ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಮೋಘ ಪ್ರದರ್ಶನಕ್ಕೆ ದೊರೆಯದ ಮನ್ನಣೆ: ಕನ್ನಡಿಗನ ಸಾಧನೆ ಮಂಕಾಗಲು ರಾಹುಲ್ ಕಾರಣ ಎಂದ ಚೋಪ್ರ

IPL 2021: Aakash Chopra picks the most underrated Indian crickter of the season

ಈ ಬಾರಿಯ ಐಪಿಎಲ್ ಈಗ ಕೊನೆಯ ಘಟ್ಟದಲ್ಲಿದೆ. ಟೂರ್ನಿಯಲ್ಲಿ ಇನ್ನು ಕೇವಲ ಎರಡು ಪಂದ್ಯಗಳು ಮಾತ್ರವೇ ಬಾಕಿಯಿದೆ. ಕ್ವಾಲಿಫೈಯರ್ 2 ಹಾಗೂ ಫೈನಲ್ ಪಂದ್ಯ ಮಾತ್ರ ನಡೆಯಲಿದ್ದು ಮುಂದಿನ ಶುಕ್ರವಾರ ಯಾರು 14ನೇ ಆವೃತ್ತಿಯ ಚಾಂಪಿಯನ್ ತಂಡ ಎಂದು ನಿರ್ಧಾರವಾಗಲಿದೆ. ಈ ಸಂದರ್ಭದಲ್ಲಿ ಟೂರ್ನಿಯಲ್ಲಿ ಆಡಿದ ಆಟಗಾರರ ಪ್ರದರ್ಶನದ ಬಗ್ಗೆ ಸಾಕಷ್ಟು ನಿಮರ್ಶೆಗಳು ನಡೆಯುತ್ತಿದೆ.

ಈ ಬಾರಿಯ ಐಪಿಎಲ್‌ನಲ್ಲಿ ಅನೇಕ ಆಟಗಾರರು ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ. ಆಟಗಾರರ ಪ್ರದರ್ಶನ ನೋಡಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಅದರಲ್ಲೂ ಭಾರತದ ಕೆಲ ಆಟಗಾರರು ನೀಡಿದ ಪ್ರದರ್ಶನ ಸಾಕಷ್ಟು ಭರವಸೆಯನ್ನು ಮೂಡಿಸಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗದಲ್ಲಿಯೂ ಭಾರತೀಯ ಆಟಗಾರರು ಸಂಪೂರ್ಣ ಮೇಲುಗೈ ಸಾಧಿಸಿರುವುದು ಸ್ಪಷ್ಟವಾಗಿದೆ.

'ಈತ ಮಾತನಾಡುವುದನ್ನು ಬಿಟ್ಟು ಬೇರೇನೂ ಮಾಡಿಲ್ಲ'; ಐಪಿಎಲ್ ಕಳಪೆ ನಾಯಕನ ವಿರುದ್ಧ ವ್ಯಂಗ್ಯವಾಡಿದ ಸೆಹ್ವಾಗ್'ಈತ ಮಾತನಾಡುವುದನ್ನು ಬಿಟ್ಟು ಬೇರೇನೂ ಮಾಡಿಲ್ಲ'; ಐಪಿಎಲ್ ಕಳಪೆ ನಾಯಕನ ವಿರುದ್ಧ ವ್ಯಂಗ್ಯವಾಡಿದ ಸೆಹ್ವಾಗ್

ಈ ಸಂದರ್ಭದಲ್ಲಿ ಈ ಬಾರಿಯ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಸ್ಥಿರ ಆಟವನ್ನು ಪ್ರದರ್ಶಿಸಿದ ಓರ್ವ ಭಾರತೀಯ ಆಟಗಾರನಿಗೆ ಸಿಗಬೇಕಾದ ಮನ್ನಣೆ ಸಿಗಲಿಲ್ಲ ಎಂದಿದ್ದಾರೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ. ಕಾಮೆಂಟೇಟರ್ ಆಗಿ ಮಿಂಚುತ್ತಿರುವ ಆಕಾಶ್ ಚೋಪ್ರ ಹೇಳಿದ ಆ ಆಟಗಾರ ಕನ್ನಡಿಗ ಎಂಬುದು ಮತ್ತೊಂದು ಗಮನಾರ್ಹ ಸಂಗತಿ

