ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಮಿನಿ ಹರಾಜಿನಲ್ಲಿ ದೊಡ್ಡ ಮೊತ್ತ ಪಡೆಯಲಿದ್ದಾರೆ ಈ 5 ಆಟಗಾರರು

IPL 2021: 5 players who could get big bids in Upcoming mini auction

14ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ಕೆಲವೇ ತಿಂಗಳು ಬಾಕಿಯಿದೆ. ಆದರೆ ಅದಕ್ಕೂ ಮುನ್ನ ನಡೆಯಲಿರುವ ಮಿನಿ ಹರಾಜು ಈಗ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಫೆಬ್ರವರಿ 18ರಂದು ಐಪಿಎಲ್ 14ನೇ ಆವೃತ್ತಿಯ ಮಿನಿ ಹರಾಜು ನಡೆಯಲಿದ್ದು ಯಾವ ಆಟಗಾರರು ಯಾವ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬುದು ಸ್ಪಷ್ಟವಾಗಲಿದೆ.

ಐಪಿಎಲ್‌ನ ಎಲ್ಲಾ 8 ಫ್ರಾಂಚೈಸಿಗಳು ತಂಡದಿಂದ ಬಿಡುಗಡೆಯಾಗುವ ಆಟಗಾರರನ್ನು ಹೆಸರಿಸಿದ್ದು ಹರಾಜಿನಲ್ಲಿ ಪಾಲ್ಗೊಳ್ಳುವ ಆಟಗಾರರ ಪಟ್ಟಿಯ ಮೊದಲ ಚಿತ್ರಣ ದೊರೆತಿದೆ. ಹೀಗಾಗಿ ಯಾವ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂಬ ಕುರಿತು ಫ್ರಾಂಚೈಸಿಗಳು ಕೂಡ ಯೋಜನೆಗಳನ್ನು ರೂಪಿಸಿಕೊಳ್ಳುತ್ತಿದೆ. ಆಟಗಾರರ ಫಾರ್ಮ್ ಹಾಗೂ ಹಿಂದಿನ ಪ್ರದರ್ಶನದ ಆಧಾರದಲ್ಲಿ ಕೆಲ ಆಟಗಾರರಿಗೆ ಹೆಚ್ಚಿನ ಬೇಡಿಕೆಗಳೂ ಬರುವ ನಿರೀಕ್ಷೆಯಿದೆ.

ನ್ಯೂಜಿಲೆಂಡ್‌ ಕ್ರಿಕೆಟ್‌ನ 'ಸೂಪರ್‌ ಸ್ಮ್ಯಾಶ್' ಜೊತೆ ಡ್ರೀಮ್11 ಒಪ್ಪಂದನ್ಯೂಜಿಲೆಂಡ್‌ ಕ್ರಿಕೆಟ್‌ನ 'ಸೂಪರ್‌ ಸ್ಮ್ಯಾಶ್' ಜೊತೆ ಡ್ರೀಮ್11 ಒಪ್ಪಂದ

ಹೀಗಾಗಿ ಯಾವ ಆಟಗಾರರು ಈ ಬಾರಿಯ ಐಪಿಎಲ್ ಮಿನಿ ಹರಾಜುನಲ್ಲಿ ಹೆಚ್ಚಿನ ಮೊತ್ತಕ್ಕೆ ಬಿಕರಿಯಾಗಬಹುದು ಎಂಬ ಕುತೂಹಲ ಎಲ್ಲರಲ್ಲಿದೆ. ಈ ಬಾರಿಯ ಐಪಿಎಲ್‌ನಲ್ಲಿ ದೊಡ್ಡ ಮೊತ್ತಕ್ಕೆ ಹರಾಜಾಗುವ ಸಾಧ್ಯತೆಯಿರುವ ಐವರು ಆಟಗಾರರು ಯಾರು ಎಂಬುದನ್ನು ಮುಂದೆ ಓದಿ..

