ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಕನ್ನಡಿಗನನ್ನು ಕೈಬಿಟ್ಟ ಕೆಕೆಆರ್ ವಿರುದ್ಧ ಕಿಡಿಕಾರಿದ ಆಕಾಶ್ ಚೋಪ್ರ

IPL 2021: Aakash Chopra criticizes KKR decision for dropping Prasidh Krishna

ಐಪಿಎಲ್ 14ನೇ ಆವೃತ್ತಿಯ ಎರಡನೇ ಚರಣದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿಯೂ ಕೊಲ್ಕತ್ತಾ ನೈಟ್ ರೈಡರ್ಸ್ ಗೆಲುವು ಸಾಧಿಸಿ ಟೂರ್ನಿಯ ಅಗ್ರ ನಾಲ್ಕನೇ ತಂಡವಾಗಿ ಮುಂದುವರಿದಿದೆ. ಹೀಗಾಗಿ ಪ್ಲೇಆಫ್‌ನ ಸ್ಪರ್ಧೆಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಈಗ ಮುಂದಿದೆ. ಹಾಗಿದ್ರೂ ತಂಡದ ಮ್ಯಾನೇಜ್‌ಮೆಂಟ್‌ನ ಒಂದು ನಿರ್ಧಾರ ಮಾಹಜಿ ಕ್ರಿಕೆಟಿಗ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರರನ್ನು ಅಸಮಾಧಾನಗೊಳ್ಳುವಂತೆ ಮಾಡಿದೆ. ಮ್ಯಾನೇಜ್‌ಮೆಂಟ್ನ ಈ ನಿರ್ಧಾರ ಸರಿಯಲ್ಲ ಎಂದು ಚೋಪ್ರ ನೇರವಾಗಿಯೇ ವಿವರಿಸಿದ್ದಾರೆ.

ಆಕಾಶ್ ಚೋಪ್ರ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮ್ಯಾನೇಜ್‌ಮೆಂಟ್ ವಿರುದ್ಧ ಕಿಡಿಕಾರಲು ಕಾರಣವೂ ಇದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಯುವ ವೇಗಿ ಕನ್ನಡಿಗ ಪ್ರಸಿದ್ಧ್ ಕೃಷ್ಣರನ್ನು ಆಡುವ ಬಳಗದಿಂದ ಹೊರಗಿಟ್ಟಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಆಕಾಶ್ ಚೋಪ್ರಾ. ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಪ್ರಸಿದ್ಧ್ ಕೃಷ್ಣ ಡೆತ್ ಓವರ್‌ನ ಒಂದು ಕೆಟ್ಟ ಓವರ್‌ನ ಕಾರಣಕ್ಕೆ ಕೆಕೆಆರ್ ಮ್ಯಾನೇಜ್‌ಮೆಂಟ್ ಪ್ರಸಿದ್ಧ್ ಕೃಷ್ಣರನ್ನು ಹೊರಗಿಟ್ಟಿದ್ದು ಸರಿಯಲ್ಲ ಎಂದಿದ್ದಾರೆ.

ಐಪಿಎಲ್ 2021: ಮುಂಬೈ ಇಂಡಿಯನ್ಸ್ ಪರ ದಾಖಲೆ ಬರೆದ ಕೃನಾಲ್ ಪಾಂಡ್ಯಐಪಿಎಲ್ 2021: ಮುಂಬೈ ಇಂಡಿಯನ್ಸ್ ಪರ ದಾಖಲೆ ಬರೆದ ಕೃನಾಲ್ ಪಾಂಡ್ಯ

ಸಿಎಸ್‌ಕೆ ವಿರುದ್ಧದ ಒಂದು ಓವರ್‌ನಲ್ಲಿ ಎಡವಿದ್ದ ಪ್ರಸಿದ್ಧ್

ಸಿಎಸ್‌ಕೆ ವಿರುದ್ಧದ ಒಂದು ಓವರ್‌ನಲ್ಲಿ ಎಡವಿದ್ದ ಪ್ರಸಿದ್ಧ್

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಿತ್ತು. ಈ ಪಂದ್ಯದ ಕೊನೆಯ ಹಂತದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾ ಎರಡು ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸಿದ್ದರು. ಈ ಮೂಲಕ ಒಂದೇ ಓವರ್‌ನಲ್ಲಿ ಪ್ರಸಿದ್ಧ್ ಕೃಷ್ಣ ಎದುರಾಳಿಗೆ 22 ರನ್‌ಗಳನ್ನು ನೀಡಿದ್ದರು. ಇದರಿಮದಾಗಿ ಚೆನ್ನೈ ತಂಡದ ಗೆಲುವು ಸುಲಭವಾಗಿತ್ತು. ಈ ಪಂದ್ಯದ ನಂತರದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆಡುವ ಬಳಗದಿಂದ ಪ್ರಸಿದ್ಧ್ ಕೃಷ್ಣರನ್ನು ಹೊರಗಿಟ್ಟಿದ್ದು ಪ್ರಸಿದ್ಧ್ ಸ್ಥಾನದಲ್ಲಿ ಸಂದೀಪ್ ವಾರಿಯರ್‌ಗೆ ಅವಕಾಶವನ್ನು ನೀಡಿತ್ತು.

