ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ 5 ಅನ್‌ಕ್ಯಾಪ್‌ಡ್ ಆಟಗಾರರು ಮುಂದಿನ ಐಪಿಎಲ್‌ನಲ್ಲಿ ಬಾಚಿಕೊಳ್ಳಲಿದ್ದಾರೆ ಕೋಟಿ ಕೋಟಿ ದುಡ್ಡು!

IPL 2021: after extraordinary performance these 5 uncapped cricketers will earn big in IPL 2022

ಈ ಬಾರಿಯ ಐಪಿಎಲ್ ಆವೃತ್ತಿ ಈಗ ಅಂತಿಮ ಘಟ್ಟಕ್ಕೆ ತಲುಪಿದೆ. ಲೀಗ್ ಹಂತದ ಕೊನೆಯ ಪಂದ್ಯಗಳು ನಡೆಯುತ್ತಿದೆ. ಈ ಬಾರಿಯ ಐಪಿಎಲ್ ಆವೃತ್ತಿ ಮತ್ತಷ್ಟು ಹೊಸ ತಾರೆಗಳನ್ನು ಭಾರತೀಯ ಕ್ರಿಕೆಟ್‌ಗೆ ನೀಡಿದೆ. ಯುವ ಪ್ರತಿಭಾನ್ವಿತ ಆಟಗಾರರು ತಮಗೆ ಸಿಕ್ಕ ಅವಕಾಶವನ್ನು ಅಷ್ಟೇ ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಈ ಮೂಲಕ ಕ್ರಿಕೆಟ್ ಲೋಕದ ಗಮನವನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರತಿ ಬಾರಿಯ ಐಪಿಎಲ್‌ನಂತೆ ಈ ಬಾರಿಯೂ ಕೆಲ ಯುವ ಆಟಗಾರರ ಪ್ರತಿಭೆ ಐಪಿಎಲ್‌ನಿಂದಾಗಿ ಬೆಳಕಿಗೆ ಬಂದಿದೆ. ಅದರಲ್ಲೂ ಕೆಲ ಆಟಗಾರರ ಪ್ರದರ್ಶನ ಅತ್ಯದ್ಭುತವಾಗಿದ್ದು ಹಿರಿಯ ಆಟಗಾರರ ಪ್ರದರ್ಶನವನ್ನು ಕೂಡ ಮೀರಿಸುವಂತಾ ಆಟವನ್ನು ಪ್ರದರ್ಶಿಸಿದ್ದಾರೆ.

ಆ ರನೌಟ್ ಪಂದ್ಯದ ಗತಿ ಬದಲಾಯಿಸಿತು: ಎಸ್‌ಆರ್‌ಹೆಚ್ ವಿರುದ್ಧ ಸೋತ ಬಳಿಕ ಕೊಹ್ಲಿ ಪ್ರತಿಕ್ರಿಯೆಆ ರನೌಟ್ ಪಂದ್ಯದ ಗತಿ ಬದಲಾಯಿಸಿತು: ಎಸ್‌ಆರ್‌ಹೆಚ್ ವಿರುದ್ಧ ಸೋತ ಬಳಿಕ ಕೊಹ್ಲಿ ಪ್ರತಿಕ್ರಿಯೆ

ಇನ್ನು ಮುಂದಿನ ಐಪಿಎಲ್ ಆವೃತ್ತಿಗೂ ಮುನ್ನ ಮೆಗಾ ಐಪಿಎಲ್ ಆಕ್ಷನ್ ನಡೆಯಲಿರುವ ಕಾರಣ ಈ ಆಟಗಾರರ ಪ್ರದರ್ಶನ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಈ ಆಟಗಾರರನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ತಂಡಗಳು ಯೋಜನೆಗಳನ್ನು ಹಾಕಿಕೊಳ್ಳುತ್ತಿವೆ. ಹೀಗಾಗಿ ಇಂಥಾ ಆಟಗಾರರು ತಮ್ಮ ತಂಡದಲ್ಲಿಯೇ ಉಳಿದುಕೊಂಡರೂ ಅಥವಾ ಹರಾಜಿಗೆ ಹೋದರೂ ದೊಡ್ಡ ಮೊತ್ತವನ್ನು ಪಡೆಯುವುದರಲ್ಲಿ ಅನುಮಾನವಿಲ್ಲ. ಟೀಮ್ ಇಂಡಿಯಾದ ಕ್ಯಾಪ್ ಧರಿಸದ ಅಂಥಾ ಐದು ಪ್ರತಿಭಾವಂತ ಆಟಗಾರರ ವಿವರ ಇಲ್ಲಿದೆ.

