಡೆಲ್ಲಿ ಕ್ಯಾಪಿಟಲ್ಸ್ ( 5.25 ಕೋಟಿ )

2. ಟಾಮ್ ಕರನ್ : ಡೆಲ್ಲಿ ಕ್ಯಾಪಿಟಲ್ಸ್ ( 5.25 ಕೋಟಿ )

ಇಂಗ್ಲೆಂಡ್ ವೇಗಿ ಟಾಮ್ ಕರನ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 5.25 ಕೋಟಿ ರೂಪಾಯಿಗಳನ್ನು ನೀಡಿ ಖರೀದಿಸಿತ್ತು ಆದರೆ ಟಾಮ್ ಕರನ್ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ 2 ಪಂದ್ಯಗಳನ್ನಾಡಿ ಕೇವಲ ಒಂದೇ ಒಂದು ವಿಕೆಟ್ ಪಡೆಯಲಷ್ಟೇ ಶಕ್ತವಾದರು. ತದನಂತರ ಟಾಮ್ ಕರನ್ ಅವರಿಗೆ ಹೆಚ್ಚಿನ ಪಂದ್ಯಗಳಲ್ಲಿ ಆಡಲು ಅವಕಾಶವನ್ನೇ ನೀಡಲಿಲ್ಲ. ಟಾಮ್ ಕರನ್ ಅವರಿಗಿಂತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದ ಅನ್‌ಕ್ಯಾಪ್ಡ್ ಬೌಲರ್ ಅವೇಶ್ ಖಾನ್ 8 ಪಂದ್ಯಗಳನ್ನಾಡಿ 14 ವಿಕೆಟ್ ಪಡೆದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಮಿಂಚಿದರು. ಡೆಲ್ಲಿ ಕ್ಯಾಪಿಟಲ್ಸ್ ಅವೇಶ್ ಖಾನ್ ಅವರನ್ನು 70 ಲಕ್ಷಕ್ಕೆ ಖರೀದಿಸಿತ್ತು.

3. ರಿಲೇ ಮೆರೆಡಿತ್ : ಪಂಜಾಬ್ ಕಿಂಗ್ಸ್ ( 8 ಕೋಟಿ )

3. ರಿಲೇ ಮೆರೆಡಿತ್ : ಪಂಜಾಬ್ ಕಿಂಗ್ಸ್ ( 8 ಕೋಟಿ )

ರಿಲೇ ಮೆರೆಡಿತ್ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಮತ್ತೊಬ್ಬ ಬೌಲರ್. ಆಸ್ಟ್ರೇಲಿಯಾದ ಈ ಅನ್‌ಕ್ಯಾಪ್ಡ್ ಆಟಗಾರನನ್ನು ಪಂಜಾಬ್ ಕಿಂಗ್ಸ್ ತಂಡ 8 ಕೋಟಿಗೆ ಖರೀದಿಸಿತ್ತು. ಆದರೆ ಮೆರೆಡಿತ್ 5 ಪಂದ್ಯಗಳನ್ನಾಡಿ ಗಳಿಸಿದ್ದು ಕೇವಲ 4 ವಿಕೆಟ್‍ಗಳು.

4. ಶಿವಮ್ ದುಬೆ : ರಾಜಸ್ಥಾನ್ ರಾಯಲ್ಸ್ ( 4.4 ಕೋಟಿ )

4. ಶಿವಮ್ ದುಬೆ : ರಾಜಸ್ಥಾನ್ ರಾಯಲ್ಸ್ ( 4.4 ಕೋಟಿ )

ರಾಜಸ್ಥಾನ್ ರಾಯಲ್ಸ್ ತಂಡದ ಆಲ್‌ರೌಂಡರ್ ಶಿವಮ್ ದುಬೆ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ 6 ಪಂದ್ಯಗಳನ್ನಾಡಿ 145 ರನ್ ಗಳಿಸಿದರು, ಆದರೆ ದುಬೆಗೆ ಬೌಲಿಂಗ್ ಮಾಡುವ ಅವಕಾಶವೇ ಸಿಗಲಿಲ್ಲ. ರಾಜಸ್ಥಾನ್ ರಾಯಲ್ಸ್ ತಂಡದ ಪರ ದುಬೆ ಟೂರ್ನಿಯಲ್ಲಿ 145 ರನ್ ಗಳಿಸಿದರೂ ಕೂಡ ತಂಡಕ್ಕೆ ಅಗತ್ಯವಿದ್ದ ಸಂದರ್ಭದಲ್ಲಿ ಉತ್ತಮ ಬ್ಯಾಟಿಂಗ್ ಮಾಡುವಲ್ಲಿ ವಿಫಲರಾದರು.

5. ಕೈಲ್ ಜೆಮಿಸನ್ : ರಾಯಲ್ ಚಾಲೆಂಜರ್ಸ್ ಬೆಂಗಳೂರು ( 15 ಕೋಟಿ )

5. ಕೈಲ್ ಜೆಮಿಸನ್ : ರಾಯಲ್ ಚಾಲೆಂಜರ್ಸ್ ಬೆಂಗಳೂರು ( 15 ಕೋಟಿ )

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅತಿ ದುಬಾರಿ ಆಟಗಾರ ಕೈಲ್ ಜೆಮಿಸನ್ ಪ್ರಸ್ತುತ ಟೂರ್ನಿಯಲ್ಲಿ 7 ಪಂದ್ಯಗಳನ್ನಾಡಿ 9 ವಿಕೆಟ್ ಪಡೆದು ಸಾಧಾರಣವಾದ ಪ್ರದರ್ಶನವನ್ನು ನೀಡಿದರು. 15 ಕೋಟಿಗೆ ತಕ್ಕಂತ ಪ್ರದರ್ಶನವನ್ನೇನೂ ಜೆಮಿಸನ್ ನೀಡಲಿಲ್ಲ. ಇತ್ತ ಬೆಂಗಳೂರು ತಂಡದ ಅನ್‌ಕ್ಯಾಪ್ಡ್ ಬೌಲರ್ ಹರ್ಷಲ್ ಪಟೇಲ್ ಕೇವಲ 20 ಲಕ್ಷ ಪಡೆದು ಜೆಮಿಸನ್ ಆಡಿದ್ದಷ್ಟೇ ಪಂದ್ಯಗಳನ್ನಾಡಿ 17 ವಿಕೆಟ್ ಪಡೆದು ಮಿಂಚಿದರು.

Story first published: Wednesday, May 19, 2021, 15:55 [IST]
Other articles published on May 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X