ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೆಟ್ಟಿಲುಗಳ ಮೇಲೆ ಕುಸಿದು ಕುಳಿತಿದ್ದರ ಹಿಂದಿನ ಕಾರಣ ಬಾಯ್ಬಿಟ್ಟ ರಸೆಲ್!

IPL 2021: Andre Russell reacted on sitting dejected on the staircase in KKR vs CSK match

ಮುಂಬೈ: ಏಪ್ರಿಲ್ 21ರಂದು ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 15ನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ಸ್ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಎರಡೂ ತಂಡಗಳು ರೋಚಕ ಕದನಕ್ಕೆ ಸಾಕ್ಷಿಯಾಗಿದ್ದವು. ಪಂದ್ಯ ಕೊನೇ ಓವರ್‌ ತನಕ ಸಾಗಿ ಕುತೂಹಲ ಕೆರಳಿಸಿತ್ತು.

ಮೂರನೇ ಸೋಲಿನ ಬಳಿಕ ತಂಡದಲ್ಲಿನ ಕೊರತೆ ಬಿಚ್ಚಿಟ್ಟ ರೋಹಿತ್ ಶರ್ಮಾ!ಮೂರನೇ ಸೋಲಿನ ಬಳಿಕ ತಂಡದಲ್ಲಿನ ಕೊರತೆ ಬಿಚ್ಚಿಟ್ಟ ರೋಹಿತ್ ಶರ್ಮಾ!

ಕೋಲ್ಕತ್ತಾ ನೈಟ್ ರೈಡರ್ಸ್ ಮಾಜಿ ನಾಯಕ ದಿನೇಶ್ ಕಾರ್ತಿಕ್ 24 ಎಸೆತಗಳಲ್ಲಿ 40 ರನ್, ಪ್ಯಾಟ್ ಕಮಿನ್ಸ್ ಅಜೇಯ 66 (34 ಎಸೆತ), ಆ್ಯಂಡ್ರೆ ರಸೆಲ್ 22 ಎಸೆತಗಳಲ್ಲಿ 54 ರನ್ ಬಾರಿಸಿ ತಂಡದ ಪರ ಹೋರಾಟ ನಡೆಸಿದ್ದರು.

ಸ್ಟೆಪ್ಸ್ ಮೇಲೆ ಕೂತಿದ್ದ ರಸೆಲ್

ಸ್ಟೆಪ್ಸ್ ಮೇಲೆ ಕೂತಿದ್ದ ರಸೆಲ್

ಪಂದ್ಯದ ಬಳಿಕ ಕೆಕೆಆರ್ ಆಲ್ ರೌಂಡರ್ ಆ್ಯಂಡ್ರೆ ರಸೆಲ್ ಪೆವಿಲಿಯನ್‌ನ ಸ್ಟೆಪ್ಸ್‌ಗಳ ಮೇಲೆ ಕುಸಿದು ಕುಳಿತಿದ್ದು ಕಾಣಿಸಿತ್ತು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ತಾನು ಹೀಗೆ ಕುಸಿದು ಕುಳಿತುಕೊಳ್ಳಲು ಕಾರಣ ಏನೆಂದು ರಸೆಲ್ ಹೇಳಿಕೊಂಡಿದ್ದಾರೆ. ಆವತ್ತು ಆಗಿದ್ದೇನೆಂದು ಡ್ರೆ ರಸೆಲ್ ಬಾಯ್ಬಿಟ್ಟಿದ್ದಾರೆ.

189 ರನ್‌ಗಳ ಅಗತ್ಯವಿತ್ತು

189 ರನ್‌ಗಳ ಅಗತ್ಯವಿತ್ತು

ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧದ ಪಂದ್ಯದ ಆ ದಿನ ವೆಸ್ಟ್‌ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ ಆ್ಯಂಡ್ರೆ ರಸೆಲ್ ಬ್ಯಾಟಿಂಗ್‌ಗೆ ಬರುವಾಗ 15 ಓವರ್‌ಗಳಲ್ಲಿ ಕೆಕೆಆರ್‌ ಗೆಲ್ಲಲು 189 ರನ್‌ಗಳ ಅಗತ್ಯವಿತ್ತು. ಪ್ರತೀ ಓವರ್‌ಗೆ 12.60 ರನ್‌ರೇಟ್‌ನಂತೆ ರನ್‌ ಬೇಕಿತ್ತು. 6 ವಿಕೆಟ್‌ಗಳು ಕೆಕೆಆರ್ ಕೈಯಲ್ಲಿದ್ದವು. ಮೊದಲು ಬ್ಯಾಟಿಂಗ್‌ ಮಾಡಿದ್ದ ಸಿಎಸ್‌ಕೆ 220 ರನ್ ಬಾರಿಸಿ ಎದುರಾಳಿಗೆ 221 ರನ್ ಗುರಿ ನೀಡಿತ್ತು.