ಐಪಿಎಲ್ 2021ರ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ಹರ್ಷಲ್ ಪಟೇಲ್

ಐಪಿಎಲ್ 2021ರ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ಹರ್ಷಲ್ ಪಟೇಲ್

ಆರ್‌ಸಿಬಿ ತಂಡದ ವೇಗದ ಬೌಲರ್ ಹರ್ಷಲ್ ಪಟೇಲ್ ಈ ಬಾರಿಯ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಈ ಮೂಲಕ ಆರ್‌ಸಿಬಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಹರ್ಷಲ್ ಪಟೇಲ್. ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಪರವಾಗಿ ಆಡಿದ 13 ಪಂದ್ಯಗಳಲ್ಲಿ ಹರ್ಷಲ್ ಪಟೇಲ್ ಬರೊಬ್ಬರಿ 29 ವಿಕೆಟ್ ಕಬಳಿಸಿದ್ದಾರೆ. ಭಾರತೀಯ ಬೌಲರ್ ಓರ್ವ ಒಂದು ಆವೃತ್ತಿಯಲ್ಲಿ ಪಡೆದ ಅತಿ ಹೆಚ್ಚಿನ ವಿಕೆಟ್ ಇದಾಗಿದೆ.

ಹರ್ಷಲ್ ಪಟೇಲ್ ಅವರ ವಿಕೆಟ್ ಖಾತೆಯಲ್ಲಿ ಈಗ ಐದು ವಿಕೆಟ್‌ಗಳ ಗೊಂಚಲು ಹಾಗೂ ನಾಲ್ಕು ವಿಕೆಟ್‌ಗಳ ಗೊಂಚಲು ಕೂಡ ಸೇರ್ಪಡೆಯಾಗಿದೆ. ಅಲ್ಲದೆ ಒಂದು ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆಯನ್ನು ಕೂಡ ಮಾಡಿದ್ದಾರೆ ಈ ಆರ್‌ಸಿಇ ತಂಡದ ವೇಗದ ಬೌಲರ್. ಆದರೆ ಬಹುತೇಕ ಕ್ರಿಕೆಟಿಗರಿಗೆ ಗೊತ್ತಿಲ್ಲದ ಸಂಗತಿಯೆಂದರೆ ಈಗ ಹರ್ಷಲ್ ಪಟೇಲ್ ಪಡೆಯುತ್ತಿರುವ ಸಂಭಾವನೆ 20 ಲಕ್ಷ ರೂಪಾಯಿ ಮಾತ್ರ. ಆದರೆ ಈ ಬಾರಿಯ ಐಪಿಎಲ್‌ನ ಈ ಅಮೋಘ ಪ್ರದರ್ಶನದಿಂದಾಗಿ ಮುಂದಿನ ಐಪಿಎಲ್‌ನಲ್ಲಿ ಹರ್ಷಲ್ ಕೋಟಿ ಬಾಚುವುದರಲ್ಲಿ ಸಂಶಯವಿಲ್ಲ.

ಡೆಲ್ಲಿ ಕ್ಯಾಪಿಟಲ್ಸ್ ಯುವ ವೇಗಿ ಆವೇಶ್ ಖಾನ್

ಡೆಲ್ಲಿ ಕ್ಯಾಪಿಟಲ್ಸ್ ಯುವ ವೇಗಿ ಆವೇಶ್ ಖಾನ್

ಈ ಬಾರಿಯ ಐಪಿಎಲ್‌ನಲ್ಲಿ ಮಿಂಚು ಹರಿಸಿರುವ ಮತ್ತೋರ್ವ ಅನ್‌ಕ್ಯಾಪ್‌ಡ್ ಆಟಗಾರ ಎಂದರೆ ಅದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಯುವ ವೇಗಿ ಆವೇಶ್ ಖಾನ್. ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಪರ್ಪಲ್ ಕ್ಯಾಪ್ ಪಡೆದಿರುವ ಹರ್ಷಲ್ ಪಟೇಲ್‌ಗಿಂತ ಒಂದು ಸ್ಥಾನ ಹಿಂದಿದ್ದಾರೆ ಆವೇಶ್ ಖಾನ್.

