ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾವನಾತ್ಮಕ ಸಂದೇಶ ಬರೆದು ಐಪಿಎಲ್‌ಗೆ ಗುಡ್‌ಬೈ ಹೇಳಿದ ಡೇವಿಡ್ ವಾರ್ನರ್

IPL 2021: An emotional David Warner bids goodbye to SunRisers Hyderabad

ಅಬುಧಾಬಿ: ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್‌ ಡೇವಿಡ್ ವಾರ್ನರ್ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2021ರ ಆವೃತ್ತಿಗೆ ಗುಡ್‌ ಬೈ ಹೇಳಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಸಂದೇಶ ಬರೆದುಕೊಂಡಿರುವ ವಾರ್ನರ್ ಅಭಿಮಾನಿಗಳನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಶುಕ್ರವಾರ (ಅಕ್ಟೋಬರ್ 8) ಲೀಗ್ ಹಂತದ ಕೊನೇ ಪಂದ್ಯದ ವೇಳೆ ವಾರ್ನರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡಿದ್ದರು.

ಐಪಿಎಲ್‌ನಲ್ಲಿ ಕೊನೇ ಎಸೆತಕ್ಕೆ ಸಿಕ್ಸ್ ಚಚ್ಚಿ ಪಂದ್ಯ ಗೆದ್ದ ದಾಖಲೆಗಳ ಪಟ್ಟಿ!ಐಪಿಎಲ್‌ನಲ್ಲಿ ಕೊನೇ ಎಸೆತಕ್ಕೆ ಸಿಕ್ಸ್ ಚಚ್ಚಿ ಪಂದ್ಯ ಗೆದ್ದ ದಾಖಲೆಗಳ ಪಟ್ಟಿ!

ಶುಕ್ರವಾರ ಐಪಿಎಲ್ 2021ರ ಲೀಗ್‌ ಹಂತದ ಕೊನೇ ಪಂದ್ಯ ನಡೆದಿತ್ತು. ಏಕಕಾಲದಲ್ಲಿ ನಡೆದಿದ್ದ ಎರಡು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್-ಸನ್ ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಡಿದ್ದವು. ಹೈದರಾಬಾದ್ ಪ್ಲೇ ಆಫ್ಸ್‌ಗೆ ಅರ್ಹತೆ ಪಡೆದುಕೊಂಡಿಲ್ಲವಾದ್ದರಿಂದ ಶುಕ್ರವಾರದ ಪಂದ್ಯ ಎಸ್‌ಆರ್‌ಎಚ್‌ನ ಕೊನೇ ಪಂದ್ಯವಾಗಿತ್ತು.

ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಏನು ಬರೆದುಕೊಳ್ಳಲಾಗಿದೆ?

ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಏನು ಬರೆದುಕೊಳ್ಳಲಾಗಿದೆ?

ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ನಾಯಕರಾಗಿದ್ದ ಡೇವಿಡ್ ವಾರ್ನರ್, ತಂಡದ ಪರ ಕೊನೇ ಪಂದ್ಯ ಆಡಿದ್ದು ಸೆಪ್ಟೆಂಬರ್ 25ರಂದು. ಆವತ್ತು ಪಂಜಾಬ್ ಕಿಂಗ್ಸ್ ವಿರುದ್ಧ ವಾರ್ನರ್ ಎಸ್‌ಆರ್‌ಎಚ್ ಪರ ಕಡೇಯ ಪಂದ್ಯ ಆಡಿದ್ದರು. ಈ ಐಪಿಎಲ್‌ನಲ್ಲಿ ಅಕ್ಟೋಬರ್‌ 8ರಂದು ಮುಂಬೈ ವಿರುದ್ಧ ಎಚ್‌ಆರ್‌ಎಚ್‌ನ ಕೊನೇ ಪಂದ್ಯವಾಗಿದ್ದರಿಂದ ವಾರ್ನರ್ ಬಹಳ ಬಾವುಕರಾಗಿದ್ದರು. ಆ ದಿನ ಇನ್‌ಸ್ಟಾಗ್ರಾಮ್ ಪೋಸ್ಟ್ ಹಾಕಿಕೊಂಡಿದ್ದ ವಾರ್ನರ್, "ಸುಂದರ ನೆನಪುಗಳನ್ನು ಸೃಷ್ಟಿಸಿದ್ದಕ್ಕಾಗಿ ಧನ್ಯವಾದಗಳು. ಎಲ್ಲಾ ಅಭಿಮಾನಿಗಳೆ, ನೀವು ನಮ್ಮ ತಂಡಕ್ಕೆ ಪ್ರೇರಕ ಶಕ್ತಿಯಾಗಿದ್ದಿರಿ. ನೀವು ತೋರಿದ ಬೆಂಬಲಕ್ಕಾಗಿ ನಾನು ಧನ್ಯವಾದ ಹೇಳಲು ಸಾಧ್ಯವೇ ಇಲ್ಲ. ನಿಮ್ಮೊಂದಿಗಿನ ಪ್ರಯಾಣ ತುಂಬ ಸೊಗಸಾಗಿತ್ತು. ನಾನು ಮತ್ತು ನನ್ನ ಕುಟುಂಬ ನಿಮ್ಮೆಲ್ಲರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದೆ. ಈ ದಿನ ಕೊನೇ ಪ್ರಯತ್ನ ನಮ್ಮದು," ಎಂದು ಪೋಸ್ಟ್‌ನಲ್ಲಿ ವಾರ್ನರ್ ಬರೆದುಕೊಂಡಿದ್ದಾರೆ. ಪೋಸ್ಟ್‌ ಜೊತೆಗೆ ವಾರ್ನರ್ ತಾನು ಎಸ್‌ಆರ್‌ಎಚ್ ಜೆರ್ಸಿ ಹಾಕಿರುವ ಫೋಟೋ ಕೂಡ ಹಾಕಿಕೊಂಡಿದ್ದರು. ಅಂದ್ಹಾಗೆ, ಶುಕ್ರವಾರದ ಪಂದ್ಯದಲ್ಲಿ ಹೈದರಾಬಾದ್ ತಂಡ ಮುಂಬೈ ವಿರುದ್ಧ 42 ರನ್‌ಗಳ ಸೋಲನುಭವಿಸಿತ್ತು.

