ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡೆಲ್ಲಿ ಕ್ಯಾಪಿಟಲ್ಸ್ ಸ್ಪಿನ್ನರ್ ಅಮಿತ್ ಮಿಶ್ರಾಗೆ ಎಚ್ಚರಿಸಿದ ಅಂಪೈರ್

IPL 2021: Amit Mishra Warned By Umpires For Applying Saliva on Ball

ಅಹ್ಮದಾಬಾದ್: ಡೆಲ್ಲಿ ಕ್ಯಾಪಿಟಲ್ಸ್‌ನ ಬಲಗೈ ಲೆಗ್‌ಬ್ರೇಕ್‌ ಸ್ಪಿನ್ನರ್ ಅಮಿತ್ ಮಿಶ್ರಾಗೆ ಅಂಪೈರ್‌ ಎಚ್ಚರಿಸಿರುವ ಸಂಗತಿ ನಡೆದಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 22ನೇ ಪಂದ್ಯದಲ್ಲಿ ಮಿಶ್ರಾ, ಅಂಪೈರ್ ಅಸಮಾಧಾನಕ್ಕೆ ಕಾರಣರಾಗಿದ್ದಾರೆ. ಪಂದ್ಯದ ವೇಳೆ ಮಿಶ್ರಾ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಯಮ ಮೀರಿದ್ದರಿಂದ ಅಂಪೈರ್ ಎಚ್ಚರಿಸಬೇಕಾಗಿ ಬಂದಿತ್ತು.

ಕೋಡ್ ಮೂಲಕ ಪಂಜಾಬ್‌ಗೆ ಕೋಲ್ಕತ್ತಾದಿಂದ ಮೋಸ?: ಏನಿದು ವಿವಾದ?!ಕೋಡ್ ಮೂಲಕ ಪಂಜಾಬ್‌ಗೆ ಕೋಲ್ಕತ್ತಾದಿಂದ ಮೋಸ?: ಏನಿದು ವಿವಾದ?!

ಮಂಗಳವಾರ (ಏಪ್ರಿಲ್ 27) ನಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಆರ್‌ಸಿಬಿ ರೋಚಕ 1 ರನ್‌ನಿಂದ ಗೆದ್ದಿತ್ತು. ಎಬಿ ಡಿ ವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್‌ನಿಂದ ಬೆಂಗಳೂರು ಟೂರ್ನಿಯ 5ನೇ ಗೆಲುವು ಕಂಡಿತ್ತು. ಈ ಪಂದ್ಯದಲ್ಲಿ ಅಮಿತ್ ಮಿಶ್ರಾ ಐಸಿಸಿ ನಿಯಮ ಮೀರಿ ಅಂಪೈರ್‌ ಅವರಿಂದ ಎಚ್ಚರಿಸಲ್ಪಟ್ಟಿದ್ದಾರೆ.

ಮಿಶ್ರಾ ಮಾಡಿದ ತಪ್ಪೇನು?

ಮಿಶ್ರಾ ಮಾಡಿದ ತಪ್ಪೇನು?

ಕೋವಿಡ್-19 ಭೀತಿ ಕಾಡುತ್ತಿರುವ ಈ ದಿನಗಳಲ್ಲಿ ಕ್ರಿಕೆಟ್‌ನಲ್ಲೂ ಹೊಸ ನಿಯಮಗಳು ಜಾರಿಯಾಗಿವೆ. ಕೋವಿಡ್ ಮಾರ್ಗಸೂಚಿ-ಮುನ್ನೆಚ್ಚರಿಕಾ ಕ್ರಮವಾಗಿ ಹಿಂದೆ ಕ್ರಿಕೆಟ್‌ನಲ್ಲಿ ಬಳಕೆಯಲ್ಲಿದ್ದ ಚೆಂಡಿಗೆ ಉಗುಳು ಹಚ್ಚುವ ವಿಧಾನವನ್ನು ನಿಲ್ಲಿಸಲಾಗಿದೆ. ಆದರೆ ಮಿಶ್ರಾ, ಚೆಂಡಿಗೆ ಎಂಜಲು ಸವರಿ ನಿಯಮ ಉಲ್ಲಂಘಿಸಿಸಿದ್ದರು.

1 ವಿಕೆಟ್ ಪಡೆದಿದ್ದ ಮಿಶ್ರಾ

1 ವಿಕೆಟ್ ಪಡೆದಿದ್ದ ಮಿಶ್ರಾ

ಚೆಂಡು ಹೊಳೆಯುವಂತೆ ಮಾಡಲು ಆಟಗಾರರು ಈಗ ಚೆಂಡಿಗೆ ಎಂಜಲು ಹಚ್ಚುವಂತಿಲ್ಲ. ಆದರೆ ಸ್ವಲ್ಪಮಟ್ಟಿಗೆ ಬೆವರು ಹಚ್ಚಬಹುದಾಗಿದೆ. ಮಂಗಳವಾರದ ಪಂದ್ಯದ ವೇಳೆ ಮಿಶ್ರಾ ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ ಅಭ್ಯಾಸ ಬಲದಿಂದ ಚೆಂಡಿಗೆ ಎಂಜಲು ಹಚ್ಚಿದ್ದರು. ಅಂದ್ಹಾಗೆ ಪಂದ್ಯದಲ್ಲಿ 3 ಓವರ್‌ ಎಸೆದಿದ್ದ ಮಿಶ್ರಾ 27 ರನ್‌ ನೀಡಿ 1 ವಿಕೆಟ್ ಪಡೆದಿದ್ದರು.

ತಪ್ಪಿದರೆ ಶಿಕ್ಷೆಯೇನು?

ತಪ್ಪಿದರೆ ಶಿಕ್ಷೆಯೇನು?

ಮಿಶ್ರಾ, ಚೆಂಡಿಗೆ ಉಗುಳು ಹತ್ತಿರುವುದನ್ನು ಗಮನಿಸಿದ ಆನ್ ಫೀಲ್ಡ್ ಅಂಪೈರ್ ವೀರೇಂದರ್ ಶರ್ಮಾ ಮಿಶ್ರಾಗೆ ಎಚ್ಚರಿಕೆ ನೀಡಿ, ಚೆಂಡನ್ನು ಸ್ಯಾನಿಟೈಸ್ ಮಾಡಿ ಮತ್ತೆ ಬೌಲಿಂಗ್‌ಗೆ ಅನುವು ಮಾಡಿಕೊಟ್ಟರು. ಐಸಿಸಿ ಹೊಸ ನಿಯಮದ ಪ್ರಕಾರ, ಚೆಂಡಿಗೆ ಎಂಜಲು ಹಚ್ಚಿದರೆ ಆರಂಭದಲ್ಲಿ ಎಚ್ಚರಿಸಲಾಗುತ್ತದೆ. ಮತ್ತೂ ಅದೇ ತಪ್ಪು ಮುಂದುವರೆಸಿದರೆ ತಪ್ಪೆಸಗಿದಾತನ ತಂಡಕ್ಕೆ 5 ರನ್ ಪೆನಾಲ್ಟಿ ವಿಧಿಸಲಾಗುತ್ತದೆ.

Story first published: Wednesday, April 28, 2021, 15:37 [IST]
Other articles published on Apr 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X