ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಹರಾಜಿನಲ್ಲಿ ಖರೀದಿಯಾಗದೆ ಉಳಿದ ಆ್ಯರನ್ ಫಿಂಚ್ ಪ್ರತಿಕ್ರಿಯೆ

IPL 2021: Aaron Finch Reacts After Going Unsold In IPL 2021 Player Auction

ಸಿಡ್ನಿ: ಆಸ್ಟ್ರೇಲಿಯಾದ ಲಿಮಿಟೆಡ್ ಓವರ್‌ಗಳ ನಾಯಕ ಆ್ಯರನ್ ಫಿಂಚ್ ಅವರನ್ನು ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಆಟಗಾರರ ಹರಾಜಿನ ವೇಳೆ ಯಾವುದೇ ಫ್ರಾಂಚೈಸಿಗಳು ಖರೀದಿಸಲಿಲ್ಲ. ವಿಶ್ವದ ಆಕ್ರಮಣಕಾರಿ ಬ್ಯಾಟ್ಸ್‌ಮನ್‌ಗಳಲ್ಲಿ ಗುರುತಿಸಿಕೊಂಡಿರುವ ಫಿಂಚ್ ಸೇಲಾಗದೆ ಉಳಿದಿದ್ದು ಸಹಜವಾಗೇ ಅಚ್ಚರಿ ಮೂಡಿಸಿತ್ತು.

ಭಾರತ vs ಇಂಗ್ಲೆಂಡ್: ದಾಖಲೆ ಸನಿಹದಲ್ಲಿದ್ದಾರೆ ವೇಗಿ ಇಶಾಂತ್ ಶರ್ಮಾಭಾರತ vs ಇಂಗ್ಲೆಂಡ್: ದಾಖಲೆ ಸನಿಹದಲ್ಲಿದ್ದಾರೆ ವೇಗಿ ಇಶಾಂತ್ ಶರ್ಮಾ

ತಾನು ಐಪಿಎಲ್ ಹರಾಜಿನಲ್ಲಿ ಖರೀದಿಯಾಗದ ಬಗ್ಗೆ ಆ್ಯರನ್ ಫಿಂಚ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. 'ಮತ್ತೆ ಆಡುವಂತಾಗಿದ್ದರೆ ಚೆನ್ನಾಗಿರುತ್ತಿತ್ತು. ಭಾಗವಹಿಸುತ್ತಿದ್ದರೆ ಐಪಿಎಲ್ ಒಂದು ಅದ್ಭುತ ಸ್ಪರ್ಧೆ. ಆದರೆ ಪ್ರಮಾಣಿಕವಾಗಿ ಹೇಳೋದಾದ್ರೆ ನನ್ನನ್ನು ಯಾರೂ ಆರಿಸಲಾರರು ಎಂದು ನಿರೀಕ್ಷಿಸಿರಲಿಲ್ಲ,' ಎಂದಿದ್ದಾರೆ.

'ನಾನು ಕ್ರಿಕೆಟ್ ಆಡಲು ಬಯಸುತ್ತೇನೆ. ಆದರೆ ತವರಿನಲ್ಲಿ ಸ್ವಲ್ಪ ಸಮಯ ಒಳ್ಳೆಯ ದಿನಗಳಾಗಿರಲಿಲ್ಲ. ನಾನೀಗ ಕೆಲವು ತಾಂತ್ರಿಕ ಸಂಗತಿಗಳತ್ತ ಕೆಲಸ ಮಾಡುತ್ತಿದ್ದೇನೆ. ನನ್ನ ಪಾದದ ಮೇಲೆ ಕಡಿಮೆ ತೂಕ ಹಾಕಲು ನಾನು ಪ್ರಯತ್ನಿಸುತ್ತಿದ್ದೇನೆ. ಕೆಲವೊಮ್ಮೆ ನಾನು ಸ್ವಲ್ಪ ಫ್ಲ್ಯಾಟ್ ಪಾದವನ್ನು ಪಡೆಯಬಹುದು ಮತ್ತು ನನ್ನ ಪಾದಗಳನ್ನು ನೆಡಬಹುದು, ನಂತರ ನಾನು ಮತ್ತೆ ಚಲಿಸಲು ಕೊಂಚ ಹೆಣಗಾಡುತ್ತೇನೆ,' ಎಂದು ಕ್ರಿಕೆಟ್ ಡಾಟ್‌ ಕಾಮ್ ಡಾಟ್ ಎಯು ಜೊತೆ ಫಿಂಚ್ ಹೇಳಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಮನೆಯಲ್ಲಿ ಸೇವಕರೇ ಇಲ್ಲ: ಸರಂದೀಪ್ ಸಿಂಗ್ವಿರಾಟ್ ಕೊಹ್ಲಿ ಮನೆಯಲ್ಲಿ ಸೇವಕರೇ ಇಲ್ಲ: ಸರಂದೀಪ್ ಸಿಂಗ್

ಕಳೆದ ಐಪಿಎಲ್‌ ಸೀಸನ್‌ನಲ್ಲಿ ಆ್ಯರನ್ ಫಿಂಚ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. ಆದರೆ ಆರ್‌ಸಿಬಿಯಲ್ಲಿ ಫಿಂಚ್ ಅಂಥ ಗಮನಾರ್ಹ ಪ್ರದರ್ಶನ ನೀಡಿರಲಿಲ್ಲ. ಫಿಂಚ್ ಮೂಲಬೆಲೆ 1 ಕೋ.ರೂ. ಆಗಿದ್ದರಿಂದ ಈ ಬಾರಿ ಖರೀದಿಸಲು ಫ್ರಾಂಚೈಸಿಗಳು ಮುಂದೆ ಬಂದಿರಲಿಲ್ಲ.

Story first published: Monday, February 22, 2021, 13:27 [IST]
Other articles published on Feb 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X