ಪ್ರಮುಖ ಮೂವರ ವ್ಯರ್ಥ ಹೋರಾಟ

ಪ್ರಮುಖ ಮೂವರ ವ್ಯರ್ಥ ಹೋರಾಟ

ಅಂದಿನ ಪಂದ್ಯದಲ್ಲಿ ಕೆಕೆಆರ್ ಪರ 7ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ರಸೆಲ್, 22 ಎಸೆತಗಳಲ್ಲಿ 54 ರನ್ ಚಚ್ಚಿ ಹೋರಾಡಿದ್ದರು. ಆದರೆ 11.2ನೇ ಓವರ್‌ನಲ್ಲಿ ಸ್ಯಾಮ್ ಕರನ್ ಎಸೆತಕ್ಕೆ ಬೌಲ್ಡ್‌ ಆಗಿ ನಿರ್ಗಮಿಸಬೇಕಾಯ್ತು. ರಸೆಲ್ ಔಟಾದ ಬಳಿಕ ದಿನೇಶ್ ಕಾರ್ತಿಕ್ (40), ಪ್ಯಾಟ್ ಕಮಿನ್ಸ್ (66) ಕೂಡ ತಂಡವನ್ನು ಗೆಲುವಿನ ಕಡೆಗೆ ಕರೆದೊಯ್ಯಲು ಯತ್ನಿಸಿದರಾದರೂ ಸಾಧ್ಯವಾಗಿರಲಿಲ್ಲ. ಪಂದ್ಯದಲ್ಲಿ ಕೆಕೆಆರ್ 18 ರನ್‌ಗಳ ಸೋಲನುಭವಿಸಿತ್ತು.

IPL ಗೆ ಗುಡ್ ಬೈ ಹೇಳಿದ T Natarajan | Oneindia Kannada
ಆವತ್ತು ನಡೆದಿದ್ದೇನು?

ಆವತ್ತು ನಡೆದಿದ್ದೇನು?

ಆವತ್ತು ತಾನೇಕೆ ಹಾಗೆ ಮೆಟ್ಟಿಲುಗಳ ಮೇಲೆ ಕುಸಿದು ಕುಳಿತಿದ್ದೆ ಅನ್ನೋದಕ್ಕೆ ರಸೆಲ್ ಕಾರಣ ಹೇಳಿಕೊಂಡಿದ್ದಾರೆ. 'ಆವತ್ತು ನಾನು ತುಂಬಾ ಭಾವುಕನಾಗಿದ್ದೆ. ಔಟ್ ಆದ ಬಳಿಕ ಡ್ರೆಸ್ಸಿಂಗ್‌ ರೂಮ್‌ಗೆ ಹೋಗಿ ನನ್ನ ಸಹ ಆಟಗಾರರಿಗೆ ಮುಖ ಹೇಗೆ ತೋರಿಸೋದು ಅನ್ನೋದೇ ನನಗೆ ಗೊತ್ತಾಗಲಿಲ್ಲ. ಅಲ್ಲಿ ನನ್ನ ಕೆಲಸ ಪೂರ್ತಿಯಾಗಿರಲಿಲ್ಲ ಎಂದು ನನಗೆ ಫೀಲಾಗಿತ್ತು. ನಾನು ಔಟಾಗದಿದ್ದರೆ ಎಲ್ಲಾವೂ ಸಾಧ್ಯವಿತ್ತು. 20 ಎಸೆತಗಳಿಗೆ 100 ರನ್ ಕೂಡ ಸಾಧ್ಯವಿದೆ. 20 ಎಸೆತಗಳಿಗೆ 20 ಸಿಕ್ಸರ್ ಬಾರಿಸಬಾರದು ಅಂತೇನಾದರೂ ಇದೆಯಾ? ಬಾರಿಸಲೂಬಹುದು ಯಾರಿಗೆ ಗೊತ್ತು. ಆದರೆ ನಾನು ಔಟಾಗಿದ್ದರಿಂದ ಬೇಜಾರಾಗಿತ್ತು,' ಎಂದು ರಸೆಲ್ ವಿವರಿಸಿದ್ದಾರೆ.

Story first published: Saturday, April 24, 2021, 16:59 [IST]
Other articles published on Apr 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X