ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂಬೈ ಇಂಡಿಯನ್ಸ್ ವಿರುದ್ಧ ದಾಖಲೆ ಬರೆದ ಆ್ಯಂಡ್ರೆ ರಸೆಲ್

IPL 2021: Andre Russell becomes the second bowler after Harshal Patel to take a fifer against Mumbai Indians

ಚೆನ್ನೈ: ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 5ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಆಲ್ ರೌಂಡರ್ ಆ್ಯಂಡ್ರೆ ರಸೆಲ್ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್‌ನಲ್ಲಿ 5 ವಿಕೆಟ್‌ ಪಡೆದ ಬೌಲರ್‌ಗಳ ಸಾಲಿನಲ್ಲಿ ರಸೆಲ್ ಸೇರಿಕೊಂಡಿದ್ದಾರೆ.

ಎಬಿಡಿ ದಾಖಲೆಯನ್ನು ಸರಿದೂಗಿಸಿದ ಸಂಜು ಸ್ಯಾಮ್ಸನ್ಎಬಿಡಿ ದಾಖಲೆಯನ್ನು ಸರಿದೂಗಿಸಿದ ಸಂಜು ಸ್ಯಾಮ್ಸನ್

ಏಪ್ರಿಲ್ 5ರ ಮಂಗಳವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್ ರಾಷ್ಟ್ರೀಯ ತಂಡದ ಪರ ಆಡುವ ಕೆಕೆಆರ್‌ನ ಆ್ಯಂಡ್ರೆ ರಸೆಲ್ ಕೇವಲ 15 ರನ್‌ ನೀಡಿ 5 ವಿಕೆಟ್‌ ಉರುಳಿಸಿದರು.

ಕೇವಲ 2 ಓವರ್‌ ಎಸೆದಿದ್ದ ರಸೆಲ್ ಅವರು ಕೃನಾಲ್ ಪಾಂಡ್ಯ, ಕೀರನ್ ಪೊಲಾರ್ಡ್, ಮಾರ್ಕೋ ಜಾನ್ಸನ್, ರಾಹುಲ್ ಚಾಹಲ್, ಜಸ್‌ಪ್ರೀತ್‌ ಬೂಮ್ರಾ ವಿಕೆಟ್‌ಗಳನ್ನು ಉರುಳಿಸಿ ಐಪಿಎಲ್‌ನಲ್ಲಿ 5 ವಿಕೆಟ್‌ ಪಡೆದ ಅಪರೂಪದ ದಾಖಲೆ ಕಾರಣರಾಗಿದ್ದಾರೆ. ಕೆಕೆಆರ್‌ ಪರ ಬೆಸ್ಟ್ ಬೌಲಿಂಗ್ ಫಿಗರ್‌ಗಾಗಿಯೂ ರಸೆಲ್ ದಾಖಲೆ ಪಟ್ಟಿ ಸೇರಿಸಿಕೊಂಡಿದ್ದಾರೆ.

'ವಾತಿ ಕಮಿಂಗ್' ಸಾಂಗ್‌ಗೆ ಸ್ಟೆಪ್ ಹಾಕಿದ ಡೆಲ್ಲಿ ಆಟಗಾರರು: ವಿಡಿಯೋ'ವಾತಿ ಕಮಿಂಗ್' ಸಾಂಗ್‌ಗೆ ಸ್ಟೆಪ್ ಹಾಕಿದ ಡೆಲ್ಲಿ ಆಟಗಾರರು: ವಿಡಿಯೋ

ಐಪಿಎಲ್‌ನಲ್ಲಿ 5 ವಿಕೆಟ್‌ ಪಡೆದ ಬೆಸ್ಟ್ ಬೌಲಿಂಗ್‌ ಫಿಗರ್ ದಾಖಲೆ ಸಾಲಿನಲ್ಲಿ ರಸೆಲ್ ಈಗ ಮೊದಲ ಸ್ಥಾನಕ್ಕೇರಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧವೇ 2021ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲರ್ ಹರ್ಷಲ್ ಪಟೇಲ್ 27 ರನ್‌ಗೆ 5 ವಿಕೆಟ್‌ ಉರುಳಿಸಿದ್ದರು. ಆದರೆ ರಸೆಲ್ ಈಗ 15 ರನ್‌ಗೆ 5 ವಿಕೆಟ್‌ ಪಡೆದು ಈ ದಾಖಲೆ ಮುರಿದಿದ್ದಾರೆ.

Story first published: Wednesday, April 14, 2021, 10:37 [IST]
Other articles published on Apr 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X