ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಪ್ಲೇಆಫ್‌ಗೇರುವ ನಾಲ್ಕು ತಂಡಗಳನ್ನು ಹೆಸರಿಸಿದ ಆಕಾಶ್ ಚೋಪ್ರ

IPL 2021: Aakash Chopra predicts 4 teams who qualify for playoffs

ಈ ಬಾರಿಯ ಐಪಿಎಲ್ ಈಗ ಕುತೂಹಲ ಘಟ್ಟವನ್ನು ತಲುಪಿದೆ. ಪ್ಲೇಆಫ್‌ಗೇರಲು ಕೆಲ ತಂಡಗಳ ಮಧ್ಯೆ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದೆ. ಯಾವ ನಾಲ್ಕು ತಂಡಗಳು ಪ್ಲೇಆಫ್‌ಗೇರಲಿವೆ ಎಂಬುದು ಕುತೂಹಲ ಮೂಡಿಸಿದೆ. ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನದಲ್ಲಿದೆ. ನಂತರ ಆರ್‌ಸಿಬಿ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳಿವೆ. ಅಗ್ರ ಮೂರು ತಂಡಗಳು ಈಗ ತಮ್ಮ ಸ್ಥಾನವನ್ನು ಬಹುತೇಕ ಖಾತ್ರಿಪಡಿಸಿಕೊಂಡಿದೆ. ಆದರೆ ಒಂದು ಸ್ಥಾನಕ್ಕಾಗಿ ತೀವ್ರ ಪೈಪೋಟಿ ಕಂಡುಬರುತ್ತಿದೆ.

ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಯಾವೆಲ್ಲಾ ತಂಡಗಳು ಪ್ಲೇಆಫ್‌ಗೇರಲಿದೆ ಎಂಬ ಭವಿಷ್ಯ ನುಡಿದಿದ್ದಾರೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಖಂಡಿತಾ ಪ್ಲೇಆಫ್‌ಗೆ ಪ್ರವೇಶ ಪಡೆಯಲಿದೆ ಎಂದು ಹೇಳಿರುವ ಆಕಾಶ್ ಚೋಪ್ರ ಮೂರು ಹಾಗೂ ನಾಲ್ಕನೇ ತಂಡವಾಗಿ ಯಾವ ಫ್ರಾಂಚೈಸಿಗಳು ಅವಕಾಶ ಗಿಟ್ಟಿಸಿಕೊಳ್ಳಲಿದೆ ಎಂದು ವಿವರಿಸಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ 7000 ರನ್ ಬಾರಿಸಿದ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳ ಪಟ್ಟಿಟಿ20 ಕ್ರಿಕೆಟ್‌ನಲ್ಲಿ 7000 ರನ್ ಬಾರಿಸಿದ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳ ಪಟ್ಟಿ

ಆಕಾಶ್ ಚೋಪ್ರ ಪ್ರಕಾರ ಸದ್ಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂರನೇ ತಂಡವಾಗಿಯೇ ಪ್ಲೇಆಫ್‌ಗೆ ಪ್ರವೇಶ ಪಡೆಯಲಿದೆ. ಇನ್ನು ಸಾಕಷಚ್ಟು ಕುತೂಹಲ ಮೂಡಿಸಿರುವ ನಾಲ್ಕನೇ ಸ್ಥಾನದ ಬಗ್ಗೆಯೂ ಆಕಾಶ್ ಚೋಪ್ರ ಭವಿಷ್ಯ ನುಡಿದಿದ್ದಾರೆ. ನಾಲ್ಕನೇ ಸ್ಥಾನಕ್ಕಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮಧ್ಯೆ ತೀವ್ರ ಪೈಪೋಟಿ ನಡೆಯುತ್ತಿದ್ದು ಯಾರು ಪ್ಲೇಆಫ್‌ಗೇರಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ. ಆಕಾಶ್ ಚೋಪ್ರ ಕೂಡ ಈ ಎರಡು ತಂಡಗಳ ಮಧ್ಯೆ ಕಠಿಣ ಸ್ಪರ್ಧೆಯಿದೆ ಎಂದಿದ್ದಾರೆ.

