ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಪ್ರಮುಖ ಆಟಗಾರನ ಹೊರಗಿಟ್ಟಿದ್ದಕ್ಕೆ ಅನಿಲ್ ಕುಂಬ್ಳೆ ಟ್ರೋಲ್

IPL 2021: Anil Kumble Trolled By Punjab Kings Fans for Ravi Bishnois omission Against Rajasthan Royals

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಎರಡನೇ ಹಂತದ ಆರಂಭಿಕ ಪಂದ್ಯದಲ್ಲೇ ಪಂಜಾಬ್‌ ಕಿಂಗ್ಸ್‌ ತಂಡ ಆಘಾತ ಅನುಭವಿಸಿದೆ. ಅದೂ ಕೂಡ ಸುಲಭವಾಗಿ ಗೆಲ್ಲಲಿದ್ದ ಪಂದ್ಯವನ್ನು ಕೊನೇ ಕ್ಷಣದಲ್ಲಿ ಸೋತು ನಿರಾಸೆ ಅನುಭವಿಸಿದೆ. ಮಂಗಳವಾರ (ಸೆಪ್ಟೆಂಬರ್‌ 21) ನಡೆದ ಐಪಿಎಲ್ 32ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೆಎಲ್ ರಾಹುಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ರೋಚಕ 2 ರನ್‌ಗಳ ಸೋಲನುಭವಿಸಿದೆ.

ಐದು ವಿಕೆಟ್ ಪಡೆದು ಕುಂಬ್ಳೆ ಜೊತೆ ವಿಶೇಷ ಪಟ್ಟಿ ಸೇರಿದ ಅರ್ಷದೀಪ್ ಸಿಂಗ್ಐದು ವಿಕೆಟ್ ಪಡೆದು ಕುಂಬ್ಳೆ ಜೊತೆ ವಿಶೇಷ ಪಟ್ಟಿ ಸೇರಿದ ಅರ್ಷದೀಪ್ ಸಿಂಗ್

ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಮುಖಾಮುಖಿಯಲ್ಲಿ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಅದ್ಭುತ ಜೊತೆಯಾಟದಿಂದ ಪಂಜಾಬ್‌ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಆದರೆ ಅಂತಿಮ ಓವರ್‌ನಲ್ಲಿ ಕಾರ್ತಿಕ್ ತ್ಯಾಗಿ ಅವರ ಚತುರ ಬೌಲಿಂಗ್‌, ಪಂಜಾಬ್‌ಗೆ ನಿರಾಸೆ ಅನುಭವಿಸುವಂತೆ ಮಾಡಿತ್ತು.

