ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಅಭಿಯಾನ ಮುಗಿಸಿದ ಆರ್‌ಆರ್: ಡ್ರೆಸ್ಸಿಂಗ್ ರೂಮ್‌ನಲ್ಲಿ ನಾಯಕ ಸಂಜು ಭಾವನಾತ್ಮಕ ಮಾತು

IPL 2021: After RRs final match, Sanju Samson gave an emotional dressing room speech

ಈ ಬಾರಿಯ ಐಪಿಎಲ್‌ನಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ತಾನ್ ರಾಯಲ್ಸ್ ತಂಡ ತನ್ನ ಲೀಗ್ ಹಂತದ ಅಂತಿಮ ಪಂದ್ಯವನ್ನು ಕೆಕೆಆರ್ ವಿರುದ್ಧ ಗುರುವಾರ ಆಡಿದ್ದು ಸೋಲಿನೊಂದಿಗೆ ಅಭಿಯಾನ ಅಂತ್ಯಗೊಳಿಸಿದೆ. ಈ ಪಂದ್ಯದ ಬಳಿಕ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಡ್ರೆಸ್ಸಿಂಗ್ ರೂಮ್‌ನಲ್ಲಿ ತಂಡದ ಸಹ ಆಟಗಾರರನ್ನು ಉದ್ದೇಶಿಸಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡ ಈ ಬಾರಿಯ ಆವೃತ್ತಿಯನ್ನು ಭಾರೀ ಅಂತರದ ಸೋಲಿನಿಂದಿಗೆ ಅಂತ್ಯಗೊಳಿಸಿದೆ. ಕೆಕೆಆರ್ ವಿರುದ್ಧ ನಡೆದ ಅಂತಿಮ ಪಂದ್ಯದಲ್ಲಿ ರಾಜಸ್ಥಾನ್ 86 ರನ್‌ಗಳ ಅಂತರದಿಂದ ಸೋಲು ಕಂಡಿದೆ. ಆದರೆ ಟೂರ್ನಿಯಲ್ಲಿ ತಂಡದ ಸದಸ್ಯರು ನೀಡಿದ ಪ್ರದರ್ಶನಕ್ಕೆ ನಾಯಕ ಸಂಜು ಸ್ಯಾಮ್ಸನ್ ಮೆಚ್ಚುಗೆಯನ್ನು ವ್ಯಕ್ತಪೊಡಿಸಿದ್ದು ಎಲ್ಲರಿಗೂ ಧನ್ಯವಾದವನ್ನು ಅರ್ಪಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು "ಡ್ರೆಸ್ಸಿಂಗ್ ರೂಮ್‌ನಿಂದ, ಕೊನೆಯ ಬಾರಿಗೆ" ಎಂದು ಅಡಿ ಬರಹವನ್ನು ನೀಡಿದೆ.

ಡೆಲ್ಲಿ ವಿರುದ್ಧ ಕಣಕ್ಕಿಳಿಯಲಿದೆ ಈ ಬಲಿಷ್ಠ ಆರ್‌ಸಿಬಿ ತಂಡ; ಪಂದ್ಯದ ನಂತರ ಆರ್‌ಸಿಬಿಗೆ ಯಾವ ಸ್ಥಾನ ಸಿಗಲಿದೆ?ಡೆಲ್ಲಿ ವಿರುದ್ಧ ಕಣಕ್ಕಿಳಿಯಲಿದೆ ಈ ಬಲಿಷ್ಠ ಆರ್‌ಸಿಬಿ ತಂಡ; ಪಂದ್ಯದ ನಂತರ ಆರ್‌ಸಿಬಿಗೆ ಯಾವ ಸ್ಥಾನ ಸಿಗಲಿದೆ?

ಕೆಕೆಆರ್ ವಿರುದ್ಧದ ಪಂದ್ಯದ ಬಳಿಕ ಎಲ್ಲಾ ಆಟಗಾರರಿಗೂ ಸಂಜು ಸ್ಯಾಮ್ಸನ್ ಧನ್ಯವಾದ ತಿಳಿಸಿದ್ದಾರೆ. "ಎಲ್ಲರೂ ನನ್ನನ್ನು ಅರ್ಥ ಮಾಡಿಕೊಂಡಿರುವ ಕಾರಣಕ್ಕೆ ಧನ್ಯವಾದಗಳು. ನಿಮ್ಮೆಲ್ಲರ ಪ್ರಯತ್ನಕ್ಕೆ ಧನ್ಯವಾದಗಳುಮ ನಿಮ್ಮೆಲ್ಲರ ಉತ್ಸಾಹ, ಕಳೆದ ಒಂದೂವರೆ ತಿಂಗಳಿನಲ್ಲಿ ನಿಮ್ಮ ಬದ್ಧತೆಗೆ ನಾನು ಹೃದಯಾಂತರಾಳದಿಂದ ಧನ್ಯವಾದವನ್ನು ಸಲ್ಲಿಸುತ್ತೇನೆ" ಎಂದಿದ್ದಾರೆ ಸಂಜು ಸ್ಯಾಮ್ಸನ್.