ಐಪಿಎಲ್ 2021: ಮೊದಲ ವಾರದ ಅತ್ಯುತ್ತಮ ತಂಡ ಪ್ರಕಟ; ಅತ್ಯುತ್ತಮ ನಾಯಕ ಧೋನಿಯಲ್ಲ!

ಮಾರ್ಗನ್ ವೈಫಲ್ಯ ಬೊಟ್ಟು ಮಾಡಿದ ಚೋಪ್ರ

ಮಾರ್ಗನ್ ವೈಫಲ್ಯ ಬೊಟ್ಟು ಮಾಡಿದ ಚೋಪ್ರ

ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಕೆಕೆಆರ್ ನಾಯಕ ಇಯಾನ್ ಮಾರ್ಗನ್ ನಾಯಕತ್ವದ ಬಗ್ಗೆ ಹಾಗೂ ಬ್ಯಾಟ್ಸ್‌ಮನ್ ಆಗಿ ಅನುಭವಿಸುತ್ತಿರುವ ವೈಫಲ್ಯದ ಬಗ್ಗೆ ಬೊಟ್ಟು ಮಾಡಿದ್ದಾರೆ. ಇಯಾನ್ ಮಾರ್ಗನ್ ನಾಯಕನಾಗಿ ಹಾಗೂ ಬ್ಯಾಟ್ಸ್‌ಮನ್ ಆಗಿ ಅನುಭವಿಸುತ್ತಿರುವ ವೈಫಲ್ಯದ ಬಗ್ಗೆ ಯಾರು ಕೂಡ ಮಾತನಾಡುತ್ತಿಲ್ಲ ಎಂದಿದ್ದಾರೆ ಆಕಾಶ್ ಚೋಪ್ರ. "ಪ್ರಸಿದ್ಧ್ ಕೃಷ್ಣ ಒಂದು ಕೆಟ್ ಓವರ್ ಎಸೆದಿದ್ದಾಗಿ ಆಡುವ ಬಳಗದಿಂದ ಹೊರಬಿದ್ದರು. ಆದರೆ ಆ ಓವರ್ ಎಸೆಯುವಂತೆ ಆತನಿಗೆ ಚೆಂಡನ್ನು ನೀಡಿದವರ ಬಗ್ಗೆ ಯಾರೂ ಏನೂ ಹೇಳುವುದಿಲ್ಲ, ಅವರು ರನ್‌ಗಳಿಸದಿದ್ದರೂ ಆತನ ಬಗ್ಗೆ ಯಾರೂ ಏನೂ ಮಾತನಾಡುವುದಿಲ್ಲ" ಎಂದಿದ್ದಾರೆ ಆಕಾಶ್ ಚೋಪ್ರ.

ಐಪಿಎಲ್ 2021: ಎಂಐಯ ಕ್ವಿಂಟನ್ ಡಿ ಕಾಕ್ ಹೆಸರಿಗೆ ವಿಶಿಷ್ಠ ದಾಖಲೆ

ಈ ನಿರ್ಧಾರವನ್ನು ಒಪ್ಪಲು ಸಾಧ್ಯವಿಲ್ಲ

ಈ ನಿರ್ಧಾರವನ್ನು ಒಪ್ಪಲು ಸಾಧ್ಯವಿಲ್ಲ

"ಪ್ರಸಿದ್ಧ್ ಕೃಷ್ಣ ಏನು ಮಾಡುವುದಕ್ಕೂ ಸಾಧ್ಯವಿರಲಿಲ್ಲ. ಆದರೆ ಅವರು ಆಡುವ ಬಳಗದಿಂದ ಹೊರಬಿದ್ದಿದ್ದಾರೆ ಮತ್ತು ಸಂದೀಪ್ ವಾರಿಯರ್‌ಗೆ ಆಡುವ ಅವಕಾಶ ದೊರೆತಿದೆ. ಸಂದೀಪ್ ವಾರಿಯರ್‌ಗೆ ಆಡುವ ಅವಕಾಶ ದೊರೆತ ಕಾರಣಕ್ಕೆ ನಾನು ಖುಷಿಪಡುತ್ತೇನೆ, ಆದರೆ ಒಂದು ಪಂದ್ಯದಲ್ಲಿ ನೀಡಿದ ಒಂದು ಕೆಟ್ಟ ಓವರ್‌ನ ಕಾರಣಕ್ಕೆ ಆಡುವ ಬಳಗದಿಂದ ಕೈಬಿಡುವುದನ್ನು ನಾನು ಒಪ್ಪಲಾರೆ. ನಾನು ಈ ನಿರ್ಧಾರವನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ" ಎಂದಿದ್ದಾರೆ ಆಕಾಶ್ ಚೋಪ್ರ.