ಪ್ರಮುಖ ಆಟಗಾರರಿಲ್ಲದ್ದಕ್ಕೆ ಪಂಜಾಬ್ ಅಭಿಮಾನಿಗಳು ಗರಂ

ಪ್ರಮುಖ ಆಟಗಾರರಿಲ್ಲದ್ದಕ್ಕೆ ಪಂಜಾಬ್ ಅಭಿಮಾನಿಗಳು ಗರಂ

ಗೆಲ್ಲುವ ಪಂದ್ಯವನ್ನು ಪಂಜಾಬ್ ಕಿಂಗ್ಸ್ ಸೋಲುತ್ತಲೇ ಪಂಜಾಬ್ ಅಭಿಮಾನಿಗಳು ತಂಡದ ಪ್ಲೇಯಿಂಗ್ XI ಬಗ್ಗೆ ಅಸಮಾಧಾನ ತೋರಿಕೊಂಡಿದ್ದಾರೆ. ಪಂಜಾಬ್‌ನ ಪ್ರಮುಖ ಬೌಲರ್ ರವಿ ಬಿಷ್ಣೋಯ್ ಅವರನ್ನು ಆಡಿಸದಿರುವುದೇ ಪಂಜಾಬ್‌ ಪಂದ್ಯ ಸೋಲಲು ಕಾರಣ. ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆಗೆ ಒಳ್ಳೆಯ ಕೋಚ್ ಆಗುವ ಲಕ್ಷಣವಿಲ್ಲ ಎಂದು ಅಭಿಮಾನಿಗಳು ಹೇಳಿದ್ದಾರೆ. ಬಿಷ್ಣೋಯ್ ಅಷ್ಟೇ ಅಲ್ಲ, ತಂಡದ ಸ್ಫೋಟಕ ಬ್ಯಾಟ್ಸ್‌ಮನ್‌, ವೆಸ್ಟ್‌ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಅವರನ್ನು ಕಣಕ್ಕಿಳಿಸದಿದ್ದುದು ಸ್ಟುಡಿಯೋದಲ್ಲಿದ್ದ ಸುನಿಲ್ ಗವಾಸ್ಕರ್, ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ಅವರನ್ನು ಅಚ್ಚರಿಗೊಳಿಸಿತ್ತು. ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್ ಕೂಡ ಪಂಜಾಬ್ ಪ್ಲೇಯಿಂಗ್‌ XI ಬಗ್ಗೆ ಅಣಕವಾಡಿದ್ದರು. ಪುಟಾಣಿ ಮಕ್ಕಳು ಕೂಡ ಪದೇ ಪದೇ ಡೈಪರ್ ಬದಲಾಯಿಸಿಕೊಳ್ಳಲ್ಲ, ಆದರೆ ಪಂಜಾಬ್ ತನ್ನ ಪ್ಲೇಯಿಂಗ್ XI ಆಗಾಗ ಬದಲಾಯಿಸಿಕೊಳ್ಳುತ್ತಿರುತ್ತದೆ ಎಂದು ಸೆಹ್ವಾಗ್ ಗೇಲಿ ಮಾಡಿದ್ದರು. ಅಂದ್ಹಾಗೆ, ಸೆಪ್ಟೆಂಬರ್ 21ರ ಮಂಗಳವಾರ ಕ್ರಿಸ್ ಗೇಲ್ ತನ್ನ 42ನೇ ವರ್ಷದ ಹುಟ್ಟುಹಬ್ಬ ಆಚರಿಸಿದ್ದರು. ಹುಟ್ಟುಹಬ್ಬದ ದಿನ ಅವರನ್ನು ಕಣಕ್ಕಿಳಿಸಿದ್ದರೆ ಅದಕ್ಕೊಂದು ಹೊಸ ಮೆರಗಿರುತ್ತಿತ್ತು ಎಂದು ಅಭಿಮಾನಿಗಳು ಅಭಿಪ್ರಾಯಿಸಿದ್ದಾರೆ.

ಇಂಥವರು ಭಾರತದ ಕೋಚ್ ಆದರೆ ಕಷ್ಟ ಕಷ್ಟ!

ಇಂಥವರು ಭಾರತದ ಕೋಚ್ ಆದರೆ ಕಷ್ಟ ಕಷ್ಟ!