ಡೆಲ್ಲಿ ಪರವಾಗಿ ಈ ಬಾರಿಯ ಐಪಿಎಲ್‌ನಲ್ಲಿ 13 ಪಂದ್ಯಗಳಲ್ಲಿಯೂ ಆಡಿರುವ ಆವೇಶ್ ಖಾನ್ 22 ವಿಕೆಟ್ ಸಂಪಾದಿಸಿದ್ದಾರೆ. ಈ ಮೂಲಕ ಡೆಲ್ಲಿ ತಂಡದ ಯಶಸ್ಸಿನಲ್ಲಿ ಆವೇಶ್ ಗಣನೀಯ ಕೊಡುಗೆ ನೀಡಿದ್ದಾರೆ. ಆವೇಶ್ ಖಾನ್ ಸದ್ಯ ಪಡೆಯುತ್ತಿರುವ ಸಂಭಾವನೆ 70 ಲಕ್ಷ ರೂಪಾಯಿ. ಮುಂದಿನ ಆವೃತ್ತಿಯಲ್ಲಿ ಹರ್ಷಲ್ ಪಟೇಲ್ ರೀತಿಯಲ್ಲಿಯೇ ಕೋಟಿಗೂ ಅಧಿಕ ಮೊತ್ತದ ಸಂಭಾವನೆ ಪಡೆಯುವುದರಲ್ಲಿ ಅನುಮಾನವಿಲ್ಲ.

ಪಂಜಾಬ್ ಕಿಂಗ್ಸ್ ವೇಗಿ ಅರ್ಷದೀಪ್ ಸಿಂಗ್

ಪಂಜಾಬ್ ಕಿಂಗ್ಸ್ ವೇಗಿ ಅರ್ಷದೀಪ್ ಸಿಂಗ್

ಈ ಬಾರಿಯ ಐಪಿಎಲ್‌ನಲ್ಲಿಯೂ ಮುಗ್ಗರಿಸಿರುವ ಪಂಜಾಬ್ ಕಿಂಗ್ಸ್ ಪರವಾಗಿ ಆಶಾದೀಪದಂತೆ ಗೋಚರಿಸಿದ ಆಟಗಾರನೆಂದರೆ ಅದು ಯುವ ವೇಗಿ ಅರ್ಷದೀಪ್ ಸಿಂಗ್. ಈ ಬಾರಿಯ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರವಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ ಅರ್ಹದೀಪ್. 11 ಪಂದ್ಯಗಳನ್ನು ಆಡಿರುವ ಅರ್ಷದೀಪ್ ಸಿಂಗ್ 16 ವಿಕೆಟ್ ಪಡೆದಿದ್ದಾರೆ. ಈ ರೀತಿಯ ಅದ್ಭುತ ಪ್ರದರ್ಶನ ನಿಡಿರುವ ಕಾರಣದಿಂದಾಗಿ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಅರ್ಷದೀಪ್ ಸಿಂಗ್‌ಗೆ ಹೆಚ್ಚಿನ ಬೇಡಿಕೆ ಬರುವುದರಲ್ಲಿ ಅನುಮಾನವಿಲ್ಲ. ಈ ಬಾರಿಯ ವೃತ್ತಿಯಲ್ಲಿ 20 ಲಕ್ಷ ಸಂಭಾವನೆ ಪಡೆದಿರುವ ಅರ್ಷದೀಒ್ ಸಿಂಗ್ ಮುಂದಿನ ಐಪಿಎಲ್‌ನಲ್ಲಿ ತಮ್ಮ ಸಂಭಾವನೆಯನ್ನು ಭಾರೀ ಪ್ರಮಾಣದಲ್ಲಿ ಏರಿಸಿಕೊಳ್ಳುವದರಲ್ಲಿ ಅನುಮಾನವಿಲ್ಲ.