ಡೆಲ್ಲಿ ಕ್ಯಾಪಿಟಿಲ್ಸ್ ವಿರುದ್ಧದ ಪಂದ್ಯದಲ್ಲಿ ಸಂದೀಪ್ ವಾರಿಯರ್ ಕೇವಲ ಎರಡು ಓವರ್ ಮಾಡುವ ಅವಕಾಶವನ್ನು ಮಾತ್ರವೇ ಪಡೆದುಕೊಂಡರು. ಎದುರಾಳಿಯ ವಿರುದ್ಧ ಅಂಥಾ ಪರಿಣಾಮವನ್ನು ಬೀರುವಲ್ಲಿಯೂ ಸಂದೀಪ್ ವಾರಿಯರ್ ಯಶಸ್ವಿಯಾಗಲಿಲ್ಲ. ಅಲ್ಲದೆ ಲೂಕಿ ಫರ್ಗ್ಯೂಸನ್ ಅಲಭ್ಯತೆಯ ಹೊರತಾಗಿಯೂ ಡೆತ್ ಓವರ್‌ನಲ್ಲಿ ಬೌಲಿಂಗ್ ಮಾಡುವ ಅವಕಾಶ ಸಂದೀಪ್‌ಗೆ ದೊರೆಯಲಿಲ್ಲ.

ಟಿಮ್ ಸೌಥಿ ಆಡಿಸಿದ ಬಗ್ಗೆಯೂ ಚೋಪ್ರ ಪ್ರಶ್ನೆ

ಟಿಮ್ ಸೌಥಿ ಆಡಿಸಿದ ಬಗ್ಗೆಯೂ ಚೋಪ್ರ ಪ್ರಶ್ನೆ

ಇನ್ನು ಇದೇ ಸಂದರ್ಭದಲ್ಲಿ ಆಕಾಶ್ ಚೋಪ್ರ ಕೆಕೆಆರ್ ತಂಡದ ಪ್ರಮುಖ ಆಲ್‌ರೌಂಡರ್ ಆಂಡ್ರೆ ರಸೆಲ್ ಗಾಯಗೊಂಡಿದ್ದ ಕಾರಣ ಅವರ ಬದಲಿಗೆ ಟಿಮ್ ಸೌಥಿಗೆ ಅವಕಾಶ ನೀಡಿದ ವಿಚಾರವಾಗಿಯೂ ಪ್ರತಿಕ್ರಿಯಿಸಿದ್ದಾರೆ. "ರಸೆಲ್ ಆಡುವ ಬಳಗದಲ್ಲಿ ಇಲ್ಲದಂತಾ ಸಂದರ್ಭದಲ್ಲಿ ಅವರ ಸ್ಥಾನದಲ್ಲಿ ಯಾರಿಗೆ ನೀವು ಅವಕಾಶವನ್ನು ನೀಡಬೇಕಾಗಿತ್ತು? ಬೆನ್ ಕಟ್ಟಿಂಗ್, ಶಕೀಬ್ ಅಲ್ ಹಸನ್ ಮತ್ತು ಪವನ್ ನೇಗಿ ಈ ಮೂವರನ್ನು ಆಯ್ಕೆಯಾಗಿ ನಾನು ನೀಡುತ್ತೇನೆ. ನಾನಿಲ್ಲ ಒಂದೇ ಆಯ್ಕೆಯನ್ನು ಕಂಡಿತಾ ನೀಡಲಾರೆ. ಆದರೆ ಟಿಮ್ ಸೌಥಿಯನ್ನು ಆಡಿಸಿದ್ದು ಸರಿಯಾದ ಆಯ್ಕೆಯಲ್ಲ. ಯಾಕೆಂದರೆ ರಸೆಲ್ ಸ್ಥಾನ ತುಂಬಬಲ್ಲ ಆಟಗಾರ ಸೌಥಿ ಅಲ್ಲ. ಆಗ ಬ್ಯಾಟಿಂಗ್ ವಿಭಾಗ ದುರ್ಬಲವಾಗುತ್ತದೆ. ಬ್ಯಾಟಿಂಗ್‌ನ ವಿಚಾರವಾಗಿ ನಿಮ್ಮಲ್ಲಿ ಹೆಚ್ಚು ಆಳವಿರುವುದಿಲ್ಲ. ಯಾಕೆಂದರೆ ರಸೆಲ್ ಕೇವಲ ಓರ್ವ ಬೌಲರ್ ಮಾತ್ರವಲ್ಲ. ಆತನೋರ್ವ ಆಲ್‌ರೌಂಡರ್" ಎಂದು ರಸೆಲ್ ಬದಲಿಗೆ ಟಿಮ್ ಸೌಥಿಯನ್ನು ಆಡಿಸಿದ ವಿಚಾರವಾಗಿಯೂ ಅಸಮಾಧಾನ ವ್ಯಕ್ತಪಡಿಸಿದರು.

Story first published: Wednesday, September 29, 2021, 16:05 [IST]
Other articles published on Sep 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X