ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಹೈದರಾಬಾದ್ ತಂಡದ ದೌರ್ಬಲ್ಯ ಗುರುತಿಸಿದ್ದಾರೆ ಎಬಿ ಡಿವಿಲಿಯರ್ಸ್!

IPL 2021: AB de Villiers Says SRH dont have as much depth as some other teams in the IPL

ಐಪಿಎಲ್ 2021ರ ಆವೃತ್ತಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೋಲಿನ ರುಚಿ ತೋರಿಸಿ ಭರ್ಜರಿಯಾಗಿ ಆರಂಭವನ್ನು ಪಡೆದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣೆಸಾಟವನ್ನು ನಡೆಸಲಿದೆ. ಆದರೆ ಈ ಪಂದ್ಯಕ್ಕೆ ಮುನ್ನ ಡೇವಿಡ್ ವಾರ್ನರ್ ಬಳಗದ ದೌರ್ಬಲ್ಯವನ್ನು ಆರ್‌ಸಿಬಿ ದಾಂಡಿಗ ಎಬಿ ಡಿವಿಲಿಯರ್ಸ್ ಬಹಿರಂಗಪಡಿಸಿದ್ದಾರೆ.

ಆರ್‌ಸಿಬಿ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಎರಡನೇ ಪಂದ್ಯದ ಆರಂಭಕ್ಕೂ ಮುನ್ನ ಈ ಬಗ್ಗೆ ಮಾತನಾಡಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ತಂಡ ಬ್ಯಾಟಿಂಗ್‌ನಲ್ಲಿ ಎದುರಿಸುತ್ತಿರುವ ದೌರ್ಬಲ್ಯವನ್ನು ಅವರು ಬಹಿರಂಗಪಡಿಸಿದ್ದಾರೆ. ಈ ಕಾರಣದಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ಮೇಲುಗೈ ಸಾಧಿಸಲಿದೆ ಎಂದಿದ್ದಾರೆ ಡಿವಿಲಿಯರ್ಸ್.

ಎಬಿಡಿ ದಾಖಲೆಯನ್ನು ಸರಿದೂಗಿಸಿದ ಸಂಜು ಸ್ಯಾಮ್ಸನ್ಎಬಿಡಿ ದಾಖಲೆಯನ್ನು ಸರಿದೂಗಿಸಿದ ಸಂಜು ಸ್ಯಾಮ್ಸನ್

"ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡುವುದನ್ನು ನಾನು ಆನಂದಿಸುತ್ತೇನೆ. ಈ ದಾಳಿಯನ್ನು ಎದುರಿಸುವುದು ಅತ್ಯುತ್ತಮ, ಸವಾಲಾಗಿದೆ. ತಮ್ಮ ಕೌಶಲ್ಯ ಹಾಗೂ ಬುದ್ಧಿವಂತಿಕೆಯಿಂದ ಅವರು ಸವಾಲೊಡ್ಡಲಿದ್ದಾರೆ. ಇಲ್ಲಿ ನಾವು ಕೆಲ ಉತ್ತಮ ಜೊತೆಗಾರಿಕೆಯನ್ನು ಕಾಣುವುದು ಮುಖ್ಯವಾಗುತ್ತದೆ. ಅವರ ವಿರುದ್ಧ ಒಂದು ಬಾರಿ ಮೇಲುಗೈ ಸಾಧಿಸಿದರೆ ಪಂದ್ಯದ ಮೇಲೆ ಪ್ರಾಬಲ್ಯವನ್ನು ಸಾಧಿಸಲಿದ್ದೇವೆ" ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

ಐಪಿಎಲ್‌ನಲ್ಲಿ ಉಳಿದ ಕೆಲ ತಂಡಗಳಿಗೆ ಹೋಲಿಸಿದರೆ ಹೈದರಾಬಾದ್ ತಂಡ ಸದೃಢ ಬ್ಯಾಟಿಂಗ್ ಹೊಂದಿಲ್ಲ. ಅವರನ್ನು ನಾವು ಬೇಗನೆ ಹಿಡಿದಿಡಲು ಸಾಧ್ಯವಾದರೆ ಬಳಿಕ ಮತ್ತೆ ಪಂದ್ಯ ಅವರ ಹಿಡಿತಕ್ಕೆ ಸಿಗದಂತೆ ಮಾಡಬೇಕು. ಯಾಕೆಂದರೆ ಅಲ್ಲಿಯೇ ಅವರು ಅಪಾಯಕಾರಿಯಾಗಬಲ್ಲರು" ಎಂದು ಡಿವಿಲಿಯರ್ಸ್ ವಿವರಿಸಿದ್ದಾರೆ.

ಮೋರಿಸ್‌ಗೆ ಸಿಂಗಲ್‌ ನಿರಾಕರಿಸಿದ ಸಂಜು ಸ್ಯಾಮ್ಸನ್: ನೆಟ್ಟಿಗರ ತಮಾಷೆಮೋರಿಸ್‌ಗೆ ಸಿಂಗಲ್‌ ನಿರಾಕರಿಸಿದ ಸಂಜು ಸ್ಯಾಮ್ಸನ್: ನೆಟ್ಟಿಗರ ತಮಾಷೆ

ಆರ್‌ಸಿಬಿ ತಂಡದ ಪ್ರಥಮ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ತಂಡದ ಪರವಾಗಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರನಾಗಿದ್ದರು. ಎಬಿಡಿ ಆ ಪಂದ್ಯದಲ್ಲಿ 48 ರನ್‌ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

Story first published: Wednesday, April 14, 2021, 14:32 [IST]
Other articles published on Apr 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X