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ರಾಹುಲ್ ತ್ರಿಪಾಠಿ

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ರಾಹುಲ್ ತ್ರಿಪಾಠಿ

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮೂರನೇ ಕ್ರಮಾಂಕದ ದಾಂಡಿಗ ರಾಹುಲ್ ತ್ರಿಪಾಠಿ ಈ ಬಾರಿಯ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು ಸ್ಥಿರವಾಗಿ ರನ್‌ಗಳಿಸಿದ್ದಾರೆ. 2019ರ ಐಪಿಎಲ್ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನಿಡಿದ ಪರಿಣಾಮವಾಗಿ 3.4 ಕೋಟಿ ಸಂಭಾವನೆ ಪಡೆದಿದ್ದ ರಾಹುಲ್ ತ್ರಿಪಾಠಿ 2020ರ ಆವೃತ್ತಿಯಲ್ಲಿ 60 ಲಕ್ಷಕ್ಕೆ ಕುಸಿದಿದ್ದರು.

ಆದರೆ ಈ ಬಾರಿಯ ಐಪಿಎಲ್‌ನಲ್ಲಿ ತ್ರಿಪಾಠಿ ಅದ್ಭುತ ಆಟವನ್ನು ಪ್ರದರ್ಶಿಸಿದ್ದು ಕೆಕೆಆರ್ ಪರವಾಗಿ ಅತಿ ಹೆಚ್ಚಿನ ರನ್‌ಗಳಿಸಿದ ಆಟಗಾರನಾಗಿದ್ದಾರೆ. ಕೆಕೆಆರ್ ರಾಹುಲ್ ತ್ರಿಪಾಠಿಯನ್ನು ತನ್ನಲ್ಲೇ ಉಳಿಸಿಳ್ಳುವ ಸಾಧ್ಯತೆ ತುಂಬಾ ಹೆಚ್ಚಿದೆ. ಒಂದು ವೇಳೆ ಹರಾಜಿಗೆ ಬಿಟ್ಟರೂ ತ್ರಿಪಾಠಿ ಉತ್ತಮ ಮೊತ್ತವನ್ನು ಪಡೆಯುವುದರಲ್ಲಿ ಅನುಮಾನವಿಲ್ಲ.

KL Rahul ಪಂದ್ಯ ಮುಗಿದಾದ ನಂತರ ಹೇಳಿದ್ದೇನು | Oneindia Kannada
ಕೆಕೆಆರ್ ಆರಂಭಿಕ ಆಟಗಾರ ವೆಂಕಟೇಶ್ ಐಯ್ಯರ್

ಕೆಕೆಆರ್ ಆರಂಭಿಕ ಆಟಗಾರ ವೆಂಕಟೇಶ್ ಐಯ್ಯರ್

ಈ ಬಾರಿಯ ಐಪಿಎಲ್ ಆವೃತ್ತಿಯ ಯುಎಇ ಚರಣದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಅಮೋಘವಾಗಿ ಪ್ರದರ್ಶನ ನೀಡುವ ಮೂಲಕ ಕಮ್‌ಬ್ಯಾಕ್ ಮಾಡಿದೆ. ಕೆಕೆಆರ್ ತಂಡದ ಈ ಪ್ರದರ್ಶನದಲ್ಲಿ ಪ್ರಮುಖ ಪಾತ್ರವಹಿಸಿದವರೆಂದರೆ ಅದು ವೆಂಕಟೇಶ್ ಐಯ್ಯರ್. ಆರಂಭಿಕನಾಗಿ ಕಣಕ್ಕಿಳಿದು ತಂಡಕ್ಕೆ ಅದ್ಭುತವಾದ ಕೊಡುಗೆ ನೀಡಿದ್ದಾರೆ. ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್‌ನಲ್ಲಿಯೂ ಕೈಬಳಕ ತೋರಿಸುವ ಸಾಮರ್ಥ್ಯವಿರುವ ಐಯ್ಯರ್ ಈ ಬಾರಿಯ ಆವೃತ್ತಿಯಲ್ಲಿ 20 ಲಕ್ಷ ಸಂಭಾವನೆ ಪಡೆದಿದ್ದಾರೆ. ಆದರೆ ಮುಂದಿನ ಐಪಿಎಲ್ ಹರಾಜಿನಲ್ಲಿ ಇವರು ಖಂಡಿತಾ ದೊಡ್ಡ ಮೊತ್ತವನ್ನು ಪಡೆಯುವುದರಲ್ಲಿ ಅನುಮಾನವಿಲ್ಲ.

Story first published: Thursday, October 7, 2021, 19:00 [IST]
Other articles published on Oct 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X