ಈ ಆಟಗಾರ ಮೌಲ್ಯ ಗುರುತಿಸಲಿಲ್ಲ

ಈ ಆಟಗಾರ ಮೌಲ್ಯ ಗುರುತಿಸಲಿಲ್ಲ

ಈ ಬಾರಿಯ ಐಪಿಎಲ್‌ನಲ್ಲಿ ಭಾರತದ ಆಟಗಾರರ ಪೈಕಿ ಕನ್ನಡಿಗ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಅವರ ಆಟಕ್ಕೆ ಸಿಗಬೇಕಾದ ಮೌಲ್ಯ ದೊರೆಯಲಿಲ್ಲ ಎಂದು ಆಕಾಶ್ ಚೋಪ್ರ ಹೇಳಿದ್ದಾರೆ. 30ರ ಹರೆಯದ ಆಟಗಾರ ಈ ಬಾರಿಯ ಆವೃತ್ತಿಯಲ್ಲಿ ಅದ್ಭುತ ಆಟವನ್ನು ಪ್ರದರ್ಶಿಸಿದರೂ ಅವರಿಗೆ ದೊರೆಯಬೇಕಾದ ಗೌರವ ನೀಡಿಲ್ಲ ಎಂದಿದ್ದಾರೆ.

ಕೊಹ್ಲಿ ನಾಯಕತ್ವದ ಕೊನೆಯ ಪಂದ್ಯ ಸೋತು ಟೂರ್ನಿಯಿಂದ ಹೊರಬಿದ್ದ ಆರ್‌ಸಿಬಿ; ಸೋಲಿಗೆ ಕಾರಣ ತಿಳಿಸಿದ ಕೊಹ್ಲಿ

ಅದ್ಭುತ ಪ್ರದರ್ಶನ ನೀಡಿ ಮಿಂಚಿದ ಅಗರ್ವಾಲ್

ಅದ್ಭುತ ಪ್ರದರ್ಶನ ನೀಡಿ ಮಿಂಚಿದ ಅಗರ್ವಾಲ್

ಈ ಬಾರಿಯ ಆವೃತ್ತಿಯಲ್ಲಿಯೂ ಮಯಾಂಕ್ ಅಗರ್ವಾಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಐಪಿಎಲ್ 2021ರ ಆವೃತ್ತಿಯಲ್ಲಿ ಮಯಾಂಕ್ ಅಗರ್ವಾಲ್ 12 ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಇದರಲ್ಲಿ 40.09ರ ಸರಾಸರಿಯಲ್ಲಿ ಮಯಾಂಕ್ 441 ರನ್‌ಗಳಿಸಿದ್ದಾರೆ. 140.44ರಷ್ಟು ಸ್ಟ್ರೈಕ್‌ರೇಟ್‌ನಲ್ಲಿ ಮಯಾಂಕ್ ಬ್ಯಾಟ್ ಬೀಸಿದ್ದಾರೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸದ್ಯ ಮಯಾಂಕ್ ಅಗರ್ವಾಲ್ 8ನೇ ಸ್ಥಾನದಲ್ಲಿದ್ದಾರೆ.

ಧವನ್, ಗಾಯಕ್ವಾಡ್ ಅವರಷ್ಟೇ ಅತ್ಯುತ್ತಮ ಪ್ರದರ್ಶನ

ಧವನ್, ಗಾಯಕ್ವಾಡ್ ಅವರಷ್ಟೇ ಅತ್ಯುತ್ತಮ ಪ್ರದರ್ಶನ

44ರ ಹರೆಯದ ಆಕಾಶ್ ಚೋಪ್ರ ಯೂಟ್ಯೂಬ್ ಚಾನೆಲ್‌ನ ಸಂವಾದದಲ್ಲಿ ಮಾತನಾಡುತ್ತಾ ಮಯಾಂಕ್ ಅಗರ್ವಾಲ್ ಈ ಬಾರಿಯ ಐಪಿಎಲ್‌ನಲ್ಲಿ ಬಹಳ ಅಂಡರ್‌ರೇಟೆಡ್ ಆಟಗಾರ ಎನಿಸಿದ್ದಾರೆ ಎಂದು ವಿವರಿಸಿದರು. ಅಲ್ಲದೆ ಈ ಆಟಗಾರ ಶಿಖರ್ ಧವನ್, ಋತುರಾಜ್ ಗಾಯಕ್ವಾಡ್ ಅವರಷ್ಟೇ ಯಶಸ್ವೀ ಆರಂಭಿಕ ಆಟಗಾರನಾಗಿದ್ದಾರೆ ಎಂದು ಕೂಡ ಚೋಪ್ರ ಹೇಳಿದರು. "ಜನರು ಶಿಖರ್ ಧವನ್, ಪೃಥ್ವಿ ಶಾ, ಕೆಎಲ್ ರಾಹುಲ್‌ರಿಂದ ಹಿಡಿದು ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್ ವರೆಗೆ ಎಲ್ಲರ ಬಗ್ಗೆಯೂ ಮಾತನಾಡುತ್ತಾರೆ. ಇದು ಬಹಳ ಉತ್ತಮ. ಆದರೆ ಮಯಾಂಕ್ ಅಗರ್ವಾಲ್ ಹೆಸರು ಎಲ್ಲಿದೆ? ಆತನ ಪ್ರದರ್ಶನ ಕೂಡ ಅತ್ಯಂತ ಅಮೋಘವಾಗಿತ್ತು" ಎಂದಿದ್ದಾರೆ ಆಕಾಶ್ ಚೋಪ್ರ.