"ಯಾವಿದೇ ವಿಚಾರಗಳಿಗೂ ನನ್ನಲ್ಲಿ ದೂರುಗಳಿಲ್ಲ. ಖಂಡಿತಾ ನಾವು ಹೆಚ್ಚುನ ಪಂದ್ಯಗಳನ್ನು ಗೆಲ್ಲಲು ಬಯಸಿದ್ದೆವು. ಆದರೆ ಈ ಆಟವಿರುದೇ ಹೀಗೆ. ನಾವೆಲ್ಲರೂ ಇದರಿಂದ ಕಲಿತುಕೊಳ್ಳಬೇಕಿದೆ ಹಾಘೂ ಮತ್ತಷ್ಟು ಉತ್ತಮ ಆಟಗಾರರಾಗೋಣ. ನಾವು ಅದನ್ನು ಮಾತ್ರ ಮಾಡಲು ನಮ್ಮಿಂದ ಸಾಧ್ಯವಿದೆ" ಎಂದಿದ್ದಾರೆ ಸಂಜು ಸ್ಯಾಮ್ಸನ್. ಇನ್ನು ಇದೇ ಸಂದರ್ಭದಲ್ಲಿ ಸಂಜು 26 ವರ್ಷದ ಆಟಗಾರನಾಗಿ ಒಂದು ಐಪಿಎಲ್ ತಂಡವನ್ನು ಮುನ್ನಡೆಸುವುದು ಕಠಿಣವಾದ ಕೆಲಸ ಎಂದಿದ್ದಾರೆ. ಆದರೆ ಆಟಗಾರರು ತನ್ನೊಂದಿಗೆ ವರ್ತಿಸಿದ ರೀತಿಯಿಂದಾಗಿ, ನಿಡಿದ ಪ್ರೀತಿ ಹಾಗೂ ಗೌರವದ ಕಾರಣದಿಂದಾಗಿ ಈ ಜವಾನ್ಧಾರಿ ಹೆಚ್ಚು ಸುಲಭವಾಯಿತು ಎಂದು ಹೇಳಿಕೊಂಡಿದ್ದಾರೆ.

ಆರ್‌ಸಿಬಿಗೆ ಇನ್ನೂ ಇದೆ ದ್ವಿತೀಯ ಸ್ಥಾನ ಪಡೆಯುವ ಅವಕಾಶ!; ಹೀಗಾದರೆ ಮಾತ್ರಆರ್‌ಸಿಬಿಗೆ ಇನ್ನೂ ಇದೆ ದ್ವಿತೀಯ ಸ್ಥಾನ ಪಡೆಯುವ ಅವಕಾಶ!; ಹೀಗಾದರೆ ಮಾತ್ರ

ಇನ್ನು ಇದೇ ಸಂದರ್ಭದಲ್ಲಿ ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತಂಡದ ನಿರ್ದೇಶಕ ಕುಮಾರ್ ಸಂಗಕ್ಕರ ಹಾಗೂ ಕೋಚಿಂಗ್ ಸಿಬ್ಬಂದಿಗಳಿಗೂ ಧನ್ಯವಾದ ತಿಳಿಸಿದ್ದಾರೆ. ಬಳಿಕ ಕುಮಾರ್ ಸಂಗಕ್ಕರ ಕೂಡ ಮಾತನಾಡಿದ್ದು ಆಟಗಾರರ ಪ್ರಯತ್ನಗಳಿಗೆ ಧನ್ಯವಾದ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಆಟಗಾರರು ಯಾವುದೇ ಫ್ರಾಂಚೈಸಿಯಲ್ಲಿದ್ದರೂ ತಮ್ಮ ಆಟವನ್ನು ದಿನದಿಂದ ದಿನಕ್ಕೆ ಉತ್ತಮ ಪಡಿಸಿಕೊಳ್ಳುತ್ತಾ ಸಾಗಬೇಕು ಎಂದಿದ್ದಾರೆ.

ಆಟಗಾರನಾಗಿ ಮಿಂಚಿದ ಸಂಜು ಸ್ಯಾಮ್ಸನ್: ಈ ಬಾರಿಯ ಐಪಿಎಲ್‌ನಲ್ಲಿ ನಾಯಕನಾಗಿ ಮೊದಲ ಬಾರಿಗೆ ಜವಾಬ್ಧಾರಿ ವಹಿಸಿಕೊಂಡ ಸಂಜು ಸ್ಯಾಮ್ಸನ್ ಬ್ಯಾಟ್ಸ್‌ಮನ್ ಆಗಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಆವೃತ್ತಿಯಲ್ಲಿ ಸಂಜು ಐಪಿಎಲ್‌ನಲ್ಲಿ ತನ್ನ ಅತಿ ಹೆಚ್ಚಿನ ಸ್ಕೋರ್ ಗಳಿಸಿದ್ದಾರೆ. 14 ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಈ ಬಾರಿ 484 ರನ್‌ಗಳಿಸಿದ್ದಾರೆ. ಒಂದು ಶತಕ ಹಾಗೂ ಎರಡು ಅರ್ಧ ಶತಕ ಬಾರಿಸಿರುವ ಸಂಜು 40.33ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

Story first published: Saturday, October 9, 2021, 10:45 [IST]
Other articles published on Oct 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X