ಕ್ರಿಸ್ ಮೋರಿಸ್

ಕ್ರಿಸ್ ಮೋರಿಸ್

ದಕ್ಷಿಣ ಆಫ್ರಿಕಾದ ಅನುಭವಿ ಆಲ್‌ರೌಂಡರ್ ಕ್ರಿಸ್ ಮೋರಿಸ್ ಕಳೆದ ಬಾರಿಯ ಐಪಿಎಲ್ ಹರಾಜಿನಲ್ಲಿ 10 ಕೋಟಿ ಮೊತ್ತಕ್ಕೆ ಹರಾಜಾಗಿದ್ದರು. ಗಾಯದ ಸಮಸ್ಯೆಯ ಕಾರಣದಿಣದಾಗಿ ಆರ್‌ಸಿಬಿ ಪರವಾಗಿ ಮೊರಿಸ್ 9 ಪಂದ್ಯಗಳಲ್ಲಿ ಮಾತ್ರವೇ ಕಣಕ್ಕಿಳಿದಿದ್ದರು. ಬ್ಯಾಟ್‌ನಿಂದ ಆರ್‌ಸಿಬಿ ಪರವಾಗಿ ಮೋರಿಸ್ ಗಮನಾರ್ಹ ಪ್ರದರ್ಶನ ನೀಡದಿದ್ದರೂ ಬೌಲಿಂಗ್‌ನಲ್ಲಿ ಮಿಂಚಿದ್ದರು. 9 ಪಂದ್ಯಗಳಲ್ಲಿ 11 ವಿಕೆಟ್ ಪಡೆದಿದ್ದರು. ಅದು ಕೂಡ 6.63ರ ಸರಾಸರಿಯಲ್ಲಿ. ಹೀಗಾಗಿ ಕೆಲ ಫ್ರಾಂಚೈಸಿಗಳು ಈ ಆಟಗಾರನ ಮೇಲೆ ದೃಷ್ಟಿ ನೆಟ್ಟಿರುವುದರಲ್ಲಿ ಅನುಮಾನವಿಲ್ಲ.

ಸಂದೀಪ್ ಲ್ಯಾಮಿಚ್ಚನ್ನೆ

ಸಂದೀಪ್ ಲ್ಯಾಮಿಚ್ಚನ್ನೆ

ಕಳೆದ ಐಪಿಎಲ್ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದು ಬೆಂಚ್ ಬಿಸಿ ಮಾಡಿದ್ದ ಸಂದೀಪ್ ಲ್ಯಾಮಿಚ್ಚನ್ನೆ ಈ ಬಾರಿ ತಂಡದಿಂದ ಬಿಡುಗಡೆಗೊಂಡಿದ್ದಾರೆ. ಆದರೆ ಟಿ20 ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬೌಲರ್ ಎನಿಸಿರುವ ನೇಪಾಳ ಮೂಲದ ಈ ಆಟಗಾರ ಬಿಗ್‌ಬ್ಯಾಶ್ ಲೀಗ್ ಹಾಗೂ ಕೆರೆಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ. ಹೀಗಾಗಿ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಸಂದೀಒ್ ಲ್ಯಾಮಿಚ್ಚನ್ನೆ ಅತ್ಯುತ್ತಮ ಮೊತ್ತವನ್ನು ಪಡೆಯುವ ನಿರೀಕ್ಷೆಯಿದೆ.

ಮುಜೀಬ್ ಜಡ್ರಾನ್

ಮುಜೀಬ್ ಜಡ್ರಾನ್

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆಯಲಿ ವಿಫಲವಾದ ನಂತರ ಅಪ್ಘಾನಿಸ್ತಾನದ ಮುಜೀಬ್ ಜಡ್ರಾನ್ ಮುಂದಿನ ಹರಾಜಿಗಾಗಿ ತಂಡದಿಂದ ಬಿಡುಗಡೆಗೊಳಿಸಲಾಗಿದೆ. ರವಿ ಬಿಶ್ನೋಯ್ ಹಾಗೂ ಎಂ ಅಶ್ವಿನ್ ಅವರನ್ನು ಕಣಕ್ಕಿಳಿಸಿದ ಪಂಜಾಬ್ ಮುಜೀಬ್ ಅಬರನ್ನು ಆಡುವ ಬಳಗದಲ್ಲಿ ಸೇರಿಸಿಕೊಳ್ಳುವ ಆಸಕ್ತಿ ವಹಿಸಿರಲಿಲ್ಲ. ಆದರೆ ಟಿ20 ಕ್ರಿಕೆಟ್‌ಗೆ ಬೇಕಾದ ಉತ್ತಮ ಕೌಶಲ್ಯಗಳನ್ನು ಹೊಂದಿರುವ ಜಡ್ರಾನ್ ಕಳೆದ ಬಾರಿಯ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿ ಮಿಂಚಿಚದ್ದರು. ಹೀಗಾಗಿ ಕೆಲ ಫ್ರಾಂಚೈಸಿಗಳು ಮುಜೀಬ್ ಜಡ್ರಾನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಉತ್ಸಾಹ ತೋರುವ ಸಾಧ್ಯತೆಯಿದೆ.