ಟೀಮ್ ಇಂಡಿಯಾಕ್ಕೆ ಸದ್ಯ ಮುಖ್ಯ ಕೋಚ್ ಆಗಿರುವ ರವಿ ಶಾಸ್ತ್ರಿಯ ಅವಧಿ ಈ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ ಬಳಿಕ ಕೊನೆಗೊಳ್ಳಲಿದೆ. ಹೀಗಾಗಿ ಶಾಸ್ತ್ರಿ ಜಾಗಕ್ಕೆ ಅನಿಲ್ ಕುಂಬ್ಳೆ ಮುಖ್ಯ ಕೋಚ್ ಆಗಿ ಮತ್ತೊಮ್ಮೆ ಆಯ್ಕೆಯಾಗಲಿದ್ದಾರೆ ಎಂಬ ಮಾತುಗಳು ಕ್ರಿಕೆಟ್ ಬಲಯದಲ್ಲಿ ಹರಿದಾಡುತ್ತಿವೆ. ಈ ವಿಚಾರವನ್ನೂ ಮುಂದಿಟ್ಟುಕೊಂಡಿರುವ ಕ್ರಿಕೆಟ್ ಅಭಿಮಾನಿಗಳು, ಕುಂಬ್ಳೆ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ. 'ಪಂಜಾಬ್ ತಂಡದ ಅದರ ಬೆಸ್ಟ್ ಬೌಲರ್ ರವಿ ಬಿಷ್ಣೋಯ್ ಅವರನ್ನು ಹೊರಗಿಟ್ಟು ಈ ಬಾರಿಯೂ ಆಡುತ್ತಿದೆ. ಯುಎಇಯಲ್ಲಿ ನಡೆದಿದ್ದ ಕಳೆದ ಐಪಿಎಲ್ ಬಳಿಕ ಬಿಷ್ಣೋಯ್ ತಂಡದಲ್ಲಿ ಆಡಿಲ್ಲ. ಈ ಕಾರಣಕ್ಕೇ ಕುಂಬ್ಳೆ ಟೀಮ್ ಇಂಡಿಯಾದ ಕೋಚ್ ಆಗಬಾರದು. ಒಂದು ವೇಳೆ ಆದರೆ ಅವರು ಜಸ್‌ಪ್ರೀತ್‌ ಬೂಮ್ರಾಗೆ ವಿಶ್ರಾಂತಿ ನೀಡಿ ಪ್ರವೀಣ್ ಕುಮಾರ್ ಅವರನ್ನು ಆಡಿಸುತ್ತಾರೆ,' ಎಂದು ಇಲ್ಲೊಬ್ಬರು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಭಾರತದ ನಾಯಕ ಮತ್ತು ಕೋಚ್ ಆಗಿ ವಿರಾಟ್ ಕೊಹ್ಲಿ ಮತ್ತು ಅನಿಲ್ ಕುಂಬ್ಳೆ ಕಾಂಬಿನೇಶನ್ ಎಪಿಕ್ ಆಗಿರುತ್ತದೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಇದೇ ರೀತಿ ಅನೇಕ ಅಭಿಮಾನಿಗಳು ಕುಂಬ್ಳೆಯನ್ನು ಗುರಿಯಾಗಿಸಿ ಕಾಲೆಳೆದಿದ್ದಾರೆ.

ಪಂಜಾಬ್ vs ರಾಜಸ್ಥಾನ್ ಸಂಕ್ಷಿಪ್ತ ಸ್ಕೋರ್‌ಕಾರ್ಡ್

ಪಂಜಾಬ್ vs ರಾಜಸ್ಥಾನ್ ಸಂಕ್ಷಿಪ್ತ ಸ್ಕೋರ್‌ಕಾರ್ಡ್

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಜಸ್ಥಾನ್ ರಾಯಲ್ಸ್, ಎವಿನ್ ಲೆವಿಸ್ 36, ಯಶಸ್ವಿ ಜೈಸ್ವಾಲ್ 49, ಸಂಜು ಸ್ಯಾಮ್ಸನ್ 4, ಲಿಯಾಮ್ ಲಿವಿಂಗ್‌ಸ್ಟೋನ್ 25, ರಿಯಾನ್ ಪರಾಗ್ 4, ಮಹಿಪಾಲ್ ಲೋಮ್ರರ್ 43, ರಾಹುಲ್ ತೆವಾಟಿಯಾ 2, ಕ್ರಿಸ್ ಮೋರಿಸ್ 5, ಚೇತನ್ ಸಕಾರಿಯಾ 7, ಕಾರ್ತಿಕ್ ತ್ಯಾಗಿ 1 ರನ್‌ನೊಂದಿಗೆ 20 ಓವರ್‌ ಎಲ್ಲಾ ವಿಕೆಟ್ ಕಳೆದು 185 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್‌ನಿಂದ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಉತ್ತಮ ಜೊತೆಯಾಟ ಲಭಿಸಿತು. ಕೆಎಲ್ ರಾಹುಲ್ 49 (33), ಮಯಾಂಕ್ ಅಗರ್ವಾಲ್ (43), ಐಡನ್ ಮಾರ್ಕ್ರಮ್ 26, ನಿಕೋಲಸ್ ಪೂರನ್ 32 ರನ್‌ನೊಂದಿಗೆ 20 ಓವರ್‌ಗೆ 4 ವಿಕೆಟ್‌ ಕಳೆದು 183 ರನ್ ಗಳಿಸಿ ಶರಣಾಯಿತು. ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸ್‌ನಲ್ಲಿ ಪಂಜಾಬ್‌ನ ಅರ್ಷದೀಪ್ ಸಿಂಗ್ 32 ರನ್‌ಗೆ 5 ವಿಕೆಟ್, ಮೊಹಮ್ಮದ್ ಶಮಿ 3, ಇಶಾನ್ ಪೊರೆಲ್ 1, ಹರ್ಪ್ರೀತ್‌ ಬ್ರಾರ್ 1 ವಿಕೆಟ್ ಪಡೆದರೆ, ಪಂಜಾಬ್ ಇನ್ನಿಂಗ್ಸ್‌ನಲ್ಲಿ ರಾಜಸ್ಥಾನ್‌ನ ಚೇತನ್ ಸಕಾರಿಯಾ 1, ಕಾರ್ತಿಕ್ ತ್ಯಾಗಿ 2, ರಾಹುಲ್ ತೆವಾಟಿಯಾ 1 ವಿಕೆಟ್‌ ಪಡೆದು ಗಮನ ಸೆಳೆದರು.

