ಐಪಿಎಲ್ 2021: ಮುಂಬೈ vs ಚೆನ್ನೈ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಊಹಿಸಿದ ಆಕಾಶ್ ಚೋಪ್ರ

ಐಪಿಎಲ್ 14ನೇ ಆವೃತ್ತಿಯಲ್ಲಿ ಎರಡನೇ ಚರಣದ ಪಂದ್ಯಗಳು ಇಂದಿನಿಂದ ಆರಂಭವಾಗುತ್ತಿದೆ. ಐಪಿಎಲ್ ಇತಿಹಾಸದ ಎರಡು ಯಶಸ್ವೀ ತಂಡಗಳು ಈ ಪಂದ್ಯದಲ್ಲಿ ಮುಖಾಮುಖಿಯಾಗುವ ಮೂಲಕ ಕದನದ ರೋಚಕತೆಯನ್ನು ಹೆಚ್ಚಿಸಲಿದೆ. 2020ರ ಆವೃತ್ತಿಯ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರೂ ಈ ಬಾರಿಯ ಟೂರ್ನಿಯ ಮೊದಲಾರ್ಧದಲ್ಲಿ ಅಮೋಘ ಪ್ರದರ್ಶನ ನೀಡಿರುವ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಾಗೂ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಕದನದಲ್ಲಿ ಯಾರು ಗೆಲುವು ಸಾಧಿಸಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಹಾಲಿ ಹಾಲಿ ಕ್ರಿಕೆಟ್ ಕಾಮೆಂಟೇಟರ್ ಆಕಾಶ್ ಚೋಪ್ರ ಈ ಮುಖಾಮುಖಿಯಲ್ಲಿ ಯಾವ ತಂಡ ಪಂದ್ಯವನ್ನು ಗೆಲ್ಲಲಿದೆ ಎಂದು ಊಹಿಸಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ಮಾತನಾಡಿರುವ ಆಕಾಶ್ ಚೋಪ್ರ ಈ ಪಂದ್ಯದ ಫಲಿತಾಂಶದ ಬಗ್ಗೆ ಹೇಳಿಕೊಂಡಿದ್ದಾರೆ. ಅಂದ ಹಾಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಈ ಪಂದ್ಯದಲ್ಲಿ ಗೆಲ್ಲುವ ತಂಡ ಎಂದು ಹೆಸರಿಸಿದ್ದು ಮುಂಬೈ ಇಂಡಿಯನ್ಸ್ ತಂಡವನ್ನು. ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಚೆನ್ನೈ ವಿರುದ್ಧ ಗೆಲುವು ಸಾಧಿಸಲಿದೆ ಎಂದಿದ್ದಾರೆ ಚೋಪ್ರ.

ಐಪಿಎಲ್ ದ್ವಿತೀಯ ಹಂತ ಎಸ್‌ಆರ್‌ಎಚ್‌ಗೆ ನಿರ್ಣಾಯಕವಾಗಲಿದೆ: ಲಕ್ಷ್ಮಣ್ಐಪಿಎಲ್ ದ್ವಿತೀಯ ಹಂತ ಎಸ್‌ಆರ್‌ಎಚ್‌ಗೆ ನಿರ್ಣಾಯಕವಾಗಲಿದೆ: ಲಕ್ಷ್ಮಣ್

ಇನ್ನು ಇದೇ ಸಂದರ್ಭದಲ್ಲಿ ಇಂದಿನ ಪಂದ್ಯದಲ್ಲಿನಿರ್ಣಾಯಕ ಪಾತ್ರವಹಿಸುವ ಇಬ್ಬರು ಆಟಗಾರರನ್ನು ಕೂಡ ಚೋಪ್ರ ಹೆಸರಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ ಹಾಗೂ ಮೊಯೀನ್ ಅಲಿ ಈ ಪಂದ್ಯದಲ್ಲಿ ಮಹತ್ವದ ಪಾತ್ರವಹಿಸಲಿದ್ದಾರೆ ಎಂದು ಚೋಪ್ರ ಹೇಳಿದ್ದಾರೆ. ಇನ್ನು ದುಬೈನಲ್ಲಿ ರಿಸ್ಟ್ ಸ್ಪಿನ್ನರ್ಸ್‌ಗಿಂತ ಇಂಗರ್ ಸ್ಪಿನ್ನರ್‌ಗಳು ಹೆಚ್ಚಿನ ಯಶಸ್ಸು ಸಾಧಿಸಲಿದ್ದಾರೆ ಎಂದು ಕೂಡ ಚೋಪ್ರ ಅಭಿಪ್ರಾಯಪಟ್ಟಿದ್ದಾರೆ.