ಕೆ ಗೌತಮ್

ಕೆ ಗೌತಮ್

ಕರ್ನಾಟಕ ಮೂಲದ ಈ ಆಲ್‌ರೌಂಡರ್ ಟಿ20ಗೆ ಹೇಳಿ ಮಾಡಿಸಿದ ಆಟಗಾರ. ಸ್ಪಿನ್ನರ್ ಆಗಿ ತಂಡಕ್ಕೆ ಉತ್ತಮ ಕೊಡುಗೆ ನೀಡಬಲ್ಲ ಸಾಮರ್ಥ್ಯದ ಜೊತೆಗೆ ಕೆಳ ಕ್ರಮಾಂಕದಲ್ಲಿ ಶಕ್ತಿಶಾಲಿ ಹೊಡೆತಗಳ ಮೂಲಕ ತಂಡಕ್ಕೆ ಕೊಡುಗೆ ನೀಡಬಲ್ಲವರಾಗಿದ್ದಾರೆ. ಆದರೆ ಕಳೆದ ಆವೃತ್ತಿಯಲ್ಲಿ ಪಂಜಾಬ್ ಪರವಾಗಿ 2 ಪಂದ್ಯಗಳನ್ನಷ್ಟೇ ಆಡಿದ್ದರು ಗೌತಮ್. ಆದರೆ ನಿರ್ಣಾಯಕ ಹಂತದಲ್ಲಿ ತಿರುಗಿ ಬೀಳುವ ಸಾಮರ್ಥ್ಯವನ್ನು ಹೊಂದಿರುವ ಕೆ ಗೌತಮ್ ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಮೊತ್ತವನ್ನು ಪಡೆಯುವ ನಿರೀಕ್ಷೆಯಿದೆ.

ಜೇಸನ್ ರಾಯ್‌

ಜೇಸನ್ ರಾಯ್‌

ಕಳೆದ ಬಾರಿಯ ಐಪಿಎಲ್ ಡೆಲ್ಲಿ ತಂಡವನ್ನು ಪ್ರತಿನಿಧಿಸಬೇಕಿದ್ದ ಜೇಸನ್ ರಾಯ್ ವೈಯಕ್ತಿಕ ಕಾರಣಗಳನ್ನು ನೀಡಿ ಟೂರ್ನಿಯಿಂದ ಹೊರಗುಳಿದಿದ್ದರು. ಹೀಗಾಘಿ ಈ ಬಾರಿಯ ಐಪಿಎಲ್‌ಗೆ ಮುನ್ನ ನಡೆಯುವ ಹರಾಜಿಗಾಗಿ ಜೇಸನ್ ರಾಯ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಬಿಡುಗಡೆಗೊಳಿಸಿದೆ. ಆದರೆ ಟಿ20 ಕ್ರಿಕೆಟ್‌ನಲ್ಲಿ ಅದ್ಭುತ ದಾಖಲೆಯನ್ನು ಹೊಂದಿರುವ ಜೇಸನ್ ರಾಯ್ ಮೇಲೆ ಎಲ್ಲಾ ಫ್ರಾಂಚೈಸಿಗಳು ಕೂಡ ಚಿತ್ತ ನೆಡಲಿದೆ. 140 ಕ್ಕಿಂತ ಅಧಿಕ ಸ್ಟ್ರೈಕ್‌ರೇಟನಲ್ಲಿ ಬ್ಯಾಟ್ ಬೀಸಿರುವ ರಾಯ್ ಉತ್ತಮ ಮೊತ್ತವನ್ನು ಪಡೆಯುವುದರಲ್ಲಿ ಅನುಮಾನವಿಲ್ಲ.

Story first published: Thursday, January 28, 2021, 17:22 [IST]
Other articles published on Jan 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X