ಐಪಿಎಲ್ 2021: ಟಿ20 ಕ್ರಿಕೆಟ್‌ನಲ್ಲಿ ದಾಖಲೆ ಬರೆದ ಗ್ಲೆನ್ ಮ್ಯಾಕ್ಸ್‌ವೆಲ್ಐಪಿಎಲ್ 2021: ಟಿ20 ಕ್ರಿಕೆಟ್‌ನಲ್ಲಿ ದಾಖಲೆ ಬರೆದ ಗ್ಲೆನ್ ಮ್ಯಾಕ್ಸ್‌ವೆಲ್

"ಡೆಲ್ಲಿ ಹಾಗೂ ಚೆನ್ನೈ ತಂಡಗಳ ಬಗ್ಗೆ ಯಾವುದೇ ಅನುಮಾನಗಳಿಲ್ಲ. ಮೂರನೇ ತಂಡವಾಗಿ ಆರ್‌ಸಿಬಿ ಪ್ಲೇಆಫ್‌ಗೇರುವ ಸಾಧ್ಯತೆಯಿದೆ. ಆದರೆ ನಾಲ್ಕನೇ ಸ್ಥಾನಕ್ಕಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ಮಧ್ಯೆ ಸಾಕಷ್ಟು ಸ್ಪರ್ಧೆಯಿದೆ. ಈ ಸಂದರ್ಭದಲ್ಲಿ ಕೊಲ್ಕತ್ತಾ ಸೆಲ್ಫ್ ಗೋಲ್ ಹೊಡೆದುಕೊಳ್ಳದು ಎಂಬ ಭರವಸೆ ನನಗಿದೆ" ಎಂದಿದ್ದಾರೆ ಆಕಾಶ್ ಚೋಪ್ರ.

ಕೊಲ್ಕತ್ತಾವನ್ನು ಆಯ್ಕೆ ಮಾಡಿದ ಚೋಪ್ರ: ಪ್ಲೇಆಫ್‌ಗೇರುವ ನಾಲ್ಕನೇ ತಂಡವಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಅವಕಾಶ ಪಡೆದುಕೊಳ್ಳಲಿದೆ ಎಂದು ಚೋಪ್ರ ಹೇಳಿದ್ದಾರೆ. "ಕೊಲ್ಕತ್ತಾ ಪ್ಲೇಆಪ್‌ಗೇ ಪ್ರವೇಶಿಸಲಿದೆ. ರಸೆಲ್ ಆಡಲು ಸಮರ್ಥರಾದರೆ ಅಲ್ಲಿ ಸೆಲ್ಫ್ ಗೋಲು ಹೊಡೆಯಲು ಅವಕಾಶವಿಲ್ಲ. ಆದರೆ ನಾಯಕ ಫಾರ್ಮ್‌ನಲ್ಲಿಲ್ಲದಿರುವುದು ಸೆಲ್ಪ್‌ ಗೋಲ್‌ಗೆ ಕಾರಣವಾಗಬಹುದು. ಆದರೆ ಅದು ಇಯಾನ್ ಮಾರ್ಗನ್. ಅದ್ಭುತ ಆಟಗಾರ, ಯಾವುದೇ ಕ್ಷಣದಲ್ಲಾದರೂ ಆತ ಫಾರ್ಮ್‌ಗೆ ಮರಳುವ ಸಾಧ್ಯತೆಯಿದೆ. ಈ ಮೂಲಕ ತಂಡಕ್ಕೆ ಬಲಿಷ್ಠವಾದ ಫಿನಿಷಿಂಗ್ ನೀಡಬಹುದು" ಎಂದಿದ್ದಾರೆ ಆಕಾಶ್ ಚೋಪ್ರ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಚೋಪ್ರ ಈ ಅಭಿಪ್ರಾಯ ವ್ಯಕ್ತಪಡಸಿದ್ದಾರೆ.