ಕಳಪೆ ಪ್ರದರ್ಶನ ನೀಡಿದ್ದ ಡೇವಿಡ್ ವಾರ್ನರ್

ಕಳಪೆ ಪ್ರದರ್ಶನ ನೀಡಿದ್ದ ಡೇವಿಡ್ ವಾರ್ನರ್

ಈ ಐಪಿಎಲ್ ಸೀಸನ್‌ನಲ್ಲಿ ಡೇವಿಡ್ ವಾರ್ನರ್ ಕಳಪೆ ಬ್ಯಾಟಿಂಗ್‌ ನೀಡಿದ್ದರು. ಒಂದಿಷ್ಟು ಪಂದ್ಯಗಳಲ್ಲಿ ವಾರ್ನರ್‌ಗೆ ಪ್ಲೇಯಿಂಗ್‌ XIನಲ್ಲಿ ಅವಕಾಶವೇ ನೀಡಿರಲಿಲ್ಲ. ನೀಡಿದ ಪಂದ್ಯದಲ್ಲೂ ವಾರ್ನರ್ ಯಾಕೋ ಗಮನಾರ್ಹ ಪ್ರದರ್ಶನ ತೋರಿರಲಿಲ್ಲ. ಲೀಗ್‌ ಹಂತದ ಕಡೇ ಪಂದ್ಯಗಳ ವೇಳೆ ಹೈದರಾಬಾದ್ ಫ್ರಾಂಚೈಸಿ ವಾರ್ನರ್ ಅವರನ್ನು ಸಂಪೂರ್ಣವಾಗಿ ಹೊರಗಿಟ್ಟಿತ್ತು. ಯಾಕೆಂದರೆ ಬರೀ ವಾರ್ನರ್ ಪ್ರದರ್ಶನವಷ್ಟೇ ಅಲ್ಲ, ಇಡೀ ಎಸ್‌ಆರ್‌ಎಚ್ ಪ್ರದರ್ಶನವೇ ಕಳೆ ಗುಂದಿತ್ತು. ಲೀಗ್‌ ಮುಗಿಯುವಾಗಲೂ ಎಸ್‌ಆರ್‌ಎಚ್ ಆಡಿರುವ 14 ಪಂದ್ಯಗಳಲ್ಲಿ ಕೇವಲ 3 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ. ಅಂದ್ಹಾಗೆ ಐಪಿಎಲ್‌ನಲ್ಲಿ ಫ್ರಾಂಚೈಸಿ ಒಂದರ ಪರ ಅತೀ ಹೆಚ್ಚು ರನ್ ಗಳಿಸಿರುವ ದಾಖಲೆ ವಾರ್ನರ್ ಹೆಸರಿನಲ್ಲಿದೆ. ಹೈದರಾಬಾದ್ ಪರ 95 ಪಂದ್ಯಗಳನ್ನಾಡಿರುವ ವಾರ್ನರ್, 49.55ರ ಸರಾಸರಿಯಲ್ಲಿ 4014 ರನ್‌ಗಳನ್ನು ಬಾರಿಸಿದ್ದಾರೆ. ಇದರಲ್ಲಿ 2 ಶತಕಗಳು ಮತ್ತು 40 ಅರ್ಧ ಶತಕಗಳು ಸೇರಿವೆ.