ನನ್ನ ಬೌಲಿಂಗ್ ತಂತ್ರಗಾರಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದೇನೆ: ಉನಾದ್ಕತ್ನನ್ನ ಬೌಲಿಂಗ್ ತಂತ್ರಗಾರಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದೇನೆ: ಉನಾದ್ಕತ್

"ದುಬೈನಲ್ಲಿ ರಿಸ್ಟ್ ಸ್ಪಿನ್ನರ್‌ಗಳಿಗಿಂತ ಫಿಂಗರ್ ಸ್ಪಿನ್ನರ್‌ಗಳು ಹೆಚ್ಚಿನ ಯಶಸ್ಸು ಸಾಧಿಸಲಿದ್ದಾರೆ. ತಾಹಿರ್ ಮತ್ತು ಚಾಹರ್ ಆಡುವುದನ್ನು ನೀವು ಕಾಣಬಹುದು ಹಾಗೂ ರಾಹುಲ್ ಚಾಹರ್ ಖಂಡಿತಾ ಈ ಪಂದ್ಯ ಆಡಲಿದ್ದಾರೆ. ಆದರೆ ಈ ದೊಡ್ಡ ಅಂಗಳದಲ್ಲಿ ಮೊಯೀನ್ ಅಲಿ ಹಾಗೂ ಜಡ್ಡುಗೆ ಹೆಚ್ಚಿನ ಯಶಸ್ಸು ದೊರೆಯಲಿದೆ. ಅವರು ಹೆಚ್ಚಿನ ವಿಕೆಟ್ ಪಡೆಯಲಿದ್ದಾರೆ ಎಂದಿದ್ದಾರೆ ಆಕಾಶ್ ಚೋಪ್ರ.

ಭರ್ಜರಿ ಸಿಕ್ಸರ್‌ಗಳ ಮೂಲಕ ಎಚ್ಚರಿಕೆ ಕೊಟ್ಟ ಎಂಎಸ್ ಧೋನಿ: ವಿಡಿಯೋಭರ್ಜರಿ ಸಿಕ್ಸರ್‌ಗಳ ಮೂಲಕ ಎಚ್ಚರಿಕೆ ಕೊಟ್ಟ ಎಂಎಸ್ ಧೋನಿ: ವಿಡಿಯೋ

ಇನ್ನು ಮೊದಲ ಹತ್ತು ಎಸೆತಗಳಲ್ಲಿ ಮೊದಲ ಬೌಂಡರಿ ಸಿಡಿಯಬಹುದು ಎಂದು ಭವಿಷ್ಯ ನುಡಿದ ಚೋಪ್ರ ಮೊದಲ ವಿಕೆಟ್ ಆರಂಭದ ನಾಲ್ಕು ಓವರ್‌ಗೆ ಮುನ್ನವೇ ಉರುಳಲಿದೆ ಎಂದಿದ್ದಾರೆ. ಈ ಅವಧಿಯಲ್ಲಿ ಬ್ಯಾಟಿಂಗ್ ನಡೆಸುವ ತಂಡ ಎರಡು ವಿಕೆಟ್‌ಗಳನ್ನು ಕಳೆದುಕೊಂಡರೂ ಅಚ್ಚರಿಯಿಲ್ಲ ಎಂದಿದ್ದಾರೆ. ಇನ್ನು ಪಿಚ್ ಹೆಚ್ಚು ತಿರುವು ಪಡೆಯುವ ಕಾರಣದಿಂದಾಗಿ ಎಡ್ಜ್ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂಬ ಎಚ್ಚರಿಕೆಯನ್ನು ಕೂಡ ಆಕಾಶ್ ಚೋಪ್ರ ನೀಡಿದ್ದಾರೆ.

ಐಪಿಎಲ್ 2021: ಚೆನ್ನೈ vs ಮುಂಬೈ ಮುಖಾಮುಖಿಯಲ್ಲಿ ಯಾವುದು ಬಲಿಷ್ಠ ತಂಡ, ಯಾರಿಗೆ ಹೆಚ್ಚು ಸೋಲು?
ಸಂಭಾವ್ಯ ತಂಡಗಳು:
ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ತಂಡ: ಫಾಫ್ ಡು ಪ್ಲೆಸಿಸ್ / ರಾಬಿನ್ ಉತ್ತಪ್ಪ, ಋತುರಾಜ್ ಗಾಯಕ್ವಾಡ್, ಸುರೇಶ್ ರೈನಾ, ಮೊಯೀನ್ ಅಲಿ, ಅಂಬಾಟಿ ರಾಯುಡು, ಎಂಎಸ್ ಧೋನಿ (ನಾಯಕ ಮತ್ತು ವಿಕೆಟ್ ಕೀಪರ್‌), ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ಇಮ್ರಾನ್ ತಾಹಿರ್

ಮುಂಬೈ ಇಂಡಿಯನ್ಸ್ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಜಸ್ಪ್ರಿತ್ ಬುಮ್ರಾ, ಟ್ರೆಂಟ್ ಬೌಲ್ಟ್, ರಾಹುಲ್ ಚಾಹರ್, ಮಾರ್ಕೊ ಜಾನ್ಸನ್/ಜಯಂತ್ ಯಾದವ್

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, September 19, 2021, 12:29 [IST]
Other articles published on Sep 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X