ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಕೃನಾಲ್ ಪಾಂಡ್ಯ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಆಕಾಶ್ ಚೋಪ್ರ ಅಸಮಾಧಾನ

IPL 2021: Aakash Chopra on Krunal Pandya batting at No. 4 for MI

ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಪ್ರಮುಖ ಆಟಗಾರರಿಂದ ನಿರೀಕ್ಷಿತ ಪ್ರದರ್ಶನಗಳು ಬರುತ್ತಿಲ್ಲ. ಇದು ನಾಯಕ ರೋಹಿತ್ ಶರ್ಮಾ ಸೇರಿದಂತೆ ಮ್ಯಾನೇಜ್‌ಮೆಂಟ್‌ಗೆ ತಲೆನೋವಾಗಿದೆ. ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಹೊರತುಪಡಿಸಿದರೆ ಉಳಿದ ಎಲ್ಲಾ ಆಟಗಾರರು ಕೂಟ ಕಳಪೆ ಫಾರ್ಮ್‌ನಲ್ಲಿದ್ದಾರೆ. ಈ ಮಧ್ಯೆ ಮುಂಬೈ ಇಂಡಿಯನ್ಸ್ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಆಕಾಶ್ ಚೋಪ್ರ ಪ್ರತಿಕ್ರಿಯಿಸಿದ್ದಾರೆ.

ಇಶಾನ್ ಕಿಶನ್ ಅವರನ್ನು ಆಡುವ ಬಳಗದಿಂದ ಹೊರಗಿಟ್ಟು ಕೃನಾಲ್ ಪಾಂಡ್ಯ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಇಳಿಸಿದ ಬಗ್ಗೆ ಪ್ರಶ್ನೆಯೊಂದನ್ನು ಅಭಿಮಾನಿ ಆಕಾಶ್ ಚೋಪ್ರ ಅವರ ಮುಂದಿಟ್ಟಿದ್ದರು. ಇದಕ್ಕೆ ಆಕಾಶ್ ಚೋಪ್ರ "ಇಶಾನ್ ಕಿಶನ್ ಅವರನ್ನು ಆಡುವ ಬಳಗದಿಂದ ಹೊರಗಿಟ್ಟಿದ್ದು ನಿಜಕ್ಕೂ ಕುತೂಹಲಕಾರಿ ಸಂಗತಿ. ಅವರಲ್ಲಿ ಬೌಲರ್‌ಗಳು ಸಾಕಷ್ಟು ಪ್ರಮಾಣದಲ್ಲಿದ್ದಾರೆ ಆದರೆ ಕೃನಾಲ್ ಪಾಂಡ್ಯಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಇಳಿಸಿದ್ದು ಸೂಕ್ತ ನಿರ್ಧಾರ ಎನಿಸಲಿಲ್ಲ" ಎಂದಿದ್ದಾರೆ.

CSK vs MI Preview: ಮುಂಬೈ vs ಚೆನ್ನೈ, ಸಂಭಾವ್ಯ ತಂಡ ಹಾಗೂ ಪಂದ್ಯದ ಮಾಹಿತಿCSK vs MI Preview: ಮುಂಬೈ vs ಚೆನ್ನೈ, ಸಂಭಾವ್ಯ ತಂಡ ಹಾಗೂ ಪಂದ್ಯದ ಮಾಹಿತಿ

"ಕೃನಾಲ್ ಪಾಂಡ್ಯ ನನಗೆ ಇಷ್ಟವಿಲ್ಲ ಎಂದಲ್ಲ, ಆದರೆ ನಾಲ್ಕನೇ ಕ್ರಮಾಂಕದಲ್ಲಿ ಕೃನಾಲ್ ಪಾಂಡ್ಯ ಅವರನ್ನು ಕಣಕ್ಕಿಳಿಸುವುದಾದರೆ ಅವರಿಗಿಂತ ಇಶಾನ್ ಕಿಶನ್ ಉತ್ತಮ ಆಯ್ಕೆಯಾಗಿದ್ದರು" ಎಂದು ಆಕಾಶ್ ಚೋಪ್ರ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಮುಂಬೈ ಇಂಡಿಯನ್ಸ್ ಈ ಬಾರಿಯ ಆವೃತ್ತಿಯಲ್ಲಿ ಆಡಿದ ಆರು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆದ್ದಿದ್ದು ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ ರೋಹಿತ್ ಶರ್ಮಾ ಬಳಗ ನಾಲ್ಕನೇ ಸ್ಥಾನದಲ್ಲಿದೆ. ಈ ಸ್ಥಾನವನ್ನು ಮುಂದುವರಿಸಬೇಕಿದ್ದರೆ ರೋಹಿತ್ ಪಡೆಗೆ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.

Story first published: Saturday, May 1, 2021, 13:41 [IST]
Other articles published on May 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X