ಐಪಿಎಲ್ 2021: ಆರ್‌ಸಿಬಿ ಪರ ಹೊಸ ದಾಖಲೆ ಬರೆದ ಹರ್ಷಲ್ ಪಟೇಲ್ಐಪಿಎಲ್ 2021: ಆರ್‌ಸಿಬಿ ಪರ ಹೊಸ ದಾಖಲೆ ಬರೆದ ಹರ್ಷಲ್ ಪಟೇಲ್

ಹಳೆಯ ಪಲ್ತಾನ್‌ನಂತಿಲ್ಲ ಮುಂಬೈ: ಇನ್ನು ಮುಂಬೈ ಇಂಡಿಯನ್ಸ್ ಈ ಬಾರಿ ಕಳೆಗುಂದಿಗೆ ಎಂಬ ಅಭಿಪ್ರಾಯವನ್ನು ಆಕಾಶ್ ಚೋಪ್ರ ಕೂಡ ವ್ಯಕ್ತಪಡಿಸಿದ್ದಾರೆ. ಈ ಹಿಂದಿನ ಮುಂಬೈ ಇಂಡಿಯನ್ಸ್ ತಂಡದ ರೀತಿಯಲ್ಲಿ ಬಲಿಷ್ಠ ತಂಡ ಎಂದು ಮುಂಬೈ ತಂಡದ ಪ್ರದರ್ಶನ ನೋಡಿದಾಗ ಅನಿಸುತ್ತಿಲ್ಲ ಎಂದಿದ್ದಾರೆ. ಐದು ಬಾರಿಯ ಐಪಿಎಲ್ ಚಾಂಪಿನ್ ಆಗಿರುವ ಮುಂಬೈ ಈ ಬಾರಿ ಗೆಲುವಿಗಿಂತ ಹೆಚ್ಚು ಸೋಲನ್ನು ಕಾಣುತ್ತಿದೆ. ಪ್ರಮುಖ ಆಟಗಾರರು ಫಾರ್ಮ್‌ನಲ್ಲಿ ಇಲ್ಲದಿರುವುದು ತಂಡಕ್ಕೆ ಆಘಾತ ನೀಡಿದೆ.

ಕಷ್ಟದಲ್ಲಿರೋ ರಾಹುಲ್ ತಂಡವನ್ನು ಗೇಲ್ ಅರ್ಧದಲ್ಲೇ ಕೈಬಿಟ್ಟಿದ್ದು ಯಾಕೆ? | Oneindia Kannada

ಕೆಕೆಆರ್ ಬಲಿಷ್ಠ ಕಮ್‌ಬ್ಯಾಕ್: ಇನ್ನು ಮತ್ತೊಂದೆಡೆ ಭಾರತದಲ್ಲಿ ನಡೆದ ಮೊದಲ ಹಂತದ ಐಪಿಎಲ್ ಪಂದ್ಯದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಯುಎಇ ಚರಣದಲ್ಲಿ ಅಮೋಘ ರೀತಿಯಲ್ಲಿ ಕಮ್‌ಬ್ಯಾಕ್ ಮಾಡಿದೆ. ಬಲಿಷ್ಠ ತಂಡಗಳಿಗೆ ಸೋಲುಣಿಸುತ್ತಿರುವ ಕೆಕೆಆರ್ ಸದ್ಯ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು ಪ್ಲೇಆಪ್‌ಗೇರಲು ಸರ್ವ ಪ್ರಯತ್ನಗಳನ್ನು ನಡೆಸುತ್ತಿದೆ.

Story first published: Friday, October 1, 2021, 10:27 [IST]
Other articles published on Oct 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X