ಎಸ್‌ಆರ್‌ಎಚ್ ಪರ ಅದ್ಭುತ ಪ್ರದರ್ಶನ ನೀಡಿದ್ದ ಡೇವಿಡ್

ವಾರ್ನರ್ ಅವರು ಎಸ್‌ಆರ್‌ಎಚ್ ತಂಡ ಸೇರಿಕೊಂಡಿದ್ದು 2014ರಲ್ಲಿ. ಆವತ್ತಿನಿಂದಲೂ ವಾರ್ನರ್ ತಂಡಕ್ಕೆ ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ. ಕ್ರಿಕೆಟ್ ಆಗಲಿ ಅಥವಾ ಬೇರೆ ಕ್ರೀಡೆಯೇ ಆಗಿರಲಿ, ಅಥ್ಲೀಟ್‌ ಒಬ್ಬನ ಪ್ರದರ್ಶನದಲ್ಲಿ ಏರಿಳಿತಗಳು ಸಹಜ. ಕ್ರಿಕೆಟ್‌ನಲ್ಲಿ ಆಟಗಾರರ ಫಾರ್ಮ್ ಕಳೆಗುಂದೋದು ಇದ್ದಿದ್ದೇ. ಆದರೆ ಫಾರ್ಮ್ ಕಳೆದುಕೊಂಡಿದ್ದಾಗ ಆಟಗಾರರನ್ನು ಅವಮಾನಿಸದೆ ಅವರಲ್ಲಿ ಧೈರ್ಯ ತುಂಬಬೇಕು, ಇನ್ನಷ್ಟು ಅವಕಾಶ ನೀಡಬೇಕು, ಆಟಗಾರನ ಮೇಲೆ ನಂಬಿಕೆ ಇಡಬೇಕು. ಆಗ ಮಾತ್ರ ಪ್ರತಿಭಾನ್ವಿತ ಆಟಗಾರನನ್ನು ಮತ್ತೆ ಮಿನುಗುವಂತೆ ಮಾಡಲು ಸಾಧ್ಯವಾಗುತ್ತದೆ. ಡೇವಿಡ್ ವಾರ್ನರ್ ಈ ಸೀಸನ್‌ನಲ್ಲಿ ಮಾತ್ರ ಕೊಂಚ ಫಾರ್ಮ್ ಕಳೆದುಕೊಂಡಿದ್ದಾರೆ. ಗಾಯದ ಸಮಸ್ಯೆ, ಕೋವಿಡ್ ಕಾರಣ ಸರಿಯಾದ ಅಭ್ಯಾಸ ಇಲ್ಲದಿರುವುದು, ಮಾನಸಿಕ ಸ್ಥಿತಿಗತಿ ಇವೆಲ್ಲ ಕಳಪೆ ಫಾರ್ಮ್‌ಗೆ ಕಾರಣವಿರಬಹುದು. ಆದರೆ ವಾರ್ನರ್ ಆಸೀಸ್ ಟಿ20 ತಂಡದಲ್ಲಿದ್ದಾರೆಂದರೆ ಆಸ್ಟ್ರೇಲಿಯಾಕ್ಕೆ ವಾರ್ನರ್ ಮೇಲಿರುವ ನಂಬಿಕೆ ಸೂಚಿಸುತ್ತದೆ. ಅಂದ್ಹಾಗೆ, ವಾರ್ನರ್ ಎಚ್‌ಆರ್‌ಎಚ್ ಪರ 2014ರಲ್ಲಿ 528 ರನ್, 2015ರಲ್ಲಿ 562 ರನ್, 2016ರಲ್ಲಿ 848 ರನ್, 2017ರಲ್ಲಿ 641 ರನ್, 2019ರಲ್ಲಿ 692 ರನ್, 2020ರಲ್ಲಿ 548 ರನ್ ಗಳಿಸಿದ್ದರು ಅನ್ನೋದು ಇಲ್ಲಿ ಉಲ್ಲೇಖನೀಯ (ಈ ಸೀಸನ್‌ನ ಕೊನೆ ಹಂತದಲ್ಲಿ ತಂಡದಿಂದ ಹೊರಗಿಟ್ಟಿದ್ದರೂ ಅಭಿಮಾನಿಯಾಗಿ ಮೈದಾನಕ್ಕೆ ಬಂದು ಎಸ್‌ಆರ್‌ಎಚ್ ಬೆಂಬಲಿಸಿದ್ದ ವಾರ್ನರ್).

Story first published: Saturday, October 9, 2021, 17:17 [IST]
Other articles published on Oct 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X