ಸೋಲಿಗೆ ಕಾರಣ ಕೊಟ್ಟ ರಾಹುಲ್ | Oneindia Kannada
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ XI

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ XI

ಕೆಎಲ್ ರಾಹುಲ್ (ಡಬ್ಲ್ಯೂ/ಸಿ), ಮಯಾಂಕ್ ಅಗರ್ವಾಲ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ದೀಪಕ್ ಹೂಡಾ, ಫ್ಯಾಬಿಯನ್ ಅಲೆನ್, ಇಶಾನ್ ಪೊರೆಲ್, ಆದಿಲ್ ರಶೀದ್, ಹರ್‌ಪ್ರೀತ್ ಬ್ರಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್.
ಬೆಂಚ್: ಕ್ರಿಸ್ ಗೇಲ್, ನಾಥನ್ ಎಲ್ಲಿಸ್, ಕ್ರಿಸ್ ಜೋರ್ಡನ್, ಜಲಜ್ ಸಕ್ಸೇನಾ, ಮೊಯಿಸ್ ಹೆನ್ರಿಕ್ಸ್, ಪ್ರಭಸಿಮ್ರಾನ್ ಸಿಂಗ್, ಮಂದೀಪ್ ಸಿಂಗ್, ಮುರುಗನ್ ಅಶ್ವಿನ್, ಸರ್ಫರಾಜ್ ಖಾನ್, ಸೌರಭ್ ಕುಮಾರ್, ಉತ್ಕರ್ಶ್ ಸಿಂಗ್, ದರ್ಶನ್ ನಲ್ಕಂಡೆ, ರವಿ ಬಿಷ್ಣೋಯ್, ಶಾರುಖ್ ಖಾನ್.

ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ XI:ಯಶಸ್ವಿ ಜೈಸ್ವಾಲ್, ಎವಿನ್ ಲೂಯಿಸ್, ಸಂಜು ಸ್ಯಾಮ್ಸನ್ (ಡಬ್ಲ್ಯೂ/ಸಿ), ಲಿಯಾಮ್ ಲಿವಿಂಗ್ಸ್ಟೋನ್, ಮಹಿಪಾಲ್ ಲಾಮ್ರರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್, ಮುಸ್ತಫಿಜುರ್ ರೆಹಮಾನ್, ಚೇತನ್ ಸಕಾರಿಯಾ, ಕಾರ್ತಿಕ್ ತ್ಯಾಗಿ.

ಬೆಂಚ್: ಶಿವಂ ದೂಬೆ, ತಬ್ರೇಜ್ ಶಮ್ಸಿ, ಶ್ರೇಯಸ್ ಗೋಪಾಲ್, ಜಯದೇವ್ ಉನಾದ್ಕತ್, ಡೇವಿಡ್ ಮಿಲ್ಲರ್, ಮನನ್ ವೋಹ್ರಾ, ಕೆಸಿ ಕರಿಯಪ್ಪ, ಗ್ಲೆನ್ ಫಿಲಿಪ್ಸ್, ಓಶಾನೆ ಥಾಮಸ್, ಮಯಾಂಕ್ ಮಾರ್ಕಂಡೆ, ಅನುಜ್ ರಾವತ್, ಕುಲ್ದಿಪ್ ಯಾದವ್, ಆಕಾಶ್ ಸಿಂಗ್.

Story first published: Wednesday, September 22, 2021, 14:32 [IST]
Other articles published on Sep 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X