ರಾಹುಲ್ ಮುಂದೆ ಮಂಕಾದ ಮಯಾಂಕ್

ರಾಹುಲ್ ಮುಂದೆ ಮಂಕಾದ ಮಯಾಂಕ್

ಇನ್ನು ಈ ಭಾರಿಯ ಐಪಿಎಲ್‌ನಲ್ಲಿ ಮಯಾಂಕ್ ಅಗರ್ವಾಲ್ ಅದ್ಭುತ ಪ್ರದರ್ಶನ ನೀಡಿದರೂ ಆ ಪ್ರದರ್ಶನಕ್ಕೆ ಸೂಕ್ತ ಮನ್ನಣೆ ದೊರೆಯದಿರಲು ಪಂಜಾಬ್ ಕಿಂಗ್ಸ್ ತಂಡದ ನಾಯಕನೂ ಆಗಿರುವ ಕೆಎಲ್ ರಾಹುಲ್ ನೀಡಿದ ಪ್ರದರ್ಶನವೂ ಕಾರಣವಾಗಿರಬಹುದು ಎಂದು ಆಕಾಶ್ ಚೋಪ್ರ ಅಭಿಪ್ರಾಯಪಟ್ಟಿದ್ದಾರೆ. "ಮಯಾಂಕ್ ಅಗರ್ವಾಲ್ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಜೊತೆಗೆ ಆರಂಭಿಕನಾಗಿ ಕಣಕ್ಕಿಳಿದಿರುವುದೇ ಅವರ ಆಟಕ್ಕೆ ಹೆಚ್ಚಿನ ಮನ್ನಣೆ ದೊರೆಯದಿರಲು ಕಾರಣ ಎಮದು ಭಾಸವಾಗುತ್ತದೆ. ರಾಹುಲ್ ಓರ್ವ ದೊಡ್ಡ ಆಟಗಾರ. ಮಯಾಂಕ್ ಯಾವಾಗಲೂ ಆತನ ನೆರಳಿನಲ್ಲಿಯೇ ಆಡುತ್ತಾರೆ" ಎಂದು ಕೆಎಲ್ ರಾಹುಲ್ ಮಯಾಂಕ್ ಅಗರ್ವಾಲ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ABD ಮುಂದಿನ IPL ನಲ್ಲಿ RCB ಯಲ್ಲಿ ಇರ್ತಾರಾ? ಇಲ್ವಾ? | Oneindia Kannada
ಮಯಾಂಕ್ ನಾಯಕತ್ವದ ಬಗ್ಗೆ ಭರವಸೆ ವ್ಯಕ್ತಪಡಿಸಿದ ಚೋಪ್ರ

ಮಯಾಂಕ್ ನಾಯಕತ್ವದ ಬಗ್ಗೆ ಭರವಸೆ ವ್ಯಕ್ತಪಡಿಸಿದ ಚೋಪ್ರ

ಇನ್ನು ಇದೇ ಸಂದರ್ಭದಲ್ಲಿ ಆಕಾಶ್ ಚೋಪ್ರ ಮಯಾಂಕ್ ಅಗರ್ವಾಲ್ ನಾಯಕನಾಗಿಯೂ ಮಿಂಚಬಲ್ಲ ಆಟಗಾರ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಂದಿನ ಐಪಿಎಲ್‌ಗೆ ಮಯಾಂಕ್ ಅಗರ್ವಾಲ್‌ರನ್ನು ಪಂಜಾಬ್ ಕಿಂಗ್ಸ್ ಬಿಡುಗಡೆಗೊಳಿಸಿದರೆ ಸೇರ್ಪಡೆಯಾಗಲಿರುವ ಎರಡು ಹೊಸ ತಂಡಗಳ ಪೈಕಿ ಒಂದು ತಂಡಕ್ಕೆ ನಾಯಕನಾಗುವ ಸಾಮರ್ಥ್ಯ ಮಯಾಂಕ್ ಅಗರ್ವಾಲ್‌ಗೆ ಇದೆ ಎಂದಿದ್ದಾರೆ ಆಕಾಶ್ ಚೋಪ್ರ.

Story first published: Wednesday, October 13, 2021, 9:57 [IST]
Other articles published on Oct 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X